ಶನಿ ಎಂದರೆ ಎಲ್ಲರೂ ಒಂದು ರೀತಿಯಲ್ಲಿ ಹೆದರುತ್ತಾರೆ. ಒಂದು ಭಯ. ಶನಿ ಹೆಗಲೇರಿದರೆ.. ಎಂಬ ಆತಂಕವೇ ಎಲ್ಲರದ್ದೂ. ಆದರೆ.. ಶನಿ ದೇವರು ಹಾಗೇನಿಲ್ಲ. ಅವನು ಒಲಿದರೆ ವರ. ಮುನಿದರಷ್ಟೇ ಶಾಪ. ಇನ್ನು ಸಾಡೇಸಾತಿ ಶನಿ, ಅಷ್ಟಮಶನಿ, ಶನಿ ದೋಷ.. ಹೀಗೆ ಏನೇನೋ ಇರುತ್ತವೆ. ಆದರೆ.. ಅಂತಹ ದೋಷಗಳಿಂದ ಮುಕ್ತರಾಗಲು ಮಾರ್ಗಗಳೂ ಇವೆ. ಶನಿವಾರದ ದಿನವು ನ್ಯಾಯಾಧಿಪತಿಯಾದ ಶನಿದೇವನಿಗೆ ಸಮರ್ಪಿತವಾದ ದಿನ. ಶನಿವಾರ ನೀವು ಶನಿಯನ್ನು ವಿಧಿ – ವಿಧಾನಗಳ ಪ್ರಕಾರ ಪೂಜಿಸುವುದರಿಂದ ಶನಿ ದೋಷಗಳು ದೂರಾಗುತ್ತವೆ. ಶನಿವಾರದ ದಿನದಂದು ರಾತ್ರಿ ಕೆಲವೊಂದು ಕೆಲಸಗಳನ್ನು ರಹಸ್ಯವಾಗಿ ಮಾಡಿದರೆ ಶನಿ ದೋಷ ನಿವಾರಣೆಯಾಗಿ, ಶನಿ ದೇವರು ಕೃಪೆ ತೋರುತ್ತಾನಂತೆ. ಶನಿವಾರದ ದಿನದಂದು ರಾತ್ರಿ ರಹಸ್ಯವಾಗಿ ನಾವು ಯಾವೆಲ್ಲಾ ಕೆಲಸಗಳನ್ನು ಮಾಡಬೇಕು ಅನ್ನೋದರ ವಿವರ ಇಲ್ಲಿದೆ ನೋಡಿ.
ಹನುಮಾನ್ ಚಾಲೀಸ ಪಠಣ
ಹನುಮಾನ್ ಚಾಲೀಸಾವು ಆಂಜನೇಯ ಸ್ವಾಮಿಗೆ ಸಮರ್ಪಿತವಾದ 40 ಸಾಲುಗಳ ಸ್ತೋತ್ರ. ಹನುಮಾನ್ ಚಾಲೀಸ ಅತ್ಯಂತ ಪರಿಣಾಮಕಾರಿ ಸ್ತೋತ್ರವಾಗಿದೆ. ಇದನ್ನು ಪಠಿಸುವುದರಿಂದ ಆಂಜನೇಯ ಸ್ವಾಮಿಯ, ಶ್ರೀರಾಮನ ಆಶೀರ್ವಾದ ಮಾತ್ರವಲ್ಲ, ಶನಿದೇವನ ಆಶೀರ್ವಾದವೂ ಪ್ರಾಪ್ತವಾಗುವುದು. ಆಂಜನೇಯ ಸ್ವಾಮಿ, ಶ್ರೀರಾಮನ ಭಂಟನಷ್ಟೇ ಅಲ್ಲ, ಶನಿ ದೇವರ ಅತ್ಯಾಪ್ತ ಮಿತ್ರನೂ ಹೌದು. ಆಂಜನೇಯನ ಭಕ್ತರು ಎಂದೆಂದಿಗೂ ಶನಿ ದೇವರ ಅವಕೃಪೆಗೆ ಪಾತ್ರರಾಗುವುದಿಲ್ಲ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹನುಮಂತನ ಭಕ್ತರ ಮೇಲೆ ಶನಿ ದೇವನ ವಿಶೇಷ ಕೃಪೆಯಿರಲಿದೆ. ಹನುಮಂತನ ಭಕ್ತರಿಗೆ ಯಾವ ತೊಂದರೆಯಾಗದಂತೆ ಶನಿ ದೇವ ಕಾಪಾಡುತ್ತಾನೆ ಎಂದು ಹೇಳಲಾಗುತ್ತದೆ. ಆಂಜನೇಯ ಸ್ವಾಮಿ ತಮ್ಮ ಭಕ್ತರನ್ನು ಎಲ್ಲಾ ರೀತಿಯ ಸಂಕಟದಿಂದ ರಕ್ಷಿಸಿದರೆ, ಕರ್ಮಫಲದಾತನಾದ ಶನಿಯು ತನ್ನ ಭಕ್ತರ ಕರ್ಮಗಳಿಗೆ ಅನುಗುಣವಾಗಿ ಫಲ ನೀಡುತ್ತಾನೆ.
