ಕೊಳಕು ಮನಸ್ಥಿತಿಯವರು ಎಲ್ಲೆಲ್ಲಿಯೂ ಇರುತ್ತಾರೆ. ಅಂತಾದ್ದೇ ಒಂದು ಅಸಹ್ಯ ಮನಸ್ಥಿತಿಯ ಜನರ ಗುಂಪೊಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿತ್ತು. ಹೊಸಲು ಮನಸ್ಥಿತಿಯ ಒಂದು ವರ್ಗದ ಜನ ಆರ್ʻಸಿಬಿ ಸೋಲುತ್ತಿದ್ದ ವೇಳೆ ಕೊಂಕು ಮಾತನ್ನಾಡಿದ್ದರು. ಅಸಹ್ಯದ ಪರಮಾವಧಿಗೆ ಹೋಗಿದ್ದರು. ಐಪಿಎಲ್ ಆರಂಭದ ವೇಳೆ ಆರ್ಸಿಬಿಯ ಆರ್ಸಿಬಿ ಜೆರ್ಸಿ ಅನಾವರಣಗೊಳಿಸಿದ್ದವರೇ ಅಶ್ವಿನಿ ಪುನೀತ್ ರಾಜ್ಕುಮಾರ್. ಹೊಸ ಅಧ್ಯಾಯ ಆರಂಭ ಎಂದು ವಿರಾಟ್ ಕೊಹ್ಲಿ ಹೇಳುವುದರೊಂದಿಗೆ ಐಪಿಎಲ್ ಅಭಿಯಾನ ಶುರುವಾಗಿತ್ತು.
ವಿಶೇಷವೇನು ಗೊತ್ತೇ.. ಆರ್ʻಸಿಬಿಯ ಈ ಹೊಸ ಅಧ್ಯಾಯದಲ್ಲಿ ರಿಷಬ್ ಶೆಟ್ಟಿ, ಶಿವಣ್ಣ, ಸುದೀಪ್, ರಶ್ಮಿಕಾ ಮಂದಣ್ಣ.. ಸೇರಿದಂತೆ ಹಲವು ಸ್ಟಾರ್ ನಟ ನಟಿಯರೂ ಇದ್ದರು. ಅವರ್ ಯಾರಿಗೂ ಹೇಳಿದ ಕಳಂಕವೊಂದನ್ನು ಅಶ್ವಿನಿಯವರಿಗೆ ಅಂಟಿಸಲಾಗಿತ್ತು.
ಆರಂಭದಲ್ಲಿ ಒಂದೇ ಒಂದು ಗೆಲುವು ಕಂಡಿದ್ದ ಆರ್ʻಸಿಬಿ.. ನಂತರ ಸತತ 7 ಸೋಲು ಕಂಡು ಸೊರಗಿತ್ತು. ಪ್ಲೇ ಆಫ್ ಬಾಗಿಲು ಬಂದ್ ಎಂಬಂತಾಗಿ ಹೋಗಿತ್ತು. ಆಗ ಅಶ್ವಿನಿ ಅವರು ವಿಧವೆ ಎಂಬುದನ್ನೇ ಕೆಟ್ಟದಾಗಿ ಬಳಸಿದ್ದ ಕೆಲವು ವಿಕೃತರು.. ಆರ್ʻಸಿಬಿ ಸೋಲಿಗೆ ಅಶ್ವಿನಿ ಅವರಿಂದ ಜೆರ್ಸಿ ಬಿಡುಗಡೆ ಮಾಡಿದ್ದೇ ಕಾರಣ ಎಂದ್ದರು.
ಆದರೆ ಈಗ…. ಸತತವಾಗಿ 7 ಪಂದ್ಯಗಳನ್ನು ಗೆದ್ದ ಆರ್ʻಸಿಬಿ.. ಅದೃಷ್ಟದ ಕೊನೆಯ ಎಳೆ ಹಿಡಿದು.. ಚೆನ್ನೈ ವಿರುದ್ಧ ಗೆದ್ದು ದಾಖಲೆ ಬರೆದಿದೆ.
ಎಂ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಮಾಡು ಇಲ್ಲವೇ ಮಾಡಿ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದು ಬೀಗಿದೆ. ಬೆಂಗಳೂರು ನೀಡಿದ 219 ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಲಷ್ಟೇ ಶಕ್ತವಾಗಿ.. ಸೋತಿದೆ. ಆರ್ಸಿಬಿ 27 ರನ್ಗಳಿಂದ ಗೆದ್ದು ಪ್ಲೇ ಆಫ್ಗೆ ಕ್ವಾಲಿಫೈ ಆಗಿದೆ.
ಈ ಹಿಂದೆ ಅಶ್ವಿನಿಯವರನ್ನು ನಿಂದಿಸಿದ್ದ ದುಷ್ಕರ್ಮಿಗಳಿಗೆ ಅಪ್ಪು ಅಭಿಮಾನಿಗಳು ಟಾಂಟ್ ಕೊಡುತ್ತಿದ್ದಾರೆ.
