ಸ್ಟೀವ್ ಜಾಬ್ಸ್ ಪತ್ನಿ ಹಾಗೂ ಅಮೆರಿಕದ ಖ್ಯಾತ ಬಿಲೆನಿಯರ್‌ಗಳ ಪೈಕಿ ಒಬ್ಬರಾಗಿರುವ ಲಾರೆನ್ ಪಾವೆಲ್, ಸದ್ಯಕ್ಕೆ ಕಮಲಾ ಎಂದು ಹೆಸರಿಟ್ಟುಕೊಂಡಿದ್ದಾರೆ. ಗುರು ನಿರಂಜನಿ ಪೀಠಾಧೀಶ್ವರ ಮಹಂತ್ ಕೈಲಾಶಾನಂದ ಗಿರಿ ಅವರ ಆಶ್ರಮದಲ್ಲಿ ಲಾರೆನ್ ಅವರಿಗೆ ಮಹಂತ್ ಕೈಲಾಶಾನಂದ ಗಿರಿ ಅವರು ಲಾರೆನ್ ಅವರಿಗೆ ಕಮಲಾ ಎಂದು ನಾಮಕರಣ ಮಾಡಿದ್ದಾರೆ. ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸಿ ಕಲ್ಪವಾಸ ವ್ರತವನ್ನು ಕೈಗೊಂಡಿದ್ದಾರೆ.
ಆಶ್ರಮಕ್ಕೆ ಆಗಮಿಸುವುದಕ್ಕೂ ಮೊದಲು ಪಾಶ್ಚಾತ್ಯ ಉಡುಪುಗಳನ್ನು ತ್ಯಜಿಸಿ, ಸನ್ಯಾಸಿನಿಯ ನಿಲುವಂಗಿ ತೊಟ್ಟಿದ್ದ ಲಾರೆನ್ಸ್ ಪಾವೆಲ್ , ಮಹಂತ್ ಕೈಲಾಶಾನಂದ ಗಿರಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ವೇಳೆ ಮಹಾಕುಂಭ ಮೇಳಕ್ಕೆ ಆಗಮಿಸಿದ ಲಾರೆನ್ ಅವರಿಗೆ, ಮಹಂತ್ ಕೈಲಾಶಾನಂದ ಗಿರಿ ಕಮಲಾ ಎಂದು ನಾಮಕರಣ ಮಾಡಿದರು.
ಪತಿ ಸ್ಟೀವ್ ಜಾಬ್ಸ್ ಅವರಂತೆಯೇ ಸನಾತನ ಧರ್ಮದಲ್ಲಿ ಆಸಕ್ತಿ ಹೊಂದಿರುವ ಲಾರೆನ್ ಪಾವೆಲ್, ಹಿಂದೂ ಧರ್ಮದ ಆಚರಣೆ ಮಾಡುತ್ತಿದ್ಧಾರೆ. ಹಾಗೆಂದು ಮತಾಂತರವೇನೂ ಆಗಿಲ್ಲ. ಈ ಕಲ್ಪವಾಸ ವ್ರತದಲ್ಲಿ ಹೆಸರು ಬದಲಿಸಿದ್ದಾರಷ್ಟೇ. ಕಲ್ಪವಾಸ ವ್ರತದಲ್ಲಿ ಕೆಲವು ನೀತಿ ನಿಯಮಗಳಿರುತ್ತವೆ. ಆ ನಿಯಮಗಳ ಪ್ರಕಾರ ಲಾರೆನ್ ಅವರಿಗೆ ಕಮಲ ಎಂದು ಹೆಸರಿಡಲಾಗಿದೆ. ಅಷ್ಟೇ.
