ಕಿಚ್ಚ ಸುದೀಪ್ ಅಭಿಮಾನಿಯೊಬ್ಬರ ಪುಟ್ಟ ಮಗಳು ಅಪರೂಪದ ಆರೋಗ್ಯ ಸಮಸ್ಯೆಗೆ ವೈದ್ಯರಲ್ಲಿ ಉತ್ತರ ಇದೆ. ಆದರೆ ದುಬಾರಿ. ಖಾಯಿಲೆ ಗುಣವಾಗುತ್ತದೆ ಎಂದು ವೈದ್ಯರು ಭರವಸೆ ನೀಡಿದ್ದಾರೆ. ಆದರೆ ಇಂಜೆಕ್ಷನ್ ದುಬಾರಿ. ಹೀಗಾಗಿಯೇ ಒಂದು ವಿಡಿಯೋ ಮಾಡಿರುವ ಸುದೀಪ್, ಮಗುವಿನ ನೆರವಿಗೆ ಬಂದಿದ್ದಾರೆ.
‘ಈ ವಿಡಿಯೋ ನೋಡುತ್ತಿರುವ ಪ್ರತಿಯೊಬ್ಬರಿಗೂ ಕಿಚ್ಚನ ನಮಸ್ತೆ. ವಿಡಿಯೋ ಮಾಡಲು ಬಹಳ ಮುಖ್ಯವಾದ ಕಾರಣ ಇದೆ. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕಿಶೋರ್ ಹಾಗೂ ಅವರ ಪತ್ನಿ ನಾಗಶ್ರೀ ದಂಪತಿಗೆ 1 ವರ್ಷ 10 ತಿಂಗಳ ಪುಟ್ಟ ಮಗಳು ಇದ್ದಾಳೆ. ಆಕೆಯ ಹೆಸರು ಕೀರ್ತನಾ. ಆ ಮುದ್ಧ ಕಂದಮ್ಮನಿಗೆ ಸ್ಪೈನ್ ಮಸ್ಕ್ಯುಲರ್ ಅಟ್ರೋಫಿ (SMA2) ಎಂಬ ಆರೋಗ್ಯ ಸಮಸ್ಯೆ ಇದೆ. ಇದು ಅನುವಂಶಿಕ ಕಾಯಿಲೆ. ಈ ಕಾಯಿಲೆಗೆ ಔಷದೆ ಇದೆ. ಗುಣ ಆಗುವ ಸಾಧ್ಯತೆಯಿದೆ ಆದರೆ ಆ ವೈದ್ಯಕೀಯ ಚಿಕಿತ್ಸೆಗೆ ಬೇಕಾದ ಹಣ ಎಷ್ಟು ಎಂದು ಕೇಳಿದಂತೆ ಮೈ ಜುಮ್ ಎನಿಸುತ್ತದೆ. ಈ ಚಿಕಿತ್ಸೆ ಬೇಕಾಗಿರುವುದು 16 ಕೋಟಿ ರೂ. ಪೋಷಕರು ಆಸ್ತಿಯನ್ನು ಮಾರಿ ಮಗುವನ್ನು ಉಳಿಸಿಕೊಳ್ಳುವ ಪ್ರುತ್ನದಲ್ಲಿದ್ದಾರೆ. ಸಾಕಷ್ಟು ಜನ ಇದಕ್ಕೆ ಕೈ ಜೋಡಿಸಿದ್ದಾರೆ. ಸಹಾಯ ಮಾಡಲು ಮುಂದೆ ಬಂದಿದ್ದಾರೆ. ನನ್ನ ಕೈಲಾದ ಸಹಾಯ ನಾಣು ಮಾಡಿದ್ದೀನಿ. ನೀವು ನಿಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡಿ’ ಎಂದು ವಿಡಿಯೋದಲ್ಲಿ ಸುದೀಪ್ ಮಾತನಾಡಿದ್ದಾರೆ.
ಮಗುವಿನ ಕಾಯಿಲೆ ಏಕೆ ಗಂಭೀರ..?