ನಮ್ಮ ಆರ್ಸಿಬಿ ಪ್ಲೇ ಆಫ್ಗೆ ಹೋಗೋಕೆ ಕಾರಣನೇ ನಮ್ಮ ದೊಡ್ಮನೆಯ ಅದೃಷ್ಟ ದೇವತೆ ಅಶ್ವಿನಿ ಅಕ್ಕ
ಇನ್ನು ಅಶ್ವಿನ್ ಅವರ ಬಗ್ಗೆ ಚೀಪ್ ಕಮೆಂಟ್ಸ್ ಮಾಡಿದ್ದ ಇಡಿಯಟ್ಸ್ ಈಗ ಸತತವಾಗಿ 6 ಪಂದ್ಯಗಳನ್ನು ಆರ್ಸಿಬಿ ಗೆದ್ದು ಪ್ಲೇ ಆಫ್ಗೆ ಹೋಗಿದೆ. ಈಗ ಎಲ್ಲಿದ್ದೀರಾ ಇಡಿಯಟ್ಸ್
ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿ. ಅದೃಷ್ಟ ತಂದ ಹೆಣ್ಣು ಅಶ್ವಿನಿ ಪುನೀತ್ ರಾಜ್ ಕುಮಾರ್ ಎಂದೆಲ್ಲ ಟ್ವೀಟ್ ಮಾಡುತ್ತಿದ್ಧಾರೆ. ದುರದೃಷ್ಟದ ಹೆಣ್ಣು ಎಂದು ವಿಕೃತಿಗಳಿಂದ ತೆಗಳಿಸಿಕೊಂಡಿದ್ದವರಿಗೆ.. ಇದೀಗ ಅದೃಷ್ಟ ದೇವತೆ ಎಂದು ತಿರುಗೇಟು ಕೊಟ್ಟಿದ್ಧಾರೆ ಅಭಿಮಾನಿಗಳು. ಆದರೆ.. ಕ್ರಿಕೆಟ್ ಅನ್ನೋದು ಒಂದು ಆಟವಷ್ಟೇ. ಅದರಲ್ಲೂ ಟ್ವೆಂಟಿ-೨೦ ಕ್ರಿಕೆಟ್ʻನಲ್ಲಿ ಗೆಲುವು ಒಂದೇ ಒಂದು ಓವರಿನಲ್ಲಿ ಉಲ್ಟಾ ಪಲ್ಟಾ ಆಗಬಹುದು.
ಅಂದಹಾಗೆ ಆರ್ʻಸಿಬಿ ಪರ ಕೊನೆಯ ಓವರ್ ಬೌಲ್ ಮಾಡಿದ್ದು ಯಶ್ ದಯಾಳ್. ಈತ ಈ ಹಿಂದೆ ಗುಜರಾತಿನ ಟೀಂನಲ್ಲಿದ್ಧಾಗ ೨೯ ರನ್ನುಗಳನ್ನು ಕಂಟ್ರೋಲ್ ಮಾಡಲಾಗಲು ಸಾಧ್ಯವಾಗದೆ.. ಒಂದೇ ಓವರಿನಲ್ಲಿ ೫ ಸಿಕ್ಸರ್ ಹೊಡೆಸಿಕೊಂಡಿದ್ದವರು. ಅದಾದ ಮೇಲೆ ಆರ್ʻಸಿಬಿಗೆ ಅದೇ ಯಶ್ ದಯಾಳ್.. ಧೋನಿಯಂತಹ ಧೋನಿಯನ್ನು ಔಟ್ ಮಾಡಿ, ತಂಡವನ್ನು ಗೆಲ್ಲಿಸಿಕೊಟ್ಟಿದ್ಧಾರೆ. ರವೀಂದ್ರ ಜಡೇಜ ಕ್ರೀಸಿನಲ್ಲಿದ್ದರೂ.. ಒಂದು ರನ್ ಕೂಡಾ ಕೊಡದೆ ತಂಡವನ್ನು ೨೭ ರನ್ನಿಂದ ಗೆಲ್ಲಿಸಿದ್ದಾರೆ. ೨೭ ರನ್ ಅಲ್ಲ.. ಇನ್ನೊಂದು ೧೦ ರನ್ ಹೊಡೆದಿದ್ದರೂ.. ಆರ್ʻಸಿಬಿ ಪ್ಲೇ ಆಫ್ʻಗೆ ಹೋಗುತ್ತಿರಲಿಲ್ಲ. ಆದರೆ.. ಇವತ್ತು ಇತಿಹಾಸ ಸೃಷ್ಟಿಯಾಗಿದೆ.
ಅಶ್ವಿನಿ ಪುನೀತ್ ಅವರೇ ಈಗ ಅದೃಷ್ಟ ದೇವತೆಯಾಗಿದ್ದಾರೆ.