ಕಾರ್ತವೀರ್ಯಾರ್ಜುನೋ ನಾಮ ರಾಜಾ ಬಾಹುಸಹಸ್ರವಾನ್
ತಸ್ಯ ಸ್ಮರಣ ಮಾತ್ರೇಣ ಗತಂ ನಷ್ಟಂ ಚ ಲಭ್ಯತೇ
ಕಾರ್ತವೀರ್ಯಃ ಖಲದ್ವೇಷೀ ಕೃತವೀರ್ಯಸುತೋ ಬಲೀ
ಸಹಸ್ರಬಾಹುಃ ಶತ್ರುಘ್ನೋ ರಕ್ತವಾಸಾ ಧನುರ್ಧರಃ
ರಕ್ತಗಂಧೋ ರಕ್ತಮಾಲ್ಯೋ ರಾಜಾ ಸ್ಮರ್ತುರಭೀಷ್ಟದಃ
ದ್ವಾದಶೈತಾನಿ ನಾಮಾನಿ ಕಾರ್ತವೀರ್ಯಸ್ಯ ಯಃ ಪಠೇತ್
ಸಂಪದಸ್ತತ್ರ ಜಾಯಂತೇ ಜನಸ್ತತ್ರ ವಶಂ ಗತಃ
ಆನಯತ್ಯಾಶು ದೂರಸ್ಥಂ ಕ್ಷೇಮಲಾಭಯುತಂ ಪ್ರಿಯಮ್
ಸಹಸ್ರಬಾಹುಂ ಮಹಿತಂ ಸಶರಂ ಸಚಾಪಂ ರಕ್ತಾಂಬರಂ ವಿವಿಧ ರಕ್ತಕಿರೀಟಭೂಷಮ್
ಚೋರಾದಿದುಷ್ಟಭಯನಾಶನಮಿಷ್ಟದಂ ತಂ ಧ್ಯಾಯೇನ್ಮಹಾಬಲವಿಜೃಂಭಿತಕಾರ್ತವೀರ್ಯಮ್
ಯಸ್ಯ ಸ್ಮರಣಮಾತ್ರೇಣ ಸರ್ವದುಃಖಕ್ಷಯೋ ಭವೇತ್
ಯನ್ನಾಮಾನಿ ಮಹಾವೀರ್ಯಶ್ಚಾರ್ಜುನಃ ಕೃತವೀರ್ಯವಾನ್
ಹೈಹಯಾಧಿಪತೇಃ ಸ್ತೋತ್ರಂ ಸಹಸ್ರಾವೃತ್ತಿಕಾರಿತಮ್
ವಾಂಚಿತಾರ್ಥಪ್ರದಂ ನೄಣಾಂ ಸ್ವರಾಜ್ಯಂ ಸುಕೃತಂ ಯದಿ
ಇತಿ ಕಾರ್ತವೀರ್ಯಾರ್ಜುನ ದ್ವಾದಶನಾಮ ಸ್ತೋತ್ರಮ್
ಇದೊಂದು ಶ್ಲೋಕ. ಇದು ಕಾರ್ತವೀರ್ಯಾರ್ಜುನ ಮಂತ್ರ ಎಂದೇ ಪ್ರಸಿದ್ಧಿ ಪಡೆದಿದೆ. ಇಷ್ಟು ದೊಡ್ಡ ಮಂತ್ರ ಹೇಳೋಕ್ ಆಗಲ್ಲಪ್ಪ.. ನಾಲಗೆ ಹೊರಳಲ್ಲ, ಅಷ್ಟೊಂದು ಮಂತ್ರವನ್ನು ಒಮ್ಮೆಗೇ ಹೇಳೋಕೆ ಆಗಲ್ಲ ಎನ್ನುವವರಿಗೆ ಪರ್ಯಾಯ ಮಾರ್ಗವೂ ಇದೆ.
ಕಾರ್ತವೀರ್ಯಾರ್ಜುನೋ ನಾಮ ರಾಜಾ ಬಾಹುಸಹಸ್ರವಾನ್
ತಸ್ಯ ಸ್ಮರಣ ಮಾತ್ರೇಣ ಗತಂ ನಷ್ಟಂ ಚ ಲಭ್ಯತೇ..
ಇದು ನಷ್ಟ ದ್ರವ್ಯ ಲಭ್ಯತೆ ಮಾಡಿಕೊಡುವ ಮಂತ್ರ. ಈ ಮಂತ್ರವನ್ನು ಶ್ರದ್ಧಾಭಕ್ತಿಯಿಂದ ನೂರೆಂಟು ಸಲ ಪಠಿಸಿದರೆ ಕಳೆದುಕೊಂಡಿದ್ದ, ಕಳ್ಳತನವಾಗಿದ್ದ ವಸ್ತು ಮರಳಿ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಏಕೆಂದರೆ ಕಾರ್ತವೀರ್ಯಾರ್ಜುನ, ವಿಷ್ಣುವಿನ ಸುದರ್ಶನ ಚಕ್ರದ ಅವತಾರ ಎನ್ನುತ್ತದೆ ಪುರಾಣ.
