ಅಕ್ಟೋಬರ್ 29. ಧನತ್ರಯೋದಶಿ ಹಬ್ಬ. ಈ ದಿನ ಬುಧ ಗ್ರಹವು ತನ್ನ ರಾಶಿಯನ್ನು ಬದಲಾಯಿಸಲಿದೆ. ಲಕ್ಷ್ಮಿ ಮತ್ತು ಕುಬೇರನಿಗೆ ಸಂಬಂಧಿಸಿದ ಧನತ್ರಯೋದಶಿ ಹಬ್ಬದ ದಿನ ಬುಧ ಗ್ರಹವು ತನ್ನ ರಾಶಿಯನ್ನು ಪರಿವರ್ತನೆ ಮಾಡುತ್ತಾನೆ. ಆಗ ಲಕ್ಷ್ಮಿ ನಾರಾಯಣ ಯೋಗ ನಿರ್ಮಾಣಗೊಳ್ಳುತ್ತದೆ. ಬುಧನು ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ. ಆಗ ಅದೇ ವೃಶ್ಚಿಕ ರಾಶಿಯಲ್ಲಿ ಶುಕ್ರ ಗ್ರಹವು ಚಲಿಸುತ್ತಿರುತ್ತದೆ. ಇದರಿಂದಾಗಿ ಶುಕ್ರ-ಬುಧ ಸಂಯೋಗವಾಗಲಿದೆ. ಇದು ಲಕ್ಷ್ಮಿ ನಾರಾಯಣ ಯೋಗದ ಸೃಷ್ಟಿಗೆ ಕಾರಣವಾಗುತ್ತದೆ. ಈ ಶುಭಯೋಗದ ಲಾಭವನ್ನು ಕೆಲ ರಾಶಿಗೆ ಸೇರಿದ ಜನರು ಪಡೆಯುತ್ತಾರೆ.
ಸಿಂಹ ರಾಶಿ :
ಲಕ್ಷ್ಮೀನಾರಾಯಣ ಯೋಗದಿಂದಾಗಿ ಸಿಂಹರಾಶಿಯವರಿಗೆ ಸಾಕಷ್ಟು ಉತ್ತಮ ಲಾಭದ ಫಲಿತಾಂಶವನ್ನು ನಿರೀಕ್ಷೆ ಮಾಡಬಹುದು. ಹೊಸ ವಾಹನ ಖರೀದಿಗೆ ಇದು ಶುಭ ಸಮಯ. ನಿಮ್ಮ ಕೆಲಸವನ್ನು ಗುರುತಿಸುವ ಸಮಯವಾಗಿದ್ದು, ಉತ್ತಮ ಗೌರವಗಳೂ ಹುಡುಕಿಕೊಂಡು ಬರುತ್ತವೆ. ಆಸ್ತಿ ಖರೀದಿಗೂ ಇದು ಒಳ್ಳೆಯ ಸಮಯ. ಸಿಂಹ ರಾಶಿಯವರು ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ, ಲಕ್ಷ್ಮೀ ನಾರಾಯಣ ಯೋಗದ ಫಲ ಸಿಗಲಿದೆ.
ತುಲಾ ರಾಶಿ :
ಆರ್ಥಿಕ ಲಾಭವೂ ಇದೆ. ಕೆರಿಯರ್ ಉತ್ತಮ ಮಟ್ಟಕ್ಕೇರುವ ಅವಕಾಶಗಳೂ ಇವೆ. ಕೆಲಸ ಮಾಡುವ ಜಾಗದಲ್ಲಿ ನಿಮ್ಮ ಪರಿಶ್ರಮಗೆ ಮೆಚ್ಚುಗೆ ಮತ್ತು ಧನಲಾಭ ಸಿಗಲಿದೆ. ನಿಮ್ಮ ಬಗ್ಗೆ ಇರುವಂತಹ ನೆಗೆಟಿವ್ ಅಭಿಪ್ರಾಯ ದೂರವಾಗುವ ಸಮಯವಿದು. ಲಕ್ಷ್ಮೀನಾರಾಯಣ ಯೋಗದಿಂದಾಗಿ ನೀವು ಇನ್ನಷ್ಟು ಅಭಿವೃದ್ಧಿಯ ಕಡೆಗೆ ಸಾಗಲಿದ್ದೀರಿ ಹಾಗೂ ಲಕ್ಷ್ಮಿಯ ಕೃಪೆಯಿಂದಾಗಿ ಜೀವನ ಸಂಗಾತಿಯ ಜೊತೆಗೆ ಕೂಡ ನಿಮ್ಮ ಸಂಬಂಧ ಮೊದಲಿಗಿಂತ ಮಧುರವಾಗಲಿದೆ.
ವೃಶ್ಚಿಕ ರಾಶಿ :
ಬುಧ ವೃಶ್ಚಿಕ ರಾಶಿಗೆ ಕಾಲಿಡುವುದರಿ ಪರಿಣಾಮ, ಈ ಜಾತಕದವರ ದಿನಗಳು ಉತ್ತಮವಾಗಲು ಶುರುವಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನ ಸಿಗುವ ಸಾಧ್ಯತೆಗಳು ಹೆಚ್ಚಿವೆ. ಶತ್ರುಗಳೂ ಮಿತ್ರರಾಗುತ್ತಾರೆ. ಅದಕ್ಕೆ ಕಾರಣ ಲಕ್ಷ್ಮೀ ನಾರಾಯಣ ಯೋಗ. ಏಕೆಂದರೆ ಶತ್ರುಗಳನ್ನು ವಿಫಲಗೊಳಿಸುವ ಯೋಗವೂ ಈ ಲಕ್ಷ್ಮೀ ನಾರಾಯಣ ಯೋಗಕ್ಕೆ ಇದೆ.
