ಹುಟ್ಟಿದವರು ಸಾಯಲೇಬೇಕು. ದೇವರು ಅಮೃತ ಕುಡಿದಿದ್ದಾರೆ. ಅವರಿಗೆ ಮರಣ ಭಯವಿಲ್ಲ. ಅಲ್ಲೆಲ್ಲೋ ಒಬ್ಬ ಅಶ್ವತ್ಥಾಮ ಇನ್ನೂ ಬದುಕಿದ್ದಾನೆ ಎನ್ನುತ್ತಾರೆ. ಕಂಡವರಿಲ್ಲ. ಆದರೆ ಮನುಷ್ಯ ಎಂಬ ಜೀವಿಯಷ್ಟೇ ಅಲ್ಲ, ಯಾವುದೇ ಪ್ರಾಣಿ ಇರಲಿ.. ಹುಟ್ಟಿದ ಮೇಲೆ ಸಾಯುವುದು ಸಾಮಾನ್ಯ. ಹುಟ್ಟು ಉಚಿತ. ಸಾವು ಖಚಿತ. ಹಾಗೆ ಸಾಯುವ ಮೊದಲು ಒಬ್ಬ ವ್ಯಕ್ತಿಗೆ ತಾನು ಸಾಯಲಿದ್ದೇನೆ ಎಂದು ಗೊತ್ತಾಗುತ್ತದೆಯೇ.. ಹೌದು ಎನ್ನುತ್ತದೆ ಗರುಡ ಪುರಾಣ.
ಒಬ್ಬ ವ್ಯಕ್ತಿ ಮರಣ ಹೊಂದುವುದಕ್ಕೂ ಒಂದು ಗಂಟೆಯ ಮೊದಲು ಅವನು ಅಥವಾ ಅವಳಿಗೆ ತಮ್ಮದೇ ಮರಣದ ಮುನ್ಸೂಚನೆಗಳು ಸಿಗುತ್ತವೆ. ಒಬ್ಬ ವ್ಯಕ್ತಿ ಮರಣ ಹೊಂದುವುದಕ್ಕೂ ಒಂದು ಗಂಟೆಯ ಮೊದಲು ಈ ಸೂಚನೆಗಳನ್ನು ಪಡೆದುಕೊಳ್ಳುತ್ತಾನೆ.
ಅಂಗೈರೇಖೆಗಳು ಮಾಯ..!
ಸಾವು ಸಮೀಪಿಸಿದಾಗ, ವ್ಯಕ್ತಿಯ ಕೈಯಲ್ಲಿರುವ ರೇಖೆಗಳು ಇದ್ದಕ್ಕಿದ್ದಂತೆ ಮಾಸಲು ಅಥವಾ ಮಾಯವಾಗಲು ಪ್ರಾರಂಭಿಸುತ್ತವೆ ಎಂದು ಹೇಳಲಾಗಿದೆ. ಅಂದರೆ ನಮ್ಮ ಕೈ ಮೇಲಿರುವ ರೇಖೆಗಳು ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಅದನ್ನು ಆ ವ್ಯಕ್ತಿ ಹೇಳೋಕೆ ಆಗುವುದಿಲ್ಲ.
ಯಮದೂತರು ಪ್ರತ್ಯಕ್ಷ..!
ಸಾವು ಸಮೀಪಿಸಿದಾಗ, ಅದಕ್ಕೆ ಸ್ವಲ್ಪ ಮೊದಲು, ಯಮರಾಜನ ದೂತರು ನಿಮ್ಮ ಬಳಿ ಬರುತ್ತಿರುವಂತೆ ನಿಮಗೆ ಕಾಣಿಸುತ್ತದೆ. ಆ ವ್ಯಕ್ತಿಯು ಯಾವಾಗಲೂ ತನ್ನ ಹತ್ತಿರ ಯಾವುದೋ ನಕಾರಾತ್ಮಕ ಶಕ್ತಿಯ ಉಪಸ್ಥಿತಿಯನ್ನು ಅನುಭವಿಸುತ್ತಾನೆ. ಇದರರ್ಥ ಯಮದೂತರು ಆ ವ್ಯಕ್ತಿಯನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ ಎನ್ನುವುದು. ಕೆಲವು ವ್ಯಕ್ತಿಗಳು ಈ ರೀತಿ ಮಾತನಾಡಿರುವುದನ್ನು ಕೇಳಿದವರಿದ್ದಾರೆ. ಸಾವು ಹತ್ತಿರ ಬಂದಾಗ ಹೀಗೆಲ್ಲ ಆಗುತ್ತದೆ.
