ಕನ್ನಡದಲ್ಲಿ ಸೂಪರ್ ಸ್ಟಾರ್. ಈಗಾಗಲೇ 125 ಸಿನಿಮಾಗಳಲ್ಲಿ ನಟಿಸಿರುವ ಕರುನಾಡ ಚಕ್ರವರ್ತಿ. ಡಾ.ರಾಜ್ (Dr.Rajkumar) ಕುಟುಂಬದಲ್ಲಿ ಕನ್ನಡದ ಹೊರಗೂ ನಟಿಸಿದ ಮೊದಲ ಹೀರೊ ಶಿವಣ್ಣ(Dr. ShivaRajkumar). ತೆಲುಗಿನಲ್ಲಿ ಬಾಲಕೃಷ್ಣ (Balakrishna) ಅವರ ಐತಿಹಾಸಿಕ ಸಿನಿಮಾ ಗೌತಮಿಪುತ್ರ ಶಾತಕರ್ಣಿ ಚಿತ್ರದಲ್ಲಿ ನಟಿಸಿದ್ದರು ಶಿವಣ್ಣ(Dr.Shva Rajkumar) . ಅದು ಬಾಲಕೃಷ್ಣ ಅವರ 100ನೇ ಸಿನಿಮಾ ಆಗಿತ್ತು ಎಂಬುದೂ ವಿಶೇಷ.
ಅದಾದ ಮೇಲೆ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ ಶಿವಣ್ಣ. ಇತ್ತ ತೆಲುಗಿನಲ್ಲಿ ರವಿತೇಜ (Raviteja) ಜೊತೆಯಲ್ಲೂ ನಟಿಸುತ್ತಿದ್ದಾರೆ ಎಂಬ ಸುದ್ದಿಗಳಿವೆ. ಇದರ ಮಧ್ಯೆ ವೇದ ಚಿತ್ರವನ್ನು ತೆಲುಗಿನಲ್ಲೂ ರಿಲೀಸ್ ಮಾಡಿ ಗೆದ್ದಿದ್ದಾರೆ. ಅತ್ತ ತಮಿಳಿನಲ್ಲಿ ರಜನಿಕಾಂತ್ (Rajinikanth) ಜೊತೆ ಒಂದು ಸಿನಿಮಾ, ಧನುಷ್ (Dhanush) ಜೊತೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಇದೀಗ ಮಲಯಾಳಂಗೂ (malayalam) ಹೊರಟು ನಿಂತಿದ್ದಾರೆ.
ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಜೊತೆ ನಟಿಸಲು ಓಕೆ ಎಂದಿದ್ದಾರಂತೆ ಶಿವಣ್ಣ (Dr.Shiva Rajkumar). ಸದ್ಯಕ್ಕೆ ಅದಿನ್ನೂ ಮಾತುಕತೆ ಹಂತದಲ್ಲಿದೆ. ಈಗಾಗಲೇ ರಜನಿಕಾಂತ್ ಜೊತೆ ನಟಿಸಿರುವ ಜೈಲರ್ ಚಿತ್ರ ಇನ್ನೇನು ರಿಲೀಸ್ ಆಗುತ್ತಿದೆ. (Captain Miller) ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಧನುಷ್ (Dhanush) ಅಣ್ಣನಾಗಿ ನಟಿಸುತ್ತಿರುವ ಶಿವ ರಾಜ್ಕುಮಾರ್, ತಮಿಳಿನಲ್ಲಿ (Tamil) ಬೇರೆಯದೇ ಹವಾ ಎಬ್ಬಿಸಿದ್ದಾರೆ. ಜೈಲರ್`ನಲ್ಲಿ ಶಿವಣ್ಣ ಅವರ ಪಾತ್ರಕ್ಕೆ ಅವರೇ ಡಬ್ ಮಾಡಿದ್ದಾರಂತೆ. ಜೈಲರ್ನಲ್ಲಿ (Jailer) ನನ್ನದು ಚಿಕ್ಕ ಪಾತ್ರ. ಎಲ್ಲವೂ ಸೇರಿ ಒಟ್ಟಾರೆ 10 ನಿಮಿಷ ಇರಬಹುದಷ್ಟೇ. ಅದನ್ನು ಒಪ್ಪಿಕೊಳ್ಳೋಕೆ ನಿರ್ದೇಶಕ ನೆಲ್ಸನ್ ಮತ್ತು ರಜನಿಕಾಂತ್ (Rajinikanth) ಇಬ್ಬರೂ ಕಾರಣ ಎಂದಿದ್ದಾರೆ ಶಿವಣ್ಣ.
ಸದ್ಯಕ್ಕೆ ಕನ್ನಡದ ಅತೀ ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಿರುವ ಹೀರೋ ಶಿವಣ್ಣ. ಅಫ್ಕೋರ್ಸ್ ಹಲವು ವರ್ಷಗಳಿಂದಲೂ ಶಿವಣ್ಣ ಅದನ್ನು ಕಾಪಾಡಿಕೊಂಡಿದ್ದಾರೆ. ಸದ್ಯಕ್ಕೆ ಶಿವಣ್ಣ ಘೋಸ್ಟ್, ನೀ ಸಿಗೋವರೆಗೂ, ಭೈರತಿ ರಣ್ಗಲ್, ಕರಟಕ ದಮನಕ, 45, ಜೈಲರ್, ಕ್ಯಾಪ್ಟನ್ ಮಿಲ್ಲರ್, ಇನ್ಸ್ಪೆಕ್ಟರ್ ವಿಕ್ರಮ್ ರಿಟರ್ನ್ಸ್, ಕೆ.ಪಿ ಶ್ರೀಕಾಂತ್ ಹೊಸ ಸಿನಿಮಾ, ತೆಲುಗಿನ ಎರಡು ಪ್ರಾಜೆಕ್ಟ್ಗಳಲ್ಲಿ ಬ್ಯಸಿಯಾಗಿದ್ದಾರೆ.
ಸ್ಪೆಷಲ್ಲು ಎಂದರೆ ಏನು ಗೊತ್ತೇ.. ಇವೆಲ್ಲವನ್ನೂ ಅವರು ಕೇವಲ ಹಣ, ನಟನೆಗಷ್ಟೇ ಅಲ್ಲ, ಪ್ರೀತಿ-ಬಾಂಧವ್ಯಕ್ಕೂ ನಟಿಸುತ್ತಿದ್ದಾರೆ. ತೆಲುಗಿನ ಬಾಲಕೃಷ್ಣ ಅವರಾಗಲೀ, ತಮಿಳಿನ ರಜನಿಕಾಂತ್(Rajinikanth), ಧನುಷ್(Dhanush) ಅವರಾಗಲೀ.. ಮಲಯಾಳಂನ (malayalam) ಪೃಥ್ವಿರಾಜ್ (Prithviraj sukumaran) ಅವರಾಗಲೀ.. ಕೇವಲ ಪರಭಾಷೆಯ ಕಲಾವಿದರಲ್ಲ. ನಟನೆಯನ್ನೂ ಮೀರಿ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿರುವವರು.