ಕೆಲಸ ಸಿಗುತ್ತಿಲ್ಲ ಎನ್ನುವವರಿಗೆ ಕೆಲಸಗಳಿಗೆ ಬರವೇನೂ ಇಲ್ಲ. ಆದರೆ ಅರ್ಹತೆ ಇರಬೇಕು. ಒಂದೊಂದು ಹುದ್ದೆ, ಪದವಿಗೂ ಒಂದೊಂದು ಅರ್ಹತೆ ಇರುತ್ತದೆ. ಈಗ ನೋಡಿ, ಪದವೀಧರರಿಗೆ, ಅದರಲ್ಲೂ ಒಂದ್ ಹತ್ತು ವರ್ಷ ಅನುಭವ ಇದ್ದವರಿಗೆ ಸರ್ಕಾರಿ ಕೆಲಸದ ಅವಕಾಶ ಇದೆ. ನಿಮ್ಮದು ಡಿಗ್ರಿ ಅಥವಾ ಮಾಸ್ಟರ್ಸ್ ಆಗಿದ್ಯಾ? ಹಲವು ವರ್ಷಗಳಿಂದ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದೀರಾ! ಕನಿಷ್ಠ 1-10 ವರ್ಷ ಅನುಭವ ಇದ್ಯಾ? ಅದರಲ್ಲೂ ಉದ್ಯೋಗ ಬದಲಾವಣೆ ಮಾಡಲು ಕಾಯುತ್ತಿದ್ದೀರಾ.. ಬನ್ನಿ, ಅಪ್ಲಿಕೇಷನ್ ಹಾಕಿ ಎಂದು ಕರೆಯುತ್ತಿದೆ ಸೆಂಟ್ರಲ್ ಗವರ್ನಮೆಂಟ್.
ದೆಹಲಿಯಲ್ಲಿರೋ ಭಾರತ ಸರ್ಕಾರದ ವೈದ್ಯಕೀಯ ಅಧೀಕ್ಷಕರ ಕಚೇರಿ, ವಿಎಂಎಂಸಿ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಖಾಲಿ ಇರೋ ಹುದ್ದೆಗಳ ಭರ್ತಿ ಮಾಡಲಾಗುತ್ತಿದೆ. ಈಗಾಗಲೇ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಸಂಬಳ ಬರೋಬ್ಬರಿ 56100 ರಿಂದ 177500 ರೂ. ಇರಲಿದೆ. ಅರ್ಹ ಮತ್ತು ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬಹುದು.
ಸಹಾಯಕ ನಿರ್ದೇಶಕರು (ಒಎಲ್) ಕೇವಲ ಒಂದು ಹುದ್ದೆ ಮಾತ್ರ ಖಾಲಿ ಇದ್ದು, ಸಂಬಳ 56100 ರಿಂದ 177500 ರೂ. ಇರಲಿದೆ. ಅಗತ್ಯ ಅರ್ಹತೆ, ವಯೋಮಿತಿ, ಅರ್ಜಿ ನಮೂನೆ ಸೇರಿದಂತೆ ಇತ್ಯಾದಿ ಮಾಹಿತಿಗಾಗಿ ಸಫ್ದರ್ ಜಂಗ್ ಆಸ್ಪತ್ರೆಯ ಜಾಲತಾಣ www.vmmc-sjh.nic.in)/ DGHS -https://dghs.gov.in ಗೆ ಭೇಟಿ ನೀಡಲು ಸೂಚಿಸಲಾಗಿದೆ.
ಇನ್ನು, ವೆಬ್ಸೈಟಿನಲ್ಲಿ ನೀಡಿದ ಸೂಚನೆಯಂತೆ ಎಲ್ಲ ಪೂರಕ ದಾಖಲೆಗಳೊಂದಿಗೆ ನಿಗದಿತ ಅರ್ಜಿ ನಮೂನೆ ಭರ್ತಿ ಮಾಡಿ ಸಲ್ಲಿಸಬೇಕು. ಜಾಹೀರಾತು ನೀಡಿದ 30 ದಿನಗಳ ಒಳಗೆ ಅರ್ಜಿ ಸಲ್ಲಿಸಬೇಕು. ವೆಬ್ಸೈಟಿನಲ್ಲಿ ನೀಡಲಾದ ವಿಳಾಸಕ್ಕೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಯಾವಾಗ ಬೇಕಾದ್ರೂ ಭೇಟಿ ನೀಡಬಹುದು. ಅಷ್ಟೇ ಅಲ್ಲ ಶನಿವಾರ ಮಾತ್ರ ಅರ್ಧ ದಿನ ಇದ್ದು, ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅರ್ಜಿ ಸ್ವೀಕರಿಸಲಾಗುವುದು ಎಂದು ತಿಳಿದು ಬಂದಿದೆ.
ಅರ್ಜಿ ಸಲ್ಲಿಸಿದ ಬಳಿಕ ಸಂದರ್ಶನ ಮಾಡಿ ಮೂಲ ದಾಖಲೆಗಳ ಪರಿಶೀಲಿಸಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಹೇಳಿದ ರೀತಿಯಲ್ಲಿ ಸಂಬಳ ನೀಡಲಾಗುತ್ತದೆ.
ರೈಲ್ವೇ ಇಲಾಖೆಯಲ್ಲಿ 25 ಸಾವಿರಕ್ಕೂ ಹೆಚ್ಚು ಉದ್ಯೋಗ : ಇವರು ಮಾತ್ರ ಅರ್ಜಿ ಹಾಕಬಹುದು..!