ಹಳೆಯ ನೆನಪುಗಳ ಪುರಾಣ ಬಿಚ್ಚಿಡುತ್ತಾರೆ..!
ಸಾವು ಸಮೀಪಿಸಿದಾಗ, ಅವನು ತನ್ನ ಜೀವನದಲ್ಲಿ ಮಾಡಿದ ಎಲ್ಲಾ ಕರ್ಮಗಳನ್ನು ನೆನಪಿಸಿಕೊಳ್ಳಲು ಶುರು ಮಾಡುತ್ತಾನೆ. ಹಳೆಯ ವಿಷಯಗಳ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾನೆ. ಅದರಲ್ಲಿಯೂ ಕೆಟ್ಟ ಕೆಟ್ಟ ನೆನಪುಗಳು ಪುನರಾವರ್ತನೆಯಾಗುತ್ತವೆ. ನ್ನ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಬಗ್ಗೆ ಹೇಳುತ್ತಾನೆ ಮತ್ತು ಕುಟುಂಬಸ್ಥರೊಂದಿಗೆ ಮಾತನಾಡಲು ಬಯಸುತ್ತಾನೆ. ಅದು ಪಾಪ ಪುಣ್ಯಗಳ ಲೆಕ್ಕ ಹಾಕಿಕೊಳ್ಳುವ ಸಮಯ. ಸಾವು ಸಮೀಪಿಸಿದೆ ಎಂದರ್ಥ.
ಕನಸಿನಲ್ಲಿ ಪಿತೃಗಳು ಪ್ರತ್ಯಕ್ಷ..!
ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯು ಸಾವಿಗೆ ಕೆಲವು ದಿನಗಳ ಮೊದಲು, ತನ್ನ ಪೂರ್ವಜರನ್ನು ಕನಸಿನಲ್ಲಿ ನೋಡಲು ಪ್ರಾರಂಭಿಸುತ್ತಾನೆ. ಮೃತಪಟ್ಟಿರುವ ಕನಸಿನಲ್ಲಿ ಪಿತೃಗಳು ಅಳುವುದು, ದುಃಖದಲ್ಲಿರುವುದು ಪದೇ ಪದೇ ಕಾಣುತ್ತಿದ್ದರೆ ಅದು ಸಾವಿನ ಸೂಚನೆಯೂ ಇರಬಹುದು.
ಸಾವಿನ ಬಾಗಿಲು ಗೋಚರ..!
ಒಬ್ಬ ವ್ಯಕ್ತಿಗೆ ಆತ ಮರಣ ಹೊಂದುವುದಕ್ಕೂ ಒಂದು ಗಂಟೆಗೂ ಮುನ್ನ ನಿಗೂಢವಾದ ಬಾಗಿಲು ಕಾಣಿಸುತ್ತದೆ. ಈ ಬಾಗಿಲಿನ ಬಗ್ಗೆ ಅವನು ತನ್ನ ಕುಟುಂಬದವರೊಂದಿಗೆ ಹೇಳಲು ಬಯಸುತ್ತಾನೆ. ಆದರೆ, ಅವನ ಕುಟುಂಬದ ಸದಸ್ಯರೊಂದಿಗೆ ಆ ಬಾಗಿಲಿನ ಬಗ್ಗೆ ಹೇಳಲು ಆತನಿಗೆ ಸಾಧ್ಯವಾಗುವುದಿಲ್ಲ. ಇನ್ನು ಕೆಲವರು ಮರಣ ಹೊಂದುವುದಕ್ಕೂ ಮುನ್ನ ತಮ್ಮ ಸುತ್ತಲೂ ಉರಿಯುವ ಜ್ವಾಲೆಯನ್ನು ನೋಡಲು ಪ್ರಾರಂಭಿಸುತ್ತಾರೆ.
ಇವೆಲ್ಲವೂ ಇರುವುದು ಗರುಡ ಪುರಾಣದಲ್ಲಿ. ಅಂದರೆ ವಯೋಸಹಜ ಸಾವು ಸಂಭವಿಸಿದಾಗ ಆಗುವ ಲಕ್ಷಣಗಳು. ಆದರೆ ಇದು ಆಕಸ್ಮಿಕವಾಗಿ ನಡೆಯುವ ಸಾವುಗಳಿಗೆ ಸಂಬಂಧ ಇರುವುದಿಲ್ಲ ಎನ್ನುತ್ತದೆ ಗರುಡ ಪುರಾಣ.