ಪಲ್ಲವಿ : ಗುರುವೇ ನಿನ್ನಾಟ ಬಲ್ಲೋರ್..
ಗುರುವೇ ನಿನ್ನಾಟ ಬಲ್ಲೋರ್..
ಗುರುವೇ ನಿನ್ನಾಟ ಬಲ್ಲೋರ್ ಯಾರ್ ಯಾರೋ..
ಶಿವನೇ ನಿನ್ನಾಟ ಬಲ್ಲೋರ್ ಯಾರ್ ಯಾರೋ,
ಶಿವಾ.. ಶಿವ ಶಿವ ಶಿವ ಶಿವ ಶಿವ ಶಿವ
ಗುರುವೇ ನಿನ್ನಾಟ ಬಲ್ಲೋರ್ ಯಾರ್ ಯಾರೋ..
ಶಿವನೇ ನಿನ್ನಾಟ ಬಲ್ಲೋರ್ ಯಾರ್ ಯಾರೋ, ಶಿವಾ..
ಚರಣ 1:
ಹತ್ತೂರಿನ ಒಡೆಯ ನೀನು,
ಗೊತ್ತೇನೋ ಯಾರು ನಿಂಗೆ…
ಸೈನ್ಯಾನೆ ಇಲ್ಲ ಇವನ್ಗೆ, ಹೊಂಟವ್ನೆ ರಾಜ ನಂಗೆ..
ಬೆಳಗಾಗೋದ್ರಲ್ಲೇ ಬೆಳೆದಾ…ಬೆಳಗಾಗೋದ್ರಲ್ಲೇ ಬೆಳೆದು ಫೇಮಸ್ಸು ಆಗೋದ್ನಲ್ಲ..
ನಾನು ನಾನ್ ಅಂದೋರ್ಗೆಲ್ಲಾ ತೊಡೆತಟ್ಟಿ ನಿಂತವ್ನ್ ನೋಡ್ಲಾ..
ಬೆಳೆದ ಬೆಳೆದ ಬೆಳೆದ ನೋಡೋ..
ಗುರುವೇ ನಿನ್ನಾಟ ಬಲ್ಲೋರ್ ಯಾರ್ ಯಾರೋ..
ಶಿವನೇ ನಿನ್ನಾಟ ಬಲ್ಲೋರ್ ಯಾರ್ ಯಾರೋ, ಶಿವಾ..
ದೌಲತ್ತಲ್ ಮೆರದೋರೆಲ್ಲ ಹಿಸ್ಟರಿ ಲಿ ಉಳಿದೆಯಿಲ್ಲ..
ಕಾಲೇಳೆಯೋಕ್ ಬಂದೋರೆಲ್ಲ ಕಾಲ ಕೆಳ್ಗೆ ಉಳ್ದೊದ್ರಲ್ಲ
ನೀನ್ ಅಂತೋನ್ ಅಲ್ವೇ ಅಲ್ಲ…ನೀನ್ ಅಂತೋನ್ ಅಲ್ವೇ ಅಲ್ಲ…
ನಿನ್ನಂಗೆ ಯಾರು ಇಲ್ಲ.. ಬಕೇಟಾ ಹಿಡಿಯೋರ್ನೆಲ್ಲ ಸೈಡಿಟ್ಟು ಹೋಯ್ತಯೀರ್ಲಾ ..
ಬೆಳೆದ ಬೆಳೆದ ಬೆಳೆದ ನೋಡೋ..
ಗುರುವೇ ನಿನ್ನಾಟ ಬಲ್ಲೋರ್..ಗುರುವೇ ನಿನ್ನಾಟ ಬಲ್ಲೋರ್..
ಗುರುವೇ ನಿನ್ನಾಟ ಬಲ್ಲೋರ್ ಯಾರ್ ಯಾರೋ..
ಶಿವನೇ ನಿನ್ನಾಟ ಬಲ್ಲೋರ್ ಯಾರ್ ಯಾರೋ, ಶಿವಾ.. ಶಿವಾ..ಶಿವಾ..ಶಿವಾ..ಶಿವಾ..ಶಿವಾ..