ಭಾರತೀಯ ರೈಲ್ವೇಯಲ್ಲಿ ಸಿಬ್ಬಂದಿ ಕೊರತೆಯಿಂದ ಉಂಟಾಗುವ ಕಾರ್ಯಾಚರಣೆಯ ಸವಾಲುಗಳ ಬಗ್ಗೆ ಹೆಚ್ಚುತ್ತಿರುವ ಸಮಸ್ಯೆಗಳ ಪ್ರತಿಕ್ರಿಯೆಯಾಗಿ ಈ ‘ಮರು ನೇಮಕಾತಿ ಯೋಜನೆ’ ಜಾರಿಗೆ ಬಂದಿದೆ. ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದವರು ಈ ಉದ್ಯೋಗಗಳಿಗೆ ಅಪ್ಲೇ ಮಾಡಬಹುದು. ಅಲ್ಲದೇ ಸರ್ಕಾರ ಒಳ್ಳೆಯ ಸಂಬಳ ಕೂಡ ಕೊಡುತ್ತಿದೆ. ನಿವೃತ್ತ ಅಧಿಕಾರಿ ಈ ಹಿಂದೆ ಹುದ್ದೆ ಮಾಡುವಾಗ ನೀಡಿದಂತ ಪರ್ಫಾಮನ್ಸ್ ಆಧಾರ ಮೇಲೆ ನೀಡುತ್ತಾರೆ.
ವಾಯುವ್ಯ ರೈಲ್ವೆ ಇಲಾಖೆಗಳಲ್ಲಿ ಮಾತ್ರ 10,000 ಖಾಲಿ ಹುದ್ದೆಗಳು ಇವೆ. ದೇಶದ ವಿವಿಧ ರೈಲ್ವೆ ಝೋನ್ಗಳಲ್ಲಿ ಉದ್ಯೋಗ ಖಾಲಿ ಇವೆ. ಹೀಗಾಗಿ ಈ ಪ್ರದೇಶಗಳಲ್ಲಿ ರೈಲ್ವೆ ಅಪಘಾತಗಳು ಸಂಭವಿಸುತ್ತಿವೆ. ಇವುಗಳನ್ನು ತಡೆಯಬೇಕು ಎಂದರೆ ಉದ್ಯೋಗಗಳ ನೇಮಕಾತಿ ಅವಶ್ಯಕವಾಗಿದೆ. ಇದರಿಂದ ನಿವೃತ್ತರನ್ನ ಮರು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅನುಭವಿ ಸಿಬ್ಬಂದಿಯನ್ನು ಮರಳಿ ಕರೆತರುವ ಮೂಲಕ, ರೈಲ್ವೆ ಮಂಡಳಿ ಈ ಸವಾಲುಗಳನ್ನು ತಗ್ಗಿಸಲು ಮತ್ತು ಸುಗಮ ಕಾರ್ಯಾಚರಣೆ ಖಚಿತಪಡಿಸಿಕೊಳ್ಳುವ ಗುರಿ ಹೊಂದಿದೆ.
ಯಾವ್ಯಾವ ಉದ್ಯೋಗಗಳು
ಮೇಲ್ವಿಚಾರಕರು
ಟ್ರ್ಯಾಕ್ ಮೆನ್
ಒಟ್ಟು ಉದ್ಯೋಗಗಳು ಎಷ್ಟು?
ದೇಶದ್ಯಾಂತ ಒಟ್ಟು 25,000 ಹುದ್ದೆಗಳು
ಎಷ್ಟು ವರ್ಷಗಳವರೆಗೆ ನೇಮಕಾತಿ ಮಾಡಲಾಗುತ್ತದೆ?
ನಿವೃತ್ತರನ್ನ ಮತ್ತೆ 2 ವರ್ಷಗಳವರೆಗೆ ನೇಮಕ
ಎಷ್ಟು ವರ್ಷದ ಒಳಗಿನ ನಿವೃತ್ತರಿಗೆ ಈ ಉದ್ಯೋಗ ನೀಡುತ್ತಾರೆ?
65 ವರ್ಷದ ಒಳಗಿನವರಿಗೆ
ಯಾರು ನೇಮಕ ಮಾಡಿಕೊಳ್ಳುತ್ತಾರೆ?
ದೇಶದ್ಯಾಂತ ಇರುವ ರೈಲ್ವೆ ಇಲಾಖೆಯಲ್ಲಿನ ಮ್ಯಾನೇಜರ್ಗಳಿಗೆ ಈ ಅಧಿಕಾರ ಇದೆ.
ಈ ಉದ್ಯೋಗ ಪಡೆಯಲು ಮಾಜಿ ಉದ್ಯೋಗಿಗಳು ತಮ್ಮ ಕೊನೆಯ 5 ವರ್ಷಗಳ ಸೇವೆ ಮತ್ತು ವೈದ್ಯಕೀಯ ಫಿಟ್ನೆಸ್ನಿಂದ ಉತ್ತಮ ಕಾರ್ಯಕ್ಷಮತೆಯ ದಾಖಲೆ ಸೇರಿದಂತೆ ಪ್ರಮುಖ ಮಾನದಂಡಗಳನ್ನು ಪೂರೈಸಬೇಕು. ಅಭ್ಯರ್ಥಿಗಳ ವಿರುದ್ಧ ಯಾವುದೇ ಪ್ರಕರಣ ಬಾಕಿ ಇರಬಾರದು.