ರಿಷಬ್ ಶೆಟ್ಟಿ ಕಾಂತಾರ ನಂತರ ದೇವರೇ ಅಲ್ಲಲ್ಲ.. ದೈವವೇ ಆಗಿದ್ದಾರೆ. ರಿಷಬ್ ಶೆಟ್ಟಿಯವರಿಗೆ ಕಾಂತಾರ ವಿಜಯಯಾತ್ರೆಗೆ ಹೋದಾಗ ಕರಾವಳಿಯಲ್ಲಿ ಈ ಅನುಭವಗಳಾಗಿದ್ದವು. ರಿಷಬ್ ಶೆಟ್ಟಿಯವರನ್ನು ದೈವದಂತೆಯೇ ಕಂಡು ಕಾಲಿಗೆ ಬಿದ್ದಿದ್ದರು. ಕೊನೆ ಕೊನೆಗೆ ರಿಷಬ್ ಶೆಟ್ಟಿ ಮಂಗಳೂರು ಹಾಗೂ ಉಡುಪಿ ಭಾಗದಲ್ಲಿ ಕೆಲವು ಥಿಯೇಟರನ್ನು ತಪ್ಪಿಸಿಕೊಂಡಿದ್ದರು. ಮನುಷ್ಯರು ಮನುಷ್ಯರ ಕಾಲಿಗೆ ಬೀಳುವುದನ್ನು ಸಹಿಸೋಕೆ ಆಗಲ್ಲ. ಮುಜುಗರವಾತ್ತೆ ಎಂದಿದ್ದರು. ಥಿಯೇಟರ್ ವಿಸಿಟ್ ಕಡಿಮೆ ಮಾಡಿಕೊಂಡಿದ್ದರು. ಅಷ್ಟೇ ಅಲ್ಲ, ತಮ್ಮ ಆಪ್ತರ ಬಳಿಯಿದ್ದ ಅಭಿಮಾನಿಗಳು ಕಾಲಿಗೆ ಬೀಳುವ ವಿಡಿಯೋಗಳನ್ನು ಡಿಲೀಟ್ ಮಾಡಿಸಿದ್ದರು. ಸೋಷಿಯಲ್ ಮೀಡಿಯಾಗೆ ಆ ವಿಡಿಯೋ ಹೋಗದಂತೆ ಎಚ್ಚರ ವಹಿಸಿದ್ದರು. ಆದರೆ ಹಿಂದಿಯಲ್ಲಿ ಅದನ್ನು ಮಾಡೋಕೆ ಸಾಧ್ಯವಾಗಿಲ್ಲ.
ಹಿಂದಿಯಲ್ಲಿ ನಾಳೆ ಕಾಂತಾರ ರಿಲೀಸ್ ಆಗುತ್ತಿದೆ. ಅದೂ ಹಿಂದಿ ಸ್ಟಾರ್ ಚಿತ್ರಗಳಂತೆಯೇ ರಿಲೀಸ್ ಆಗುತ್ತಿದೆ. ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ರಿಷಬ್ ಶೆಟ್ಟಿಯವರ ಕಾಲಿಗೆ ಯೂಟ್ಯೂಬರ್ ಒಬ್ಬ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಅದನ್ನು ತನ್ನ ಯೂಟ್ಯೂಬ್‍ನಲ್ಲೂ ಹಾಕಿಕೊಂಡಿದ್ದಾನೆ.
ಅಂದಹಾಗೆ ಕಾಂತಾರ ಹೊಂಬಾಳೆ ಫಿಲಮ್ಸ್ ಮೂಲಕ ತೆರೆಕಾಣುತ್ತಿದ್ದು ಕನ್ನಡದಲ್ಲೀಗ 3ನೇ ವಾರಕ್ಕೆ ಕಾಲಿಟ್ಟಿದೆ. ಹೌಸ್ ಫುಲ್. ಹಿಂದಿಯಲ್ಲಿ ನಾಳೆ ರಿಲೀಸ್. ತೆಲುಗು ಮತ್ತು ತಮಿಳಿನಲ್ಲಿ ಇವತ್ತು ತೆರೆ ಕಾಣುತ್ತಿದೆ. ಮಲಯಾಳಂನಲ್ಲಿ ಮಾತ್ರ ರಿಲೀಸ್ ಡೇಟ್ ಘೋಷಣೆಯಾಗಿಲ್ಲ.