ಒಂದು ಕಡೆ ವಿದ್ಯುತ್ ದರ ಏರಿಕೆ, ಮತ್ತೊಂದು ಕಡೆ ಗೃಹಜ್ಯೋತಿ ಬಿಲ್ನ್ನು ಜನರೇ ಕಟ್ಟಬೇಕು. ಇಂತಹ ಡಬಲ್ ಶಾಕ್ ಕೊಡೋಕೆ ರೆಡಿಯಾಗಿದೆ ಕೆಇಆರ್ಸಿ. ಹಾಗಾದರೆ.. ಗೃಹಜ್ಯೋತಿ ಬಳಕೆದಾರರಿಗೆ ಬಿಲ್ ಶಾಕ್ ಗ್ಯಾರಂಟಿನಾ..? ಅನುಮಾವನೇ ಇಲ್ಲ. ಆದರೆ ದರ ಏರಿಕೆಯಂತೂ ಶತಃ ಸಿದ್ಧ.
ಗೃಹಜ್ಯೋತಿ ಬಳಕೆದಾರರಿಗೆ ಒಟ್ಟಾರೆ ತ್ರಿಬಲ್ ಶಾಕ್ ಕಾದಿದೆ. ಒಮ್ಮೆಗೇ ಮೂರು ಶಾಕ್ ಕೊಡಲು ಮುಂದಾಗಿರುವ ಕೆಇಆರ್ಸಿ ಅಂದರೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದಿಂದ ಸರ್ಕಾರಕ್ಕೆ ಮೂರು ಮನವಿ ಸಲ್ಲಿಸಿದೆ.
ಮವನಿ ನಂ.1 : ವಿದ್ಯುತ್ ಯುನಿಟ್ ದರ ಹೆಚ್ಚಳ ಮಾಡಿ ಎನ್ನುವುದು.
ಮನವಿ ನಂ.2 : ಜನರಿಂದಲೇ ಗೃಹಜ್ಯೋತಿ ಬಿಲ್ ವಸೂಲಿಗೆ ಅವಕಾಶ ಕೋರಿರುವುದು.
ಮನವಿ ನಂ.3 : ಜನರಿಂದ ಸಂಗ್ರಹ ಮಾಡಬಾರದು ಎಂದರೆ ಅಡ್ವಾನ್ಸ್ ಸಬ್ಸಿಡಿ ಕೊಡಿ ಎನ್ನುವುದು.
ಇನ್ನು ಇದರ ಪ್ರಕಾರ ವಿದ್ಯುತ್ ದರ ಕನಿಷ್ಠ 37 ಪೈಸೆ, ಗರಿಷ್ಠ 1.32 ರೂ.ಗೆ ಹೆಚ್ಚಿಸಲು ಕೆಇಆರ್ಸಿ ಮನವಿ ಮಾಡಿದೆ. ಎಲ್ಲ ಎಸ್ಕಾಂಗಳ ಮನವಿಗಳ ವಿಚಾರಣೆ ಮುಗಿದಿದ್ದು, ಫೆ.27ರಂದು ಅಭಿಪ್ರಾಯ ಸಂಗ್ರಹಣೆ ಮುಕ್ತಾಯವಾಗಲಿದೆ. ಏ.1ರಿಂದ ಕೆಇಆರ್ಸಿ ಸಲ್ಲಿಸಿರುವ ನೂತನ ದರ ಪ್ರಸ್ತಾವನೆ ಜಾರಿ ಸಾಧ್ಯತೆ ಇದೆ.
ಗೃಹಜ್ಯೋತಿ ಸಬ್ಸಿಡಿ ಹಣವನ್ನು ಅಡ್ವಾನ್ಸ್ ಆಗಿ ಪಾವತಿಸಲು ಸರ್ಕಾರಕ್ಕೆ ಮನವಿ ಮಾಡಿರುವ ಕೆಇಆರ್ಸಿ, ಮುಂಗಡವಾಗಿ ಹಣ ಕೊಡಲು ಆಗದಿದ್ದರೆ, ಜನರಿಂದ ವಸೂಲಿ ಮಾಡಲು ಅವಕಾಶ ಕೊಡಿ ಎಂದು ಕೇಳಿಕೊಂಡಿದೆ. ರಾಜ್ಯ ಸರ್ಕಾರಕ್ಕೆ ಕೆಇಆರ್ಸಿ ಮೂಲಕ ವಿದ್ಯುತ್ ನಿಗಮಗಳ ಒಕ್ಕೊರಲಿನ ಮನವಿ ಮಾಡಿವೆ. ಕಾರಣ ಇಷ್ಟೇ, 3-4 ತಿಂಗಳು ಬಾಕಿ ಉಳಿಸಿಕೊಂಡೇ, ಸರ್ಕಾರ ಗೃಹಜ್ಯೋತಿ ಹಣ ಪಾವತಿಸುತ್ತಿದೆ. ಅದರ ಬದಲು ಫಲಾನುಭವಿಗಳು ಬಿಲ್ ಕಟ್ಟಿ, ಸರ್ಕಾರದಿಂದ ರೀ-ಫಂಡ್ ಮಾಡಿಸಿಕೊಳ್ಳಲಿ ಎನ್ನುವುದು ಕೆಇಆರ್ಸಿ ವಾದ. ಹೀಗೇನಾದರೂ ಆದರೆ ಗೃಹಜ್ಯೋತಿ ಬಳಕೆದಾರರಿಗೆ ಮತ್ತು ವಿದ್ಯುತ್ ಬಳಕೆದಾರರಿಗೆ ಶಾಕ್ ಗ್ಯಾರಂಟಿ ಫಿಕ್ಸ್.
