ನಟಿ ಜಯಂತಿ ಅಭಿನಯ ಶಾರದೆ ಎಂದೇ ಫೇಮಸ್. 2021ರಲ್ಲಿ ಮೃತಪಟ್ಟ ಜಯಂತಿ, ಕನ್ನಡ ಚಿತ್ರರಂಗವನ್ನು ದಶಕಗಳ ಆಳಿದ್ದ ನಟಿ. ಕನ್ನಡದಲ್ಲಿ ಅಭಿನಯದ ವಿಷಯದಲ್ಲಷ್ಟೇ ಅಲ್ಲ, ಗ್ಲಾಮರ್ ವಿಷಯದಲ್ಲೂ ಕ್ರಾಂತಿ ಮಾಡಿದ್ದ ಜಯಂತಿ, ಅಂದಿನ ಕಾಲದ ಪಡ್ಡೆ ಹುಡುಗರ ಕನಸಿನ ರಾಣಿ. ಅಂತಹವರಲ್ಲಿ ಸಿದ್ದರಾಮಯ್ಯ ಕೂಡಾ ಒಬ್ಬರು. ಜಯಂತಿ ಅವರ ಜೊತೆಗಿನ ನೆನಪುಗಳನ್ನೆಲ್ಲ ಹಂಚಿಕೊಂಡಿದ್ದಾರೆ.
ಇದೆಲ್ಲ ಮಾಹಿತಿ ಹೇಳಿಕೊಂಡಿದ್ದು ಜಯಂತಿ ಅವರ ಕುರಿತ ಪುಸ್ತಕ ಬಿಡುಗಡೆ ವೇಳೆ. ಲವ್ಲಿ ಅಂಡ್ ಲೋನ್ಲಿ. ಇದು ಹಿರಿಯ ಪತ್ರಕರ್ತ ಸದಾಶಿವ ಶೆಣೈ ಬರೆದಿರುವ ಕೃತಿ. ಅಭಿನಯ ಶಾರದೆ ಜಯಂತಿ ಅವರ ಜೀವನವೇ ಈ ಪುಸ್ತಕದ ಕಥೆ. ಹಿರಿಯ ಪತ್ರಕರ್ತರಾಗಿ, ಜಯಂತಿ ಅವರನ್ನು ಹತ್ತಿರದಿಂದ ಕಂಡಿರುವ ಸದಾಶಿವ ಶೆಣೈ, ಅದೆಲ್ಲವನ್ನೂ ಅಕ್ಷರರೂಪಕ್ಕಿಳಿಸಿದ್ದಾರೆ. ಪುಸ್ತಕವನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿ ತಮ್ಮ ಮತ್ತು ಜಯಂತಿ ಅವರ ನಡುವೆ ಇದ್ದ ಬಾಂಧವ್ಯವನ್ನು ನೆನಪಿಸಿಕೊಂಡಿದ್ದಾರೆ.
ವಿದ್ಯಾರ್ಥಿಯಾಗಿದ್ದಾಗ, ವಕೀಲರಾಗಿದ್ದ ಜಯಂತಿ ಅವರ ಸಿನಿಮಾಗಳನ್ನು ಮಿಸ್ ಮಾಡ್ತಾನೇ ಇರಲಿಲ್ಲವಂತೆ. ನಾನು ಮಂತ್ರಿ ಆದ್ಮೇಲೆ ಸಿನಿಮಾ ನೋಡಲಿಲ್ಲ. ಎಡಕಲ್ಲು ಗುಡ್ಡದ ಮೇಲೆ ಸಿನಿಮಾ ನಾನು ನೋಡಿದ ಅವರ ಕೊನೆ ಸಿನಿಮಾ ಎಂದಿರುವ ಸಿದ್ದರಾಮಯ್ಯ ಜಯಂತಿ ಅವರಿಗೆ ಜಯಂತಿ ಅವರೇ ಸಾಟಿ ಎಂದು ಹೇಳಿಕೊಂಡಿರುವ ಸಿದ್ದರಾಮಯ್ಯ ʻʻ ಸದಾಶಿವ ಶೆಣೈ ನನಗೆ ವರ್ಷಗಳಿಂದ ಗೊತ್ತು. ಇನ್ನು ಜಯಂತಿ ಅವರ ಪುಸ್ತಕ ಎಂದಾಗ ಬರಲು ಸಾಧ್ಯವಿಲ್ಲ ಎನ್ನಲಾಗಲಿಲ್ಲʼʼ ಎಂದಿರುವ ಸಿದ್ದರಾಮಯ್ಯ ʻʻಜಯಂತಿ ನನಗೆ ಬಹಳ ಆತ್ಮೀಯರು, ಹಲವು ವರ್ಷಗಳ ಕಾಲ ಒಡನಾಟ ಇತ್ತು. ನಾವು ಒಂದೇ ಪಕ್ಷದಲ್ಲಿ ಕೆಲಸ ಮಾಡಿದ್ದೇವೆ (ಜನತಾದಳ). ಒಂದೇ ಪಕ್ಷದಲ್ಲಿ ಇದ್ದ ಕಾರಣಕ್ಕೆ, ಒಂದೇ ರೀತಿಯ ರಾಜಕೀಯ ಅಭಿಪ್ರಾಯ ಇತ್ತು. ಚಿಕ್ಕಬಳ್ಳಾಪುರ ಲೋಕಸಭೆಗೆ ಸ್ಪರ್ಧೆ ಮಾಡಿದ್ದಾಗ ಒಟ್ಟಿಗೇ ಪ್ರಚಾರ ಮಾಡಿದ್ದೇವೆ. ಜಯಂತಿ ಅವ್ರು ನನ್ನನ್ನು ಯಾವಾಗಲು ಹೀರೋ ಅಂತ ಕರೀತಿದ್ರು. ನನ್ನನ್ನು ಬಹಳ ಅಭಿಮಾನ, ಪ್ರೀತಿಯಿಂದ ಕಾಣುತ್ತಿದ್ದರು. ಜಯಂತಿ ಅವರು ಸ್ನೇಹಮಯಿ ಜೀವನ ನಡೆಸಿದ್ರು. ಎಷ್ಟೇ ನೋವಿದ್ದರೂ, ತೋರಿಸಿಕೊಳ್ಳಲಿಲ್ಲ ʼʼ ಎಂದು ನೆನಪಿಸಿಕೊಂಡಿದ್ದಾರೆ.
ಜಯಂತಿ ಅವರ ನೋವಿನ ಕಥೆಗಳೂ ಕೂಡಾ ಗೊತ್ತಿದೆಯಾದರೂ, ಸಿದ್ದರಾಮಯ್ಯ ಅವುಗಳನ್ನು ಹೇಳಿಕೊಳ್ಳಲಿಲ್ಲ. ಇನ್ನು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಕಲಾವಿದರಾದ ಪ್ರೇಮ್, ರಮೇಶ್ ಅರವಿಂದ್, ರಾಕ್ ಲೈನ್ ವೆಂಕಟೇಶ್, ಪೂಜಾ ಗಾಂಧಿ, ಹಿರಿಯ ನಟಿ ಭವ್ಯಾ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಕೂಡ ಉಪಸ್ಥಿತರಿದ್ದರು.