ಕನಸು ಯಾರಿಗೆ ಬೀಳೋದಿಲ್ಲ. ಶ್ರೀಮಂತರಾಗುವ ಕನಸು ಯಾರಿಗೆ ಇರೋದಿಲ್ಲ. ಈ ಹಾದಿಯಲ್ಲಿ ಹಲವರು ಹಲವು ರೀತಿಯ ಕನಸು ಕಾಣ್ತಾರೆ. ರಾಶಿ ದುಡ್ಡು ಸಿಕ್ಕಂತೆ, ಕೋಟ್ಯಧಿಪತಿಗಳಾದಂತೆ ಕನಸು ಬೀಳುತ್ತಲೇ ಇರುತ್ತವೆ. ಆದರೆ ಕನಸಿನಲ್ಲಿ ಕಂಡಿದ್ದೆಲ್ಲ ನಿಜವಾಗಲ್ಲ. ಅದು ಬೇರೆಯ ಸೂಚನೆಯನ್ನೂ ಕೊಡುತ್ತದೆ.
ಸ್ವಪ್ನ ಶಾಸ್ತ್ರದ ಪ್ರಕಾರ..
ಕನಸಿನಲ್ಲಿ ನಾಣ್ಯ ಕೊಡುವ ಕನಸು ಬಿದ್ದರೆ..
ನೀವು ಬಲವಂತವಾಗಿ ಯಾರಿಗಾದರೂ ಹಣವನ್ನು ನೀಡುತ್ತಿರುವ ಕನಸು ಬಿದ್ದರೆ.. ಅದು ಹಣಕಾಸಿನ ಸಮಸ್ಯೆಗಳು, ನಷ್ಟಗಳು ಎದುರಾಗುತ್ತದೆ ಎಂಬುದರ ಸೂಚನೆ. ಕಬ್ಬಿಣದ ನಾಣ್ಯಗಳಾಗಿದ್ದರೆ, ಅದೂ ಕೂಡಾ ಒಳ್ಳೆಯ ಲಕ್ಷಣ ಅಲ್ಲ. ಕೆಟ್ಟದ್ದರ ಸೂಚನೆ.
ಆದರೆ.. ಕನಸಿನಲ್ಲಿ ಬೆಳ್ಳಿ ನಾಣ್ಯಗಳನ್ನು ನೋಡಿದರೆ.. ಅದು ಶುಭ ಎನ್ನುತ್ತದೆ ಸ್ವಪ್ನ ಶಾಸ್ತ್ರ. ಅದು ಆಧ್ಯಾತ್ಮಿಕ ಲಾಭದ ಸಂಕೇತ.
ತುಂಬಾ ದುಡ್ಡು ನೋಡಿದರೆ..
ಸ್ವಪ್ನ ಶಾಸ್ತ್ರದ ಪ್ರಕಾರ, ನೀವು ನಿಮ್ಮ ಕನಸಿನಲ್ಲಿ ಅಪಾರ ಮಟ್ಟದ ಹಣವನ್ನು ನೋಡಿದರೆ ಅಂತಹ, ಅದು ಒಳ್ಳೆಯ ದಿನಗಳು ಆರಂಭವಾಗುತ್ತಿವೆ ಎಂಬುದರ ಸೂಚನೆ. ಯಾವುದೇ ವ್ಯಕ್ತಿಗಾದರೂ ಒಳ್ಳೆಯ ದಿನಗಳು ಪ್ರಾರಂಭವಾಗುವ ಮುನ್ನ ಇಂತಹ ಕನಸುಗಳು ಬೀಳುತ್ತವೆ. ಕನಸಿನಲ್ಲಿ ರಾಶಿ ರಾಶಿ ನೋಟುಗಳ ಬಂಡಲ್‌ನ್ನು ನೋಡಿದರೆ ಇದರರ್ಥ ನಮಗೆ ಹಣಕಾಸಿನ ಲಾಭವಾಗುವುದು ಎಂಬುದರ ಸೂಚನೆ.
ಹರಿದ, ಕೊಳಕು ನೋಟುಗಳನ್ನು ನೋಡಿದರೆ..