ಬೆಸ್ಕಾಂ ಸೇರಿ ರಾಜ್ಯದ ವಿವಿಧ ಎಸ್ಕಾಂಗಳು ಮುಂದಿನ ಮೂರು ವರ್ಷಗಳ ಅವಧಿಯ ವಿದ್ಯುತ್ ದರ ಹೆಚ್ಚಳವನ್ನು ಒಂದೇ ಬಾರಿಗೆ ಪ್ರಕಟಿಸುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್ಸಿ) ಪ್ರಸ್ತಾವನೆ ಸಲ್ಲಿಸಿದ್ದು, ಪ್ರತಿ ಯುನಿಟ್ಗೆ 37 ಪೈಸೆಯಿಂದ ಬರೋಬ್ಬರಿ 1.32 ರು.ವರೆಗೆ ಹೆಚ್ಚಳಕ್ಕೆ ಮನವಿ ಮಾಡಿವೆ. ವಿದ್ಯುತ್ ಉತ್ಪಾದನೆ, ಖರೀದಿ, ಪ್ರಸರಣ ವೆಚ್ಚ ಹೆಚ್ಚಾಗುತ್ತಿದೆ. ಹೀಗಾಗಿ ಅನಿವಾರ್ಯವಾಗಿ ದರ ಹೆಚ್ಚಳ ಮಾಡಬೇಕು ಎಂದು ಎಸ್ಕಾಂಗಳು ಮನವಿ ಮಾಡಿದ್ದು, ಮುಂದಿನ ಮೂರು ವರ್ಷಗಳಿಗೆ ಅನ್ವಯವಾಗುವಂತೆ ದರ ಹೆಚ್ಚಳಕ್ಕೆ ಮೊರೆ ಇಟ್ಟಿವೆ. ಈಗ 2027-28ನೇ ಸಾಲಿನವರೆಗೂ ದರ ಹೆಚ್ಚಳ ಮಾಡಿದರೂ ಮುಂದಿನ ವರ್ಷಗಳಲ್ಲೂ ನಿರ್ವಹಣಾ ವೆಚ್ಚ ಹೆಚ್ಚಳ ಹಾಗೂ ಇಂಧನ ನಿರ್ವಹಣ ವೆಚ್ಚದ ಅಡಿ ಮತ್ತೆ ದರ ಹೆಚ್ಚಳ ಮಾಡಬಹುದು. ಆಗ ಎರಡೆರಡು ಬಾರಿ ದರ ಏರಿಕೆ ಪೆಟ್ಟು ಗ್ರಾಹಕರಿಗೆ ತಗುಲಲಿದೆ.
ದರ ಏರಿಕೆಯ ಜೊತೆಗೆ ರಾಜ್ಯ ಸರ್ಕಾರ ‘ಗೃಹ ಜ್ಯೋತಿ’ಸಬ್ಸಿಡಿ ಹಣ ಮುಂಗಡವಾಗಿ ಪಾವತಿಸದಿದ್ದರೆ ಫಲಾನುಭವಿ ವಿದ್ಯುತ್ ಬಳಕೆದಾರರಿಂದಲೇ ಎಸ್ಕಾಂಗಳು ಸಂಗ್ರಹಿಸಬಹುದು ಎಂಬ ಆದೇಶ ಮಾಡಲಿದೆಯೇ ಎಂಬ ಆತಂಕ ಶುರುವಾಗಿದೆ.
ಕೆಇಆರ್ಸಿ (ಸಬ್ಸಿಡಿ ಪಾವತಿ) ನಿಯಮಗಳು-2008ರ ನಿಯಮ 6.1 ರ ಅಡಿ ಬಳಕೆ ಮಾಡಿರುವ ಗ್ರಾಹಕರಿಂದ ಒತ್ತಾಯದಿಂದ ಸಂಗ್ರಹಿಸಲು ಅವಕಾಶ ನೀಡಬೇಕು’ ಎಂದು ಎಸ್ಕಾಂಗಳು ಮನವಿ ಸಲ್ಲಿಸಿವೆ.ಈ ಮನವಿಯನ್ನು ಕೆಇಆರ್ಸಿ ಪುರಸ್ಕರಿಸುವ ಸಾಧ್ಯತೆ ಕಡಿಮೆ. ಒಂದೊಮ್ಮೆ ಪುರಸ್ಕರಿಸಿದರೆ ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಲಾಭ ಪಡೆಯುತ್ತಿರುವ 1.70 ಕೋಟಿ ಗ್ರಾಹಕರಿಗೆ ಹೊಸ ಶಾಕ್ ಕಾದಿದೆ.