ಪೂಜಾ ಗಾಂಧಿ ಮದುವೆಯಂತೆ ಅನ್ನೋ ಸುದ್ದಿ ಇಡೀ ಕರ್ನಾಟಕದಾದ್ಯಂತ ಎಲ್ಲ ಕಡೆ ಹಬ್ಬುತ್ತಲೇ ಇದೆ. ಅದು ಮೊದಲು ಗಾಸಿಪ್ ರೂಪದಲ್ಲಿ ಹರಡಿ ಆಮೇಲೆ ಅಧಿಕೃತವಾಗಿದೆ. ಖುದ್ದು ಪೂಜಾ ಗಾಂಧಿಯವರೇ ಈ ವಿಷಯವನ್ನು ಅಧಿಕೃತವಾಗಿ ಹೇಳಿದ್ಧಾರೆ.
ಹೀಗೊಂದು ಪೋಸ್ಟ್ ಹಾಕುವ ಮೂಲಕ ಪೂಜಾ ಗಾಂಧಿ ಮದುವೆಯನ್ನು ಅಧಿಕೃತಗೊಳಿಸಿದ್ದಾರೆ.
ಪೂಜಾ ಮದುವೆಯಾಗುತ್ತಿರುವ ಹುಡುಗನ ಹೆಸರು ವಿಜಯ್ ಘೋರ್ಪಡೆ. ಲಾಜಿಸ್ಟಿಕ್ ಉದ್ಯಮಿಯೂ ಆಗಿರುವ ವಿಜಯ್, ಪೂಜಾ ಅವರೊಂದಿಗೆ ಬಿಸಿನೆಸ್ ಪಾರ್ಟನರ್ ಕೂಡಾ ಆಗಿದ್ದರು. ದಶಕದ ಪರಿಚಯ ಮತ್ತು ಸ್ನೇಹ ಪ್ರೀತಿಯಾಗಿ ಬದಲಾಗಿ ಈಗ ಮದುವೆಯ ಹಂತಕ್ಕೆ ಬಂದಿದೆ. ಪೂಜಾ ಕನ್ನಡ ಕಲಿಯೋಕೆ ಕಾರಣವೂ ಕೂಡಾ ವಿಜಯ್ ಅವರೇ. ಇಂದು ಸಂಜೆ ಪೂಜಾ ಅವರು ಕುವೆಂಪು ಅವರ ಮಂತ್ರ ಮಾಂಗಲ್ಯದ ಮಾದರಿಯಲ್ಲಿ ಮದುವೆಯಾಗಲಿದ್ದಾರೆ.