ಗೃಹಜ್ಯೋತಿ ಫ್ರೀ ಕೊಟ್ಟು ಬೇರೆಯವರಿಗೆ ಬರೆ ಎಳೀತಾರೆ ಅಂತಾ ಹೇಳ್ತಿದ್ದ ಕೆಲವರ ವಾದ ಇದೀಗ ನಿಜವಾಗುತ್ತಿದೆ. ವಿದ್ಯುತ್ ದರ ಏರಿಕೆಯ ಜೊತೆಗೆ ಈಗ ಸ್ಮಾರ್ಟ್ ಮೀಟರ್ ದರವನ್ನೂ ಬೇಕಾಬಿಟ್ಟಿ ಏರಿಕೆ ಮಾಡಿದೆ ರಾಜ್ಯ ಸರ್ಕಾರ. ಬೆಸ್ಕಾಂ (ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ) ಸಂಸ್ಥೆ ತನ್ನ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಸ್ಮಾರ್ಟ್ ಮೀಟರ್ ಕಡ್ಡಾಯ. ಅದೂ ಕೂಡಾ ಶೇ.400 ರಿಂದ ಶೇ.800 ರಷ್ಟು ಏರಿಕೆ. ಇದು ಗೃಹಜ್ಯೋತಿ ಸ್ಕೀಂ ಇದ್ದವರಿಗೆ, ಇಲ್ಲದವರಿಗೆ ಎಲ್ಲರಿಗೂ ಅನ್ವಯವಾಗಲಿದೆ.
ಜನವರಿ 15ರಿಂದಲೇ ಜಾರಿ :
ಬೆಸ್ಕಾಂ ವ್ಯಾಪ್ತಿಯಲ್ಲಿ ತೆಗೆದುಕೊಳ್ಳುವ ಎಲ್ಲಾ ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೂ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಕಡ್ಡಾಯ.
ಅಂದರೆ ಹೊಸದಾಗಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗಷ್ಟೇ ಅಲ್ಲ, ಆ ಮನೆಗಳ ಖಾಯಂ ಸಂಪರ್ಕಕ್ಕೂ ಹೊಸ ದರವೇ ಫಿಕ್ಸ್. ಜ.15 ರಿಂದ ಅನ್ವಯವಾಗುವಂತೆ ಈ ದರ ಜಾರಿಗೆ ಬಂದಿದೆ. ಇನ್ನು ಹೊಸ ಖಾಯಂ ಸಂಪರ್ಕಕ್ಕೂ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಿದ್ದು, ಪ್ರಿಪೇಯ್ಡ್ ಅಥವಾ ಪೋಸ್ಟ್ ಪೇಯ್ಡ್ ಎಂಬ ಆಯ್ಕೆ ನೀಡಿದೆ.
400%ನಿಂದ 800% ಏರಿಕೆ :
ಸಾಮಾನ್ಯ ಮೀಟರ್‌ಗಿಂತ ಹೊಸ ಮೀಟರ್ ಶೇ.400 ರಿಂದ 800 ರಷ್ಟು ದುಬಾರಿಯಾಗಿದೆ.
ಸಿಂಗಲ್ ಫೇಸ್ : ಸಿಂಗಲ್ ಫೇಸ್‌ನ ಒಂದು ಸಾಮಾನ್ಯ ಮೀಟರ್ ಬೆಲೆ ಕೇವಲ 980 ರು. ಇತ್ತು. ಇದೀಗ ಸಿಂಗಲ್ ಫೇಸ್ ಸ್ಮಾರ್ಟ್ ಮೀಟರ್‌ಗೆ ಜಿಎಸ್ಟಿ ಸೇರಿ 4,998 ರು. ಪಾವತಿಸಬೇಕು.
2 ಫೇಸ್ : 2450 ರು.ಗೆ ಸಿಗುತ್ತಿದ್ದ ಎಸ್‌ಪಿ-2 ಮೀಟರ್‌ಗೆ ಇದೀಗ ಸ್ಮಾರ್ಟ್ ಮೀಟರ್ ರೂಪದಲ್ಲಿ 8,880 ರೂ. ಕಟ್ಟಬೇಕು.
3 ಫೇಸ್ : 3,450 ರು. ಇದ್ದ ಎಸ್‌ಪಿ-3 (3ಫೇಸ್) ಮೀಟರ್‌ಗೆ ಬರೋಬ್ಬರಿ 28,080 ರೂ. ಪಾವತಿಸಬೇಕು
ಎಲ್ಲೆಲ್ಲಿ ಈ ನೂತನ ದರ..?
ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ದಾವಣಗೆರೆ, ಚಿತ್ರದುರ್ಗ, ರಾಮನಗರ ಭಾಗದ ಗ್ರಾಮೀಣ ಭಾಗದ ಜನರಿಗೆ ಏ.1ರಿಂದ ಅನ್ವಯವಾಗುವ ವಿದ್ಯುತ್ ದರ ಏರಿಕೆ ಶಾಕ್‌ಗೆ ಮೊದಲೇ ಹೊಸ ಶಾಕ್ ನೀಡಿದೆ.
