ಕಾರುಗಳಲ್ಲಿ ಮಕ್ಕಳ ಗಮನ ಸೆಳೆಯುವುದು ರೆಡ್ ಕಲರ್. ರೋಡಿನಲ್ಲಿ ಕೆಂಪು ಕಾರುಗಳ ಸಂಖ್ಯೆಯೇ ಹೆಚ್ಚು. ಬಹುತೇಕ ಕಾರು ಕೊಳ್ಳುವವರ ಕಾರಿನ ಕಲರ್ ಫೈನಲ್ ಮಾಡುವುದು ಪುಟಾಣಿ ಮಕ್ಕಳೇ ಆದ್ದರಿಂದ ಕೆಂಪು ಕಾರುಗಳ ಸಂಖ್ಯೆ ಹೆಚ್ಚು. ಇನ್ನು ಜ್ಯೋತಿಷ್ಯ, ನಂಬಿಕೆಯ ಕಾರಣವೂ ಇದೆ. ಕೆಂಪು ಬಣ್ಣವನ್ನು ಮಂಗಳಕರ ಅಥವಾ ಪ್ರೀತಿಯ ಬಣ್ಣವೆಂದು ಕೂಡ ಹೇಳುತ್ತಾರೆ. ಅದೇ ಕಾರಿನ ವಿಚಾರಕ್ಕೆ ಬಂದರೆ, ಈ ಬಣ್ಣದ ಬಗ್ಗೆ ವಿವಿಧ ರೀತಿಯ ಪುರಾಣಗಳ ಮಾತುಗಳು ಕೇಳಿಬರುತ್ತವೆ. ಕೆಂಪು ಕಾರನ್ನು ಕಂಡರೆ ತಕ್ಷಣ 6 ಬಾರಿ ಚಪ್ಪಾಳೆ ತಟ್ಟಿ, ಸಂಜೆ ವೇಳೆಗೆ ಅಪ್ಪ ಏನಾದರು ಗಿಫ್ಟ್ ತರುತ್ತಾನೆ ಎಂಬ ಮಾತು ಕೇಳಿರಬಹುದು. ನೀವು 20 ರ ದಶಕದಲ್ಲಿ ಹುಟ್ಟಿದವರಾಗಿದ್ದರೆ, ಇಂತಹ ಮಾತನ್ನು ಕೇಳಿರುವ ಸಾಧ್ಯತೆ ಹೆಚ್ಚು.
ಅಷ್ಟೇ ಅಲ್ಲ. ವಿವಿಧ ಸ್ಥಳಗಳಲ್ಲಿ ಕೆಂಪು ಬಣ್ಣದ ಕಾರುಗಳಿಗೆ ಸಂಬಂಧಿಸಿದ ಅನೇಕ ಪುರಾಣಗಳು ಮತ್ತು ನಂಬಿಕೆಗಳು ಇಂದು ಜನರಲ್ಲಿ ಇದೆ. ಆದರೆ ಇದೇ ವೇಳೆ ಕೆಂಪು ಕಾರುಗಳ ಒಂದು ಇಂಟ್ರೆಸ್ಟಿಂಗ್.. ಒಂದಲ್ಲ.. 5 ಇಂಟ್ರೆಸ್ಟಿಂಗ್ ಕಥೆ ತಿಳಿದುಕೊಳ್ಳಿ.. ಏಕೆಂದರೆ.. ಕಾರು ಖರೀದಿಸುವ ಮುನ್ನ ಇದೂ ಕೂಡಾ ಇಂಪಾರ್ಟೆಂಟ್.
ಕೆಂಪು ಕಾರು.. ಕಳ್ಳರ ಡಾರ್ಲಿಂಗ್..!
ಕೆಂಪು ಬಣ್ಣದ ಕಾರುಗಳು ಹೆಚ್ಚು ಎದ್ದು ಕಾಣುವ ಕಾರಣ ಕಳ್ಳರ ಗಮನವನ್ನು ಹೆಚ್ಚು ಆಕರ್ಷಿಸುತ್ತವೆ. ಇದು ನಂಬಿಕೆಯೂ ಹೌದು, ವಾಸ್ತವವೂ ಹೌದು. ಏಕೆಂದರೆ ಕಳ್ಳತನವಾಗಿರುವ ಕಾರುಗಳಲ್ಲಿ ಕೆಂಪು ಕಾರುಗಳೇ ಹೆಚ್ಚು. ನಿಜ ಹೇಳ್ಬೇಕ್ ಅಂದ್ರೆಕಾರು ಕಳ್ಳತನದ ಸಂದರ್ಭದಲ್ಲಿ ಬಣ್ಣವು ಯಾವುದೇ ಮಹತ್ವದ ಪರಿಣಾಮವನ್ನು ಬೀರುವುದಿಲ್ಲ. ಕಳ್ಳರು ಕಾರನ್ನು ಅದರ ಮಾದರಿ, ಸುರಕ್ಷತಾ ಉಪಕರಣಗಳು ಮತ್ತು ಇತರ ಅಂಶಗಳನ್ನು ನೋಡುವ ಮೂಲಕ ಕದಿಯುತ್ತಾರೆ. ಆದರೆ ಕದ್ದಿರುವ ಕಾರುಗಳಲ್ಲಿ ಕೆಂಪು ಕಾರುಗಳೇ ಹೆಚ್ಚು.
