ಆದಿತಿ ದಾವಣಗೆರೆ ಹುಡುಗಿ. ನಾಗಕನ್ನಿಕೆ ಧಾರಾವಾಹಿಯಲ್ಲಿ ನಾಗಕನ್ನಿಕೆಯಾಗಿ ಕಾಣಿಸಿಕೊಂಡಿದ್ದ ಹುಡುಗಿ. ಧೈರ್ಯಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದವರು. ಎಕ್ಸ್‍ಪೆರಿಮೆಂಟ್ ಮತ್ತು ಕಮರ್ಷಿಯಲ್ ಎರಡರಲ್ಲೂ ಗುರುತಿಸಿಕೊಂಡಿರೋ ಆದಿತಿ ಪ್ರಭುದೇವ ಚಿತ್ರರಂಬಕ್ಕೆ ಬಂದು ಉತ್ತುಂಗದಲ್ಲಿರುವಾಗಲೇ ಮದುವೆಯಾಗುತ್ತಿದ್ದಾರೆ. ಆದಿತಿ ಬೇರೆಯವರ ಹಾಗಲ್ಲ. ಬೋಲ್ಡ್ & ಬ್ಯೂಟಿಫುಲ್. ಚಿತ್ರರಂಗದಲ್ಲಿರುವವರು ಸಾಮಾನ್ಯವಾಗಿ ಪ್ರೀತಿ, ಮದುವೆಯನ್ನು ಆದಷ್ಟು ಗುಟ್ಟಾಗಿಡುತ್ತಾರೆ. ಆದರೆ ಆದಿತಿ ಹುಡುಗ ಫಿಕ್ಸ್ ಆಗಿ ಎಂಗೇಜ್‍ಮೆಂಟ್ ನಡೆಯವ ಹೊತ್ತಿಗೆ ನಮ್ ಹುಡ್ಗ ಎಂದು ಆರಾಮಾಗಿ ಹೇಳಿಕೊಂಡು ಓಡಾಡುತ್ತಿದ್ದರು.
ಯಶಸ್ವಿ ಉದ್ಯಮಿ ಮತ್ತು ಕಾಫಿ ಪ್ಲಾಂಟರ್. ಚಿತ್ರರಂಗಕ್ಕೆ ದೂರವೇ ಇರುವವರು. ಮದುವೆ ಆದ ಮೇಲೆ ನಟಿಸೋದು ಅಥವಾ ಬಿಡೋದು ಆದಿತಿಗೆ ಬಿಟ್ಟಿದ್ದು ಎಂದು ಹೇಳಿರೋ ಯಶಸ್ವಿ ಆದಿತಿಯ ನಟನೆಗೆ ಬ್ರೇಕ್ ಹಾಕುವ ಐಡಿಯಾ ಇಟ್ಟುಕೊಂಡಿಲ್ಲ. ಆದಿತಿ ಕೂಡಾ ನಟನೆಗೆ ಗುಡ್ ಬೈ ಹೇಳಿ ಗೃಹಿಣಿಯಾಗಿ ಮನೆಯಲ್ಲೇ ಇರುತ್ತೇನೆ ಎನ್ನುವವರೂ ಅಲ್ಲ. ಮದುವೆಯಾದ ಮೇಲೂ ನಟಿಸುತ್ತೇನೆ ಎಂದು ಹೇಳಿಕೊಂಡಿರೋ ಆದಿತಿ ಮದುವೆಯ ಶಾಸ್ತ್ರಗಳಲ್ಲಿ ಮಿಂದೇಳುತ್ತಿದ್ದಾರೆ. ಇದೆಲ್ಲದರ ಮಧ್ಯೆ ಹಲವರಿಗೆ ಮೂಡಿದ್ದ ಕುತೂಹಲ ಇವರಿಬ್ಬರದ್ದೂ ಲವ್ ಮ್ಯಾರೇಜಾ ಅಥವಾ ಅರೇಂಜ್ ಮ್ಯಾರೇಜಾ ಎನ್ನುವುದು. ಉತ್ತರ ಹೇಳಬೇಕೆಂದರೆ ಯಶಸ್ವಿಗೆ ಲವ್ ಆಯ್ತು. ಆಮೇಲೆ ಅರೇಂಜ್ ಆಯ್ತು. ಅರೇಂಜ್ ಆದ ಮೇಲೆ ಇಬ್ಬರಿಗೂ ಸಿಕ್ಕಾಪಟ್ಟೆ ಲವ್ ಆಯ್ತು. ಈಗ ಮ್ಯಾರೇಜ್ ಆಗುತ್ತಿದೆ. ಇದೂ ಕೂಡಾ ಒಂದ್ ರೀತಿಯಲ್ಲಿ ಲವ್ ಸ್ಟೋರಿನೇ.
