ಯಡಿಯೂರಪ್ಪರನ್ನು ಬೈದರೂ ಸೈಲೆಂಟ್ ಯಾಕೆ..? ಯಡಿಯೂರಪ್ಪ ವಿರುದ್ಧ ಕೀಳು ಹೇಳಿಕೆ ನೀಡುತ್ತಿದ್ದರೂ ಪಕ್ಷದ ನಾಯಕರ ಮೌನವೇಕೆ.. ಹಿರಿಯ ನಾಯಕರ ಮೌನವನ್ನು ಪ್ರಶ್ನೆ ಮಾಡಿರುವ ವಿಜಯೇಂದ್ರ, ʻʻಯಡಿಯೂರಪ್ಪ ವಿರುದ್ಧವೂ ಕೀಳು ಮಟ್ಟದ ಭಾಷೆ ಪ್ರಯೋಗ ನಡೆಯುತ್ತಿದೆ. BSY ಅವಹೇಳನಕ್ಕೂ ಹಿರಿಯರ ನಾಯಕರು ಮೌನವಾಗಿರುವುದು ಏಕೆ..? ಯಡಿಯೂರಪ್ಪ ಬಗ್ಗೆ ಹಾಗೆಲ್ಲ ಮಾತನಾಡಬೇಡಿ ಎನ್ನುವುದನ್ನೂ ಹೈಕಮಾಂಡ್ ಹೇಳಬೇಕಾ..? ಯಡಿಯೂರಪ್ಪ ತೇಜೋವಧೆ ಬೇಡ ಎಂದು ಹೇಳುವಷ್ಟೂ ಹಿರಿಯರಿಗೆ ಆಗುವುದಿಲ್ಲವೇ..? ನಾನು ಪ್ರತಿಕ್ರಿಯೆ ಕೊಡಬಹುದು. ಆದರೆ ನಾನು ಪಕ್ಷದ ಅಧ್ಯಕ್ಷ ಎಂಬ ಗಡಿ ಇದೆ. ನನ್ನ ಬಗ್ಗೆ ಮಾತನಾಡಿದರೆ ಸಹಿಸಿಕೊಳ್ಳುವರೆ.. ಯಡಿಯೂರಪ್ಪ ಬಗ್ಗೆ ಮಾತನಾಡಿದರೆ ಆಗಲ್ಲ. ಯಡಿಯೂರಪ್ಪ ವಿರುದ್ಧ ಕೀಳು ಮಟ್ಟದ ಭಾಷೆ ಪ್ರಯೋಗಿಸಿದರೂ ಮೌನವಾಗಿರುವುದು ಅಪರಾಧ ಎಂದಿದ್ದಾರೆ.
ಯಡಿಯೂರಪ್ಪ ತೇಜೋವಧೆ ಮಾಡ್ತಿರೋವ್ರರ ಬಾಯಿ ಮುಚ್ಚಿಸುವ ಕೆಲಸ ಆಗಿಯೇ ಇಲ್ಲ. ಪಕ್ಷದ ಹಿರಿಯ ನಾಯಕರ ಮೌನವನ್ನೇ ಪ್ರಶ್ನೆ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ʻʻಯಡಿಯೂರಪ್ಪರಿಗಾದ ಅವಮಾನವನ್ನೂ ಆಲ್ ಈಸ್ ವೆಲ್ ಎನ್ನುತ್ತೀರಿ ಎಂದರೆ ಅಪರಾಧʼ ಎಂದು ಹೇಳಿಕೆ ನೀಡಿದ್ದಾರೆ.
