ರಾಜಕೀಯ ಪಕ್ಷಗಳು ಗುದ್ದಾಡುವುದು ಮುದ್ದಾಡುವುದು ಎರಡೂ ಕಾಮನ್. ಕಾಲಕ್ಕೆ ತಕ್ಕಂತೆ ಅದು ಬದಲಾಗುತ್ತಲೇ ಇರುತ್ತದೆ. ಆದರೆ ಇದು ನ್ಯೂಸ್ ಚಾನೆಲ್ಲುಗಳಿಗೂ ಹಬ್ಬಿದೆ. ಕೆಲವು ಟಿವಿ ನ್ಯೂಸ್ ಚಾನೆಲ್ಲು (news channel) ಹಾಗೂ ಆಂಕರ್`ಗಳು (news anchor) ಪೂರ್ವಗ್ರಹ ಪೀಡಿತರಾಗಿ ವರದಿ ಮಾಡುತ್ತಿವೆ ಎನ್ನುವುದು ಆರೋಪ. ಆ ವಿಷಯದಲ್ಲಿ ಇನ್ನೊಂದು ಹಂತಕ್ಕೆ ಹೋಗಿದೆ ಇಂಡಿಯಾ (I.N.D.I.A.) ರಾಜಕೀಯ ಒಕ್ಕೂಟ.
I.N.D.I.A. ಮೈತ್ರಿಕೂಟವು ಅರ್ನಬ್ ಗೋಸ್ವಾಮಿ ಸೇರಿದಂತೆ ಒಟ್ಟು 14 ಸುದ್ದಿ ನಿರೂಪಕರ ಹೆಸರುಗಳನ್ನು ಪಟ್ಟಿ ಮಾಡಿದೆ.
ಅರ್ನಬ್ ಗೋಸ್ವಾಮಿ (Arnab goswamy) : ರಿಪಬ್ಲಿಕ್ ಟಿವಿ/ರಿಪಬ್ಲಿಕ್ ಭಾರತ್ (republic tv/republic bharath)
ನವಿಕಾ ಕುಮಾರ್ (navika kumar) : ಟೈಮ್ಸ್ ನೌ (Times now)
ಸುಶಾಂತ್ ಸಿನ್ಹಾ (sushanth sinha) : ಟೈಮ್ಸ್ ನೌ (Times now)
ಸುಧೀರ್ ಚೌಧುರಿ (Sudheer choudhari) : ಆಜ್ ತಕ್ (aaj thak)
ಚಿತ್ರ ತ್ರಿಪಾಠಿ (Chithra thripati) : ಆಜ್ ತಕ್ (aaj thak)
ಅಮನ್ ಚೋಪ್ರಾ (Aman chopra) : ನ್ಯೂಸ್ 18 (News 18)
ಅಮೀಶ್ ದೇವಗನ್ (Ameesh devagan) : ನ್ಯೂಸ್ 18 (News 18)
ಆನಂದ್ ನರಸಿಂಹನ್ (Anand narasimhan) : ನ್ಯೂಸ್ 18 (News 18)
ಅದಿತಿ ತ್ಯಾಗಿ (Adithi thyagi) : ಭಾರತ್ ಎಕ್ಸ್`ಪ್ರೆಸ್ (Bharath express)
ಗೌರವ್ ಸಾವಂತ್ (Gaurav Savanth) : ಇಂಡಿಯಾ ಟುಡೇ (India today)
ಶಿವ್ ಅರೂರ್ (Shiv aroor) : ಇಂಡಿಯಾ ಟುಡೇ (India today)
ರುಬಿಕಾ ಲಿಯಾಖತ್ (Rubika likhayath) : ಭಾರತ್ 24 (Bharath 24)
ಪ್ರಾಚಿ ಪರಾಶರ್ (Prachi parashar) : ಇಂಡಿಯಾ ಟಿವಿ (India TV)
ಅಶೋಕ್ ಶ್ರೀವಾಸ್ತವ (Ashok Shreevasthava) : ಡಿಡಿ ನ್ಯೂಸ್ (DD News)
ಇವರೆಲ್ಲರೂ ಹಿಂದಿ (Hindi News )ಹಾಗೂ ಇಂಗ್ಲಿಷ್ ಸುದ್ದಿ (English News channel) ವಾಹಿನಿಗಳನ್ನು ಪ್ರತಿನಿಧಿಸುತ್ತಿದ್ದಾರೆ. ಇವರಲ್ಲಿ ಕೆಲವು ಮಹಿಳಾ ನಿರೂಪಕರೂ (News anchors) ಇದ್ದಾರೆ ಎನ್ನುವುದು ಗಮನಾರ್ಹ.
