ಆಟ ಮುಗಿದ ಮೇಲೆ ಒಂದು ಮಾತ್ರೆ ತೆಗೆದುಕೊಳ್ಳಿ. ಅಷ್ಟೇ, ಬೇಡದ ಗರ್ಭವನ್ನು ಇದು ತಡೆಯುತ್ತದೆ. ಈ ಅರ್ಥದ ಜಾಹೀರಾತುಗಳನ್ನು ನೀವೂ ನೋಡಿರುತ್ತೀರಿ. ಸುರಕ್ಷಿತವೋ.. ಅಸುರಕ್ಷಿತವೋ.. ಒಟ್ಟಿನಲ್ಲಿ ಲೈಂಗಿಕ ಕ್ರಿಯೆ ಮುಗಿದ ಮೇಲೆ ತೆಗೆದುಕೊಳ್ಳುವ ಒಂದು ಮಾತ್ರೆ ಸಂಭಾವ್ಯ ಗರ್ಭಧಾರಣೆಯನ್ನು ನಿಯಂತ್ರಿಸುತ್ತದೆ ಎನ್ನುವುದು ನಂಬಿಕೆ. ಕಳೆದ ಎರಡು ವರ್ಷಗಳಲ್ಲಿ ಗರ್ಭ ನಿರೋಧಕ ಮಾತ್ರೆಗಳ ಮಾರಾಟ ಶೇ.೧೦ರಷ್ಟು ಏರಿಕೆಯಾಗಿದೆ. ಕೆಲವು ಮೆಡಿಕಲ್ ಸ್ಟೋರುಗಳಲ್ಲಿ ತಿಂಗಳಿಗೆ ಒಂದು ಬಾಕ್ಸ್ ಮಾರಾಟ ಮಾಡುತ್ತಿದ್ದವರು, ಈಗ ದಿನಕ್ಕೆ ಒಂದು ಬಾಕ್ಸ್ ಮಾರುತ್ತಿದ್ದಾರೆ. ಈ ಮಾತ್ರೆ ತೆಗೆದುಕೊಳ್ಳುವವರಿಗೆ ಡಾಕ್ಟರ್ ಪ್ರಿಸ್ಕಿಪ್ಷನ್ ಬೇಕಿಲ್ಲ. ಆದರೆ ಇದರ ಪರಿಣಾಮ ಏನಾಗಿದೆ ಗೊತ್ತೇ..?
ಇತ್ತೀಚೆಗೆ ಖಾಸಗಿ ಆಸ್ಪತ್ರೆಗೆ 21 ವರ್ಷದ ಯುವತಿಯೊಬ್ಬರು ತೀವ್ರ ಹೊಟ್ಟೆನೋವು ಎಂದು ಬಂದರು. ಹೊಟ್ಟೆನೋವು ಅಷ್ಟೇ ಎಂದು ಪರೀಕ್ಷೆ ಮಾಡಿದಾಗ ಯಾವ ಸಮಸ್ಯೆಯೂ ಇರಲಿಲ್ಲ. ಇನ್ನೇನಿರಬಹುದು, ನೋಡೋಣ ಎಂದು ಸ್ಕ್ಯಾನ್ ಮಾಡಿಸಿದಾಗ, ಆ ಯುವತಿ ಗರ್ಭಿಣಿಯಾಗಿದ್ದರು. ಆದರೆ ಅತ್ತ ಗರ್ಭಿಣಿ ಎನ್ನುವುದಕ್ಕೂ ಆಗಲ್ಲ, ಗರ್ಭಿಣಿ ಅಲ್ಲ ಎನ್ನುವುದಕ್ಕೂ ಆಗಲ್ಲ ಎನ್ನುವಂತಹ ಪರಿಸ್ಥಿತಿ. ಏನಾಗಿತ್ತೆಂದರೆ ಭ್ರೂಣವೊಂದು ಆ ಯುವತಿಯ ಗರ್ಭಕೋಶದ ಹೊರಗೆ ಬೆಳೆಯುತ್ತಿತ್ತು. ಗರ್ಭಕೋಶದ ಹೊರಗೆ ಭ್ರೂಣ ಬೆಳೆಯುವುದಕೆಕ ಹೇಗೆ ಸಾಧ್ಯ ಎಂದು ವೈದ್ಯರೂ ತಲೆಕೆಡಿಸಿಕೊಂಡರು. ಆಗ ಗೊತ್ತಾಗಿದ್ದೇನೆಂದರೆ ಗರ್ಭ ನಿರೋಧಕ ಮಾತ್ರೆಗಳ ಎಡವಟ್ಟು.
ಆ ಯುವತಿ ಅವಿವಾಹಿತೆಯಾಗಿದ್ದರು. ಲೈಂಗಿಕ ಕ್ರಿಯೆ ಆದಾಗ ಸೇಫ್ಟಿಗಾಗಿ ಒಂದು ಮಾತ್ರೆ ತೆಗೆದುಕೊಳ್ಳುತ್ತಿದ್ದರು. ಆ ಮಾತ್ರೆಯನ್ನು ಒಟಿಸಿ ಅಂತಾ ಕರೀತಾರೆ. ಎಮರ್ಜೆನ್ಸಿ ಪಿಲ್ ಅಂತಾನೂ ಕರೀತಾರೆ. ಐಪಿಲ್ ಅಂತಾರೆ. ಒಟಿಸಿ ಎಂದರೆ ಓವರ್ ದಿ ಕೌಂಟರ್ (ಕನ್ನಡದಲ್ಲಿ ಆಟ ಮುಗಿದ ಮೇಲೆ ಎಂದುಕೊಳ್ಳಿ). ಗರ್ಭಕೋಶದ ಹೊರಗೆ ಬೆಳೆಯುತ್ತಿದ್ದ ಆ ಭ್ರೂಣ, ಹೀಗೆ ನುಂಗಿದ ಮಾತ್ರೆಯ ಸೈಡ್ ಎಫೆಕ್ಟ್ ಆಗಿತ್ತು.
