ಸಿನಿಮಾ ಚೆನ್ನಾಗಿದೆ. ಅದ್ಭುತವಾಗಿದೆ. ಸೂಪರ್. ಕನ್ನಡದಲ್ಲಿಯೂ ಒಂದ್ಸಲ ನೋಡ್ತೇನೆ. ಭಾಷೆಯ ವೊರಿಜಿನಾಲಿಟಿ ಗೊತ್ತಾಗೋದೆ ಅಲ್ಲಿ ಎಂದಿದ್ದಾರೆ. ಫೈಟಿಂಗ್, ರೊಮ್ಯಾನ್ಸ್ ಚಿತ್ರ ನೋಡಿದವರಿಗೆ ಇಷ್ಟವಾಗಿದೆ. ಒಬ್ಬರಂತೂ ಇನ್ನೊಬ್ಬ ಸತ್ಯಜಿತ್ ರೇ ಆಗುತ್ತಾರೆ ಎಂದಿದ್ದಾರೆ. ಬೆಂಗಳೂರಿನಲ್ಲೇ ಹಿಂದಿಯ ಕಾಂತಾರಗೆ 75 ಶೋ ಸಿಕ್ಕಿದೆ. ತೆಲುಗು ಕಾಂತಾರಗೆ 30 ಹಾಗೂ ತಮಿಳು ಕಾಂತಾರಗೆ 30 ಶೋ ಸಿಕ್ಕಿವೆ. ಕನ್ನಡದ ಒಂದೇ ಒಂದು ಶೋ ಕಡಿಮೆಯಾಗಿಲ್ಲ.
ಇಟ್ಸ್ ನಾಟ್ ಎ ಥ್ರಿಲ್ಲರ್. ಬಟ್ ಕಿಲ್ಲರ್.
5ಕ್ಕೆ ಎಷ್ಟು ಅಂಕ ಎಂದು ಕೇಳಬೇಡಿ. 10ಕ್ಕೆ ಎಷ್ಟು ಅಂತಾ ಕೇಳಿದ್ರೂ 10ಕ್ಕೆ 10 ಅಂಕ ಕೊಡ್ತೇನೆ.
ಸ್ಸೋ..ಸ್ಸೋ.. ಪ್ರೌಡ್. ಇನ್ನೊಂದು ಭಾಷೆಯ ಚಿತ್ರಗಳಿಂದ ಸ್ಫೂರ್ತಿ ಪಡೆಯುವುದೆಂದರೆ ಇದೇ ಇರಬೇಕು.
ಎಲ್ಲೋ ಒಂದ್ಕಡೆ ಪೈರಸಿ ಕಾಪಿ ಸಿಗುತ್ತೆ. ಆದರೆ ನೋಡಬೇಡಿ. ಥಿಯೇಟರಿಗೆ ಹೋಗಿ ನೋಡಿ. ಫೀಲ್ ಮಾಡಿಕೊಳ್ಳಿ.. ಹೀಗೆ ಹೇಳುತ್ತಿದ್ದಾರೆ.
ಇವೆಲ್ಲಕ್ಕಿಂತ ಹೆಚ್ಚಾಗಿ ಹಿಂದಿ ಚಿತ್ರಗಳಿಗೆ, ಬಾಲಿವುಡ್ ಮಂದಿಗೆ ದಕ್ಷಿಣದವರನ್ನು ನೋಡಿ ಕಲಿಯಿರಿ ಎಂದು ಹೇಳಿದ್ದಾರೆ. ಸಿನಿಮಾ ಹೇಗೆ ಮಾಡಬೇಕು? ನಮ್ಮ ನೆಲದ ಕಥೆ ಹೇಳಬೇಕು. ಇಲ್ಲದ ಕಥೆಯನ್ನೆಲ್ಲ ಹೇಳಬಾರದು. ಬರೀ ಎನ್‍ಆರ್‍ಐ ಕಥೆ ಹೇಳ್ತಾ ಹೋದ್ರೆ ನಾವ್ಯಾಕೆ ಸಿನಿಮಾ ನೋಡಬೇಕು? ನಮ್ಮ ಧರ್ಮವನ್ನ ಲೇವಡಿ ಮಾಡೋಕೆ ಸಿನಿಮಾ ಮಾಡಿದ್ರೆ ನಾವ್ಯಾಕೆ ನಿಮ್ಮ ಸಿನಿಮಾ ನೋಡ್ಬೇಕು? ಅದಕ್ಕೆ ದಕ್ಷಿಣದ ಚಿತ್ರಗಳನ್ನ ನೋಡಿ ಕಲೀರಿ ಎನ್ನುತ್ತಿದ್ದಾರೆ.
ಧರ್ಮವನ್ನ ಲೇವಡಿ ಮಾಡೋ ವಿಷಯ, ಬಾಯ್ಕಾಟ್ ವಿಚಾರ, ಪ್ರೇಕ್ಷಕರ ಬಗ್ಗೆ ಹಗುರಮಾತು.. ಹೀಗೆ ಹಲವು ಕಾರಣಗಳಿಂದ ಬಾಲಿವುಡ್ ಪ್ರೇಕ್ಷಕರನ್ನು ಕಳೆದುಕೊಳ್ಳುತ್ತಿರುವುದಂತೂ ಹೌದು. ಆದರೆ ಒಳ್ಳೆಯ ಸಿನಿಮಾ ಮಾಡಿದರೆ ಜನರಂತೂ ತಿರಸ್ಕರಿಸುವುದಿಲ್ಲ. ಅದೆಲ್ಲವನ್ನೂ ಬಿಡಿ.. ಕಾಂತಾರ ಜಯಭೇರಿ ಬಾರಿಸುತ್ತಿದೆ. ಕನ್ನಡಿಗರಾಗಿ ಖುಷಿ ಪಡೋಣ.