ಬಾಲಿವುಡ್ ಹೀರೋಯಿನ್ ಸಾರಾ ಅಲಿ ಖಾನ್ (Sara Ali Khan) ಅವರನ್ನು ಮರಳಿ ಹಿಂದೂ ಧರ್ಮಕ್ಕೆ ಆಹ್ವಾನಿಸುತ್ತಿದ್ದಾರೆ ನೆಟ್ಟಿಗರು. ಹಿಂದೂಗಳು. ಇದು ಹರಾಮ್ ಎಂದು ಟೀಕಿಸುತ್ತಿದ್ದಾರೆ ಕಟ್ಟರ್ ಮುಸ್ಲಿಂ ವಾದಿಗಳು. ಕಾರಣ ಸಾರಾ (Sara Ali Khan) ಮುಸ್ಲಿಂ. ಸೈಫ್ ಅಲಿ ಖಾನ್ (Saif Ali Khan) ಅವರ ಮೊದಲ ಪತ್ನಿಯ ಮಗಳು ಸಾರಾ ಅಲಿ ಖಾನ್ (Sara Ali Khan). ಅಪ್ಪ ಮುಸ್ಲಿಂ ಆಗಿದ್ದರೂ, ತಾಯಿ ಅಮೃತಾ ಸಿಂಗ್ (Amritha singh) ಹಿಂದೂ. ಅಮೃತಾ ಸಿಂಗ್ (Amrutha Singh) ಅವರೊಂದಿಗೆ ವಿಚ್ಚೇಧನವಾಗಿದ್ದರೂ, ಕರೀನಾ ಕಪೂರ್ (Kareena Kapoor) ಅವರೊಂದಿಗೆ ಮದುವೆಯಾಗಿದ್ದರೂ, ಮಕ್ಕಳ ಜೊತೆ ಬಾಂಧವ್ಯ ಇಟ್ಟುಕೊಂಡಿದ್ದಾರೆ ಸೈಫ್ ಅಲಿ ಖಾನ್ (Saif Ali Khan). ತಂದೆಯೊಂದಿಗೆ ಬಾಂಧವ್ಯ ಚೆನ್ನಾಗಿದ್ದರೂ ಸಾರಾ (Sara Ali Khan), ಹಿಂದೂ ಸಂಪ್ರದಾಯಗಳನ್ನು ಬಿಟ್ಟಿಲ್ಲ. ಆಗಾಗ್ಗೆ ದೇವಸ್ಥಾನಗಳಿಗೆ ಹೋಗುವ ಸಾರಾ ಅಲಿ ಖಾನ್, ಇದೀಗ ಅಮರನಾಥ ಯಾತ್ರೆಯನ್ನು (Amaranatha yathre) ಕೈಗೊಂಡಿದ್ದಾರೆ.
ಅಪ್ಪ ಮುಸ್ಲಿಂ (Muslim) ಆಗಿದ್ದರೂ ಹಿಂದೂ (Hindu) ಸಂಪ್ರದಾಯವನ್ನು ಪಾಲಿಸುತ್ತಿರುವ ಸಾರಾ ಅಲಿ (Sara Ali Khan) ಇದಾಗಲೇ ಇದೇ ವಿಷಯಕ್ಕೆ ಒಂದು ವರ್ಗದಿಂದ ಸಕತ್ ಟ್ರೋಲ್ ಆಗಿದ್ದೂ ಇದೆ. ಆದರೆ ಯಾವುದೇ ಟ್ರೋಲ್ಗೆ ಕೇರೇ ಮಾಡದೇ ಆಗಾಗ್ಗೆ ಅವರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಕೆಲ ದಿನಗಳ ಹಿಂದೆ ಕೇದಾರನಾಥಕ್ಕೆ ಭೇಟಿ ಕೊಟ್ಟರು. ಇದು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸೌಂಡ್ ಮಾಡಿತ್ತು.
ಈಗ ತುಂಬಾ ಧೈರ್ಯ, ಸಾಹಸ ಇರುವವರು ಮಾತ್ರ ಹೋಗುವ ಜಾಗ ಎಂದೇ ಅಂದುಕೊಳ್ಳಲಾಗಿರುವ ಅಮರನಾಥ ಯಾತ್ರೆ ಕೈಗೊಂಡಿದ್ದಾರೆ. ಕೆಲ ದಿನಗಳ ಹಿಂದೆ, ಭಾರೀ ಭದ್ರತೆಯ ಮಧ್ಯೆ ಈಕೆ ಅಮರನಾಥ ದರ್ಶನ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಭದ್ರತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ನಟಿಯನ್ನು ನೋಡಿ ಸಾಕಷ್ಟು ಮಂದಿ ಭೇಷ್ ಭೇಷ್ ಎಂದಿದ್ದರು.
