ನಟಿ ಪ್ರೇಮಾಗೆ ಕ್ಯಾನ್ಸರ್ ಅಂತೆ. ನಟಿ ಪ್ರೇಮಾ ಅವರಿಗೆ ಎರಡನೇ ಮದುವೆಗೆ ಗಂಡು ಫಿಕ್ಸ್ ಆಗಿದ್ಯಂತೆ. ನಟಿ ಪ್ರೇಮಾ ಅವರು ಇದಕ್ಕಾಗಿಯೇ ದೈವದ ಮೊರೆ ಹೋಗಿದ್ದರಂತೆ.. ದೈವ ಒಪ್ಪಿಗೆ ಕೊಟ್ಟಿದ್ಯಂತೆ. ಹೀಗೆ. ಒಂದಲ್ಲ..ಎರಡಲ್ಲ.. ಒಂದರಹಿಂದೊಂದು.. ನಟಿ ಪ್ರೇಮಾ ಒಂದು ರೀತಿಯಲ್ಲಿ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರೂ ಅವರ ಬಗ್ಗೆ ವದಂತಿಗಳು, ಸುದ್ದಿಗಳು ಹರಿದಾಡುವುದು ನಿಂತಿಲ್ಲ. ಇತ್ತೀಚೆಗೆ ಎರಡನೇ ಮದುವೆ ಬಗ್ಗೆ ಸುದ್ದಿಯಾಗಿತ್ತು. ಅದಕ್ಕೂ ಮೊದಲು ಡೈವೋರ್ಸ್ ಸುದ್ದಿಯಾಗಿತ್ತು. ಈ ಬಗ್ಗೆ ತೆಲುಗು ಚಾನೆಲ್`ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಎಲ್ಲವನ್ನೂ ಹೇಳಿದ್ದಾರೆ ಪ್ರೇಮಾ. ಅಂದಹಾಗೆ ಪ್ರೇಮ ಕನ್ನಡದಲ್ಲಷ್ಟೇ ಅಲ್ಲ, ತೆಲುಗು, ತಮಿಳಿನಲ್ಲೂ ಸ್ಟಾರ್ ನಟಿಯಾಗಿದ್ದವರು.
ಪ್ರೇಮಾ ಅವರಿಗೆ ನಿಜಕ್ಕೂ ಕ್ಯಾನ್ಸರ್ ಇತ್ತಾ..?
ಪ್ರೇಮಾ ಅವರು ಕೆಲವು ವರ್ಷಗಳ ಹಿಂದೆ ಕೂದಲು ಕಟ್ ಮಾಡಿಸಿದ್ದರು. ಅಲ್ಲಿಂದ ಶುರುವಾದ ವದಂತಿ ಇದು. ಪ್ರೇಮಾ ಅವರಿಗೆ ಕ್ಯಾನ್ಸರ್ ಆಗಿದೆ. ಕಿಮೋಥೆರಪಿಯಿಂದಾಗಿ ಕೂದಲು ಹೋಗಿದೆ ಎಂದು ಸುದ್ದಿಯಾಗಿತ್ತು. ಇದಕ್ಕೆಲ್ಲ ಸ್ಪಷ್ಟನೆ ನೀಡಿರುವ ಪ್ರೇಮ, ನಾನು ಗೆಳತಿಯನ್ನು ಭೇಟಿ ಮಾಡಲು ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾಗೆ ಹೋಗಿದ್ದೆ, ಆಗ ಇಲ್ಲಿಯವರು ನನಗೆ ಕ್ಯಾನ್ಸರ್ ಇದೆ, ಅದಕ್ಕೆ ನ್ಯೂಜಿಲ್ಯಾಂಡ್ಗೆ ಹೋಗಿದ್ದೆ ಅಂತ ಹೇಳಿದರು. ಆದರೆ ಅದು ಸತ್ಯವಲ್ಲ. ದೇವರ ದಯೆ, ನನಗೆ ಯಾವುದೇ ಆರೋಗ್ಯ ಸಮಸ್ಯೆಯೇ ಇಲ್ಲ. ನನಗೆ ಕ್ಯಾನ್ಸರ್ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಪ್ರೇಮ.
ನಿಜ ಹೇಳಬೇಕು ಅಂದ್ರೆ ನಾನು ಡಿಪ್ರೆಷನ್ಗೆ ಜಾರಿದ್ದೆ. ಆಗ ನಾನು ವಿದೇಶದಲ್ಲಿದ್ದ ಕಾರಣ, ಟ್ರೀಟ್‍ಮೆಂಟ್‍ಗಾಗಿ ವಿದೇಶದಕ್ಕೆ ಹೋಗಿದ್ದೇನೆ ಎಂದು ಸುದ್ದಿ ಹಬ್ಬಿಸಿದ್ದರು. ಕ್ಯಾನ್ಸರ್ ಎನ್ನುವುದು ದೊಡ್ಡ ಸುಳ್ಳು ವದಂತೆ. ಸುಮ್ಮನೆ ಹಬ್ಬಿಸಿದ್ದಾರೆ ಎಂದಿದ್ದಾರೆ ಪ್ರೇಮಾ.
ಇನ್ನು ಎರಡನೇ ಮದುವೆ ಬಗ್ಗೆ ಒಳ್ಳೆಯ ಹುಡುಗ ಸಿಕ್ಕರೆ ಮದುವೆಯಾಗುತ್ತೇನೆ. ನನ್ನ ವೈಯಕ್ತಿಕ ಜೀವನದ ನಿರ್ಧಾರವಿದು. ಮದುವೆ ಆಗಬೇಕು ಎನ್ನುವುದನ್ನು ನಾನು ನಿರ್ಧರಿಸಬೇಕು. ಜೀವನ ಅಂದ್ಮೇಲೆ ಮದುವೆ ಇರಬೇಕು ಹೀಗಾಗಿ ಒಂದೊಳ್ಳೆ ಹುಡುಗ ಸಿಕ್ಕರೆ ಖಂಡಿತ ಮದುವೆ ಅಗುತ್ತೀನಿ ಅದರಲ್ಲಿ ತಪ್ಪೇನು ಇಲ್ಲ. 70 ವರ್ಷದವರು ಮದುವೆ ಆಗುತ್ತಿದ್ದಾರೆ ಈ ಕಾಲದಲ್ಲಿ. ತಪ್ಪೇನಿದೆ? ಎಂದಿದ್ದಾರೆ ಪ್ರೇಮಾ.