ಗೃಹ ಲಕ್ಷ್ಮಿ ಹಣ ಈಗಲ್ಲ, ಯುಗಾದಿ ಕಳೆದ ಮೇಲೆಯೇ ಬರುತ್ತದೆ. ಮಾರ್ಚ್ 31ರ ನಂತರವೇ ಗೃಹ ಲಕ್ಷ್ಮಿ ಹಣ ಒಟ್ಟಿಗೇ ಬರುತ್ತದೆ ಎಂದು ಹೇಳಿದ್ದಾರೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್. ಅಂದರೆ ಇನ್ನು ಯುಗಾದಿ ನಂತರ.. ಅಂದರೆ ಏಪ್ರಿಲ್ ತಿಂಗಳು.. ಏಕೆ ಎಂದು ಕಾರಣ ಹುಡುಕುವ ಪ್ರಯತ್ನ ಆಗಿದೆ.
ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಕಾಯುತ್ತಿರುವವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೊಟ್ಟಿರುವ ಗುಡ್ ನ್ಯೂಸ್ ಇದು. ಗೃಹಲಕ್ಷ್ಮಿ ಯೋಜನೆಯ ಎರಡು ಕಂತಿನ ಹಣ ಬಾಕಿ ಉಳಿದಿದ್ದು. ಈ ಬಾಕಿ ಮೊತ್ತ ಹಣ ಬಿಡುಗಡೆಯಾಗಿ ಮಹಿಳೆಯರು ಕಾಯುತ್ತಿದ್ದಾರೆ. ಪ್ರತಿ ತಿಂಗಳೂ ಸಹ ಗೃಹಲಕ್ಷ್ಮಿ ಹಣ ಸಕಾಲದಲ್ಲಿ ಬಿಡುಗಡೆ ಆಗುತ್ತಿಲ್ಲ. ಇನ್ನೂ ಇಲ್ಲಿಯ ವರೆಗೆ 2 ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆಯಾಗಿಲ್ಲ. ಇದೀಗ ಈ ಎರಡು ಕಂತಿನ ಹಣ ಬಿಡುಗಡೆ ಮಾಡುವ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ ನೀಡಿದ್ದ ಆಶ್ವಾಸನೆಯಂತೆ ಪಂಚ ಗ್ಯಾರಂಟಿಗಳಾದ, ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ, ಗೃಹಜ್ಯೋತಿ ಹಾಗೂ ಶಕ್ತಿ ಯೋಜನೆಗಳನ್ನು ಜಾರಿಗೆ ತಂದಿತ್ತು. ಆ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದೇವೆ ಎಂದು ಹೇಳಿಕೊಂಡಿತ್ತು. ಇನ್ನು ಇದೇ ಪಂಚ ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ಹಲವರು ಹೇಳುತ್ತಿದ್ದರು.
ಇನ್ನು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಆಕ್ಸಿಡೆಂಟ್ ಆಗಿದ್ದಾಗ..ತಾವು ಆಸ್ಪತ್ರೆಯಲ್ಲಿದ್ದ ಕಾರಣ ಗೃಹ ಲಕ್ಷ್ಮಿ ಹಣ ಬಿಡುಗಡೆಯಾಗಲಿಲ್ಲ ಎಂದು ಹೇಳಿ ಅಪಹಾಸ್ಯಕ್ಕೂ ಗುರಿಯಾಗಿದ್ದರು.
ಗೃಹಲಕ್ಷ್ಮಿ ಹಣ ಬಿಡುಗಡೆ ಇಲ್ಲ ಏಕೆ..?
ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಹಣಕ್ಕೆ ಅನುದಾನವನ್ನೇನೋ ಕೊಟ್ಟಿದೆ. ಆದರೆ ಅದು ಬಜೆಟ್ಟನ್ನೂ ಮೀರಿದೆ. ಅಂದರೆ ಗೃಹಲಕ್ಷ್ಮಿಗಾಗಿ ಎತ್ತಿಟ್ಟಿದ್ದ ಹಣಕ್ಕಿಂತ ಹೆಚ್ಚು ಖರ್ಚಾಗಿದೆ. ಹೀಗಾಗಿ ಅದನ್ನು ಮುಂದಿನ ಕಂತಿನಲ್ಲಿ ಹೊಂದಿಸಬೇಕು. ಅಂದರೆ ಮುಂದಿನ ಬಜೆಟ್ಟಿನಲ್ಲಿ ಹೊಂದಿಸುವ ಕೆಲಸಕ್ಕಾಗಿಯೇ ಗೃಹ ಲಕ್ಷ್ಮಿ ಹಣವನ್ನು ಏಪ್ರಿಲ್ ನಂತರ ನೀಡಲಾಗುತ್ತದೆ. ಮಾರ್ಚ್ ತಿಂಗಳ ಅಂತ್ಯಕ್ಕೆ ಈ ವರ್ಷದ ಲೆಕ್ಕಾಚಾರ ಮುಗಿಯಲಿದೆ. ಏಪ್ರಿಲ್ ತಿಂಗಳಲ್ಲಿ ಹಾಕಿದರೆ ಅದು ಮುಂದಿನ ವರ್ಷದ ಬಜೆಟ್ ಲೆಕ್ಕವಾಗುತ್ತದೆ. ವರ್ಷದ ಕೊನೆಯಲ್ಲಿ ಏನೋ ಒಂದು ಮಾಡಿದರಾಯಿತು ಎಂಬ ಕಾರಣಕ್ಕಾಗಿ ಈ ಬಾರಿ ಹಣ ರಿಲೀಸ್ ಮಾಡಿಲ್ಲ.
ಇನ್ನು ಮೂಲಗಳ ಪ್ರಕಾರ ಈ ಗ್ಯಾಪಿನಲ್ಲಿ ಒಂದಷ್ಟು ದೊಡ್ಡ ಸಂಖ್ಯೆಯಲ್ಲಿಯೇ ಫಲಾನುಭವಿಗಳನ್ನು ಕೈಬಿಡುವ ಪ್ರಸ್ತಾಪವೂ ರಾಜ್ಯ ಸರ್ಕಾರದ ಎದುರು ಬಂದಿದೆ. ಗೃಹಲಕ್ಷ್ಮಿ ಹಣಕ್ಕಾಗಿ ಇನ್ನಷ್ಟು ಹೊಸ ನಿಬಂಧನೆ ಸೇರಿಸುವ ಕೆಲಸವೂ ನಡೆಯುತ್ತಿದೆ. ಒಟ್ಟಿನಲ್ಲಿ ಗೃಹಲಕ್ಷ್ಮಿ ಹೊರೆಯನ್ನು ತಗ್ಗಿಸುವ ಪ್ರಯತ್ನ ಶುರುವಾಗಿದೆ. ಹೀಗಾಗಿಯೇ ಈ ಬಜೆಟ್ಟಿನಲ್ಲಿ ಗ್ಯಾರಂಟಿ ಅನುದಾನಕ್ಕಾಗಿ ಕಳೆದ ಸಲಕ್ಕಿಂತ ಎರಡು ಸಾವಿರ ಕೋಟಿ ಕಡಿಮೆ ತೆಗೆದಿಡಲಾಗಿದೆ.