ಬೇಸಗೆ ಶುರುವಾಗಿದೆ. ಸದ್ಯಕ್ಕೆ ಮಧ್ಯಂತರ ಅವಧಿಯಲ್ಲಿದೆ. ಬಿಸಿಲು ತಡೆಯೋಕೆ ಆಗ್ತಿಲ್ಲ. ನೆತ್ತಿ ಸುಡುವ ಬಿಸಿಲಿನ ಮಧ್ಯೆ ಜನ ತಂಪು ಮಾಡಿಕೊಳ್ಳೋಕೆ ಎಳನೀರು, ಕೂಲ್ ಡ್ರಿಂಕ್ಸ್ ಮೊರೆ ಹೋಗ್ತಾರಷ್ಟೇ ಅಲ್ಲ, ಐಸ್ ಕ್ರೀಂನ್ನು ಕೂಡಾ ಚಪ್ಪರಿಸಿ ತಿಂತಾರೆ. . ಕೆಲವರು ಮನೆಯಲ್ಲೇ ತರಹೇವಾರಿ ಐಸ್‌ಕ್ರೀಂ ತಯಾರಿಸಿ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ (ಎಫ್‌ಡಿಎ) ಅಧಿಕಾರಿಗಳ ಸಂಶೋಧನೆ ಐಸ್ ಕ್ರೀಂ ಪ್ರಿಯರಿಗೆ ಶಾಕ್ ಕೊಟ್ಟಿದೆ.
ಐಸ್ ಕ್ರೀಂನಲ್ಲಿ ಡಿಟರ್ಜೆಂಟ್ ಪೌಡರ್..!
ಅಂಗಡಿಗಳಲ್ಲಿ ಮಾರಾಟ ಮಾಡುತ್ತಿರುವ ಐಸ್‌ಕ್ರೀಮ್‌ಗೆ ಡಿಟರ್ಜಂಟ್ ಪೌಡರ್ (ಮಾರ್ಜಕ ಪುಡಿ), ರಾಸಾಯನಿಕ ಮಿಶ್ರಣ ಮಾಡುತ್ತಿರುವುದು ಬಹಿರಂಗವಾಗಿದೆ. ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ (ಎಫ್‌ಡಿಎ) ಅಧಿಕಾರಿಗಳು ಇತ್ತೀಚೆಗೆ ಕರ್ನಾಟಕದ ನೂರಾರು ಪಾರ್ಲರ್‌ಗಳು, ಅಂಗಡಿಗಳ ಮೇಲೆ ದಾಳಿ ನಡೆಸಿದಾಗ ಈ ಸಂಗತಿ ಬಯಲಾಗಿದೆ. ಕರ್ನಾಟಕದ 220 ಐಸ್‌ಕ್ರೀಮ್ ಪಾರ್ಲರ್‌ಗಳು ಹಾಗೂ ಅಂಗಡಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಿದಾಗ 97 ಅಂಗಡಿಗಳಲ್ಲಿಐಸ್ ಕ್ರೀಮ್ʻನಲ್ಲಿ ಡಿಟರ್ಜೆಂಟ್ ಅಂಶ ಇರುವುದು ಪತ್ತೆಯಾಗಿದೆ. 97 ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ. ಕೆಲ ಅಂಗಡಿಗಳು ಡಿಟರ್ಜೆಂಟ್ ಪೌಡರ್ ಅನ್ನು ಐಸ್ ಕ್ರೀಮ್‌ಗಳಲ್ಲಿ ಬಣ್ಣ ಹೆಚ್ಚಿಸಲು ಹಾಗೂ ಫಾಸ್ಪರಿಕ್ ಆಮ್ಲವನ್ನು ಕೂಲ್ ಡ್ರಿಂಕ್‌ಗಳಲ್ಲಿ ಫಿಜ್ ಹೆಚ್ಚಿಸಲು ಬಳಸುತ್ತಿವೆ.
ಡಿಟರ್ಜೆಂಟ್ ಪೌಡರ್ ಅಂಶ ಬರುವುದು ಹೇಗೆ..?
