ನಟ ದರ್ಶನ್ ಮತ್ತು ಗ್ಯಾಂಗ್ ಕೋರ್ಟಿನಲ್ಲಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಶನಿವಾರಕ್ಕೆ ಮುಂದೂಡಿಕೆಯಾಗಿದೆ. ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ನಟ ದರ್ಶನ್ ಪರ ವಕೀಲರು 57ನೇ ಹೆಚ್ಚವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಜೈಶಂಕರ್ ಅವರು ವಿಚಾರಣೆ ನಡೆಸಿದರು. ವಿಚಾರಣೆಯಲ್ಲಿ ಒಟ್ಟು ದರ್ಶನ್ ಸೇರಿದಂತೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಒಟ್ಟು 7 ಜನ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ವಿಶೇಷ ಎಂದರೆ ಪ್ರಕರಣದಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ಸಿವಿ ನಾಗೇಶ್ ಅವರ ವಾದ ಮಂಡನೆ. ಸಿವಿ ನಾಗೇಶ್ ಅವರು ವಾದದಲ್ಲಿ ” ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ವಿರುದ್ಧ ಮಾಡಲಾದ ಆರೋಪಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಆ ಆರೋಪಗಳ ಆಧಾರದಲ್ಲಿ ತೀರ್ಪು ನೀಡಬಾರದೆಂದು ” ಕೋರ್ಟ್‌ಗೆ ಮನವಿ ಮಾಡಿದರು. ಅಷ್ಟೇ ಅಲ್ಲ, ಇಡೀ ಪ್ರಕರಣದಲ್ಲಿನ ಹಾಗೂ ಚಾರ್ಜ್‌ಶೀಟ್ ನಲ್ಲಿ ಕಂಡುಬಂದ ಲೋಪಗಳ ಪಟ್ಟಿ ಮಾಡಿದರು.
ಸಿವಿ ನಾಗೇಶ್ ಅವರು ʻದರ್ಶನ್ ತಮ್ಮ ಸ್ವಇಚ್ಚಾ ಹೇಳಿಕೆಯಲ್ಲಿ ಬಟ್ಟೆ ಮತ್ತು ಚಪ್ಪಲಿಯನ್ನು ಮನೆಯಲ್ಲಿ ಬಿಟ್ಟಿರುವುದಾಗಿ ತಿಳಿಸಿದ್ದಾರೆ. ಆದರೆ ಪೊಲೀಸರು ವಶ ಪಡಿಸಿಕೊಂಡಿರುವುದು ಶೂಗಳನ್ನು. ಚಪ್ಪಲಿ ಇದ್ದ ಜಾಗದಲ್ಲಿ ಶೂಗಳು ಬಂದಿದ್ದು ಹೇಗೆ..ʼʼ ಅನ್ನೋ ಪ್ರಶ್ನೆ ಎತ್ತಿದರು.
ಅಷ್ಟೇ ಅಲ್ಲ, ಜೂನ್ 11ರಂದು ದರ್ಶನ್ ಅವರ ಸ್ಟೇಟ್‌ಮೆಂಟ್ ಪಡೆದ ಪೊಲೀಸರು, ಕೊಲೆಗೆ ಸಂಬಂಧಪಟ್ಟ ವಸ್ತುಗಳನ್ನು ರಿಕವರಿ ಮಾಡುವುದು ಜೂನ್ 14 ಮತ್ತು 15ನೇ ತಾರೀಕು. ಅಲ್ಲಿಯವರೆಗೆ ಪೊಲೀಸರು ಏನ್ ಮಾಡ್ತಾ ಇದ್ರು ಅನ್ನೋ ಪ್ರಶ್ನೆ ಮುಂದಿಟ್ಟಿದ್ದಾರೆ.