ಯಡಿಯೂರಪ್ಪ ವಿರುದ್ಧ ಯತ್ನಾಳ್ ಬಣದ ಹಲವು ನಾಯಕರ ಹೇಳಿಕೆಗಳಿಗೆ ಸಿಟ್ಟಾದ ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ಟೀಕೆ, ಆ ಟೀಕೆಗಳ ಬಗ್ಗೆ ಮೌನವಾಗಿರುವವರ ಬಗ್ಗೆಯೂ ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯತ್ನಾಳ್ ಬಣಕ್ಕೆ ಬಿಎಲ್ ಸಂತೋಷ್ ಬೆಂಬಲ ಇಲ್ಲ : ವಿಜಯೇಂದ್ರ
ಯತ್ನಾಳ್ ಬಣಕ್ಕೆ ಬಿಎಲ್ ಸಂತೋಷ್ ಬೆಂಬಲ ಇದೆ ಅನ್ನೋ ಆರೋಪ ಸತ್ಯಕ್ಕೆ ದೂರವಾದುದು ಎಂದಿರುವ ವಿಜಯೇಂದ್ರ ʻʻಯತ್ನಾಳ್ ಬಣದ ಹಿಂದೆ ಹೈಕಮಾಂಡ್ ನಾಯಕರಿದ್ದಾರೆʼʼ ಎಂಬ ಆರೋಪವನ್ನು ತಳ್ಳಿ ಹಾಕಿದ್ಧಾರೆ. ಯತ್ನಾಳ್ ಬಣಕ್ಕೆ ಬಿಎಲ್ ಸಂತೋಷ್ ಬೆಂಬಲ ಇದೆ ಎಂಬ ಆರೋಪಕ್ಕೆ ವಿಜಯೇಂದ್ರ ರಿಯಾಕ್ಷನ್ ಕೊಟ್ಟಿದ್ದು, ʻʻಬಿಎಲ್ ಸಂತೋಷ್ ಬೆಂಬಲವಾಗಲೀ, ಹೈಕಮಾಂಡ್ ಬೆಂಬಲವಾಗಲೀ ಇಲ್ಲ. ಬಿಎಲ್ ಸಂತೋಷ್ ಕೈವಾಡ ಇದೆ ಎಂಬ ಆರೋಪಗಳು ಸತ್ಯಕ್ಕೆ ದೂರ. ಇಂತಹದ್ದನ್ನೆಲ್ಲ ಬಿಎಲ್ ಸಂತೋಷ್ ಇಂತಹದ್ದನ್ನೆಲ್ಲ ಬೆಂಬಲಿಸಲು ಸಾಧ್ಯವೇ ಇಲ್ಲ ʼʼ ಎಂದಿದ್ದಾರೆ.
ಆದರೆ ಕೆಲವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆ ನನಗೂ ಇದೆ ಎಂದಿರುವ ವಿಜಯೇಂದ್ರ ಬಿಜೆಪಿಯಲ್ಲಿರುವ ಎಲ್ಲ ಗೊಂದಲಗಳಿಗೂ ಉತ್ತರ ಸಿಕ್ಕಿ ಸುಖಾಂತ್ಯವಾಗಲಿದೆ ಎಂದು ಹೇಳಿದ್ದಾರೆ. ಯತ್ನಾಳ್ ಬಣಕ್ಕೆ ಹೈಕಮಾಂಡ್ ಸಪೋರ್ಟ್ ಇದೆ ಎಂಬ ಆರೋಪ ತಳ್ಳಿಹಾಕಿದ ವಿಜಯೇಂದ್ರ ಅವರು ಈಗ ಗುರ್ ಎನ್ನುತ್ತಿರುವುದು ತಟಸ್ಥ ಬಣದ ನಾಯಕರ ವಿರುದ್ಧ.
ತಟಸ್ಥರ ಬಗ್ಗೆಯೂ ಗೊತ್ತಿದೆ : ವಿಜಯೇಂದ್ರ
ತಟಸ್ಥ ಬಣದ ನಾಯಕರ ಬಗ್ಗೆಯೂ ಗೊತ್ತಿದೆ.. ಈಗ ಆ ವಿಷಯದ ಬಗ್ಗೆ ಮಾತನಾಡಲ್ಲ. ಯಡಿಯೂರಪ್ಪ ತೇಜೋವಧೆ ನಿಲ್ಲಿಸಿ ಎಂಬುದನ್ನೂ ವರಿಷ್ಠರೇ ಬಂದು ಹೇಳಬೇಕಿಲ್ಲ ಎಂದಿರುವ ವಿಜಯೇಂದ್ರ ಒಂದಲ್ಲ.. ಎರಡು ಮೂರು ಬಾರಿ ಯತ್ನಾಳ್ ಬಣಕ್ಕೆ ಬಿಎಲ್ ಸಂತೋಷ್ ಇದೆ ಎಂಬ ಆರೋಪ ತಳ್ಳಿಹಾಕಿದ್ದಾರೆ. ಜೊತೆಯಲ್ಲೇ ಬಿಎಲ್ ಸಂತೋಷ್ ಅವರ ಮೌನ ನನಗೂ ಅರ್ಥವಾಗ್ತಿಲ್ಲ ಎಂಬ ಮೂಲಕ ಬೇರೆಯದೇ ಸಂದೇಶವನ್ನೂ ಕೊಟ್ಟಿದ್ಧಾರೆ.