ದೇಹದ ಆರೋಗ್ಯ ರಹಸ್ಯ ಎಲ್ಲ ಕಡೆಯೂ ಇರುತ್ತದೆ. ಆಯುರ್ವೇದದ ಪ್ರಕಾರ ಹೊಕ್ಕುಳದಲ್ಲಿ ಆರೋಗ್ಯದ ಸಂಪೂರ್ಣ ಗುಟ್ಟು ಅಡಗಿದೆ. ಆಯುರ್ವೇದದ ಪ್ರಕಾರ, ನಾಭಿಯನ್ನು ದೇಹದ ಶಕ್ತಿ ಕೇಂದ್ರ ಎಂದು ಪರಿಗಣಿಸ್ತಾರೆ. ನಮ್ಮ ಸಣ್ಣ-ಪುಟ್ಟ ಅಭ್ಯಾಸಗಳು ನಮ್ಮ ಆರೋಗ್ಯ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅವುಗಳಲ್ಲಿ ಹೊಕ್ಕಳಿಗೆ ಎಣ್ಣೆ ಹಚ್ಚಿಕೊಳ್ಳುವ ಅಭ್ಯಾಸ ಕೂಡ ಒಂದು. ಕೆಲ ಮಂದಿ ರಾತ್ರಿ ಹೊತ್ತು ಮಲಗುವ ಮುನ್ನ ಹೊಕ್ಕಳಿಗೆ ಎಣ್ಣೆ ಹಚ್ಚಿಕೊಳ್ಳುತ್ತಾರೆ. ಅಲ್ಲದೆ ಸ್ನಾನಕ್ಕೆ ಮುನ್ನ ಒಂದಷ್ಟು ಹೊತ್ತು ತುಪ್ಪ ಹಚ್ಚಿ ಮಸಾಜ್ ಮಾಡಿಕೊಳ್ಳೋದರಿಂದಲೂ ಆರೋಗ್ಯ ಲಾಭ ಇದೆ.
ಜೀರ್ಣಕ್ರಿಯೆ, ಹೊಟ್ಟೆನೋವಿಗೆ : ಹೊಕ್ಕುಳ ಸುತ್ತಲೂ ಎಣ್ಣೆ ಅಥವಾ ತುಪ್ಪವನ್ನು ಹಚ್ಚುವುದರಿಂದ ಜೀರ್ಣಕ್ರಿಯೆಯ ವಿವಿಧ ಸಮಸ್ಯೆಗಳನ್ನು ಗುಣಪಡಿಸಬಹುದು ಎನ್ನುತ್ತದೆ ಆಯುರ್ವೇದ. ಆಗಾಗ ಹೊಟ್ಟೆ ನೋವು ಇರುವವರು ನಿತ್ಯವೂ ಹೊಕ್ಕಳಕ್ಕೆ ಎಣ್ಣೆ ಅಥವಾ ತುಪ್ಪ ಹಚ್ಚಿಕೊಳ್ಳಬಹುದು. ಏಕೆಂದರೆ ಅನೇಕ ತೈಲಗಳು ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ.
ಚರ್ಮದ ಶುಷ್ಕತೆ ಕಡಿಮೆಯಾಗುತ್ತದೆ : ಹೊಕ್ಕುಳಿಗೆ ತುಪ್ಪ ಅಥವಾ ಎಣ್ಣೆ ಹಚ್ಚುವುದರಿಂದ ಸಿಗುವ ದೊಡ್ಡ ಪ್ರಯೋಜನವೆಂದರೆ ಚರ್ಮವನ್ನು ತೇವಗೊಳಿಸುತ್ತದೆ ಮತ್ತು ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಚರ್ಮವು ಯಾವಾಗಲೂ ಹೊಳೆಯುತ್ತದೆ. ಹಾಗಾಗಿ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಬಯಸುತ್ತಿರುವವರು ಎಣ್ಣೆ ಅಥವಾ ತುಪ್ಪ ಹಚ್ಚಿಕೊಳ್ಳಬಹುದು.
ಜೀರ್ಣಕ್ರಿಯೆಗೆ ರಾಮಬಾಣ : ಆಯುರ್ವೇದದ ಪ್ರಕಾರ, ನಾಭಿಯನ್ನು ಜೀರ್ಣಕ್ರಿಯೆಯ ಸ್ಥಳವೆಂದು ಪರಿಗಣಿಸಿದ್ದು, ಈ ಸ್ಥಳದಲ್ಲಿ ತುಪ್ಪವನ್ನು ಹಚ್ಚುವುದರಿಂದ ಜೀರ್ಣಕಾರಿ ಕಿಣ್ವಗಳು ಸಕ್ರಿಯಗೊಳ್ಳುತ್ತವೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆಹಾರ ಸರಿಯಾಗಿ ಜೀರ್ಣ ಆಗದಿದ್ದವರು ಈ ರೀತಿ ಮಾಡಿ ನೋಡಬಹುದು.
