ಸಾಮಾನ್ಯವಾಗಿ ಕಾರುಗಳು ಪೆಟ್ರೋಲ್ ಆದರೆ 20 ರಿಂದ 22 ಕಿಮೀ ಮೈಲೇಜ್ ಕೊಡುತ್ತವೆ. ಗರಿಷ್ಠ 25 ಕಿಮೀ ಮೈಲೇಜ್ ಎಂದೂ ಹೇಳುತ್ತಾರೆ. ಇನ್ನು ಡೀಸೆಲ್ ಕಾರ್ ಆದರೆ, 25 ಕಿಮೀ ಮೈಲೇಜ್ ಕೊಡುತ್ತೆ. 28-30 ಕಿಮೀ ಎಂದು ಕಾರ್ ಸೇಲ್ ಮಾಡುವಾಗ ಹೇಳ್ತಾರೆ. ಖರೀದಿ ಮಾಡುವವರು ಅವರು ಹೇಳಿದ್ದಕ್ಕಿಂತ 5 ಕಿಮೀ ಕಡಿಮೆ ಮಾಡಿಕೊಂಡು ಅರ್ಥ ಮಾಡ್ಕೊಳ್ತಾರೆ. ಆದರೆ ಈಗ ಹೊಸ ಕಾರು ಬರ್ತಾ ಇದೆ. ಈ ಕಾರಿನ ಬೆಲೆ ಜಸ್ಟ್ 6 ಲಕ್ಷ ರೂಪಾಯಿ ಅಂತೆ. ಲೀಟರಿಗೆ 30 ಕಿಮೀಗೂ ಹೆಚ್ಚಿನ ಮೈಲೇಜ್ ಕೊಡುತ್ತಂತೆ.
ಈ ಹೊಸ ಮಾಡೆಲ್ ಕಾರು ಮಾರುತು ಸುಝುಕಿ ಕಂಪೆನಿಯದ್ದು. ಸ್ವಿಫ್ಟ್ ಡಿಸೈರ್ ಮಾಡೆಲ್ಲಿನ 4ನೇ ಜನರೇಷನ್ ಕಾರಿದು. ಈ ಕಾರಿನ ವೈಶಷ್ಟ್ಯತೆ ಎಂದರೆ, ಇದು ಹೈಬ್ರಿಡ್ ಕಾರು. ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಮೂರೂ ಆವೃತ್ತಿಗಳಲ್ಲಿ ಲಭ್ಯವಿದೆ. ನಿಮಗೆ ಯಾವುದು ಇಷ್ಟವೋ, ಆ ಮಾದರಿಯ ಕಾರು ಖರೀದಿ ಮಾಡಬಹುದು. ಪೆಟ್ರೊಲ್ ಅಥವಾ ಡೀಸೆಲ್ ಮಾಡೆಲ್ಲಿನಲ್ಲಿ ಲಭ್ಯ ಇರುತ್ತೆ. ಸಿಎನ್‌ಜಿ ಬೇಕು ಎಂದರೆ ಕಸ್ಟಮೈಸ್ ಅಸೆಂಬಲ್ ಮಾಡಿಕೊಡ್ತಾರೆ.
