ಸೌಜನ್ಯ ಕೇಸ್ ಇಟ್ಕೊಂಡು ನಡೀತಾ ಇರೋ ಧರ್ಮಸ್ಥಳದ ವಿರುದ್ಧ ಅಭಿಯಾನ ನೋಡ್ತಾ ಇದ್ರೆ, ಇದರ ಹಿಂದೆ ಬೇರೇನೋ ಕಥೆ ಇದೆ ಅನ್ನಿಸೋದು ಸುಳ್ಳಲ್ಲ. ಯಾಕಂದ್ರೆ, ತನಿಖೆ ಮಾಡಿದ್ದು ಪೊಲೀಸರು ಮತ್ತು ಸಿಬಿಐ. ವಿಚಾರಣೆ ಮಾಡಿದ್ದು ನ್ಯಾಯಾಲಯ. ಆರೋಪಿಗಳನ್ನ ಹಿಡಿದು ಶಿಕ್ಷೆ ಕೊಡಿಸಬೇಕಿರೋ ಕೋರ್ಟು.. ವಿಚಾರಣೆಯನ್ನೆಲ್ಲ ಮಾಡಿ ಹೆಗ್ಗಡೆ ಅವರ ಕುಟುಂಬದ ಪಾತ್ರ ಇಲ್ಲ ಎಂದು ಹೇಳಿದ್ದಾಗಿದೆ. ಆದರೆ, ಸಂತೋಷ್ ರಾವ್ ಸಾಕ್ಷ್ಯಗಳ ಕೊರತೆಯಿಂದ ಖುಲಾಸೆಯಾದ ತೀರ್ಪನ್ನು ಒಪ್ಪಿಕೊಳ್ತಿರೋವ್ರು, ಅದೇ ಕೋರ್ಟಿನಲ್ಲಿ ನಿರಪರಾಧಿಗಳು, ಹೆಗ್ಗಡೆ ಕುಟುಂಬದ ನಿಶ್ಚಲ್ ಸೇರಿದಂತೆ ಯಾರ ಕೈವಾಡವೂ ಇಲ್ಲ ಎಂದು ಪ್ರೂವ್ ಆಗಿದ್ದನ್ನು ಒಪ್ಪಿಕೊಳ್ಳೋಕೆ ರೆಡಿ ಇಲ್ಲ. ಹಾಗಾದರೆ ಧರ್ಮಸ್ಥಳದ ವಿರುದ್ಧ ಸಂಚು ನಡೀತಿದ್ಯಾ..? ಏಕಂದ್ರೆ ಧರ್ಮಸ್ಥಳದ ವಿರುದ್ಧ ನಡೆದ ಹೋರಾಟಗಳ ಕಥೆ ನೋಡಿದ್ರೆ ಹಾಗನ್ನಿಸೋದು ಸಹಜ. ಈ ಸಂಚಿನಲ್ಲೂ ಪ್ರಮುಖ 3 ಭಾಗಗಳನ್ನ ಗುರ್ತಿಸಬಹುದು..
ಸಂಚು – 1: ರಾಜಕೀಯವಾಗಿ ಹೊಡೆತ ಕೊಡೋದು!
