ATM ಡೆಬಿಟ್ ಕಾರ್ಡ್ ಇದ್ದವರು ATMನಿಂದ ಹಣ ಡ್ರಾ ಮಾಡುವುದು ಸಾಮಾನ್ಯ. ಆದರೆ ATMನಿಂದ ಪದೇ ಪದೇ ಹಣ ವಿತ್ ಡ್ರಾ ಮಾಡುತಿದ್ದರೆ ಅದಕ್ಕೆ ಶುಲ್ಕ ವಿಧಿಸಲಾಗುತ್ತದೆ. ಸದ್ಯಕ್ಕೆ ಒಬ್ಬ ವ್ಯಕ್ತಿಯ ಒಂದು ATM ಕಾರ್ಡಿಗೆ ತಿಂಗಳಿಗೆ 5 ಬಾರಿ ಹಣ ವಿತ್ ಡ್ರಾ ಮಾಡಲು ಉಚಿತ ಅವಕಾಶ ಇದೆ. 5ಕ್ಕಿಂತ ಹೆಚ್ಚಿನ ಬಾರಿ ಡ್ರಾ ಮಾಡ್ತಾ ಇದ್ದರೆ, ಒಂದೊಂದು ವಿತ್ ಡ್ರಾಗೂ 2 ರೂ. ಶುಲ್ಕ ಪಾವತಿ ಮಾಡಬೇಕು. ಇದಕ್ಕೂ ಮೊದಲು ಇದು 1 ರೂ. ಇತ್ತು.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇಂಟರ್‌ಚೇಂಜ್ ಶುಲ್ಕವನ್ನು ಹೆಚ್ಚಿಸಿರುವುದರಿಂದ, ಮೇ 1 ರಿಂದ ಭಾರತದಲ್ಲಿ ಎಟಿಎಂಗಳಿಂದ ಹಣವನ್ನು ಹಿಂಪಡೆಯುವುದು ದುಬಾರಿಯಾಗಲಿದೆ. ಇದರರ್ಥ ಹಣಕಾಸಿನ ವಹಿವಾಟುಗಳಿಗಾಗಿ ಎಟಿಎಂಗಳನ್ನು ಅವಲಂಬಿಸಿರುವ ಗ್ರಾಹಕರು ತಮ್ಮ ಉಚಿತ ವಹಿವಾಟು ಮಿತಿಯನ್ನು ಮೀರದಂತೆ ನೋಡಿಕೊಳ್ಳಬೇಕು. ಅಂದರೆ ತಿಂಗಳಿಗೆ 5 ಬಾರಿ ಮಾತ್ರ ವಿತ್ ಡ್ರಾ ಮಾಡಬೇಕು. ಅದನ್ನು ಮೀರಿದರೆ ಮೇ 1ರಿಂದ ಪ್ರತಿ ಹಣಕಾಸು ವಹಿವಾಟಿಗೆ ಹೆಚ್ಚುವರಿಯಾಗಿ 2 ರು. ಪಾವತಿಸಬೇಕಾಗುತ್ತದೆ. ಬ್ಯಾಲೆನ್ಸ್ ವಿಚಾರಣೆಯಂತಹ ಹಣಕಾಸಿನೇತರ ವಹಿವಾಟುಗಳಿಗೆ, ಶುಲ್ಕವು 1 ರು. ಹೆಚ್ಚಾಗುತ್ತದೆ. ಪರಿಣಾಮವಾಗಿ, ಎಟಿಎಂನಿಂದ ಹಣವನ್ನು ಹಿಂಪಡೆಯಲು ಪ್ರತಿ ವಹಿವಾಟಿಗೆ 19 ರು. ವೆಚ್ಚವಾಗಲಿದೆ, ಇದು ಹಿಂದಿನ 17 ರು.ಗಿಂತ 2 ರು. ಹೆಚ್ಚು, ಎಟಿಎಂ ಇಂಟರ್ಚೇಂಜ್ ಶುಲ್ಕ ಎಂದರೆ ಎಟಿಎಂ ಸೇವೆಗಳನ್ನು ಒದಗಿಸುವುದಕ್ಕಾಗಿ ಒಂದು ಬ್ಯಾಂಕ್ ಮತ್ತೊಂದು ಬ್ಯಾಂಕ್‌ಗೆ ಪಾವತಿಸುವ ಶುಲ್ಕವಾಗಿದೆ.
