ಮಹಿಳೆಯರ ಗರ್ಭಧಾರಣೆ ಸರ್ವೇಸಾಧಾರಣ ವಿಷಯ. 9 ರಿಂದ 10 ತಿಂಗಳು ಗರ್ಭಾವಸ್ಥೆಯಲ್ಲಿದ್ದ ತಾಯಿ, ಮಗುವಿಗೆ ಜನ್ಮ ಕೊಡ್ತಾರೆ. ಒಮ್ಮೊಮ್ಮೆ ಅವಧಿಗೆ ಮುನ್ನವೇ ಹೆರಿಗೆಯಾಗುವುದೂ ಉಂಟು. ಇನ್ನು ಗರ್ಭಪಾತವಾಗುವುದೂ ಸಾಮಾನ್ಯ ಸಂಗತಿಯೇ ಆಗಿದೆ. ಎಷ್ಟೋ ಬಾರಿ ಕೆಲವೇ ವಾರಗಳಲ್ಲಿ ಗರ್ಭಪಾತವಾಗುವುದೂ ಇದೆ. ಆದರೆ ಗರ್ಭಧರಿಸಿದ ಮಹಿಳೆಗೆ ತನ್ನ ಗರ್ಭದಲ್ಲಿರುವುದು ಮಗು ಅಲ್ಲ, ಅದೊಂದು ಕಲ್ಲು ಎಂದು ಗೊತ್ತಾದರೆ.. ಹೇಗಿರುತ್ತದೆ.. ಅಂತಾದ್ದೊಂದು ವಿಚಿತ್ರ ವಿಪರೀತ ಘಟನೆಯೂ ಜರುಗಿದೆ. ಆಂಧ್ರಪ್ರದೇಶದಲ್ಲಿ.
ಅನಕಪಲ್ಲೆ ಜಿಲ್ಲೆಯ 27 ವರ್ಷದ ಮಹಿಳೆ ತೀವ್ರ ಹೊಟ್ಟೆ ನೋವಿನಿಂದ ಕಿಂಗ್ ಜಾರ್ಜ್ ಆಸ್ಪತ್ರೆಗೆ ದಾಖಲಾಗಿದ್ದರು. ಹೊಟ್ಟೆಯ ಕೆಳಭಾಗದಲ್ಲಿನ ತೀವ್ರ ನೋವು ನೋಡಿದ ವೈದ್ಯರಿಗೆ ಅನುಮಾನ ಬಂತು. ಹೀಗಾಗಿ ತಕ್ಷಣವೇ ಎಂಆರ್‌ಐ ಸ್ಕ್ರಾನ್‌ಗೆ ಸೂಚಿಸಿದ್ದಾರೆ. ಸ್ಕ್ರಾನ್ ವರದಿ ವೈದ್ಯರಿಗೆ ಅಚ್ಚರಿ ತಂದಿದೆ. ಮಹಿಳೆ ಗರ್ಭದಲ್ಲಿ 24 ವಾರದ ಮಗುವಿನ ಅವಶೇಷಗಳು ಪತ್ತೆಯಾಗಿದೆ. ಇದು ಅಪರೂಪದಲ್ಲೇ ಅಪರೂಪದ ಪ್ರಕರಣ.
ಹಾಗಾದರೆ ಅದು ಕಲ್ಲೇನಾ..? ಹೊಟ್ಟೆ ಅಥವಾ ಕಿಡ್ನಿಯಲ್ಲಿ ಸ್ಟೋನ್ ತೆಗೀತಾರಲ್ಲ, ಆ ರೀತಿಯ ಸ್ಟೋನ್ ಆಗಿತ್ತಾ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಇಂತಹ ಸ್ಟೋನ್ ಬೇಬಿ ಜನಿಸುವುದಕ್ಕೆ ಕಾರಣ ಲಿಥೋಪಿಡಿಯನ್ ಅನ್ನೋ ಸಮಸ್ಯೆ. ಇಂತಹ ಲಕ್ಷಣಗಳು ಗರ್ಭಾವಸ್ಥೆಯಲ್ಲಿರುವ ಮಗುವಿನಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುತ್ತೆ.
