ಬಿಗ್ ಬಾಸ್ ಸ್ಪರ್ಧೆಯಲ್ಲಿ ಭಾಗವಹಿಸಿ ದಿಢೀರ್ ಪ್ರಸಿದ್ಧರಾದ ವಕೀಲ ಜಗದೀಶ್ ಮೇಲೆ ಹಲ್ಲೆಯಾಗಿದೆ. ಈ ಹಲ್ಲೆಯಾಗಿದ್ದು ದರ್ಶನ್ ಅಭಿಮಾನಿಗಳಿಂದ. ದರ್ಶನ್ ಅವರನ್ನು ಈ ಜಗದೀಶ್ ಬಾಯಿಗೆ ಬಂದಂತೆ ಬೈತಾ ಇದ್ದರು. ಹೀಗಾಗಿಯೇ ಏನೋ ಗಲಾಟೆಯಾಗಿ ದರ್ಶನ್ ಅಭಿಮಾನಿಗಳೇ ಹೊಡೆದಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಆ ಸುದ್ದಿ ಸುಳ್ಳು.
ಬಿಗ್ ಬಾಸ್ʻಗೆ ಹೋದ ಮೇಲೆ ಮತ್ತು ಹೋಗುವ ಮೊದಲು ಸದಾ ಕಾಂಟ್ರವರ್ಸಿಯಲ್ಲೇ ಸುದ್ದಿ ಮಾಡುತ್ತಿದ್ದ ಜಗದೀಶ್ ಯಾರನ್ನೂ ಬಿಟ್ಟವರಲ್ಲ. ಮಾಜಿ ಸಿಎಂ ಮತ್ತು ಚಿತ್ರನಟಿಯೊಬ್ಬರ ಸಂಬಂಧ ಇದೆ ಎನ್ನುವಲ್ಲಿಂದ ಹಿಡಿದು, ದರ್ಶನ್ ವಿಷಯದವರೆಗೆ ಸಿಕ್ಕ ಸಿಕ್ಕ ವಿಷಯಗಳಲ್ಲಿ ಮಾತನಾಡುತ್ತಿದ್ದ ಜಗದೀಶ್ ಅವರ ಮೇಲೆ ಈ ಹಿಂದೆಯೂ ಹಲ್ಲೆಯಾಗಿತ್ತು. ಬಿಗ್ ಬಾಸ್ ಶೋನದಲ್ಲಿ ಮಹಿಳೆಯರ ಒಳ ಉಡುಪಿನ ವಿಷಯದಲ್ಲಿ ವಿವಾದ ಮಾಡ್ಕೊಂಡಿದ್ದರು ಜಗದೀಶ್. ರಮೇಶ್ ಜಾರಕಿಹೊಳಿ ʻಆ ವಿಡಿಯೋ ಲೀಕ್ʼ ಆಗಿದ್ದಾಗ ಆ ಯುವತಿಯ ಪರ ಕೋರ್ಟಿನಲ್ಲಿ ವಾದ ಮಂಡಿಸಲು ಮುಂದೆ ಬಂದಿದ್ದರು ಲಾಯರ್ ಜಗದೀಶ್. ಇನ್ನು ರವಿ ಡಿ ಚನ್ನಣ್ಣವರ್ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ ಜೈಲಿಗೂ ಹೋಗಿದ್ದರು. ಇನ್ನೊಮ್ಮೆ ಅಟ್ರಾಸಿಟಿ ಕೇಸಿನಲ್ಲಿ ಅರೆಸ್ಟ್ ಆಗಿದ್ದರು ಜಗದೀಶ್. ಚಿತ್ರನಟಿಯೊಬ್ಬರ ಜೊತೆ ಕರ್ನಾಟಕದ ಪ್ರಭಾವಿ ಸಮುದಾಯ ಹಾಗೂ ಪ್ರಭಾವಿ ಮಠದ ಸ್ವಾಮೀಜಿ ಜೊತೆ ಅಫೇರ್ ಇದೆ ಎಂದು ಹೇಳಿ ಸುದ್ದಿಯಾಗಿದ್ದರು. ನಟಿ ರಚಿತಾ ರಾಮ್ ಅವರ ಬಳಿ ಕಾರು, ಆಸ್ತಿ, ಬಂಗಲೆ ಕೊಟ್ಟವರಾರು ಎಂದು ಪ್ರಶ್ನಿಸಿದ್ದರು. ಇನ್ನು ಮೊದಲಿಗೆ ದರ್ಶನ್ ಪರ ಎಂದು ಹೇಳಿ, ಆಮೇಲೆ ದರ್ಶನ್ ಅಭಿಮಾನಿಗಳನ್ನು ಬೈದು ಸುದ್ದಿಯಾಗಿದ್ದರು. ಹೀಗಾಗಿಯೇ ಜಗದೀಶ್ ಮೇಲೆ ಹಲ್ಲೆ ಮಾಡಿದ್ದು ದರ್ಶನ್ ಅಭಿಮಾನಿಗಳು ಎಂದು ಸುದ್ದಿಯಾಗಿದ್ದು. ಇರಬಹುದೇನೋ.. ದರ್ಶನ್ ವಿಷಯದಲ್ಲಿ ಅಭಿಮಾನಿಗಳು ಒಂದು ಹಂತದಲ್ಲಿ ಅತಿರೇಕದಲ್ಲಿಯೇ ವರ್ತಿಸುತ್ತಾರೆ ಎಂದುಕೊಂಡಿದ್ದವರಿಗೆ ಅದು ಸುಳ್ಳು ಎನ್ನುವುದು ಗೊತ್ತಾಗಿದೆ. ಈ ಬಾರಿ ಜಗದೀಶ್ ಅವರು ಅಣ್ಣಮ್ಮ ದೇವಿ ಭಕ್ತರನ್ನು ಕೆಣಕಿ ಒದೆ ತಿಂದಿದ್ದಾರೆ.