ಧರ್ಮಸ್ಥಳದ ವಿರುದ್ಧ ನಡೆದ ಮೊದಲ ಹೋರಾಟದಲ್ಲಿ, ರಾಜಕೀಯ ಇತ್ತು. ಧರ್ಮಸ್ಥಳಕ್ಕೆ ಇರುವ ರಾಜಕೀಯ ಪ್ರಾಧಾನ್ಯತೆಯನ್ನ ಕಿತ್ತೊಗೆಯೋ ಪ್ರಯತ್ನ ನಡೆದಿತ್ತು. ಆದರೆ ವೀರೇಂದ್ರ ಹೆಗ್ಗಡೆ ಜೈನರಾಗಿದ್ದರೂ, ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದವರು. ಕಾಂಗ್ರೆಸ್, ಬಿಜೆಪಿ ಅಷ್ಟೇ ಯಾಕೆ ಜೆಡಿಎಸ್ ನಾಯಕರೂ ಕೂಡಾ ಧರ್ಮಸ್ಥಳ ಅಂದ್ರೆ ತಲೆಬಾಗ್ತಾರೆ. ದೇಶದ ಪ್ರಧಾನಿ, ಕರ್ನಾಟಕದ ಮುಖ್ಯಮಂತ್ರಿ ಯಾರೇ ಆಗಲಿ.. ಇಲ್ಲಿಗೆ ಬರ್ತಾರೆ. ಅದು ಒಂದು ಪಕ್ಷಕ್ಕೆ ಸೀಮಿತ ಅಲ್ಲ. ಈಗ ಹೆಗ್ಗಡೆಯವರು ರಾಷ್ಟ್ರಪತಿಗಳಿಂದ ನೇಮಿಸಲ್ಪಟ್ಟ ಸಂಸದರೂ ಹೌದು. ಅಲ್ಲಿಗೆ ರಾಜಕೀಯವಾಗಿ ಹೆಗ್ಗಡೆ ಮತ್ತು ಧರ್ಮಸ್ಥಳದ ಪ್ರಭಾವ ಕುಗ್ಗಿಸುವ ಪ್ರಯತ್ನಕ್ಕೆ ಆರಂಭದಿಂದಲೂ ಯಶಸ್ಸು ಸಿಗಲಿಲ್ಲ.
ಸಂಚು – 2: ಆರ್ಥಿಕವಾಗಿ ಬಲ ಕುಗ್ಗಿಸೋದು!
ಎರಡನೆಯದ್ದು ಧರ್ಮಸ್ಥಳದ ಮಂಜುನಾಥನ ಹೆಸರಲ್ಲಿ ನಡೆಯುತ್ತಿರುವ ಸಮಾಜ ಸೇವೆ. ಆಸ್ಪತ್ರೆ, ಶಿಕ್ಷಣ, ಅನ್ನ ದಾಸೋಹಗಳು ಅಷ್ಟೇ ಅಲ್ಲದೆ ಬ್ಯಾಂಕಿಂಗ್ ವ್ಯವಸ್ಥೆ. ಧರ್ಮಸ್ಥಳದ ಸಹಕಾರಿ ಬ್ಯಾಂಕಿನಲ್ಲಿ ಅಗತ್ಯ ಇದ್ದವರು ಸಾಲ ಪಡೆದು, ಬದುಕು ಕಟ್ಟಿಕೊಳ್ಳೋದಕ್ಕೆ ಅವಕಾಶ ಇದೆ. ಆ ಬ್ಯಾಂಕಿನಲ್ಲಿ ಬಡ್ಡಿ, ಚಕ್ರಬಡ್ಡಿ ಕೊಟ್ಟು ಬಡವರನ್ನ ಹಿಂಸೆ ಮಾಡಲಾಗ್ತಾ ಇದೆ ಅನ್ನೋ ಒಂದು ಅಭಿಯಾನವೇ ನಡೀತು. ಸತತ ಮೂರು ವರ್ಷ ನಡೆದ ಈ ಅಭಿಯಾನವೂ ವಿಫಲವಾಯ್ತು. ಮೈಕ್ರೋ ಫೈನಾನ್ಸ್ ಬ್ಯಾಂಕಿಂಗ್ ವ್ಯವಸ್ಥೆಗಿಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವ ಸಂಸ್ಥೆಯ ವಿರುದ್ಧ ಯಾವುದೇ ಕ್ರಮ ಆಗಲಿಲ್ಲ. ಯಾವಾಗ ಅದು ವಿಫಲವಾಯ್ತೋ.. ಆಗ ಶುರುವಾಗಿದ್ದೇ ಕ್ಷೇತ್ರದ ನಂಬಿಕೆಯನ್ನೇ ಘಾಸಿಗೊಳಿಸುವ ತಂತ್ರ.
ಫೈನಲ್ ಸಂಚು: ಜನರ ನಂಬಿಕೆಯನ್ನೇ ದಾಳವಾಗಿಸಿಕೊಳ್ಳೋದು!