ಭಂ ಭಂ ಭೋಲೆ (Bhum Bhum bhole) ಎನ್ನುವ ಭಕ್ತರ ಜೊತೆಯಲ್ಲಿ ಹೋಗಿರುವ ನಟಿ, ಅಮರನಾಥ ಗುಹೆ (Amaranatha yathre) ಹಾಗೂ ಭಕ್ತರ ಕುರಿತು ವಿಡಿಯೋದಲ್ಲಿ ಹೇಳಿದ್ದಾರೆ. ಅಲ್ಲಿರುವ ಸಂಪೂರ್ಣ ದರ್ಶನ ಮಾಡಿರುವ ಈಕೆ, (hara hara mahadeva) ‘ಹರ ಹರ ಮಹದೇವ’ ಎಂದು ಜೈಕಾರ ಕೂಗಿದ್ದಾರೆ. ಈ ಮಾತನ್ನು ಕೇಳಿ ಕೆಲವರು ಕಿಡಿ ಕಾರುತ್ತಿದ್ದರೆ, ಇನ್ನು ಕೆಲವರು ನೀವೂ ಹಿಂದೂ ಧರ್ಮಕ್ಕೆ ಬಂದು ಬಿಡಿ ಎನ್ನುತ್ತಿದ್ದಾರೆ. ಈಕೆಯ ಅಮ್ಮ ಕೂಡ ಹಿಂದೂ ಎನ್ನುವುದನ್ನು ಮರೆಯಬೇಡಿ ಎಂದಿದ್ದಾರೆ. ಹಾಗೆ ನೋಡಿದರೆ ಹೆಚ್ಚಿನ ಮುಸ್ಲಿಂ ಜನರ ಪೂರ್ವಜರು ಹಿಂದೂಗಳೇ ಆಗಿರುತ್ತಾರೆ. ಆದ್ದರಿಂದ ಪವಿತ್ರ ಹಿಂದೂ ಧರ್ಮವನ್ನು ನಿಮ್ಮದಾಗಿಸಿಕೊಳ್ಳಿ ಎಂದಿದ್ದಾರೆ.
ಆದರೆ ಇದೇ ವೇಳೆ ಕಟ್ಟರ್ ಮುಸ್ಲಿಂ ವಾದಿಗಳ ಕಡು ಟೀಕೆಗೂ ಗುರಿಯಾಗಿದ್ದಾರೆ ಸಾರಾ. ಯಾವುದಕ್ಕೂ ಉತ್ತರ ಕೊಡದೆ ಡೋಂಟ್ ಕೇರ್ ವರ್ತನೆಯಲ್ಲೇ ಸಾಗುತ್ತಿದ್ದಾರೆ. ಹಿಂದೂಗಳ ಹೊಗಳಿಕೆಯಿಂದ ಉಬ್ಬುತ್ತಲೂ ಇಲ್ಲ. ಕಟ್ಟರ್ ಮುಸ್ಲಿಮರ ಟೀಕೆಗೆ ಟೆನ್ಷನ್ ಆಗುತ್ತಲೂ ಇಲ್ಲ. ಸಾರಾ ಅವರ ಈ ವರ್ತನೆಯಿಂದ ನಿಜಕ್ಕೂ ಹೊಗಳಲ್ಪಡುತ್ತಿರುವುದು ಸಾರಾ ಅಲಿ ಖಾನ್ ತಾಯಿ ಅಮೃತಾ ಸಿಂಗ್. ಮಗಳಿಗೆ ಒಳ್ಳೆಯ ಸಂಪ್ರದಾಯ ಕಲಿಸಿದ್ದೀರಿ ಎಂದು ಹೊಗಳುತ್ತಿದ್ದಾರೆ. ಆದರೆ, ನೆನಪಿರಲಿ.. ಆಕೆ ಹಿಂದೂ ಧರ್ಮದ ಪರ ಮಾತನಾಡುತ್ತಿರುವವರೆಗೂ ಆಕೆಗೆ ಹಿಂದೂಗಳು ಹೊಗಳುತ್ತಾರೆ. ಸ್ವಲ್ಪ ಏರುಪೇರಾದರೆ ಟೀಕೆ ಮಾಡುತ್ತಾರೆ. ಮುಸ್ಲಿಮರ ವಿಷಯದಲ್ಲೂ ಸೇಮ್ ಆಗುವುದು ಈ ಹಿಂದಿನ ಪ್ರಕರಣಗಳ ಮೂಲಕ ಈಗಾಗಲೇ ಸಾಬೀತಾಗಿದೆ.