ಕೊಡಿಗೇಹಳ್ಳಿಯ ವಿರೂಪಾಕ್ಷ ನಗರದಲ್ಲಿ ಜಗದೀಶ್ ಅವರಿಗೆ ಸೇರಿದ ಕಾಂಪ್ಲೆಕ್ಸ್ ಇದೆ. ಈ ರಸ್ತೆಯಲ್ಲಿ ಸ್ಥಳೀಯರು ಅಣ್ಣಮ್ಮ ದೇವಿಯನ್ನು ಕೂರಿಸಲು ಪ್ಲ್ಯಾನ್ ಮಾಡಿದ್ದರು. ಪೆಂಡಾಲ್ ಹಾಕಿದ್ದರು. ಇದಕ್ಕೆ ಆಕ್ಷೇಪ ತೆಗೆದ ಜಗದೀಶ್, ಸ್ಥಳೀಯರ ಜೊತೆ ಜಗಳಕ್ಕಿಳಿದರು. ಪೊಲೀಸ್ ಕಂಪ್ಲೇಂಟ್ ಕೊಟ್ಟರು. ಪೆಂಡಾಲ್ ಹಾಕಿದ್ದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗುತ್ತದೆ ಎಂಬುದು ಜಗದೀಶ್ ಅವರ ವಾದ. ಜಗದೀಶ್ ಮನೆ ಎದುರು 40ಕ್ಕೂ ಹೆಚ್ಚು ಜನ ಸ್ಥಳೀಯರು ಬಂದು ಗಲಾಟೆ ಮಾಡಿದ್ದಷ್ಟೇ ಅಲ್ಲ, ಈ ವೇಳೆ ಜಗದೀಶ್ ಅವರ ಮೇಲೆ ಹಲ್ಲೆಯನ್ನೂ ಮಾಡಿದರು.
ಕೆಲವರು ಜಗದೀಶ್ ಅವರು ಮಾಡಿದ್ದು ಸರಿ ಎನ್ನುತ್ತಿದ್ದರೆ, ಇನ್ನೂ ಕೆಲವರು ‘ಸುಖಾಸುಮ್ಮನೆ ಕಿರಿಕ್ ಮಾಡಿದರೆ ಹೀಗೆ ಆಗೋದು’ ಎನ್ನುತ್ತಿದ್ದಾರೆ. ಆದರೆ ಹಲ್ಲೆಯ ವಿಷಯ ಕುರಿತಂತೆ ಜಗದೀಶ್ ಯಾವುದೇ ದೂರು ಕೊಟ್ಟಿಲ್ಲವಂತೆ.
ವಕೀಲ ಜಗದೀಶ್ ಅವರ ಪೂರ್ತಿ ಹೆಸರು ಜಗದೀಶ್ ಮಹಾದೇವ್ (ಕೆ ಎನ್ ಜಗದೀಶ್ ಕುಮಾರ್). ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು, ಕೈಗೆ ಗ್ಲೌಸ್ ಹಾಕಿಕೊಂಡು.. ಸೂಟು ಬೂಟು ಧರಿಸಿ.. ಮೀಡಿಯಾ ಮುಂದೆ ಡೇರಿಂಗ್ ಆಗಿ ಹೇಳಿಕೆ ಕೊಡುವವರು ಲಾಯರ್ ಜಗದೀಶ್. ವಿವಾದಿತ ಕೇಸ್‌ಗಳಲ್ಲೇ ಲಾಯರ್ ಜಗದೀಶ್ ಸುದ್ದಿ ಮಾಡಿರೋದು ಹೆಚ್ಚುಇವರಿಗೆ ಪತ್ನಿ ಹಾಗೂ ಓರ್ವ ಪುತ್ರ ಇದ್ದಾನೆ. ಆಸ್ತಿಯೇನೋ.. ಕೋಟಿ ಕೋಟಿ ಇದೆ.