ಶನಿ ಒಲಿದರೆ ವರ. ಮುನಿದರೆ ಶಾಪ ಎನ್ನುವುದು ಜನರ ನಂಬಿಕೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರವೂ ಇದು ನಿಜ. ಹೀಗಿರುವಾಗ ಶನಿ ಪ್ರಭಾವದಿಂದಾಗಿಯೇ 5 ರಾಶಿಗಳವರಿಗೆ ಲಕ್ಷ್ಮೀ ಕಟಾಕ್ಷ ಒಲಿಯುತ್ತಿದೆ ಎನ್ನುವುದು ಶುಭ ಸುದ್ದಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2024 ರ ಡಿಸೆಂಬರ್ ವಿಶೇಷ ಎಂದರೆ ಡಿಸೆಂಬರ್ ಕೊನೆಯಲ್ಲಿ ಅಂದರೆ ಡಿಸೆಂಬರ್ 28 ರ ರಾತ್ರಿ 11:48ಕ್ಕೆ ಶುಕ್ರ ಗ್ರಹವು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಕುಂಭ ರಾಶಿಯಲ್ಲಿ ಈಗಾಗಲೇ ಶನಿ ತನ್ನ ಸಂಚಾರ ನಡೆಸುತ್ತಿದ್ದಾನೆ. ನವೆಂಬರ್ 15 ರಂದು ಶನಿಯು ನೇರವಾಗಿ ಕುಂಭ ರಾಶಿಯಲ್ಲಿ ಚಲಿಸುತ್ತಾನೆ. ಶುಕ್ರವಾರ, ನವೆಂಬರ್ 15 ರಂದು, ಕುಂಭ ರಾಶಿಯಲ್ಲಿ ಸಂಜೆ 5:09 ಕ್ಕೆ ನೇರ ಸಂಚಾರ ಇರುತ್ತದೆ. ಇಂತಾದ್ದೊಂದು ಅಪರೂಪದ ಶುಭ ಕಾಲ ಕಾರ್ತಿಕ ಹುಣ್ಣಿಮೆಯಿಂದ ಶುರುವಾಗಲಿದೆ. ಹೀಗಾಗಿ 5 ರಾಶಿಗಳವರಿಗೆ ಶುಭ ಯೋಗ.. ಲಕ್ಷ್ಮೀ ಯೋಗ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರ ಮತ್ತು ಶನಿ ಎರಡು ಬಹಳ ಮಹತ್ವಪೂರ್ಣವಾದ ಗ್ರಹಗಳಾಗಿವೆ. ಶನಿಯನ್ನು ನ್ಯಾಯ ದೇವ ಎಂದು ಕರೆದರೆ, ಶುಕ್ರನನ್ನು ಸುಖ ಮತ್ತು ವೈಭವದ ಸಂಕೇತ ಎಂದು ಹೇಳಲಾಗುತ್ತದೆ. ಈ ಎರಡು ಗ್ರಹಗಳು ಒಟ್ಟಿಗೆ ಕುಂಭ ರಾಶಿಯಲ್ಲಿ ಸಂಯೋಗವಾಗುವುದರ, ಪ್ರಭಾವವನ್ನು 12 ರಾಶಿಗಳ ಮೇಲೆ ನೋಡಬಹುದಾಗಿದೆ. ಶನಿಯನ್ನು ಕರ್ಮಫಲದಾತ ಮತ್ತು ನ್ಯಾಯದೇವ ಎಂದು ಕರೆದರೆ, ಶುಕ್ರನನ್ನು ಭೋಗ, ವಿಲಾಸ, ಸಂತೋಷ, ಸಮೃದ್ಧಯ ಸಂಕೇತ ಎಂದು ಹೇಳಲಾಗುತ್ತದೆ.
ಮೇಷ ರಾಶಿ :
ಶನಿ ಪ್ರತ್ಯಕ್ಷವಾಗಿರುವುದು ಲಾಭದಾಯಕ. ವ್ಯಾಪಾರದಲ್ಲಿ ಪ್ರಗತಿ ಕಾಣುತ್ತದೆ. ಕೆಲಸದ ಸ್ಥಳದಲ್ಲಿ ನಡೆಯುತ್ತಿರುವ ಒತ್ತಡವನ್ನು ತೊಡೆದು ಹಾಕಲು ಸಾಧ್ಯವಾಗುತ್ತದೆ. ಕುಟುಂಬ ಸದಸ್ಯರ ಜೊತೆ ಸಂತೋಷದ ವಾತಾವರಣ ನಿರ್ಮಾಣವಾಗುತ್ತದೆ.