ಸಿವಿ ನಾಗೇಶ್ ವಾದ ಮಂಡನೆ ಪ್ರಕಾರ ಪೊಲೀಸರು ಸಾಕ್ಷಿಗಳನ್ನು ಪ್ಲಾಂಟ್ ಮಾಡುವುದಕ್ಕೆಂದೇ ಈ ರೀತಿ ಮಾಡಿದ್ದಾರೆ. ಸಾಕ್ಷಿಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ದರ್ಶನ್ ಅವರನ್ನ 11ನೇ ತಾರೀಕು ಅರೆಸ್ಟ್ ಮಾಡ್ತಾರೆ, 12ನೇ ತಾರೀಕು ಹೇಳಿಕೆ ತಗೊಳ್ತಾರೆ. ಇದು ಹೇಗಾಗುತ್ತೆ ಅನ್ನೋದು ವಕೀಲರ ಪ್ರಶ್ನೆ. ಅಲ್ಲದೆ ಪೊಲೀಸರ ಬಳಿ ರಿಕವರಿಯಾದ ವಸ್ತುಗಳೆಲ್ಲ 9ನೇ ತಾರೀಕಿನಂದೇ ಇದ್ದವು. ಅವುಗಳನ್ನು 12ನೇ ತಾರೀಕು ಎಂದು ತೋರಿಸಿದ್ದು ಏಕೆ ಅನ್ನೋದು ಮತ್ತೊಂದು ಪ್ರಶ್ನೆ.
ಕಾಮಾಕ್ಷಿಪಾಳ್ಯದ ವಿನಯ್ ಅವರಿಗೆ ಪ್ರಕರಣದ ಬಗ್ಗೆ ಮಾಹಿತಿ ಇತ್ತು. ಕೊಲೆ ಮಾಡಿದವರು ಸಿಕ್ಕರೆ ದರ್ಶನ್ ಅವರನ್ನೇ ಕೊಲೆ ಮಾಡಿದ್ದಾರೆ ಎಂದು ತೋರಿಸುತ್ತಾರೆ ಎಂಬ ಕಾರಣಕ್ಕಾಗಿ ಈ ರೀತಿ ಮಾಡಲಾಗಿದೆ. ಕೊಲೆಯಲ್ಲಿ ದರ್ಶನ್ ಪಾತ್ರ ಇಲ್ಲ ಎಂದು ಸಿವಿ ನಾಗೇಶ್ ಅವರು ಕೋರ್ಟಿನಲ್ಲಿ ವಾದಿಸಿದ್ದಾರೆ.
ಎಲ್ಲದರ ಜೊತೆಯಲ್ಲಿ ತನಿಖೆಯ ಪ್ರತಿ ಅಂಶವೂ ಮಾಧ್ಯಮಗಳಲ್ಲಿ ಸೋರಿಕೆಯಾಗಿದೆ. ಇದು ದರ್ಶನ್ ವಿರುದ್ಧ ಮಾಧ್ಯಮಗಳಲ್ಲಿ ವಿಚಾರಣೆ ಆಗುವಂತೆ ಮಾಡಿದೆ. ದರ್ಶನ್ ಅವರಿಗೆ ಯಾವ ಶಿಕ್ಷೆ ಎನ್ನುವುದನ್ನೂ ಚರ್ಚೆ ಮಾಡಲಾಗಿದೆ ಎಂದರಷ್ಟೇ ಅಲ್ಲದೆ, ಸುಪ್ರೀಂಕೋರ್ಟಿನ ಎರಡು ತೀರ್ಪುಗಳನ್ನು ಉಲ್ಲೇಖ ಮಾಡಿದ್ದಾರೆ.
ಇನ್ನು ಪೊಲೀಸರ ಪರವಾಗಿ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಲಿದ್ದಾರೆ. ಸಿವಿ ನಾಗೇಶ್ ಹಿರಿಯ ವಕೀಲ. ಸೋತಿರುವುದು ಕಡಿಮೆ. ಅತ್ತ ಪ್ರಸನ್ನ ಕುಮಾರ್ ಕೂಡಾ ಎನ್‌ಐಎ ಪರ ವಾದ ಮಾಡಿ ಗೆದ್ದವರು. ಗೆಲುವಿನ ಪರ್ಸಂಟೇಜ್ ಶೇ.96ಕ್ಕಿಂತ ಹೆಚ್ಚು. ದರ್ಶನ್ ಪ್ರಕರಣದ ತೀರ್ಪು ಏನಾಗಲಿದೆಯೋ.. ಏನೋ.. ಆದರೆ ಕಾನೂನು ಮತ್ತು ಕ್ರೈಂ ಕೇಸ್ ಫಾಲೋ ಮಾಡೋವ್ರಿಗೆ ಇಬ್ಬರು ಮದಗಜಗಳ ವಾದ ಇಂಟ್ರೆಸ್ಟಿಂಗ್ ಎನಿಸಲಿದೆ.