ATM ಮೂಲಕವೇ ಪಿಎಫ್ ಹಣ ಡ್ರಾ ಮಾಡಿಕೊಳ್ಳಿ :
ಪಿಎಫ್ ಖಾತೆಯಲ್ಲಿ ಎಷ್ಟು ಹಣ ಇದೆ.. ಡ್ರಾ ಮಾಡಿಕೊಳ್ಳುವುದು ಹೇಗೆ ಎಂಬ ಸಮಸ್ಯೆಗಳಿಗೆ ಇನ್ನು ಮುಂದೆ ಉತ್ತರ ಸಿಗಲಿದೆ. ಮೇ ಅಂತ್ಯ ಅಥವಾ ಜೂನ್ ವೇಳೆಗೆ, ಸದಸ್ಯರು ತಮ್ಮ ಭವಿಷ್ಯ ನಿಧಿ ಖಾತೆಯನ್ನು ಸುಲಭವಾಗಿ ನೋಡಬಹುದು. ತಮ್ಮ ಪಿಎಫ್ ಖಾತೆಯಲ್ಲಿರುವ ಮೊತ್ತವನ್ನು ನೇರವಾಗಿ ಯುಪಿಐನಲ್ಲಿ ತಿಳಿದುಕೊಳ್ಳಬಹುದು. ಅಲ್ಲದೆ ತಮಗೆ ಬೇಕಾದ ಬ್ಯಾಂಕಿಗೆ ತಕ್ಷಣ 1 ಲಕ್ಷ ರೂ.ವರೆಗೆ ಹಣ ಹಿಂಪಡೆಯಲು ಮತ್ತು ವರ್ಗಾವಣೆ ಮಾಡಲು ಸಾಧ್ಯವಾಗಲಿದೆ. ವಿವಿಧ ಕಾರಣಗಳಿಗಾಗಿಯೂ ಹಣವನ್ನು ಹಿಂಪಡೆಯಲು ಸದಸ್ಯರಿಗೆ ಆಯ್ಕೆ ನೀಡಲಾಗಿದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಸುಮಿತಾ ದಾವ್ರಾ ಈ ವಿಷಯ ತಿಳಿಸಿದ್ದಾರೆ.
“ಇಪಿಎಫ್‌ಒ ಡಿಜಿಟಲೀಕರಣ ಮಾಡುವ ನಿಟ್ಟಿನಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. 120ಕ್ಕೂ ಹೆಚ್ಚು ಡೇಟಾಬೇಸ್‌ಗಳನ್ನು ಲಿಂಕ್ ಮಾಡಲಾಗಿದೆ. ಇನ್ನು ಕ್ಲೈಮ್ ಮಾಡುವುದು ಗರಿಷ್ಠ 3 ದಿನಗಳಿಗೆ ಮುಗಿದರೆ, ಶೇ. 95ರಷ್ಟು ಕ್ಲೈಮ್‌ಗಳು ಆಟೋಮ್ಯಾಟಿಕ್ ಆಗಲಿವೆ ಎಂದು ಮಾಹಿತಿ ನೀಡಿದ್ದಾರೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಸುಮಿತಾ ದಾವ್ರಾ. ಈಗಾಗಲೇ ಡಿಸೆಂಬರ್‌ನಿಂದ, 78 ಲಕ್ಷ ಸದಸ್ಯರು ಇದರ ಲಾಭ ಪಡೆದಿದ್ದಾರಂತೆ.