ಅಲ್ಲ 100ಕ್ಕೂ ಹೆಚ್ಚು ಕುರಿಗಳಿವೆ. ಅಲ್ಲೇ..ಅದೊಂದು ಜಾಗದಲ್ಲೇ ಸತತ 2 ವಾರದಿಂದ ಸುತ್ತು ಹಾಕುತ್ತಿವೆ. ಅತ್ತ ಇತ್ತ ಕದಲುತ್ತಿಲ್ಲ. ಕ್ಲಾಕ್ ವೈಸ್ ಸರ್ಕಲ್‍ನಲ್ಲಿ ಸತತವಾಗಿ ಸುತ್ತುತ್ತಿರುವ ವಿಡಿಯೋ ಹೊರ ಬಿದ್ದಿರೋದು ದಕ್ಷಿಣ ಚೀನಾದಿಂದ. ವಿಡಿಯೋ ಹೊರ ಬಿದ್ದಿದ್ದೇ ತಡ, ಇಡೀ ಜಗತ್ತು ಬೆಚ್ಚಿ ಬಿದ್ದಿದೆ. ಏನಿರಬಹುದು ರಹಸ್ಯ? ಅದು ಪವಾಡವೋ.. ಅಲ್ಲಿ ಏನಾದರೂ ಅಳತೆಗೆ ನಿಲುಕದ ಅತಿಂದ್ರೀಯ ಶಕ್ತಿ ಇದೆಯೋ.. ವೈಜ್ಞಾನಿಕ ಚಮತ್ಕಾರವೋ.. ಏನಿರಬಹುದು ರಹಸ್ಯ ಎಂದು ನಿಬ್ಬೆರಗಾಗಿ ನೋಡುತ್ತಿದೆ.
ಇದು ದ.ಚೀನಾದ ಮಂಗೋಲಲಿಯಾ ಪ್ರಾಂತ್ಯದಲ್ಲಿ ಕಂಡು ಬಂದಿರುವ ವಿಡಿಯೋ. ಬವುಟು ನಗರದ ದೃಶ್ಯವಿದು. ಈ ಕುರಿ ದೊಡ್ಡಿಯ ಮಾಲೀಕನ ಹೆಸರು ಮೌ. ಸ್ವತಃ ಆತನೂ ಆಘಾತಕ್ಕೊಳಗಾಗಿದ್ದಾನೆ. ಅಂದಹಾಗೆ ಈ ವಿಡಿಯೋದ ಎಲ್ಲ ಕುರಿಗಳನ್ನು ಕ್ಲೋಸಪ್ ತೆಗೆದುಕೊಂಡು ಅಧ್ಯಯನ ಮಾಡಿದ್ದಾರೆ. ಒಟ್ಟು ವಿಚಿತ್ರವಾಗಿ ಆಡುತ್ತಿರುವ, ಸರ್ಕಲ್ ಸುತ್ತುತ್ತಿರುವ ಕುರಿಗಳ ಸಂಖ್ಯೆ 34. ಆ 34ರಲ್ಲಿ 13ನೇ ಕುರಿ ಮಾತ್ರ ಅತ್ಯಂತ ವಿಚಿತ್ರವಾಗಿ ಆಡುತ್ತಿದೆ. ನಂ.13.
ಅಂದಹಾಗೆ ವಿಜ್ಞಾನಿಗಳ ಪ್ರಕಾರ ಇದಕ್ಕೆ ಕಾರಣ ಲಿಸ್ಟೀರಿಯಾ ಅನ್ನೋ ಬ್ಯಾಕ್ಟೀರಿಯಾ. ಇದು ಸಸ್ಯಗಳಲ್ಲಿ ಕಂಡು ಬರುತ್ತದಂತೆ. ಆ ರೀತಿಯ ಬ್ಯಾಕ್ಟೀರಿಯಾ ಇರುವ ಸಸ್ಯವನ್ನು ತಿಂದ ನಂತರ ಪ್ರಾಣಿಗಳು ಅದು ಕುರಿಯೇ ಆಗಿರಲಿ, ಕುದುರೆಯೇ ಆಗಿರಲಿ, ಮತ್ಯಾವುದೇ ಪ್ರಾಣಿಯೇ ಆಗಿರಲಿ.. ಈ ರೀತಿಯ ಗೊಂದಲಕ್ಕೆ ಒಳಗಾಗುತ್ತವಂತೆ. ಈ ಬ್ಯಾಕ್ಟೀರಿಯಾ ಪ್ರಾಣಿಗಳ ಮೆದುಳಿನ ಮೇಲೆ ಪ್ರಭಾವ ಬೀರಿ ಗೊಂದಲ ಸೃಷ್ಟಿಸುತ್ತದಂತೆ. ಸರಳವಾಗಿ ಹೇಳಬೇಕೆಂದರೆ ಗಾಂಜಾ ಮತ್ತಿನಲ್ಲಿ ನಗುತ್ತಿದ್ದವರು ನಗುತ್ತಲೇ.. ಅಳುತ್ತಿದ್ದವರು ಅಳುತ್ತಲೇ.. ಇರುತ್ತ ಭ್ರಮೆಗೊಳಗಾಗುತ್ತಾರಲ್ಲ.. ಹಾಗೆಯೇ.. ಈ ಕುರಿಗಳಿಗೂ ಇದೇ ರೀತಿ ಆಗಿದೆ.
ಅಂದಹಾಗೆ ಪರಿಶೀಲನೆ ನಡೆಸಿದಾಗ ಆ ಬ್ಯಾಕ್ಟೀರಿಯಾ ಇರುವ ಸಸ್ಯಗಳೂ ಕಂಡುಬಂದಿವೆ. ಹೀಗಾಗಿ ಇದು ದೆವ್ವದಾಟ, ಭೂತಚೇಷ್ಟೆ.. ಅಲ್ಲ. ಇದು ಒಂದು ವೈಜ್ಞಾನಿಕ ವಿಚಿತ್ರ ಎನ್ನುತ್ತಿದ್ದಾರೆ ಸೈಂಟಿಸ್ಟ್. ಅಂದಹಾಗೆ ಅಸ್ಟೀರಿಯಾ ಬ್ಯಾಕ್ಟೀರಿಯ ಸಸ್ಯಗಳು ಕಂಡು ಬಂದಿರುವ ಪ್ರದೇಶಕ್ಕೆ ಪ್ರಾಣಿಗಳಾಗಲೀ.. ಮನುಷ್ಯರಾಗಲೀ.. ಹೋಗಬಾರದು ಎಂಬ ನಿಷೇಧವನ್ನೂ ಹಿಂದಿನವರು ಹೇರಿದ್ದಾರಂತೆ. ಅದೊಂದು ಮೂಢನಂಬಿಕೆ..ಎಂದು ಕುರಿಗಳನ್ನು ಅಲ್ಲಿಗೇ ಕರೆದುಕೊಂಡು ಹೋಗಿ ಮೇಯಲು ಬಿಟ್ಟಿದ್ದೇ ಅನಾಹುತಕ್ಕೆ ಕಾರಣ. ಆದರೆ ಅವರ ಹಿರಿಯರು ಮತ್ಯಾವುದೋ ಕಾರಣ ಹೇಳಿದ್ದರು. ಈಗ ವಿಜ್ಞಾನಿಗಳು ಸತ್ಯವನ್ನು ಸೈನ್ಸ್ ಎಂದು ಹೇಳಿದ್ದಾರೆ. ಅಷ್ಟೆ..