ತನನ್ನು ಆರಾಧಿಸುವುದರಿಂದ ಕದ್ದ ವಸ್ತುಗಳನ್ನು ಮರಳಿ ಪಡೆಯಹುದು. ದೂರವಾಗಿರುವ ಪ್ರೀತಿಪಾತ್ರರನ್ನು ಮರಳಿ ತರಬಹುದು. ಅಮೂಲ್ಯ ಆಸ್ತಿಗಳನ್ನು ಕಳೆದುಕೊಂಡಿದ್ದರೆ ಮರಳಿ ಪಡೆಯಲು ಸಾಧ್ಯ. ಜೊತೆಗೆ ನಿಮ್ಮ ಅದೃಷ್ಟವೂ ಹೆಚ್ಚುತ್ತದೆ ಎನ್ನುವ ನಂಬಿಕೆ ಇದೆ. ಇದಕ್ಕಾಗಿ ಭಕ್ತರು ಕಾರ್ತವೀರ್ಯ ಅರ್ಜುನ ಹೋಮ ಮಾಡ್ತಾರೆ. ಕಾರ್ತವೀರ್ಯ ಸ್ತೋತ್ರ, ಮಂತ್ರ ಪಠಣೆ ಮಾಡ್ತಾರೆ.
ಶೃಂಗೇರಿಯಲ್ಲಿ ಕಾರ್ತವೀರ್ಯಾರ್ಜುನ ವಿಗ್ರಹ : ಈತನ ಮಂತ್ರವನ್ನು ಹೇಳಿದ ಫಲ ಪಡೆದ ಅನುಭವ ಬಹಳ ಜನಗಳಿಗೆ ಈಗಾಗಲೇ ಬಂದಿರಬಹುದು. ಕರ್ನಾಟಕದ ಶೃಂಗೇರಿಯಿಲ್ಲಿ ಕಾರ್ತವೀರ್ಯಾರ್ಜುನನ ವಿಗ್ರಹ ಇದೆ. ಶೃಂಗೇರಿ ಶನೇಶ್ವರ ದೇವಸ್ಥಾನದ ಹೊರಭಾಗದಲ್ಲಿರುವ ಈ ವಿಗ್ರಹಕ್ಕೆ ಪ್ರತಿದಿನವೂ ಪೂಜೆ ಸಲ್ಲುತ್ತದೆ. ಕಳೆದ ವಸ್ತು ದೊರೆತ ಮೇಲೆ ನಾವು ಹೇಳಿಕೊಂಡಿದ್ದಲ್ಲಿ ಇಲ್ಲಿ ಕಾಣಿಕೆಯನ್ನು ಸಲ್ಲಿಸುವುದು ಪ್ರತೀತಿ. ಇಲ್ಲಿ ನಂಬಿಕೆ ಹಾಗೂ ಭಕ್ತಿ ಬಹಳ ಮುಖ್ಯ ಎನಿಸುತ್ತದೆ.
ಯಾರು ಈ ಕಾರ್ತವೀರ್ಯಾರ್ಜುನ..?
ಕಾರ್ತವೀರ್ಯ ಅರ್ಜುನನು ಹೇಹಯ ರಾಜವಂಶದ ಚಕ್ರವರ್ತಿ. ದತ್ತಾತ್ರೇಯನ ಶಿಷ್ಯ ಮತ್ತು ವಿಷ್ಣುವಿನ ದೈವಿಕ ಆಯುಧ ಸುದರ್ಶನ ಚಕ್ರದ ಅವತಾರ. ಸುದರ್ಶನನಿಗೆ ತನ್ನ ಬಗ್ಗೆ ಭಾರೀ ಗರ್ವವಿತ್ತು. ತನ್ನಿಂದಲೇ ವಿಷ್ಣು ಬಲಶಾಲಿ ಎನ್ನುವ ಅಹಂಕಾರ ಇತ್ತು. ಭೂಮಿಯಲ್ಲಿ ಋಷಿಮುನಿಗಳಿಗೆ ಅಡ್ಡಿ ಮಾಡುವವರು ಹೆಚ್ಚಾದಾಗ, ವಿಷ್ಣುವಿನ ಬಳಿ ನಾನೇ ಈ ಸಮಸ್ಯೆ ಬಗೆಹರಿಸುತ್ತೇನೆ ಎಂದು ಬಂದ ಕಾರ್ತವೀರ್ಯಾರ್ಜುನ, ಬಲಶಾಲಿ ಚಕ್ರವರ್ತಿಯಾಗಿ ಮೆರೆಯುತ್ತಿದ್ದ.
ಕೊನೆಗೆ ಈತನನ್ನು ವಧಿಸಿದ್ದು ಸ್ವತಃ ವಿಷ್ಣು. ಪರಶುರಾಮನ ಅವತಾರ ತಾಳಿ ವಿಷ್ಣುವೇ ಈತನನ್ನು ಸಂಹರಿಸಬೇಕಾಗಿ ಬಂತು. ಈ ಕಾರ್ತವೀರ್ಯಾರ್ಜುನನಿಗೆ ಸಹಸ್ರ ಕೈಗಳಿದ್ದವು. ಶತ್ರುಗಳ ರಕ್ತದಲ್ಲಿ ತೊಯ್ದ ಬಟ್ಟೆಗಳನ್ನು ಧರಿಸಿರುತ್ತಿದ್ದ. ಸುದರ್ಶನನ ಅವತಾರವಾದ ಕಾರಣ, ಈತನಿಗೂ ಪೂಜೆ ಸಲ್ಲುತ್ತದೆ.