ಇನ್ನು ಆ್ಯಪಲ್ ಕಂಪನಿಯ ಸಹ-ಸಂಸ್ಥಾಪಕರಾಗಿದ್ದ ಸ್ಟೀವ್ ಜಾಬ್ಸ್ ಪತ್ನಿ ಲಾರೆನ್, ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಮಹಾಕುಂಭ ಮೇಳದಲ್ಲಿ ವ್ರತ ಕೈಗೊಂಡಿದ್ದಾರೆ. ಕಾಶಿಯ ವಿಶ್ವನಾಥನ ದರ್ಶನ ಪಡೆದಿದ್ಧಾರೆ. ಆದರೆ ಲಾರೆನ್ಸ್ ಅವರಿಗೆ ಶಿವಲಿಂಗ ಸ್ಪರ್ಶಕ್ಕೆ ಅವಕಾಶ ಕೊಟ್ಟಿಲ್ಲ. ಕಾಶಿಯಲ್ಲಿ ಹಿಂದೂಗಳಲ್ಲದವರು ಶಿವಲಿಂಗ ಸ್ಪರ್ಶ ಮಾಡುವಂತಿಲ್ಲ. ಕಾಶಿಯಲ್ಲಿರುವ ಅಮೃತೇಶ್ವರ ಶಿವಲಿಂಗವನ್ನು ಸ್ಪರ್ಶಿಸಿದರೆ ಸಾವಿನ ಭಯ ಇರುವುದಿಲ್ಲ ಎನ್ನುವುದು ನಂಬಿಕೆ.
ಲಾರೆನ್ ಪೊವೆಲ್ ಜಾಬ್ಸ್ ಅವರು ಇಲ್ಲಿಗೆ ತನ್ನ ಗುರುಗಳನ್ನು ಭೇಟಿ ಮಾಡಲು ಬಂದಿದ್ದಾರೆ. ನಾವು ಅವರಿಗೆ ಕಮಲ ಎಂದು ಹೆಸರಿಟ್ಟಿದ್ದೇವೆ. ಮತ್ತು ಅವರು ನಮಗೆ ಮಗಳಿದ್ದಂತೆ ಎಂದಿದ್ದಾರೆ. ಅವಳರು ಭಾರತಕ್ಕೆ ಬರುತ್ತಿರುವುದು ಇದು ಎರಡನೇ ಬಾರಿ. ಮಹಾಕುಂಭಕ್ಕೆ ಎಲ್ಲರಿಗೂ ಸ್ವಾಗತ ಎಂದು ಆಹ್ವಾನಿಸಿದ್ದಾರೆ. ಪೊವೆಲ್ ತನ್ನ ವೈಯಕ್ತಿಕ ಕಾರ್ಯಕ್ರಮಕ್ಕಾಗಿ ಮುಖ್ಯವಾಗಿ ಇಲ್ಲಿ ಧ್ಯಾನ ಮಾಡಲು ಬರುತ್ತಿದ್ದಾರೆ ಎಂದು ಮಹಂತ್ ಕೈಲಾಶಾನಂದ ಗಿರಿ ಸ್ವಾಮೀಜಿ ಹೇಳಿದ್ದಾರೆ.
ಲಾರೆನ್ ಅವರು ತನ್ನ ಗುರುಗಳನ್ನು ಭೇಟಿ ಮಾಡಲು ಭಾರತಕ್ಕೆ ಭೇಟಿ ನೀಡಿದ್ದು, ಆಕೆಯ ವಾಸ್ತವ್ಯದ ಸಮಯದಲ್ಲಿ ಅವರು ಇತರ ಯತಿಗಳನ್ನು ಭೇಟಿಯಾಗುತ್ತಾರೆ. ಇಲ್ಲಿನ ಸಂಪ್ರದಾಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ಕಾಶಿ ವಿಶ್ವನಾಥ ಧಾಮದಲ್ಲಿ ದರ್ಶಕರು ಹೇಳಿದ್ದಾರೆ. ಲಾರೆನ್ ಅವರಿಗೆ ಆಸಕ್ತಿಯಿದ್ದರೆ ಅಖಾರಾ ಮೆರವಣಿಗೆಯಲ್ಲಿ ಭಾಗವಹಿಸುವ ಸಾಧ್ಯತೆಯೂ ಇದೆ. ಲಾರೆನ್ ಸಂತರನ್ನು ಭೇಟಿಯಾಗಲು ಮಹಾಕುಂಭದಲ್ಲಿ ಉಳಿದುಕೊಳ್ಳಲಿದ್ದಾರೆ ಎಂದು ಆಚಾರ್ಯ ಕೈಲಾಶಾನಂದರು ಹೇಳಿದ್ದಾರೆ.