ಬಹುಶಃ 2012ರ ಸಮಯ. ಆಗಿನ್ನೂ ಮೋದಿ ಪ್ರಧಾನಿಯಾಗಿರಲಿಲ್ಲ. ಆದರೆ ಮೋದಿ ಪ್ರವರ್ದಮಾನಕ್ಕೆ ಬಂದ ಜೊತೆಯಲ್ಲೇ ಹಿಂದುತ್ವ ಅಜೆಂಡಾ ಕೂಡಾ ದೇಶಾದ್ಯಂತ ಬಲವಾಯ್ತು. ಇದರ ಬೆನ್ನಲ್ಲೇ ಹಿಂದುತ್ವ ವಿರೋದಿ ಅಜೆಂಡಾ ಕೂಡಾ ಆಕ್ಟೀವ್ ಆಯ್ತು. ಹಿಂದುತ್ವದ ಹೆಗ್ಗುರುತು ಎನ್ನಲಾಗುವ ಧಾರ್ಮಿಕ ಸ್ಥಳಗಳ ಪಾವಿತ್ರ್ಯತೆಯನ್ನೇ ಹಾಳುಗೆಡುವುವ ಸಂಚುಗಳೂ ಆರಂಭವಾದವು. ಅಮರನಾಥನಿಂದ ಹಿಡಿದು, ಅನಂತ ಪದ್ಮನಾಭನವರೆಗೆ ಎಲ್ಲೆಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನ ಗುರಿಯಾಗಿಸಬಹುದು ಅನ್ನೋ ಕುತಂತ್ರಗಾರಿಕೆಯ ಪಟ್ಟಿಯಲ್ಲಿ ಧರ್ಮಸ್ಥಳವೂ ಇದ್ದಿರಬಹುದು!
ಇದು ವಿದೇಶಿ ಕೈವಾಡವೋ? ದೇಶೀಯ ಪಟ್ಟಭದ್ರ ಹಿತಾಸಕ್ತಿಗಳ ತಂತ್ರಗಾರಿಕೆಯೋ ಗೊತ್ತಿಲ್ಲ.. ಧರ್ಮ ಕ್ಷೇತ್ರದ ಬಗ್ಗೆ ಟೀಕೆ ಮಾಡುವ, ನಂಬಿಕೆಯನ್ನೇ ಪ್ರಶ್ನೆ ಮಾಡುವ, ಪಾವಿತ್ರ್ಯತೆಗೆ ಧಕ್ಕೆ ತರುವ ಪ್ರಯತ್ನವದು.
ಈ ದೃಷ್ಟಿಕೋನದಲ್ಲಿ ಧರ್ಮಸ್ಥಳ ಪ್ರಕರಣವನ್ನೇ ನೋಡಿದ್ರೆ, ಸೌಜನ್ಯ ಕೊಲೆಯಾಗಿದ್ದು, 2012ರಲ್ಲಿ.. ಆ ದಿನಗಳ ಮಟ್ಟಿಗೆ ಇದೊಂದು ಸಾಮಾನ್ಯ ರೇಪ್ & ಮರ್ಡರ್.. ವಿಶ್ವದ ಯಾವುದೇ ಮೂಲೆಯಲ್ಲೂ ನಡೆಯಬಹುದಾದ ಪ್ರಕರಣ.. ಆದರೆ, 2013ರ ನಂತರ ಅಂದರೆ ದೇಶದಲ್ಲಿ ಹಿಂದುತ್ವದ ಅಲೆ ಗಟ್ಟಿಯಾಗುತ್ತಾ ಹೋದಂತೆ, ಸೌಜನ್ಯ ಪ್ರಕರಣಕ್ಕೂ ವಿಚಿತ್ರ ತಿರುವುಗಳು ಸಿಗ್ತಾ ಹೋಯ್ತು. ಯೂಟ್ಯೂಬರ್ ಒಬ್ಬರು ಹೇಳಿದಂತೆ, ಸೌಜನ್ಯ ಪ್ರಕರಣದ ವಿಡಿಯೋ ಮಾಡಿದರೆ ಹಣ ಕೊಡುತ್ತೇವೆ ಎಂದು ಆಮಿಷ ಒಡ್ಡುವ ಮಟ್ಟಿಗೆ.. ಈ ಮೂಲಕ ಸೌಜನ್ಯ ಹೆಸರು ಪ್ರಸ್ತಾಪವಾದರೆ ಸಾಕು ಅದು ಧರ್ಮಸ್ಥಳಕ್ಕೆ ಕೆಟ್ಟ ಹೆಸರು ಬರುವ ಮಟ್ಟಕ್ಕೆ ಈ ಪ್ರಕರಣ ತಲುಪಿಬಿಡ್ತು..