ಶನಿ ದೇವರು ಮತ್ತು ಆಂಜನೇಯನ ಸ್ನೇಹದ ಕಥೆ..!
ಶನಿ ಮತ್ತು ಆಂಜನೇಯನ ನಡುವೆ ಒಮ್ಮೆ ಗದಾಯುದ್ಧ ನಡೆಯುತ್ತದೆ. ಆ ಗದಾಯುದ್ಧದಲ್ಲಿ ಶನಿಯನ್ನು ಸದೆಬಡಿಯುವ ಹನುಮಂತ, ಆನಂತರ ಶನಿಗೆ ಸಾಸಿವೆ ಎಣ್ಣೆ ಮುಲಾಮು ಹಚ್ಚಿ ಗಾಯಗಳಿಗೆ ಔಷಧ ಮಾಡುತ್ತಾನೆ. ಇನ್ನು ರಾಮ ರಾವಣ ಯುದ್ಧದಲ್ಲಿ ರಾವಣನ ಸೆರೆಯಾಗಿದ್ದ ಹನುಮಂತನನ್ನು ಬಿಡುಗಡೆ ಮಾಡುವುದು ಆಂಜನೇಯ. ಈ ಎಲ್ಲದರ ಫಲವಾಗಿ ಶನಿ ದೇವರು, ಹನುಮಾನ್ ಭಕ್ತರಿಗೆ ತೊಂದರೆ ಕೊಡುವುದಿಲ್ಲ ಎನ್ನುವುದು ನಂಬಿಕೆ.
ಅರಳೀ ಮರದ ಪೂಜೆ :
ಶನಿ ದೇವನು ಅರಳಿ ಮರದಲ್ಲಿ ನೆಲೆಸಿರುತ್ತಾನೆ ಎಂಬುದು ಹಿಂದೂ ಧರ್ಮದಲ್ಲಿನ ನಂಬಿಕೆ. ಅರಳಿ ಮರದ ಪೂಜೆಯನ್ನು ಮಾಡುವುದರಿಂದ ಜನರು ಶನಿ ಕೃಪೆಗೆ ಪಾತ್ರರಾಗ್ತಾರೆ. ಶನಿವಾರದ ದಿನದಂದು ರಾತ್ರಿ ಅರಳಿ ಮರದ ಕೆಳಗೆ ದೀಪವನ್ನು ಹಚ್ಚಿಡಬೇಕು. ಅರಳಿ ಮರದ ಕೆಳಗೆ ದೀಪವನ್ನು ಹಚ್ಚಿಡುವುದರಿಂದ ನಿಮಗೆ ಶನಿದೇವನ ವಿಶೇಷ ಅನುಗ್ರಹ ಪ್ರಾಪ್ತವಾಗುವುದು.
ಕಪ್ಪು ಎಳ್ಳು ದಾನ :
ಶನಿದೋಷದಿಂದ ಮುಕ್ತಿಯನ್ನು ಪಡೆದುಕೊಳ್ಳುವುದಕ್ಕಾಗಿ ಕಪ್ಪು ಸಾಸಿವೆಯು ಪ್ರಯೋಜನಕಾರಿಯಾಗಿದೆ. ಶನಿ ದೋಷದಿಂದ ಮುಕ್ತಿಯನ್ನು ಪಡೆದುಕೊಳ್ಳಲು ಬಯಸಿದರೆ ಶನಿವಾರದ ದಿನದಂದು ಕಪ್ಪು ಎಳ್ಳನ್ನು ದಾನವಾಗಿ ನೀಡಬೇಕು. ಈ ರೀತಿ ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ಶನಿ ದೋಷದಿಂದ ನಿಮಗೆ ಮುಕ್ತಿ ದೊರೆಯುತ್ತದೆ.
ಇವೆಲ್ಲವುಗಳಿಂದ ಶನಿ ದೇವರ ಕೃಪೆ ಪಡೆಯಬಹುದಾಗಿದೆ. ಶನಿವಾರ ರಾತ್ರಿಯೇ ಇದನ್ನೆಲ್ಲ ಮಾಡಿ.