ಡಾ. ಪುನೀತ್ ರಾಜ್ ಕುಮಾರ್. ಕರ್ನಾಟಕ ರತ್ನ ಪುರಸ್ಕೃತ ಪುನೀತ್ ಅವರ ಜೀವನ ಚರಿತ್ರೆ ಈಗ ಪುಸ್ತಕ ರೂಪದಲ್ಲಿ ಹೊರಬರುತ್ತಿದೆ. ಇದು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಕನಸು. ಅಪ್ಪು ಹೆಸರಿನಲ್ಲಿಯೇ ಅವರ ಜೀವನ ಚರಿತ್ರೆ ಪುಸ್ತಕ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಹೊರಬರಲಿದೆ. ಪುಸ್ತಕದ ಕವರ್ ಪೇಜ್ ಬಿಡುಗಡೆಯಾಗಿದ್ದು, ಅಶ್ವಿನಿ ಪುನೀತ್ ಹಾಗೂ ಅವರ ಪುತ್ರಿಯರಾದ ವಂದಿತಾ ಮತ್ತು ಧೃತಿ ಅನಾವರಣ ಮಾಡಿದ್ದಾರೆ. ಪುಸ್ತಕದ ಸಂಪೂರ್ಣ ಎಡಿಟಿಂಗ್ ಮಾಡುತ್ತಿರುವುದು ಖುದ್ದು ಅಶ್ವಿನಿ. ಲೇಖಕ ಪ್ರಕೃತಿ ಬನವಾಸಿ ಅವರು ಜೀವನ ಚರಿತ್ರೆಯ ಲೇಖಕ. ಇದು ಎರಡು ವರ್ಷಗಳ ಶ್ರಮ.
ಇನ್ನು ಕೃತಿಯ ವಿಶೇಷತೆ ಎಂದರೆ ಅಪ್ಪು ಅವರ ಜೀವನದ ಹಲವಾರು ವಿಷಯಗಳ ಜೊತೆ ಅವರ ಹಲವು ಫೋಟೋಗಳನ್ನು ಪ್ರಿಂಟ್ ಮಾಡಲಾಗಿದೆ.
ಪುನೀತ್ ರಾಜ್ ಅವರಿಗೆ ಅಡುಗೆ ಮಾಡುವುದು ಇಷ್ಟ. ಈ ಬಗ್ಗೆಯೂ ಕೃತಿಯಲ್ಲಿ ವಿವರವಾಗಿ ಹೇಳಲಾಗಿದೆ.
ಪುನೀತ್ ರಾಜ್ ಕುಮಾರ್ ಅವರ ವ್ಯಕ್ತಿತ್ವ, ಒಡನಾಟದ ಬಗ್ಗೆ ಯಶ್, ರಾಧಿಕಾ, ನಾಗಾರ್ಜುನ, ಪ್ರಭುದೇವ, ರಶ್ಮಿಕಾ ಮಂದಣ್ಣ, ರಮ್ಯಾ, ರಕ್ಷಿತಾ, ಪ್ರಿಯಾಮಣಿ, ರಶ್ಮಿಕಾ ಮಂದಣ್ಣ.. ಮೊದಲಾದವರು ಬರೆದಿದ್ದಾರೆ.
144 ಪುಟಗಳ ಅಪ್ಪು ಪುಸ್ತಕ ಶೀಟ್ ಇರಲಿದೆ. ಪುಟಗಳ ಸಂಖ್ಯೆ 288. ಇನ್ನು 144ರ ನಂಬರ್ ತೆಗೆದುಕೊಳ್ಳುವುದಕ್ಕೆ ಕಾರಣವೂ ಇದೆ. ಪುನೀತ್ ರಾಜ್ ಅವರಿಗೆ 144 ನಂಬರ್ ತುಂಬಾ ಇಷ್ಟ. ಅವರ ಕಾರಿನ ಸಂಖ್ಯೆ ಕೂಡ 144.