ಸದ್ಯಕ್ಕೆ ಇರುವ ಲೇಟೆಸ್ಟ್ ಸ್ವಿಫ್ಟ್/ಡಿಸೈರ್ ಮಾಡೆಲ್ಲಿನಲ್ಲಿ ಇರುವುದು ಕೆ-ಸಿರೀಸ್ ಎಂಜಿನ್. ಇದರಲ್ಲಿ 1.2 ಲೀಟರ್ ಸಾಮರ್ಥ್ಯದ 4 ಗ್ಯಾಸ್ ಸಿಲಿಂಡರ್ ಬಳಸಬಹುದು. ಪೆಟ್ರೋಲ್ ಟ್ಯಾಂಕರ್ ಕೂಡಾ ಇರುತ್ತದೆ. ಈಗ ಬರುವ ಹೊಸ ಮಾಡೆಲ್ಲಿನ ಕಾರಿನಲ್ಲಿ ಗ್ಯಾಸ್ ಸಿಲಿಂಡರ್ ಸಂಖ್ಯೆ 3ಕ್ಕೆ ಇಳಿಕೆಯಾಗುತ್ತದೆ. ಆದರೆ 4 ಸಿಲಿಂಡರಿನ ಕೆಪಾಸಿಟಿ, ಮೈಲೇಜ್, 3 ಸಿಲಿಂಡರಿನಲ್ಲೇ ಸಿಗುತ್ತೆ. ಅಂದರೆ ಒಂದು ಸಿಲಿಂಡರ್ ಉಳಿತಾಯ. Z12ಇ 1.2 ಲೀಟರ್ 3 ಸಿಲಿಂಡರ್ ಎಂಜಿನ್ ಬಳಸಲಾಗಿದೆ.
ಹೊಸ ಮಾರುತಿ ಸುಜುಕಿ ಸ್ವಿಫ್ಟ್‌ನಲ್ಲಿ ಹೈಬ್ರಿಡ್ ತಂತ್ರಜ್ಞಾನವನ್ನು ಬಳಸಲಾಗಿದೆ, ಇದರ ಸಹಾಯದಿಂದ ಈ ಕಾರು 35 ರಿಂದ 40 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಹೈಬ್ರಿಡ್ ಕಾರಾಗಿರುವ ಕಾರಣ ಮಾಲಿನ್ಯದ ಪ್ರಮಾಣವೂ ತಗ್ಗಲಿದೆ. ಇದೀಗ ಪೆಟ್ರೋಲ್ ಬೆಲೆ ದುಬಾರಿಯಾಗಿರುವ ಕಾರಣ ಹೊಸ ಆವೃತ್ತಿ ಮಾರುತಿ ಸ್ವಿಫ್ಟ್ ಕಾರು ಅತೀ ಕಡಿಮೆ ನಿರ್ವಹಣೆ ವೆಚ್ಚ ನೀಡಲಿದೆ.
ಈ ಕಾರಿನ ಸ್ಪೆಷಾಲಿಟಿ ಏನೆಂದರೆ..
ಪೆಟ್ರೋಲ್ ಕಾರಿನ ಮೈಲೇಜ್ : 25.7 ಕಿಮೀ ಇದ್ದರೆ, ಪೆಟ್ರೋಲ್+ಸಿಎನ್‌ಜಿ ಮೈಲೇಜ್ ಕನಿಷ್ಠ 33.7 ಕಿ.ಮೀ. ಇದೆ. ನವೆಂಬರ್ 11ನೇ ತಾರೀಕು ಕಾರಿನ ಮಾರುಕಟ್ಟೆ ದರ ಅಧಿಕೃತವಾಗಿ ಘೋಷಣೆಯಾಗಲಿದೆ. ಟೋಕನ್ ಪೇಮೆಂಟ್ ಆಗಿ 11 ಸಾವಿರ ಕಟ್ಟಿ ಬುಕ್ ಮಾಡಬಹುದು. ವರದಿಗಳ ಪ್ರಕಾರ, ಕಂಪನಿಯು ಈ ಕಾರನ್ನು ಮಾರುಕಟ್ಟೆಯಲ್ಲಿ 6 ಲಕ್ಷ ರೂ. (ಎಕ್ಸ್-ಶೋ ರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಬೇಸ್ ಮಾಡೆಲ್ ಬೆಲೆಯನ್ನು 6 ಲಕ್ಷ ರೂಪಾಯಿಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದು ಹೊಸ ಸ್ವಿಫ್ಟ್ ಕಾರಿನ ಬೇಡಿಕೆ ಮತ್ತಷ್ಟು ಹೆಚ್ಚಿಸುವುದು ಸುಳ್ಳಲ್ಲ.