ವೃಷಭ ರಾಶಿ :
ಶನಿಯ ನೇರ ಸಂಚಾರವು ಪ್ರಗತಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ. ಮುಂಬರುವ ದಿನಗಳು ನಿಮಗೆ ಲಾಭದಾಯಕವಾಗಿರುತ್ತದೆ. ನಿಮ್ಮ ಆಸೆ ಈಡೇರುತ್ತದೆ ಮತ್ತು ಜನರು ನಿಮ್ಮೊಂದಿಗೆ ಹ್ಯಾಂಗ್ ಔಟ್ ಮಾಡಲು ಇಷ್ಟಪಡುತ್ತಾರೆ. ಉದ್ಯೋಗಸ್ಥರಿಗೆ ಇದು ಉತ್ತಮ ಸಮಯವಾಗಿರುತ್ತದೆ. ಈ ರಾಶಿಗೆ ಸೇರಿದ ಜನರು ತಮ್ಮ ಗುರಿಯನ್ನು ತಲುಪಲು ಹೆಚ್ಚಿನ ಕಠಿಣ ಪರಿಶ್ರಮ ಪಡಲು ತಯಾರಿರುವರು. ವೃಷಭ ರಾಶಿಗೆ ಸೇರಿದ ವ್ಯಾಪಾರಿಗಳು ಈ ತಿಂಗಳಿನಲ್ಲಿ ಹೊಸ ವ್ಯಾಪಾರಕ್ಕಾಗಿ ಉತ್ತಮ ಅವಕಾಶಗಳನ್ನು ಪಡೆಯುವರು. ಈ ರಾಶಿಯವರ ಆದಾಯವನ್ನು ಹೆಚ್ಚಿಸಲು ಇದು ಉತ್ತಮ ಸಮಯವಾಗಿರಲಿದೆ.
ಕನ್ಯಾ ರಾಶಿ :
ಶನಿ ಪ್ರತ್ಯಕ್ಷವಾಗಿರುವುದು ಉತ್ತಮ ಯೋಗ ಎನ್ನಬಹುದು. ನಿಮ್ಮ ಸಂಗಾತಿಯೊಂದಿಗೆ ವಿಹಾರಕ್ಕೆ ಪ್ಲಾನ್ ಮಾಡಬಹುದು. ಆರ್ಥಿಕ ಪರಿಸ್ಥಿತಿಯೂ ಸುಧಾರಿಸಲಿದೆ. ಸಾಮಾಜಿಕವಾಗಿ ಹೊಸ ಗೌರವದ ಗುರುತು ಪಡೆಯುತ್ತೀರಿ. ಪ್ರೀತಿಯ ವಿಷಯದಲ್ಲಿ ಸಮಯ ಚೆನ್ನಾಗಿ ಹೋಗುತ್ತಿದೆ. ಕನ್ಯಾ ರಾಶಿಗೆ ಸೇರಿದ ಜನರಿಗೆ ಈ ಅವಧಿಯಲ್ಲಿ ತಮ್ಮ ಹಳೆಯ ಹಣವನ್ನು ವಾಪಸ್ಸು ಪಡೆಯುವ ಪ್ರಬಲವಾದ ಸಂಭವವಿದೆ.
ತುಲಾ ರಾಶಿ :
ಶನಿಯು ನೇರವಾಗಿ ಕುಂಭ ರಾಶಿಯಲ್ಲಿ ಸಂಚರಿಸುತ್ತದ್ದಾನೆ. ಇದಕ್ಕಿಂದ ದೊಡ್ಡ ಲಾಭದಾಯಕ ಸಮಯ ಇನ್ನೊಂದಿರುವುದಿಲ್ಲ. ವ್ಯವಹಾರದಲ್ಲಿ ಪ್ರಗತಿ, ಅಧ್ಯಯನದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಅಲ್ಲದೆ ಪೋಷಕರೊಂದಿಗೆ ಸಂಬಂಧ ಹದಗೆಟ್ಟಿದ್ದರೆ, ಅದೂ ಸುಧಾರಿಸುತ್ತದೆ. ಮೊದಲಿಗಿಂತ ಉತ್ತಮ ಚಿಂತನೆಯೊಂದಿಗೆ ಜೀವನದಲ್ಲಿ ಮುನ್ನಡೆಯಲಿದ್ದೀರಿ.
ಧನು ರಾಶಿ :
ಜೀವನದಲ್ಲಿ ಹೊಸ ಬದಲಾವಣೆಗಳಾಗಬಹುದು. ಪರಸ್ಪರ ಪ್ರೀತಿ ಹೆಚ್ಚಾಗುತ್ತದೆ. ಶನಿಯು ನೇರವಾಗಿರುವುದರಿಂದ ಆರ್ಥಿಕ ಬಲವನ್ನು ಪಡೆಯುತ್ತೀರಿ. ನೀವು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಮುಂಬರುವ ದಿನಗಳು ನಿಮಗೆ ಲಾಭದಾಯಕವಾಗಿರುತ್ತವೆ. ನೀವು ಕೆಲವು ಹೊಸ ಕೆಲಸವನ್ನು ಪ್ರಾರಂಭಿಸಲು ಯೋಚಿಸಬಹುದು.