ರಾಜ್ಯದಲ್ಲೀಗ ದೊಡ್ಡ ಮಟ್ಟದಲ್ಲಿ ಸಿಡಿ ಮತ್ತು ಹನಿ ಟ್ರಾಪ್ ಹಗರಣ ಸುದ್ದಿಯಾಗುತ್ತಿದೆ. ಸಚಿವ ಕೆಎನ್ ರಾಜಣ್ಣ ಪ್ರಕಾರ ಅವರನ್ನೂ ಟ್ರಾಪ್ ಮಾಡೋಕೆ ಟ್ರೈ ಮಾಡಲಾಗಿದೆ. 224 ಶಾಸಕರಲ್ಲಿ 48 ಶಾಸಕರು ಹನಿ ಟ್ರಾಪ್ ಆಗಿದ್ದಾರೆ. ಇದೆಲ್ಲವನ್ನೂ ಕೆಎನ್ ರಾಜಣ್ಣ ವಿಧಾನಸಭೆಯಲ್ಲೇ ಆರೋಪಿಸಿದ್ದು, ಆ ವಿವಾದ ಈಗ ರಾಜ್ಯ ಮಟ್ಟದಲ್ಲಷ್ಟೇ ಅಲ್ಲ, ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗ್ತಾ ಇದೆ. ಇದೆಲ್ಲವನೂ ಹೊರಬಂದಿದ್ದು ಯತ್ನಾಳ್ ಅವರಿಂದ.
ವಿಪಕ್ಷ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಕೆಎನ್ ರಾಜಣ್ಣ ಹೌದು ನನ್ನ ಮೇಲೂ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ ಎಂಬ ಗಂಭೀರ ಆರೋಪ ಮಾಡಿದ್ದರಷ್ಟೇ ಅಲ್ಲ, ಒಟ್ಟು 48 ಜನರ ಸಿಡಿ ಮಾಡಿದ್ದಾರೆ ಎಂದೆಲ್ಲ ಹೇಳಿದ್ದರು. ಇನ್ನೂ ದೂರು ಕೊಟ್ಟಿಲ್ಲ. ಗೃಹ ಸಚಿವ ಪರಮೇಶ್ವರ್, ಸಿಎಂ ಸಿದ್ದರಾಮಯ್ಯ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳುತ್ತಿದ್ದಾರಾದರೂ, ಯಾವುದೇ ಆಕ್ಷನ್ ಆಗಿಲ್ಲ. ಒಟ್ಟಾರೆಯಾಗಿ 18 ಶಾಸಕರು 6 ತಿಂಗಳ ಕಾಲ ಸಸ್ಪೆಂಡ್ ಆಗಿದ್ದಾರೆ.
ಆದರೆ.. ಇದೆಲ್ಲವೂ ಕಾಂಗ್ರೆಸ್ ಪ್ಲಾನ್ ಆಗಿತ್ತಾ..? ಈ ವಿಚಾರವನ್ನು ಇಟ್ಟುಕೊಂಡು, ಬಿಜೆಪಿ ಶಾಸಕರು ವಿಧಾನ ಮಂಡಲದ ಎರಡೂ ಅಧಿವೇಶನದಲ್ಲಿ ಭಾರೀ ಹಂಗಾಮವನ್ನು ಎಬ್ಬಿಸಿ, ಹೊರದಬ್ಸಿಸಿಕೊಂಡಿದ್ದಾರೆ. ಆದರೆ ವಿಷಯದ ಮೂಲ ಯತ್ನಾಳ್ ಮಿಸ್ಸಿಂಗ್. ಬಿಜೆಪಿಯ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಸುರೇಶ್ ಗೌಡ ಅವರು ಆ ಕಡೆಯಿಂದ ಅಂದರೆ ಕಾಂಗ್ರೆಸ್ ಕಡೆಯಿಂದ ಚೀಟಿ ಬಂದ ನಂತರವೇ, ಬಸನಗೌಡ ಪಾಟೀಲ್ ಯತ್ನಾಳ್ ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಲು ಆರಂಭಿಸಿದ್ದು ಎಂದು ಹೇಳಿದ್ದಾರೆ.