ಮಿಸ್ ಆದ್ರೆ ಪವರ್ ಕಟ್..!
ಸ್ಮಾರ್ಟ್ ಮೀಟರ್ ನಿರ್ವಹಣೆ ಬಗ್ಗೆ ಬೆಸ್ಕಾಂ ಮಾರ್ಗಸೂಚಿ ಹೊರಡಿಸಿದೆ. ಪ್ರಿಪೇಯ್ಡ್ ಗ್ರಾಹಕರು ಕನಿಷ್ಠ 100 ರೂ. ಅಥವಾ ಒಂದು ವಾರದ ಸರಾಸರಿ ಬಳಕೆಗೆ ಸಮಾನವಾದ ಮೊತ್ತವನ್ನು ಕನಿಷ್ಠ ರಿಚಾರ್ಜ್ ಮಾಡಿಸಬೇಕು. ಗರಿಷ್ಠ ರಿಚಾರ್ಜ್‌ಗೆ ಯಾವುದೇ ಮಿತಿ ಇರುವುದಿಲ್ಲ. ಅಲ್ಲದೆ ಮಾಸಿಕ ನಿಗದಿತ ಶುಲ್ಕವನ್ನು ತಿಂಗಳ ಮೊದಲ ದಿನವೇ ಕಟ್ ಮಾಡ್ತಾರೆ. ಬ್ಯಾಲೆನ್ಸ್ ಝೀರೋ ಆದರೆ ಸಂಪರ್ಕ ಕಟ್ ಆಗುತ್ತದೆ.
ಮೀಟರ್‌ಗಳ ನಿರ್ವಹಣೆಗೆ ಎಎಂಐ (ಅಡ್ವಾನ್ಸ್ ಮೀಟರಿಂಗ್ ಇನ್‌ಫ್ರಾಸ್ಟ್ರಕ್ಚರ್) ಸಾಫ್ಟ್‌ವೇರ್ ನಿರ್ವಹಣೆಗೆ ಖಾಸಗಿ ಕಂಪೆನಿಗೆ ಬೆಸ್ಕಾ ಗುತ್ತಿಗೆ ನೀಡಿದೆ. ಇದಕ್ಕೆ ಪ್ರತಿ ತಿಂಗಳು 300 ರು. ನಿರ್ವಹಣಾ ಶುಲ್ಕ ಪಾವತಿಸಬೇಕು. ಮುಂದಿನ ದಿನಗಳಲ್ಲಿ ಆ ಶುಲ್ಕವೂ ಗ್ರಾಹಕರ ಹೆಗಲು ಏರಲಿದೆ.
ಕೆಇಆರ್‌ಸಿ ನೀಡಿದ್ದ ಗಡುವಿನಂತೆ ಫೆ.15 ರಿಂದ ಬೆಸ್ಕಾಂ ವ್ಯಾಪ್ತಿಯ ಎಂಟೂ ಜಿಲ್ಲೆಗಳಲ್ಲಿ ಹೊಸ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲಾಗಿದೆ. ತಾತ್ಕಾಲಿಕ ಸಂಪರ್ಕಕ್ಕೆ ಸ್ಮಾರ್ಟ್ ಜತೆಗೆ ಪ್ರಿಪೇಯ್ಡ್ ಪಾವತಿ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ.
ಹಳೆಯ ಗ್ರಾಹಕರಿಗೆ ತೊಂದರೆ ಇಲ್ಲವಾ..?
ಸದ್ಯದ ಮಟ್ಟಿಗೆ ಮಾತ್ರ ತೊಂದರೆ ಇಲ್ಲ. ಮುಂದಿನ ದಿನಗಳಲ್ಲಿ ಹಳೆಯ ಗ್ರಾಹಕರ ಮೀಟರ್ ಕೂಡಾ ಸ್ಮಾರ್ಟ್ ಆಗಲಿದೆ. ಆಗ ಹಳೆಯ ಗ್ರಾಹಕರೂ ಹೊಸ ದರವನ್ನೇ ಕಟ್ಟಬೇಕಾದ್ದು ಕಡ್ಡಾಯವಾಗಲಿದೆ. ಸರ್ಕಾರವೇನೋ ಇಲ್ಲ ಎನ್ನುತ್ತಿದೆ. ಆದರೆ ಅದನ್ನು ನಂಬುವ ಸ್ಥಿತಿಯಲ್ಲಿ ಗ್ರಾಹಕರೂ ಇಲ್ಲ.
ಸಿಂಗಲ್ ಫೇಸ್ ಮೀಟರ್ – 950 ರೂ. ಹಳೆಯ ದರ. ಹೊಸ ದರ 4,998 ರೂ.
ಎಸ್ಪಿ-2 ಮೀಟರ್ ; 2,400 ರೂ ಹಳೆಯ ದರ . ಹೊಸ ದರ 9,000 ರೂ.
ತ್ರಿಫೇಸ್ ಮೀಟರ್ (ಎಲ್‌ಟಿ ಸಿಟಿ) : 2,500 ರೂ. ಹಳೆಯ ದರ. 28,000 ರೂ. ಹೊಸ ದರ