ಸೌಜನ್ಯ ಪ್ರಕರಣದಲ್ಲಿ ಯಾರು ದೋಷಿ? ಯಾರು ನಿರ್ದೋಷಿ ಅನ್ನೋದನ್ನ ಸಾಬೀತು ಮಾಡಬೇಕಾದ್ದು ನ್ಯಾಯಾಲಯದಲ್ಲಿ.. ಆದರೆ, ಧರ್ಮಸ್ಥಳ ಕ್ಷೇತ್ರ ಹಾಗೂ ಹೆಗ್ಗಡೆ ಕುಟುಂಬದ ಹೆಸರನ್ನು ಎಳೆದು ತರುತ್ತಾ, ಒಂದೆಡೆ ಕ್ಷೇತ್ರದ ಪಾವಿತ್ರ್ಯತೆ ಹಾಳು ಮಾಡುವ ಸಂಚು, ಮತ್ತೊಂದೆಡೆ ಹೆಗ್ಗಡೆ ಕುಟುಂಬದ ಪ್ರತಿಷ್ಠೆ ಮತ್ತು ಧರ್ಮಸ್ಥಳದ ಹಿರಿಮೆ ಎರಡಕ್ಕೂ ಘಾಸಿಯಾಗುವಂತೆ ಮಾಡೋದು ತಂತ್ರಗಾರರ ಒಳ ಸುಳಿ! ಇದು ಜೈನರು ನಡೆಸುತ್ತಿರುವ ಹಿಂದೂ ಧರ್ಮದ ಪುಣ್ಯಕ್ಷೇತ್ರ. ಜೈನರೇಕೆ ಮಂಜುನಾಥನ ದೇಗುಲದ ಆಡಳಿತ ನಡೆಸಬೇಕು? ಜೈನ ಧರ್ಮೀಯರೇಕೆ ಅಣ್ಣಪ್ಪ ದೈವದ ಆಚರಣೆಯ ಸಾರಥ್ಯ ವಹಿಸಬೇಕು ಎಂದು ಪ್ರಶ್ನೆ ಮಾಡುವ ತಂತ್ರ. ಸೌಜನ್ಯ ಕೇಸನ್ನು ಧರ್ಮಸ್ಥಳದ ಹಿರಿಮೆಗೆ, ಖಾವಂದರ ಕುಟುಂಬಕ್ಕೆ ನಂಟು ಮಾಡುತ್ತಿರೋದು ಇದೇ ಕಾರಣಕ್ಕಾ ಎಂಬ ಅನುಮಾನ ಮೂಡುವಂತಾಗಿದೆ. ಈ ಹೋರಾಟದಲ್ಲಿ ಹಿಂದೂ ಸಂಘಟನೆಗಳೂ ಕ್ಷೇತ್ರದ ವಿರುದ್ಧ ತಿರುಗಿಬಿದ್ದರೆ, ಅಲ್ಲಿಗೆ ಅವರ ಹೋರಾಟ ಅರ್ಧಕ್ಕರ್ಧ ಯಶಸ್ವಿಯಾದಂತೆಯೇ ಲೆಕ್ಕ. ಆದರೆ ಹಿಂದೂ ಸಂಘಟನೆಗಳು ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿವೆ. ಇನ್ನು ಕ್ಷೇತ್ರದಲ್ಲಿ ಅಚ್ಚರಿ ಅನಿಸೋ ಇನ್ನೊಂದು ನಂಬಿಕೆಯೂ ಇದೆ. ಧರ್ಮಸ್ಥಳದ ಮಂಜುನಾಥನ ಮೇಲಾಣೆ ಎಂಬ ಒಂದು ವಾಕ್ಯ ಹೇಳೋದಕ್ಕೆ …