ಕಿಶೋರ್ ಹಾಗೂ ಅವರ ಪತ್ನಿ ನಾಗಶ್ರೀ ದಂಪತಿಯ ಮಗು ಕೀರ್ತನಾ. 1 ವರ್ಷ 10 ತಿಂಗಳ ಪುಟ್ಟ ಮಗು. ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ ಟೈಪ್ (SMA2) ಎಂಬ ಆರೋಗ್ಯ ಸಮಸ್ಯೆ. ಇದು ಬಹಳ ಅಪರೂಪದ ಅನುವಂಶಿಕ ಕಾಯಿಲೆ. ಈ ಕಾಯಿಲೆಗೆ ತುತ್ತಾದ ಮಕ್ಕಳು ಸ್ನಾಯುಗಳು ವೀಕ್ ಆಗುತ್ತವೆ. ದುರ್ಬಲವಾಗುತ್ತವೆ. ಇದು ಸಾಮಾನ್ಯವಾಗಿ 6ರಿಂದ 18 ತಿಂಗಳ ಒಳಗಿನ ಮಗುವಾಗಿದ್ದಾಗ ಗೊತ್ತಾಗುತ್ತದೆ. ಈ ಕಾಯಿಲೆ ಇರುವ ಮಕ್ಕಳು ಎದ್ದು ಕೂರುವುದಕ್ಕೂ ಆಗುವುದಿಲ್ಲ. ಓಡಾಡುವುದಂತೂ ಸಾಧ್ಯವೇ ಇಲ್ಲ. ಇದಕ್ಕೆ ಡಬೋವಿಜ್ ಕಾಯಿಲೆ ಎಂದೂ ಕರೆಯುತ್ತಾರೆ. ಅಂತಹದ್ದೊಂದು ಕಾಯಿಲೆಗೆ ತುತ್ತಾಗಿರುವ ಮಗು ಕಿಚ್ಚ ಸುದೀಪ್ ನೆರವು ನೀಡಿ ಎನ್ನುತ್ತಿದ್ದಾರೆ.
ಸುದೀಪ್ ಅವರು ನೆರವು ನೀಡಿ ಎಂದು ಕೇಳುತ್ತಿರುವುದಕ್ಕೆ ಕಾರಣವೂ ಇದೆ. ಈ ಚಿಕಿತ್ಸೆ ಬೇಖಾಗಿರುವುದು 16 ಕೋಟಿ ರೂ.. ತಂದೆ ತಾಯಿ ತಮ್ಮೆಲ್ಲ ಆಸ್ತಿ ಮಾರಿದರೂ ಅಷ್ಟು ಹಣ ಆಗುತ್ತಿಲ್ಲ. ಮಗುವಿನ ಚಿಕಿತ್ಸೆಗೆ ಕೆಲವರು ಕೈಜೋಡಿಸಿದ್ದಾರೆ. ಸುದೀಪ್ ಅವರೂ ಕೂಡಾ ತಮ್ಮ ಕೈಲಾದಷ್ಟು ಹಣ ನೀಡಿದ್ದಾರೆ. ಅವರು ಕೇಳ್ತಿರೋದು ಇಷ್ಟೇ. ನೀವು ನಿಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡಿ ಎಂದು.
ಮೆಡಿಸಿನ್ ಎಷ್ಟು ದುಬಾರಿ..?
ಈ ರೋಗ ಗುಣಪಡಿಸುವುದಕ್ಕೆ ಇಂಜೆಕ್ಷನ್, ಪೌಡರ್ ಮತ್ತು ಟ್ಯಾಬ್ಲೆಟ್ಸ್ ಬೇಕು. ಒಂದು ಇಂಜೆಕ್ಷನ್ ಬೆಲೆ 27 ಲಕ್ಷವಂತೆ. ಅಂತಹ ಎಷ್ಟು ಇಂಜೆಕ್ಷನ್ ಕೊಡಬೇಕು ಎನ್ನುವುದನ್ನು ವೈದ್ಯರೇ ನಿರ್ಧಾರ ಮಾಡುತ್ತಾರೆ. ಇನ್ನು ಇದರ ಜೊತೆಗೆ ಮಗುವಿನ ಸ್ನಾಯುಗಳು ಬಲವಾಗುವುದಕ್ಕೆ ವಿಶೇಷ ಪೌಷ್ಠಿಕಾಂಶ ಇರುವ ಪೌಡರ್‌ನ್ನು ದ್ರವ ರೂಪದಲ್ಲಿ ಪ್ರತಿನಿತ್ಯ ಕುಡಿಸಬೇಕು. ಅಂತಹ ಒಂದು ಚಿಕ್ಕ ಪ್ಯಾಕೆಟ್‌ನಲ್ಲಿ 400 ಮಿಲಿ ಗ್ರಾಂ ಇರುತ್ತದೆ. ಬೆಲೆ 7೦೦ ರೂ. ಅಂತಹ ಪೌಡರ್, ದಿನಕ್ಕೆ ಕನಿಷ್ಠ 5 ಬಾರಿಯಂತೆ 3 ವರ್ಷ ಸತತವಾಗಿ ಕುಡಿಸಬೇಕು, ಜೊತೆಗೆ ಟ್ಯಾಬ್ಲೆಟ್ಸ್. ಒಂದೊಂದು ಟ್ಯಾಬ್ಲೆಟ್ ಬೆಲೆ 700-1200 ರೂ. ಅದನ್ನೂ ಸಹ ಮೂರು ವರ್ಷ ಸತತವಾಗಿ ಕೊಡಬೇಕು. ಒಟ್ಟಿನಲ್ಲಿ ಈ ಕಾಯಿಲೆಯ ಗಂಭೀರತೆಯೇ ಭಯ ಹುಟ್ಟಿಸುವಂತಿದೆ.