ಇನ್ನು ಆರು ʻಎಫ್ʼ ಇರಲಿವೆ. ಎಫ್ ಎಂದರೆ ಫ್ಯಾಮಿಲಿ, ಫಿಲ್ಮ್, ಫ್ರೆಂಡ್ಸ್, ಫುಡ್, ಫಿಟ್ನೆಸ್, ಫ್ಯಾನ್ಸ್. ಇದೆಲ್ಲದರ ಜೊತೆಗೆ ಅಪ್ಪು ಫಿಲಾಸಫಿಯೂ ಇರಲಿದೆ.
ಜೀವನ ಚರಿತ್ರೆ ಒಟ್ಟು 17 ಚಾಪ್ಟರ್ಗಳಲ್ಲಿ ಬರಲಿದೆ.
ಇನ್ನು ಪುಸ್ತಕಕ್ಕೆ ಅಪ್ಪು ಎಂದೇ ಹೆಸರಿಟ್ಟಿದ್ದು ಏಕೆ ಎಂದರೆ ಬನವಾಸಿ ಅವರು ʻʻಪುನೀತ್ ರಾಜ್ ಅವರು ಸಿನಿಮಾಕ್ಕೆ ರೀ ಎಂಟ್ರಿ ಕೊಟ್ಟಾಗ, ಆ ಸಿನಿಮಾಗೆ ಏನು ಹೆಸರು ಇಡಬೇಕು ಎಂದು ಶಿವಣ್ಣ ಯೋಚಿಸಿದ್ದರು. ಸಾವಿರಾರು ಹೆಸರುಗಳು ಬಂದಿದ್ದವು. ಆದರೆ ಶಿವಣ್ಣ ಅವರು ಅಪ್ಪು ಎಂದು ಫೈನಲ್ ಮಾಡಿದ್ದರು. ಅದಕ್ಕಾಗಿಯೇ ಈ ಹೆಸರುʼʼ ಎಂದಿದ್ದಾರೆ.
ಅಪ್ಪು ಬರ್ತ್ಡೇ ಸಂದರ್ಭದಲ್ಲಿ ಅಶ್ವಿನಿ ಹಾಗೂ ಮಕ್ಕಳು ಪುಸ್ತಕ ಹಿಡಿದು ಪೋಸ್ ಕೊಟ್ಟಿದ್ದಾರೆ. ಅಪ್ಪು ಕಲರ್ಫುಲ್ ಜೀವನವನ್ನು ತೆರೆದಿಡುವ ಪುಸ್ತಕಕ್ಕೆ ಬ್ಲ್ಯಾಕ್ ಆ್ಯಂಡ್ ವೈಟ್ನ ಕವರ್ ಪೇಜ್ ಮಾಡಲಾಗಿದೆ. ಸದ್ಯದಲ್ಲೇ ಅಧಿಕೃತವಾಗಿ ‘ಅಪ್ಪು’ ಪುಸ್ತಕ ರಿಲೀಸ್ ಮಾಡಲು ಅಶ್ವಿನಿ ಪ್ಲ್ಯಾನ್ ಮಾಡಿದ್ದಾರೆ. ದೊಡ್ಡ ದೊಡ್ಡ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗೋ ಸಾಧ್ಯತೆ ಇದೆಯಂತೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಲಿದೆ. ಪುಸ್ತಕಕ್ಕಾಗಿ ಅಶ್ವಿನಿ ಅವರು ಮಾತ್ರವೇ ಅಲ್ಲದೆ ಅವರ ಮಕ್ಕಳಿಬ್ಬರೂ ಸಹ ಕೆಲಸ ಮಾಡಿದ್ದಾರೆ. ಡಿಸೈನ್, ಚಿತ್ರಗಳು ಇನ್ನಿತರೆ ಜವಾಬ್ದಾರಿಗಳನ್ನು ಅಪ್ಪು ಅವರ ಇಬ್ಬರು ಪುತ್ರಿಯರು ನೋಡಿಕೊಂಡಿದ್ದಾರೆ. ‘ಅಂಜನೀಪುತ್ರ’ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ನಲ್ಲಿ ತೆಗೆದ ಅಪರೂಪದ ಚಿತ್ರವನ್ನು ಈ ಪುಸ್ತಕದ ಮುಖಪುಟಕ್ಕೆ ಬಳಸಲಾಗಿದೆ.