ಪರ್ಫೆಕ್ಟ್ ಗರ್ಲ್ ಎಂಬ ಆಲ್ಬಂ ಸಾಂಗ್ ನೆನಪಿದೆಯಾ.. ಮಾತು ಘಾಟು ಮನಸು ಸ್ವೀಟು.. ತುಂಬಾ ಪ್ಯೂರೆಸ್ಟ್ ಸೋಲ್.. ಎಂಬ ಹಾಡು ಸಖತ್ ಹಿಟ್ ಆಗಿತ್ತು. 2020ರಲ್ಲಿ ರಿಲೀಸ್ ಆಗಿದ್ದ ಆಲ್ಬಂ ಸಾಂಗ್‍ನಲ್ಲಿ ಆದಿತಿ ಪ್ರಭುದೇವ ಹಾಡಿ ಕುಣಿಯುತ್ತಿದ್ದರೆ, ಇತ್ತ ಉದ್ಯಮಿಯೂ ಆಗಿರುವ ಕಾಫಿ ಪ್ಲಾಂಟರ್ ಯಶಸ್ವಿ ಹೃದಯದಲ್ಲಿ ಲಗ್ಗೆಯಿಟ್ಟಿದ್ದರು ಆದಿತಿ ಪ್ರಭುದೇವ ಎಂಬ ಚೆಲುವೆ. ಆಲ್ಬಂ ನೋಡಿ ಮನೆಯವರಿಗೆ ಹೇಳಿಯೂ ಬಿಟ್ಟರಂತೆ. ಅಲ್ಲಿಂದ ಮನೆಯವರು ಆದಿತಿ ಮನೆಯವರನ್ನು ಕಾಂಟ್ಯಾಕ್ಟ್ ಮಾಡಿದರಂತೆ. ಆದಿತಿ ಮನೆಯಲ್ಲಿಯೂ ಹುಡುಗನನ್ನು ಹುಡುಕುತ್ತಿದ್ದರು. ಎಲ್ಲವೂ ಕೂಡಿ ಬಂದು, ಆದಿತಿಗೆ ಯಶಸ್ವಿಯೂ ಇಷ್ಟವಾಗಿ ಮದುವೆಯೂ ಫಿಕ್ಸ್ ಆಯ್ತು. ಈಗ ಆದಿತಿ ಪ್ರಭುದೇವ, ಆದಿತಿ ಯಶಸ್ವಿ.
ನಟಿ ಆದಿತಿ ಪ್ರಭುದೇವ ಮತ್ತು ಯಶಸ್ವಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದಿತಿ ಪ್ರಭುದೇವ ಇಂದಿನಿಂದ ಶ್ರೀಮತಿ ಆದಿತಿ ಯಶಸ್ವಿಯಾಗಲಿದ್ದಾರೆ. ಸ್ಸೋ.. ಲವ್..ಕಮ್ ಅರೇಂಜ್..ಕಮ್..ಲವ್..ಕಮ್ ಮ್ಯಾರೇಜ್.