ಐಸ್ ಕ್ರೀಂನಲ್ಲಿ ಸ್ವಲ್ಪ ಪ್ರಮಾಣದ ಡಿಟರ್ಜೆಂಟ್ ಬೆರೆಸಿದರೆ, ಐಸ್ ಕ್ರೀಂ ಕ್ರೀಮಿಯಾಗಿ ಇರುತ್ತದೆ. ನೊರೆ ಕಂಡಷ್ಟೂ ಗ್ರಾಹಕರಿಗೆ ಆಕರ್ಷಕವಾಗಿ ಕಾಣಿಸುತ್ತದೆ. ಅದಕ್ಕಾಗಿ ಅವರು ಡೈರೆಕ್ಟ್ ಆಗಿ ಡಿಟರ್ಜೆಂಟ್ ಪೌಡರ್ ಹಾಕೋದಿಲ್ಲ. ಮೊದಲು ಐಸ್ ಕ್ರೀಮಿನಲ್ಲಿ ಬಳಸುವ ಹಾಲಿಗೆ ಯೂರಿಯಾ ಅಥವಾ ರಸಗೊಬ್ಬರ ಮಿಶ್ರಿತ ಹಾಲು ಬಳಸ್ತಾರೆ. ನೈಸರ್ಗಿಕ ಸಕ್ಕರೆ ಬಳಸೋದಿಲ್ಲ. ಕೆಮಿಕಲ್ ಸಕ್ಕರೆ ಬಲಸ್ತಾರೆ. ಟೇಸ್ಟಿಂಗ್ ಪೌಡರ್ ಹಾಕ್ತಾರೆ. ನ್ಯಾಚುರಲ್ ಬಣ್ಣದ ಬದಲು, ಕೃತಕ ಬಣ್ಣ ಬಳಸ್ತಾರೆ.
ಕೆಮಿಕಲ್ ಐಸ್ ಕ್ರೀಂ ತಿಂದರೆ ಏನು ಅಪಾಯ..?
ಡಿಟರ್ಜಂಟ್‌ನಲ್ಲಿರುವ ಆಮ್ಲೀಯ, ರಾಸಾಯನಿಕ ಅಂಶಗಳು ಅನ್ನನಾಳ ಹಾಗೂ ಗಂಟಲಿಗೆ ಹಾನಿಯುಂಟು ಮಾಡಬಹುದು. ಉಸಿರಾಟದ ತೊಂದರೆ ಮಾತ್ರವಲ್ಲ, ಮೂತ್ರಪಿಂಡ ಹಾಗೂ ಯಕೃತ್ತಿಗೆ (ಲಿವರ್) ಹಾನಿ ಮಾಡಬಹುದು. ಕೊಳಚೆ ನೀರು ಮಿಶ್ರಿತ ತಂಪು ಪಾನೀಯಗಳನ್ನು ಸೇವಿಸುವುದರಿಂದ ವಾಕರಿಕೆ, ವಾಂತಿ, ಅತಿಸಾರ, ಅಜೀರ್ಣತೆ ಕಾಡಬಹುದು.
ಕೂಲ್ ಡ್ರಿಂಕ್ಸ್ʻನಲ್ಲಿ ಫಾಸ್ಪರಿಕ್ ಆಸಿಡ್..!
ಅಷ್ಟೇ ಅಲ್ಲ, ತಂಪು ಪಾನೀಯಗಳಲ್ಲಿಫಾಸ್ಫರಿಕ್ ಆ್ಯಸಿಡ್ ಪತ್ತೆಯಾಗಿದೆ. ಹಾಗಾಗಿ, 97 ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ. ಐಸ್‌ಕ್ರೀಮ್ ಹಾಗೂ ತಂಪು ಪಾನೀಯಗಳ ಸ್ಟೋರೇಜ್ ವ್ಯವಸ್ಥೆಯಲ್ಲೂ ಲೋಪಗಳು ಕಂಡುಬಂದಿವೆ. ಫಾಸ್ಫರಿಕ್ ಆ್ಯಸಿಡ್‌ನಿಂದಾಗಿ ಕಿಡ್ನಿ ಸ್ಟೋನ್, ಹಲ್ಲುಗಳಿಗೆ ಹಾನಿಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಆದರೆ ಗ್ರಾಹಕರಿಗೆ ಕಲಬೆರಕೆ ಐಸ್ ಕ್ರೀಂ ಯಾವುದು.. ಆರೋಗ್ಯಕರ ಐಸ್ ಕ್ರೀಂ ಯಾವುದು ಎಂದು ಪತ್ತೆ ಹಚ್ಚುವುದು ಅಷ್ಟು ಸುಲಭವಲ್ಲ. ಅದೇ ಅಪಾಯ.