ಗರ್ಭಾವಸ್ಥೆಯ 14 ವಾರಗಳ ನಂತರ ಈ ಸಮಸ್ಯೆ ಅಪರೂಪವಾಗಿ ಕಾಣಿಸಿಕೊಳ್ಳುತ್ತದೆ. 14 ವಾರಗಳಿಂದ ಪೂರ್ಣ ಅವಧಿವರೆಗೂ ಈ ಸಮಸ್ಯೆಗಳು ಯಾವಾಗ ಬೇಕಾದರೂ ಸಂಭವಿಸಬಹುದು. ಗರ್ಭಾವಸ್ಥೆಯಲ್ಲಿ ಲಿಥೋಪಿಡಿಯನ್ ಸಮಸ್ಯೆ ಬಾಧಿಸಿದರೆ, ಮಗು ಗರ್ಭದಲ್ಲೇ ಮೃತಪಡಲಿದೆ. ಬಳಿಕ ಮಗುವಿನ ಅವಶೇಷಗಳು ಗರ್ಭದಲ್ಲೇ ಉಳಿದುಕೊಳ್ಳಲಿದೆ. ಒಮ್ಮೆ ಸ್ಟೋನ್ ಬೇಬಿ ಸಮಸ್ಯೆ ಭಾದಿಸಿದ ಬಳಿಕ ಕೆಲವಾರದಲ್ಲೇ ಮಗು ಮೃತಪಡಲಿದೆ. ಇಷ್ಟೇ ಅಲ್ಲ ಕೆಲ ವಾರದಲ್ಲೇ ಮಹಿಳೆ ಋತುಬಂಧವೂ ಸರಾಗವಾಗಲಿದೆ. ಹೀಗಾಗಿ ಮಗುವಿನ ಅವಶೇಷ ಹೊಟ್ಟೆಯೊಳಗಿರುವ ಸಣ್ಣ ಸುಳಿವು ಮಹಿಳೆಗೆ ಇರುವುದಿಲ್ಲ.
ಆದರೆ ತಿಂಗಳು ಕಳೆಯುತ್ತಿದ್ದಂತೆ ಮಹಿಳೆಯ ಹೊಟ್ಟೆಯಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಸ್ಕ್ರಾನಿಂಗ್ ಮೂಲಕ ಮಾತ್ರ ಈ ಸಮಸ್ಯೆ ಪತ್ತೆ ಹಚ್ಚಲು ಸಾಧ್ಯವಿದೆ. ಹೀಗೆ ಅನಕಪಲ್ಲೆ ಜಿಲ್ಲೆಯ ಮಹಿಳೆ ಹೊಟ್ಟೆಯಲ್ಲಿದ್ದ ಸ್ಟೋನ್ ಬೇಬಿಯ ಪಕ್ಕೆಲುಬು, ತಲೆಬುರುಡೆ ಸೇರಿದಂತೆ ಇತರ ಅವಶೇಷಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತಗೆಯಲಾಗಿದೆ.
ಗರ್ಭಾವಸ್ತೆಯಲ್ಲಿ ಬ್ರೂಣ ಸತ್ತ ಬಳಿಕ ಈ ಅವಶೇಷ ಕ್ಯಾಲ್ಸಿಫೈಡ್ ಆಗಿ ಬದಲಾಗಲಿದೆ. ಇದು ಕಲ್ಲು ಮಗುವಾಗಿ ಗರ್ಭದೊಳಗೆ ಶೇಖರವಾಗುತ್ತದೆ. ಜಗತ್ತಿನಲ್ಲೇ ಇದು ಅಪರೂಪದ ಪ್ರಕರಣ. ಈ ಹಿಂದೆ 2015ರಲ್ಲಿ ಚಿಲಿ ದೇಶದ 91 ವರ್ಷದ ಮಹಿಳೆ ಎಸ್ಟೆಲಾ ಮೆಲೆಂಡಜ್ ಎಂಬ ವೃದ್ಧೆಯೊಬ್ಬರು ನಡೆದಾಡುವಾಗ ಬಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಮೂಳೆ ಎಕ್ಸ್‌ರೇ ತೆಗೆದಾಗ, ಆ ಎಕ್ಸ್‌ರೇಯಲ್ಲಿ ಕಳೆದ 60 ವರ್ಷಗಳಿಂದ ಸ್ಟೋನ್ ಬೇಬಿ ಗರ್ಭದಲ್ಲಿರುವುದು ಪತ್ತೆಯಾಗಿತ್ತು. ಮಹಿಳೆಗೆ ಒಂದು ಬಾರಿಯೂ ನೋವಿನ ಅನುಭವ ಆಗಿರಲಿಲ್ಲ. ಅಂದರೆ 30 ವರ್ಷದವರಿದ್ದಾಗ ಆ ಮಹಿಳೆ ಗರ್ಭಧರಿಸಿದ್ದರು. ಅದಾದ ನಂತರ ಅದು ಸ್ಟೋನ್ ಬೇಬಿಯಾಗಿತ್ತು. ಮಹಿಳೆಗೆ ತಾನು ಗರ್ಭ ಧರಿಸಿದ್ದು ಹಾಗೂ ಸ್ಟೋನ್ ಬೇಬಿಯಾಗಿದ್ದು ಗೊತ್ತೇ ಆಗಿರಲಿಲ್ಲ.
ಇಂತಹ ವಿಚಿತ್ರಗಳೂ ಸಂಭವಿಸುತ್ತವೆ. ಆದರೆ ಈ ಮಹಿಳೆಯ ವಿಷಯಕ್ಕೆ ಬಂದರೆ, ಮಹಿಳೆ ಸದ್ಯಕ್ಕೆ ಆರೋಗ್ಯವಾಗಿದ್ದಾರೆ.