ಕನಸಿನಲ್ಲಿ ಹರಿದ ನೋಟುಗಳನ್ನು ನೋಡಿದರೆ, ಹಳೆಯ ನೋಟುಗಳನ್ನು ನೋಡಿದರೆ ಅಥವಾ ಕೊಳೆಯಾದ ನೋಟುಗಳನ್ನು ನೋಡಿದರೆ ಅದು ಒಳ್ಳೆಯ ಕನಸಲ್ಲ. ಇಂತಹ ಕನಸುಗಳು ಬಿದ್ದರೆ ಅದು ನಮಗೆ ಆರ್ಥಿಕ ನಷ್ಟದ ಅಥವಾ ವಂಚನೆಯ ಸೂಚನೆಯಾಗಿರುತ್ತದೆ.
ಯಾರಿಗಾದರೂ ಹಣ ನೀಡುವ ಕನಸು ಬಿದ್ದರೆ..
ಕನಸಿನಲ್ಲಿ ಇದ್ದಕ್ಕಿದ್ದಂತೆ ಹಣವನ್ನು ನೀಡುವಂತೆ ಅಥವಾ ಪಡೆಯುವಂತೆ ಘಟನೆಯನ್ನು ನೋಡಿದರೆ ಅದು ನಿಮ್ಮ ಮುಂದಿನ ದಿನಗಳ ಆರ್ಥಿಕ ಲಾಭದ ಬಗ್ಗೆ ಹೇಳುತ್ತದೆ. ನೀವು ಯಾವುದೋ ಒಬ್ಬ ನಿರ್ಗತಿಕ ವ್ಯಕ್ತಿಗೆ ಹಣವನ್ನು ದಾನ ಮಾಡುವಂತೆ ಕನಸನ್ನು ನೋಡಿದರೆ ಅದು ನಿಮ್ಮಿಂದಾಗುವ ಒಳ್ಳೆಯ ಕಾರ್ಯಗಳ ಸೂಚನೆಯಾಗಿದೆ.
ಹಣ ಕಳೆದುಕೊಳ್ಳುವ ಕನಸು ಬಿದ್ದರೆ..
ನಾವು ನಮ್ಮ ಕನಸಿನಲ್ಲಿ ಹಣವನ್ನು ಕಳೆದುಕೊಳ್ಳುವ ದೃಶ್ಯ ಕಂಡರೆ ಇದರರ್ಥ ಮುಂದಿನ ದಿನಗಳಲ್ಲಿ ಸಾಲವನ್ನು ಪಡೆದುಕೊಳ್ಳುವಂತಾಗುವುದು ಅಥವಾ ಅವಕಾಶಗಳು ಕಳೆದುಕೊಳ್ಳುವಂತಹ ಸೂಚನೆಯಾಗಿರುತ್ತದೆ. ಇಂತಹ ಕನಸುಗಳು ನಿಮಗೆ ಹಣಕಾಸಿನ ಬಗ್ಗೆ ಗಮನ ಹರಿಸಬೇಕೆಂದು ಹೇಳುತ್ತದೆ.
ಸ್ವಪ್ನ ಶಾಸ್ತ್ರದಲ್ಲಿ, ರಾತ್ರಿ ಮತ್ತು ಮುಂಜಾನೆ ಸಂಧಿಸುವ ಸಮಯವಾದ ಮುಂಜಾನೆ 3 ರಿಂದ 6 ಗಂಟೆಯ ಒಳಗೆ ಬೀಳುವ ಕನಸುಗಳು ನನಸಾಗುವ ಸಾಧ್ಯತೆಗಳು ಹೆಚ್ಚು ಎಂದು ಹೇಳಲಾಗಿದೆ. ದುಡ್ಡಿನ ಜೊತೆ ತಮ್ಮದೇ ಮರಣವನ್ನು ಕನಸಿನಲ್ಲಿ ಕಂಡರೆ, ಅದು ವೈಭವದ ದಿನಗಳು ಹತ್ತಿರದಲ್ಲಿವೆ ಎಂಬ ಸೂಚನೆಯಂತೆ.