ಕೆಂಪು ಕಾರು.. ಸಖತ್ ಹಾಟ್..!
ಹಾಟ್ ಎಂದ ಕೂಡಲೇ ಏನೇನೋ ಯೋಚನೆ ಬೇಡ. ಕೆಂಪು ಬಣ್ಣದ ಕಾರುಗಳು ಇತರ ಬಣ್ಣಗಳಿಗಿಂತ ಹೆಚ್ಚು ಬಿಸಿ ಆಗುತ್ತವೆ. ಅದರಲ್ಲೇನೂ ವಿಷೇಷವಿಲ್ಲ. ಕಪ್ಪು, ಕೆಂಪು ಮೊದಲಾದ ಗಾಢ ಬಣ್ಣ ಸೂರ್ಯನ ಶಾಖವನ್ನು ಹೆಚ್ಚು ಹೀರಿಕೊಳ್ಳುತ್ತವೆ. ಆದರೆ ಬಿಸಿಲಿನಲ್ಲಿ ನಿಲ್ಲಿಸಿದರೆ, ಯಾವುದೇ ಬಣ್ಣದ ಕಾರ್ ಆದರೂ ಅಷ್ಟೇ.. ಬಿಸಿಲಿನಲ್ಲಿ ಬಿಸಿಯಾಗುತ್ತೆ ಅನ್ನೋದು ಕಾಮನ್.
ಆಕ್ಸಿಡೆಂಟ್ ಜಾಸ್ತಿ
ಕೆಂಪು ಬಣ್ಣದ ಕಾರುಗಳು ಇತರ ಬಣ್ಣದ ಕಾರುಗಳಿಗಿಂತ ಹೆಚ್ಚು ಆ್ಯಕ್ಸಿಡೆಂಟ್ ಆಗುತ್ತವೆ ಎಂಬುದು ಸಾಮಾನ್ಯ ನಂಬಿಕೆ. ಆಕ್ಸಿಡೆಂಟ್ ಆಗೋಕೆ ಕಾರಣ ಡ್ರೈವರ್ ಮಿಸ್ಟೇಕು, ರಸ್ತೆ ಪರಿಸ್ಥಿತಿ.. ಮೊದಲಾದುವು ಕಾರಣ. ಆದರೆ.. ಆಕ್ಸಿಡೆಂಟ್ ಆದ ಕಾರುಗಳಲ್ಲಿ ಕೆಂಪು ಕಾರುಗಳ ಸಂಖ್ಯೆ ಹೆಚ್ಚು ಅನ್ನೋದು ಒಂದು ನಂಬಿಕೆ ಅಷ್ಟೇ.
ಇನ್ಷೂರೆನ್ಸ್ ದುಬಾರಿಯಂತೆ..!
ಕೆಂಪು ಬಣ್ಣದ ಕಾರುಗಳ ವಿಮಾ ಪ್ರೀಮಿಯಂ ಇತರ ಬಣ್ಣದ ಕಾರುಗಳಿಗಿಂತ ಹೆಚ್ಚಾಗಿರುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಸತ್ಯವೆಂದರೆ ವಿಮಾ ಕಂಪನಿಗಳು ಕಾರಿನ ಬಣ್ಣದ ಆಧಾರದ ಮೇಲೆ ವಿಮಾ ಪ್ರೀಮಿಯಂ ಅನ್ನು ನಿರ್ಧರಿಸುವುದಿಲ್ಲ. ವಿಮಾ ದರಗಳು ಕಾರಿನ ಮಾದರಿ, ಎಂಜಿನ್ ಸಾಮರ್ಥ್ಯ, ಚಾಲಕನ ವಯಸ್ಸು ಮತ್ತು ಇತರೆ ಕೆಲವು ಅಂಶಗಳನ್ನು ಅವಲಂಬಿಸಿರುತ್ತದೆ.
ಇವೆಲ್ಲವೂ ಕೇವಲ ಕಟ್ಟುಕಥೆಗಳಷ್ಟೆ. ಕೆಂಪು ಬಣ್ಣದ ಕಾರುಗಳು ಅನೇಕ ಜನರ ನೆಚ್ಚಿನ ಆಯ್ಕೆಯಾಗಿದೆ. ಬಣ್ಣದ ಕಾರನ್ನು ಆರಿಸುವುದು ನಿಮ್ಮ ವೈಯಕ್ತಿಕ ಆಯ್ಕೆ. ಇದಕ್ಕೂ ಪುರಾಣಕ್ಕೂ ಯಾವುದೇ ಸಂಬಂಧವಿಲ್ಲ.