ಬಿಜೆಪಿ ಪರ ಎಂದು ಗುರುತಿಸಿಕೊಂಡಿರುವ ಅಥವಾ ಪ್ರಚೋದನಾತ್ಮಕ ಮತ್ತು ಕೋಮು ಭಾವನೆ ಕೆರಳಿಸುವಂತೆ ಚರ್ಚಾ ಕಾರ್ಯಕ್ರಮ ನಡೆಸುವ ಆರೋಪದಡಿ ಈ ನಿರೂಪಕರನ್ನು ಬಹಿಷ್ಕರಿಸಲು I.N.D.I.A. ಬಣ ನಿರ್ಧರಿಸಿದೆ. ನೈಜ ಸಮಸ್ಯೆಗಳ ಕುರಿತಾದ ಗಮನವನ್ನು ಬೇರೆಡೆ ತಿರುಗಿಸುವ ಕೆಲಸವನ್ನು ಈ ನಿರೂಪಕರು ಮಾಡುತ್ತಿದ್ದಾರೆ ಎಂದು ದೂರಲಾಗಿದೆ. ಈ ಹಿಂದೆ ಕೂಡ ಕಾಂಗ್ರೆಸ್ ಮಾಧ್ಯಮಗಳಿಂದ ದೂರ ಉಳಿಯುವ ನಿರ್ಧಾರ ಮಾಡಿತ್ತು. 2019ರ ಚುನಾವಣೆ ಸಂದರ್ಭದಲ್ಲಿ ಅದು ತನ್ನ ವಕ್ತಾರರನ್ನು ಸುದ್ದಿವಾಹಿನಿಗಳ ಚರ್ಚೆಗೆ ಕಳುಹಿಸುವುದಿಲ್ಲ ಎಂದು ಹೇಳಿತ್ತು.
ಈ ಬಹಿಷ್ಕಾರಕ್ಕೆ ಪತ್ರಕರ್ತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಆಜ್`ತಕ್ ಆಂಕರ್ (ಬಹಿಷ್ಕಾರದ ಲಿಸ್ಟಿನಲ್ಲಿದ್ದಾರೆ) ಸುಧೀರ್ ಚೌಧರಿ ಅವರ ಬೂಟು ನೆಕ್ಕುವವರಾಗಲು ನಿರಾಕರಿಸಿದ್ದೆವು, ಹೀಗಾಗಿ ನಮ್ಮನ್ನು ಬಹಿಷ್ಕರಿಸಲಾಗುತ್ತಿದೆ. ಇದಕ್ಕೆ ಭಾರತೀಯ ಮಾಧ್ಯಮಗಳು ಯಾವ ಉತ್ತರ ನೀಡುತ್ತವೆ ಎನ್ನುವುದನ್ನು ನೋಡಬೇಕು ಎಂದು ಟ್ವೀಟ್ ಮಾಡಿದ್ದಾರೆ.
ನ್ಯಾಷನಲ್ ಯುನಿಯನ್ ಜರ್ನಲಿಸ್ಟ್ (ಎನ್‍ಯುಜೆ) ಇದು ಪ್ರಭಾಪ್ರಭುತ್ವ ವಿರೋಧಿ ಕೃತ್ಯ ಎಂದು ಖಂಡಿಸಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ಆಜ್`ತಕ್ ನ್ಯೂಸ್ ಚಾನೆಲ್ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಿದ ಪ್ರಕರಣದಲ್ಲಿ ಕೇಸ್ ದಾಖಲಿಸಿತ್ತು.
ಸದ್ಯಕ್ಕೆ ಈ ಲಿಸ್ಟಿನಲ್ಲಿ ಯಾವುದೇ ಪ್ರಾದೇಶಿಕ ಚಾನೆಲ್ ಆಥವಾ ಆಂಕರ್ಸ್ ಇಲ್ಲ. ಆದರೆ ಇದು ಕೊನೆಯಲ್ಲ, ಈ ಪಟ್ಟಿ ಇನ್ನೂ ಹೆಚ್ಚಾಗಲಿದೆ ಎಂದು ಸುಳಿವನ್ನು ಕೊಟ್ಟಿರುವ ಇಂಡಿಯಾ ಒಕ್ಕೂಟ, ಪತ್ರಕರ್ತರನ್ನೇ ಬಹಿಷ್ಕರಿಸುವ ಎಚ್ಚರಿಕೆ ಕೊಟ್ಟಿದೆ.