ಆಡಳಿತ ಪಕ್ಷದ ಯಾರು ಯತ್ನಾಳ್ ಅವರಿಗೆ ಚೀಟಿ ಕಳುಹಿಸಿಕೊಟ್ಟಿದ್ದು, ಅದರ ತನಿಖೆಯಾಗಬೇಕು. ಇದು ಎಲ್ಲರಿಗೂ ಅಗೌರವ ಕೊಡುವ ಮತ್ತು ಗಂಭೀರ ವಿಚಾರ ಇದಾಗಿದೆ. ಸ್ಪೀಕರ್ ಅವರು ಇದರ ಬಗ್ಗೆ ಗಮನ ಕೊಡಬೇಕು, ಇದನ್ನು ತನಿಖೆಗೆ ಒಳಪಡಿಸಬೇಕು. ಇದರಿಂದಾಗಿ, ಚೀಟಿ ಕಳುಹಿಸಿದ ಸಚಿವರು ಯಾರು ಎನ್ನುವುದು ರಾಜ್ಯದ ಜನತೆಗೆ ಗೊತ್ತಾಗಬೇಕು ಎಂದು ಸುರೇಶ್ ಗೌಡ ಒತ್ತಾಯಿಸಿದ್ದಾರೆ.
ಮೂಲಗಳ ಪ್ರಕಾರ ಈ ಸಿಡಿ ವಿಷಯದ ಬಗ್ಗೆ ಚರ್ಚೆ ಮಾಡಬೇಕು ಎಂದು ಮೊದಲು ನಿರ್ಧರಿಸಿಯೇ ಮಾತುಕತೆ ಶುರುವಾಗಿದೆ. ಆದರೆ ಏಕಾಏಕಿ ವಿಷಯವನ್ನು ಎತ್ತಿದರೆ ಚೆನ್ನಾಗಿರಲ್ಲ ಎಂಬ ಕಾರಣಕ್ಕಾಗಿ ಯತ್ನಾಳ್ ಅವರ ಜೊತೆ ಮೊದಲು ಮಾತುಕತೆ ಆಗಿದೆ. ಯತ್ನಾಳ್ ಅವರೂ ಕೂಡಾ ಪ್ರಶ್ನೆ ಎತ್ತುವುದಕ್ಕೆ ಓಕೆ ಎಂದಿದ್ದಾರೆ. ಪ್ಲಾನ್ ಪ್ರಕಾರವೇ ಹನಿ ಟ್ರಾಪ್ ವಿಷಯ ಪ್ರಸ್ತಾಪಿಸಿ, ಕೆಎನ್ ರಾಜಣ್ಣ ಹೇಳಿ.. ರಾದ್ಧಾಂತವಾಗಿದೆ. ಸರಿ, ಇಷ್ಟೆಲ್ಲ ಆದ ಮೇಲೆ ಕಂಪ್ಲೇಂಟ್ ಕೊಟ್ಟು ಆಕ್ಷನ್ ತೆಗೆದುಕೊಳ್ಳಬಹುದಲ್ಲಾ.. ಎಂಬ ಪ್ರಶ್ನೆಗೆ ಉತ್ತರವೂ ಇದೆ.
ಹನಿಟ್ರಾಪ್ ವಿಷಯ ಎತ್ತಿರುವ ಕಾಂಗ್ರೆಸ್ ನಾಯಕರಿಗೆ ಕ್ರಮ ಆಗುವುದು ಬೇಕಿಲ್ಲ. ನೋಡಿ..ಆಕ್ಷನ್ ತಗೋತೀವಿ ಅಂತಾ ಹೆದರಿಸ್ತಾ ಹೆದರಿಸ್ತಾ ವಿರೋಧಿಗಳನ್ನು ಸೈಲೆಂಟ್ ಆಗಿಟ್ಟರೆ ಸಾಕು.. ಕಾಂಗ್ರೆಸ್ಸಿಗರ ಉದ್ದೇಶ ಈಡೇರಿದೆ. ಈ ನಡುವೆ ಕಾಂಗ್ರೆಸ್ಸಿಗರಿಗೆ ಈಸಿ ಟ್ರಾಪ್ ಆಗಿರುವುದು ಯತ್ನಾಳ್.ಯತ್ನಾಳ್ ಅವರಿಗೇನು ಲಾಭವಿದೆಯೋ.. ಯಾರಿಗೆ ಗೊತ್ತು..