ಕುಂಭ ರಾಶಿ :
ಕುಂಭ ರಾಶಿಯ ಜಾತಕದವರ ಪ್ರೇಮ ಸಂಬಂಧ, ವೈವಾಹಿಕ ಜೀವನ ಗಟ್ಟಿಯಾಗಲಿದೆ. ಮೊದಲೇ ಕಷ್ಟಗಳನ್ನು ಎದೆಗೊಟ್ಟು ಎದುರಿಸುವ ಸ್ವಭಾವದವರಾದ ಕುಂಭದವರಿಗೆ ಈ ಯೋಗದಲ್ಲಿ ಧೈರ್ಯವಾಗಿ ಮುನ್ನುಗ್ಗುತ್ತಾರೆ. ಆದಾಯದಲ್ಲಿ ಕೂಡ ಹೆಚ್ಚಳ ಕಂಡು ಬರಲಿದೆ. ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ, ವಿದೇಶದ ಕನಸು ಕಟ್ಟಿಕೊಂಡಿರುವವರಿಗೆ ಈ ಯೋಗ ಲಾಭ ತರಲಿದೆ.
ವೃಷಭ ರಾಶಿ :
ಶುಕ್ರ ವೃಷಭ ರಾಶಿಯ ಅಧಿಪತಿಯಾಗಿದೆ. ಶುಕ್ರನು ವೃಶ್ಚಿಕ ರಾಶಿಯಲ್ಲಿ ಬುಧನೊಂದಿಗೆ ಸೇರಿ ಲಕ್ಷ್ಮಿ ನಾರಾಯಣ ಯೋಗದ ನಿರ್ಮಾಣವಾಗುವುದು. ಈ ಶುಭಯೋಗದ ಸೃಷ್ಟಿಯಿಂದ ವೃಷಭ ರಾಶಿಗೆ ಸೇರಿದ ಜನರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಈ ಅವಧಿಯಲ್ಲಿ ನೀವು ಉನ್ನತಿಯನ್ನು ಪಡೆಯಲು ಉತ್ತಮ ಅವಕಾಶಗಳು ದೊರಕುತ್ತವೆ. ನವೆಂಬರ್ ತಿಂಗಳಿನಲ್ಲಿ ನಿಮಗೆ ಶುಭ ಸುದ್ಧಿ ಲಭಿಸುವುದು.
ಮಿಥುನ ರಾಶಿ :
ಲಕ್ಷ್ಮಿ ನಾರಾಯಣ ಯೋಗದ ನಿರ್ಮಾಣದಿಂದಾಗಿ ಈ ಧನತ್ರಯೋದಶಿ ಹಬ್ಬದ ನಂತರದ ಸಮಯವೂ ನಿಮಗೆ ಬಹಳ ವಿಶೇಷವಾಗಿರಲಿದೆ. ಈ ಅವಧಿಯಲ್ಲಿ ನೀವು ಪ್ರತಿಸ್ಪರ್ಧಿಗಳ ವಿರುದ್ಧ ಜಯಶಾಲಿಯಾಗುವ ಸಂಭವ ಹೆಚ್ಚು. ಕೆಲಸ ಕಾರ್ಯಗಳಲ್ಲಿ ಅದೃಷ್ಟವೂ ಕೈ ಹಿಡಿಯಲಿದೆ. ಲಕ್ಷ್ಮಿ ನಾರಾಯಣ ಯೋಗದಿಂದಾಗಿ ಹಣಕ್ಕೆ ಸಂಬಂಧಿಸಿದ ನಿಮ್ಮ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.
ಕಟಕ ರಾಶಿ :
ಕಟಕ ರಾಶಿಗೆ ಸೇರಿದ ಜನರಿಗೆ ಈ ಲಕ್ಷ್ಮಿ ನಾರಾಯಣ ಯೋಗದ ನಿರ್ಮಾಣದಿಂದಾಗಿ ದೊಡ್ಡ ಅವಕಾಶಗಳು ನಿಮ್ಮ ವೃತ್ತಿ ಜೀವನದಲ್ಲಿ ಈ ಧನತ್ರಯೋದಶಿಯ ನಂತರ ಲಭಿಸುವ ಉತ್ತಮವಾದ ಯೋಗವಿದೆ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಈ ನವೆಂಬರ್ ನಲ್ಲಿ ನೀವು ಉನ್ನತ ಸ್ಥಾನವನ್ನು ತಲುಪುವಿರಿ. ನೀವು ಮಾಡುವಂತಹ ಎಲ್ಲಾ ಕೆಲಸಗಳನ್ನು ನೋಡಿ ನಿಮ್ಮ ಮನೆಯವರು ಸಂತೋಷ ಪಡುತ್ತಾರೆ. ಪ್ರಯಾಣ ಹೆಚ್ಚಾಗಲಿದೆ. ಆದರೆ ಲಾಭವೂ ಅದೇ ಪ್ರಮಾಣದಲ್ಲಿ ಸಿಗಲಿದೆ.