ಜಾನಪದ ಗೀತೆಗೆ ಆಧುನಿಕ ಟಚ್ ಕೊಟ್ಟು, ಕೆಡಿ ಚಿತ್ರದ ಮೊದಲ ಹಾಡನ್ನು ರಿಲೀಸ್ ಮಾಡಲಾಗಿದೆ. ಜೋಗಿ ಪ್ರೇಮ್, ಅರ್ಜುನ್ ಜನ್ಯ ಕಾಂಬಿನೇಷನ್ನಿನಲ್ಲಿ ಬಂದಿರೋ ಹಾಡಿಗೆ ಧ್ರುವ ಸರ್ಜಾ ಮತ್ತು ರೀಷ್ಮಾ ನಾಣಯ್ಯ ಹೆಜ್ಜೆ ಹಾಕಿದ್ದಾರೆ. ಸಖತ್ತಾಗಿಯೇ ಹೆಜ್ಜೆ ಹಾಕಿದ್ದಾರೆ.
ಪ್ರೇಮ್ ಸಿನಿಮಾಗಳಲ್ಲಿ ಜಾನಪದ ಗೀತೆಗಳಿಗೆ ಆಧುನಿಕ ಟಚ್ ಕೊಡುವ ಸಂಪ್ರದಾಯ ಇದೆ. ಅದು ಕೆಡಿಯಲ್ಲೂ ಮುಂದುವರೆದಿದೆ. ಜೋಗಿ ಚಿತ್ರದಲ್ಲಿ ʻಎಲ್ಲೋ ಜೋಗಪ್ಪ ನಿನ್ನರಮನೆ.. , ಈ ಪ್ರೀತಿ ಏಕೆ ಭೂಮಿ ಮೇಲೆ ಇದೆ.. ಚಿತ್ರದಲ್ಲಿ ʻಭಾಗ್ಯದ ಬಳೆಗಾರ..ʼ ವಿಲನ್ ಚಿತ್ರದಲ್ಲಿ ʻನೋಡಿವಳಂದಾವ..ʼ ಹೀಗೆ.. ಪ್ರತಿ ಸಿನಿಮಾದಲ್ಲೂ ಜಾನಪದ ಹಾಡನ್ನು ಬಳಸಿಕೊಳ್ಳೋ ಪ್ರೇಮ್ ಈ ಚಿತ್ರದಲ್ಲಿ ಗುರುವೇ ನಿನ್ನ ಆಟ ಬಲ್ಲೋರ್.. ಹಾಡನ್ನು ಬಳಸಿಕೊಂಡಿದ್ದಾರೆ.
ಡಿಸೆಂಬರ್-24 ರಂದು ಬೆಳಗ್ಗೆ 11.04 ನಿಮಿಷಕ್ಕೆ ರಿಲೀಸ್ ಮಾಡಲಾಗಿದ್ದು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಪ್ರೇಮ್ ಅವರಿಗಾಗಿಯೇ ಸ್ಪೆಷಲ್ ಟ್ಯೂನ್ ಹಾಕಿದಂತಿದೆ. ಧ್ರುವ ಸರ್ಜಾ-ರೀಷ್ಮಾ ನಾಣಯ್ಯ ಸಖತ್ತಾಗಿ ಕುಣಿಯುತ್ತಿರೋ ಹಾಡಿಗೆ ಕೈಲಾಶ್ ಖೇರ್, ಜೋಗಿ ಪ್ರೇಮ್ ಹಾಡಿದ್ದಾರೆ. ಶಿವ ಶಿವ ಅಂತಲೇ ಸಾಗೋ ಈ ಹಾಡಿನ ವಿಡಿಯೋ ಸೂಪರ್ ಆಗಿದೆ. ಅಷ್ಟೇ ಕಲರ್‌ಫುಲ್ ಆಗಿಯೂ ಇದೆ. ಇದರಲ್ಲಿ ಅಘೋರಿಗಳ ಚಿತ್ರಣವೂ ಇದೆ. ಅಷ್ಟೇ ವೈಬ್ರೇಷನ್ ಕ್ರಿಯೇಟ್ ಮಾಡುತ್ತಿದೆ. ಒಂದು ಹಾಡಿನಲ್ಲಿ ಅನಿಮೇಷನ್ ಮೂಲಕ ಕಥೆಯ ಝಲಕ್ ಕೂಡ ಬಿಟ್ಟುಕೊಡಲಾಗಿದೆ. ಹಾಡಂತೂ ಮಜವಾಗಿದೆ.