ಮೊದಲೆಲ್ಲ ಇಂತಹ ಪ್ರಕರಣಗಳು ಕಡಿಮೆ ಇದ್ದವು. ಆದರೆ ಇತ್ತೀಚೆಗೆ ಇಂತಹ ಕೇಸುಗಳು ಹೆಚ್ಚಾಗಿ ಬರುತ್ತಿವೆ. ಸೆಕ್ಸ್ ಮುಗಿದ ಮೇಲೆ ಒಂದು ಮಾತ್ರೆ ತೆಗೆದುಕೊಂಡರೆ ಆಯಿತು ಎಂಬ ನಂಬಿಕೆಯಿಂದಾಗಿ ಮದುವೆಗೂ ಮುಂಚಿನ ಲೈಂಗಿಕ ಸಂಪರ್ಕಗಳೂ ಹೆಚ್ಚುತ್ತಿವೆ. ಕಳೆದ ೫ ವರ್ಷಗಳಲ್ಲಿ ಇಂತಹ ಕಾಂಪ್ಲಿಕೇಟೆಡ್ ಪ್ರೆಗ್ನೆನ್ಸಿ ಕೇಸುಗಳನ್ನು ಹೆಚ್ಚು ಹೆಚ್ಚು ನೋಡುತ್ತಿದ್ದೇವೆ. ಶೇ.೨೫ರಷ್ಟು ಹೆಚ್ಚಾಗಿವೆ ಎನ್ನುತ್ತಾರೆ ಖಾಸಗಿ ಆಸ್ಪತ್ರೆ ವೈದ್ಯರು.
ಈ ಮಾತ್ರೆಗೆ ಅಬಾರ್ಷನ್ ಮಾತ್ರೆ ಅಂತಾನೂ ಕರೀತಾರೆ. ಆದರೆ ಈ ಮಾತ್ರೆಯ ಸಕ್ಸಸ್ ರೇಟ್ ಕಡಿಮೆ. ವಿಶೇಷವಾಗಿ ಹರೆಯದ ಯುವತಿಯರು ಒಂದ್ಸಲ ಈ ಮಾತ್ರೆ ತಗೊಂಡ್ರೆ ಸೇಫ್ ಎಂದು ದಾರಿ ತಪ್ಪುತ್ತಿದ್ದಾರೆ. ಹೊಸ ಹೊಸ ಸಂಕಟಗಳನ್ನು ಎದುರಿಸುತ್ತಿದ್ದಾರೆ. ಮಾತ್ರೆ ತೆಗೆದುಕೊಂಡ ಕೂಡಲೇ ಗರ್ಭ ಕಟ್ಟುವುದು ನಿಲ್ಲುವುದಿಲ್ಲ. ಈ ಮಾತ್ರೆ ತೆಗೆದುಕೊಂಡಾಗ ಸಕ್ಸಸ್ ರೇಟ್ ಅತ್ಯಂತ ಕಡಿಮೆ. ಆದರೆ ಜಾಹೀರಾತು ನಂಬಿ ಮೋಸ ಹೋಗುತ್ತಿದ್ದಾರೆ ಎನ್ನುವುದು ವೈದ್ಯರ ಅಭಿಪ್ರಾಯವೂ ಹೌದು.
ಅಲ್ಲದೆ ನಿರಂತರವಾಗಿ ಈ ರೀತಿಯ ಮಾತ್ರೆ ತೆಗೆದುಕೊಳ್ಳುವ ಯುವತಿಯರ ಋತು ಚಕ್ರ ಏರುಪೇರಾಗುತ್ತದೆ. ಅಂದರೆ ತಿಂಗಳಿಗೊಮ್ಮೆ ಆಗಬೇಕಾದ ಪಿರಿಯಡ್ಸ್ 15 ದಿನಕ್ಕೂ ಆಗಬಹುದು. ಎರಡು ತಿಂಗಳಿಗೊಮ್ಮೆಯೂ ಆಗಬಹುದು. ದೇಹದೊಳಗಿನ ಹಾರ್ಮೊನುಗಳು ವ್ಯತ್ಯಾಸವಾಗಬಹುದು. ವಿಚಿತ್ರ ರೀತಿಯ ಪ್ರೆಗ್ನೆನ್ಸಿಯೂ ಆಗಬಹುದು. ಬಿ ಕೇರ್ ಫುಲ್ ಎನ್ನುತ್ತಾರೆ ತಜ್ಞ ವೈದ್ಯರು.
ವಿಚಿತ್ರವೆಂದರೆ ಈಗಲೂ ಇಂತಹ ಎಮರ್ಜೆನ್ಸಿ ಮಾತೆಗಳನ್ನು ತೆಗೆದುಕೊಂಡು ಲೈಂಗಿಕ ಕ್ರಿಯೆ ನಡೆಸುವುದು, ಮಾತ್ರೆ ತೆಗೆದುಕೊಂಡಿದ್ದೀವಿ, ನಾವು ಸೇಫ್ ಎಂದು ಕೊಳ್ಳುವ ಮೌಢ್ಯತೆಗೆ ಕಿಂಚಿತ್ತೂ ಬ್ರೇಕ್ ಬಿದ್ದಿಲ್ಲ.