ಮಲಬದ್ಧತೆ ತಡೆಗೆ ದಿವ್ಯೌಷಧಿ : ಮಲಬದ್ಧತೆಯ ಸಮಸ್ಯೆಯಿಂದ ಪರಿಹಾರ ಪಡೆಯಲು ದೇಸಿ ತುಪ್ಪವನ್ನು ಬಳಸಬಹುದು. ಇದಕ್ಕಾಗಿ, ನಾಭಿಯಲ್ಲಿ 2- 3 ಹನಿ ತುಪ್ಪವನ್ನು ಹಾಕಿ ಮತ್ತು ಲಘುವಾಗಿ ಮಸಾಜ್ ಮಾಡಿ. ಹೊಕ್ಕುಳಿಗೆ ತುಪ್ಪ ಹಚ್ಚುವುದರಿಂದ ವ್ಯಕ್ತಿಯ ಜೀರ್ಣ ಶಕ್ತಿ ಹೆಚ್ಚುತ್ತದೆ ಜೊತೆಗೆ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
ಅಲ್ಲದೆ ಕೀಲುಗಳಲ್ಲಿ ಪದೇ ಪದೇ ನೋವು ಬರುತ್ತಿದ್ದರೆ ಹೊಕ್ಕುಳಿಗೆ ತುಪ್ಪ ಹಚ್ಚುತ್ತಾರೆ. ನಾಭಿಯಲ್ಲಿ ಕೆಲವು ಹನಿ ತುಪ್ಪವನ್ನು ಹಾಕಿ ಬಳಿಕ ಅದನ್ನು ಹೊಕ್ಕುಳಿನ ಸುತ್ತಲೂ ಮಸಾಜ್ ಮಾಡಿ. ಈ ರೀತಿ ಮಾಡುವುದರಿಂದ ಕೀಲು ನೋವು ನಿವಾರಣೆಯಾಗುತ್ತದೆ ಮತ್ತು ಊತಕ್ಕೂ ಪರಿಹಾರ ಸಿಗುತ್ತದೆ. ನಾಭಿಗೆ ತುಪ್ಪವನ್ನು ಹಚ್ಚುವುದರಿಂದ ವಾತ ದೋಷ ಹತೋಟಿಗೆ ಬರುತ್ತದೆ. ಬಳಿಕ ಇದು ಪೂರ್ತಿಯಾಗಿ ಕಡಿಮೆಯಾಗುತ್ತದೆ. ವ್ಯಕ್ತಿಯು ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಇಲ್ಲದಾಗ ನಾನಾ ರೀತಿಯ ಅಸ್ವಸ್ಥತೆಗಳು ಕಂಡು ಬರಲು ಪ್ರಾರಂಭಿಸುತ್ತದೆ. ಆಗ ನೀವು ತುಪ್ಪ ಬಳಕೆ ಮಾಡುವುದರಿಂದ ಇದು ನಿಮ್ಮ ಆರೋಗ್ಯ ಸಮಸ್ಯೆಯನ್ನು ದೂರ ಮಾಡಿ ಪರಿಹಾರ ನೀಡುತ್ತದೆ.
ತುಪ್ಪ ಲಭ್ಯ ಇಲ್ಲದಿದ್ದರೆ ಎಣ್ಣೆಯನ್ನು ಬಳಸಬಹುದು :
ಹೊಕ್ಕಳಿಗೆ ತೆಂಗಿನೆಣ್ಣೆ ಹಚ್ಚುವುದರಿಂದಲೂ ಚರ್ಮದ ಕಾಂತಿ ಕಾಪಾಡಬಹುದು.
ಪ್ರತಿದಿನ 2 ರಿಂದ 3 ಹನಿ ಸಾಸಿವೆ ಎಣ್ಣೆ ಹಚ್ಚೋದ್ರಿಂದ ಚೆಗೆ ಹೊಳಪು ನೀಡುತ್ತದೆ.
ಬೇವಿನ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚುವುದರಿಂದ ಬ್ಯಾಕ್ಟೀರಿಯಾದ ಸೋಂಕು ಇದ್ದರೆ ನಿವಾರಣೆಯಾಗುತ್ತದೆ.
ಹೊಕ್ಕಳಿಗೆ ಎಣ್ಣೆ ಮತ್ತು ಅರಿಶಿನವನ್ನು ಹಚ್ಚಿದರೆ ಕ್ಯಾಲ್ಸಿಯಂ, ರಂಜಕ, ಸೋಡಿಯಂ, ಪೊಟ್ಯಾಸಿಯಮ್ ಮತ್ತು ಕಬ್ಬಿಣ ದಂತಹ ಅನೇಕ ಅಂಶಗಳು ದೇಹಕ್ಕೆ ಸೇರುತ್ತವೆ. ಅರಿಶಿನದಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ನಿವಾರಕ ಗುಣವೂ ಇದೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹೊಕ್ಕಳಿನ ಮೇಲೆ ಅರಿಶಿನದ ಪೇಸ್ಟ್ ಹಚ್ಚುವುದರಿಂದ ಕೂಡ ಚರ್ಮದ ಅನೇಕ ಸಮಸ್ಯೆಗಳಿಂದ ರಕ್ಷಿಸುತ್ತದೆ.
ತುಪ್ಪ ಇಲ್ಲದಿದ್ದರೂ ಹರಳೆಣ್ಣೆ ಅಥವಾ ತೆಂಗಿನ ಎಣ್ಣೆ ಮಸಾಜ್ ಮಾಡುವುದರಿಂದಲೂ ಇಂಥದ್ದೇ ಪ್ರಯೋಜನಗಳಿವೆ.
ಹೊಕ್ಕುಳ ಎಣ್ಣೆಯನ್ನು ಹಚ್ಚುವುದರಿಂದ ಜೀರ್ಣಕ್ರಿಯೆಯ ವಿವಿಧ ಸಮಸ್ಯೆಗಳನ್ನು ಗುಣಪಡಿಸಬಹುದು ಎಂದು ಹಲವರು ಭಾವಿಸುತ್ತಾರೆ. ಇದಲ್ಲದೇ ಆಗಾಗ ಹೊಟ್ಟೆ ನೋವು ಇರುವವರು ನಿತ್ಯವೂ ಹೊಕ್ಕಳಕ್ಕೆ ಎಣ್ಣೆ ಹಚ್ಚಿಕೊಳ್ಳಬಹುದು. ಏಕೆಂದರೆ ಅನೇಕ ತೈಲಗಳು ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ.