ಬಿಜೆಪಿ ರಾಜ್ಯ ಉಸ್ತುವಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಶೇ. 80ರಷ್ಟು ನಾಯಕರು ವಿಜಯೇಂದ್ರ ಪರ ಇದ್ದಾರಂತೆ. ಯತ್ನಾಳ್, ರಮೇಶ್ ಜಾರಕಿಹೊಳಿ ಪರ ಇದ್ದವರ ಸಂಖ್ಯೆ ಐದಾರು ನಾಯಕರು ಮಾತ್ರವೇ ಅಂತೆ. ಹೀಗಂತ ಹೇಳಿರುವುದು ಸ್ವತಃ ವಿಜಯೇಂದ್ರ ಯಡಿಯೂರಪ್ಪ.
ಅಧ್ಯಕ್ಷ ಹುದ್ದೆಯ ಬದಲಾವಣೆ ಕುರಿತು ಭಾರೀ ಗದ್ದಲ ನಡೆದಿರುವ ನಡುವೆಯೇ, ಇತ್ತೀಚೆಗೆ ನಡೆದ ಪಕ್ಷದ ಶಾಸಕರ ಸಭೆಯಲ್ಲಿದ್ದ ಶೇ.80 ರಷ್ಟು ಸದಸ್ಯರು ನನ್ನನ್ನೇ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆಸುವ ಬಗ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೇವಲ ಐದಾರು ಜನ ಮಾತ್ರ ನನ್ನ ವಿರುದ್ದ ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿಯಲ್ಲಿನ ಎಲ್ಲಾ ಗೊಂದಲಗಳಿಗೆ ಸದ್ಯದಲ್ಲೇ ಉತ್ತರ ಸಿಗಲಿದೆ’ ಎಂದು ಹೇಳಿದ್ದಾರೆ ವಿಜಯೇಂದ್ರ.
ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆಗಳು ಸತ್ಯ ಎಂದು ಒಪ್ಪಿಕೊಂಡಿರುವ ವಿಜಯೇಂದ್ರ ಬಿಜೆಪಿಯಲ್ಲಿನ ಬಣ ಬೆಳವಣಿಗೆಗಳು ಕಾರ್ಯಕರ್ತರು ಹಾಗೂ ನನಗೂ ಬೇಸರ ತರಿಸಿವೆ. ಆದರೆ ನನ್ನ ಅಧ್ಯಕ್ಷಗಿರಿಯ ಬಗ್ಗೆ ಕಾರ್ಯ ಕರ್ತರಿಗೆ ಸಮಾಧಾನ ಇದೆ. ಯಡಿಯೂರಪ್ಪ ನವರ ಬಗ್ಗೆ ಅಪಮಾನ ಆಗುವ ರೀತಿಯಲ್ಲಿ ಕೆಲವರು ಮಾತ ನಾಡುತ್ತಿದ್ದಾರೆ. ಕಾರ್ಯಕರ್ತರು ನೊಂದಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೆ ಇದ್ದಕ್ಕಿದ್ದಂತೆ ಉದ್ಭವವಾಗಿರುವ ರೆಡ್ಡಿ-ರಾಮುಲು ಜಟಾಪಟಿಗೂ ಉತ್ತರ ಹೇಳಿರುವ ವಿಜಯೇಂದ್ರ . ಶ್ರೀರಾಮಲು ವಿಚಾರ ಕೋರ್‌ಕಮಿಟಿ ಸಭೆಯಲ್ಲಿ ಚರ್ಚೆ ಆಗಿದೆ. ರಾಮಲು ಬಗ್ಗೆ ಗೌರವ ಇದೆ. ಎಲ್ಲಾ ಅಂಶಗ ಳನ್ನು ಹೊರ ಗಡೆ ಹೇಳಲು ಸಾಧ್ಯವಿಲ್ಲ. ಶ್ರೀರಾಮುಲು ಅಪಾರ್ಥಕ್ಕೆ ಅವಕಾಶ ಮಾಡಿಕೊಡ ಬಾರದು. ಎಲ್ಲರೂ ಒಗ್ಗಟ್ಟಾಗಬೇಕು ಎಂದಿದ್ದಾರೆ. ವಿಜಯೇಂದ್ರ ವಿರುದ್ಧ ಹೋರಾಡುತ್ತಿರುವ ತಂಡದ ಪರ ಐದಾರು ನಾಯಕರು ಮಾತ್ರವೇ ಇದ್ದಾರಂತೆ. ಅವರು ಯಾರು ಎಂದು ವಿಜಯೇಂದ್ರ ಹೇಳಿಲ್ಲ.
ಇತ್ತ ಶಿವಮೊಗ್ಗದಲ್ಲಿ ಮಾತನಾಡಿರುವ ಶಿವಮೊಗ್ಗ ಸಂಸದ ಹಾಗೂ ವಿಜಯೇಂದ್ರ ಅವರ ಅಣ್ಣ ಬಿವೈ ರಾಘವೇಂದ್ರ ಬಿವೈ ವಿಜಯೇಂದ್ರ ಅವರು ಬಿಜೆಪಿಯ ರಾಜ್ಯಾಧ್ಯಕ್ಷರಾದ ಮೇಲೆ ಹಲವು ಮಂದಿ ಸಾಕಷ್ಟು ಗೊಂದಲ ಸೃಷ್ಟಿ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಕೆಲವರು ವೈಯಕ್ತಿಕ ಹೇಳಿಕೆಗಳನ್ನು ಕೂಡ ನೀಡುತ್ತಿದ್ದಾರೆ. ಇನ್ನೊಂದು ವಾರದಲ್ಲಿ ಇದೆಲ್ಲದಕ್ಕೂ ಫುಲ್ ಸ್ಟಾಪ್ ಇಡುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ರಾಘವೇಂದ್ರ ಅವರ ಪ್ರಕಾರ ವಿಜಯೇಂದ್ರ 100ಕ್ಕೆ 100ರಷ್ಟು ವಿಜಯೇಂದ್ರ, ರಾಜ್ಯಾಧ್ಯಕ್ಷರಾಗಿ ಮುಂದುವರೆಯುತ್ತಾರೆ. ಅದರಲ್ಲಿ ನನಗೆ ಯಾವ ರೀತಿಯ ಅನುಮಾನವೂ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಶಿವಮೊಗ್ಗದಲ್ಲಿ ಅವರು ಮಾತನಾಡಿದರು. ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರೆಯುವ ವಿಶ್ವಾಸವಿದೆ. ಸಿಎಂ ವಿರುದ್ಧದ ಮುಡಾ ಹಗರಣದ ಹೋರಾಟದಲ್ಲಿ ನಡೆದುಕೊಂಡ ರೀತಿ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ.