ದೇವರ ಪೂಜೆಗೆ ದೇವಸ್ಥಾನಕ್ಕೆ ಹೋಗ್ತೇವೆ. ದೇವರ ದರ್ಶನ ಚೆನ್ನಾಗಿ ಆದರೆ.. ಖುಷಿಯೋ ಖುಷಿ. ಏನೋ ನೆಮ್ಮದಿ. ಅಂತಹ ದೇವರೇ.. ನಮ್ಮನ್ನು ಮೆಚ್ಚಿಕೊಂಡು ಎದುರಿಗೆ ಬಂದರೆ.. ಆ ಸಂಭ್ರಮಕ್ಕೆ ಪಾರವೇ ಇಲ್ಲ. ಕ್ರಿಕೆಟ್ ಲೋಕಕ್ಕೆ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಸಚಿನ್ ತೆಂಡೂಲ್ಕರ್ ದೇವರು. ಕ್ರಿಕೆಟರ್ ಕೂಡಾ ಆಗಿರುವ ಸುದೀಪ್ ಪಾಲಿಗೆ ಕೂಡಾ. ಕಿಚ್ಚ ಸುದೀಪ್ ಎಂದು ಕೋಟ್ಯಂತರ ಅಭಿಮಾನಿಗಳಿಂದ ಕರೆಸಿಕೊಳ್ಳೋ ಸುದೀಪ್ ಕೂಡಾ.. ಕ್ರಿಕೆಟ್ ದೇವರ ಎದುರು ಜಸ್ಟ್ ಅಭಿಮಾನಿ.
ಅಭಿಮಾನಿಗಳು ಇಷ್ಟಪಡುವುದೇ ಬೇರೆ.. ಅಭಿಮಾನಿಗಳ ದೇವರು ಮೆಚ್ಚಿಕೊಳ್ಳೋದೇ ಬೇರೆ.. ಕಿಚ್ಚ ಸುದೀಪ್ ಅವರ ಸ್ಥಿತಿ ಸದ್ಯಕ್ಕೆ ಹಾಗೆಯೇ ಇದೆ. ಏಕೆಂದರೆ ಕಿಚ್ಚ ಸುದೀಪ್ ಅವರನ್ನ ಕ್ರಿಕೆಟ್ ದೇವರು ಹಾಡಿ ಹೊಗಳಿದ್ದಾರೆ. ಅದನ್ನು ಸ್ವತಃ ಸುದೀಪ್ ನಿರೀಕ್ಷೆ ಮಾಡಿರಲಿಲ್ಲವಾದ್ದರಿಂದ ಅವರೂ ಥ್ರಿಲ್ಲಾಗಿದ್ಧಾರೆ. ಅದು ಶುರುವಾಗಿದ್ದು ಹೀಗೆ..
ಆಗಾಗ್ಗೆ ಸುದೀಪ್ ಅಭಿಮಾನಿಗಳ ಜೊತೆ ಚಾಟ್ ಮಾಡ್ತಾನೇ ಇರ್ತಾರೆ. ಆ ರೀತಿಯೇ ಆಗುವಾಗ ಸುದೀಪ್ ಅಭಿಮಾನಿ ಹೇಮಂತ್ ಶೈವ ಅನ್ನೋವ್ರು ಸುದೀಪ್ ಮತ್ತು ತೆಂಡೂಲ್ಕರ್ ಇಬ್ಬರೂ ಒಟ್ಟಿಗೇ ಇರುವ ಫೋಟೋ ಟ್ವೀಟ್ ಮಾಡಿದ್ದರು. ಈ ಫೋಟೊ ನೋಡುವುದಕ್ಕೆ ವ್ಹಾವ್ ಎನಿಸುತ್ತಿದೆ.. ಇದೊಂದು ಸವಿನೆನಪು ಗೆಳೆಯ.. ಎಂದು ಕಿಚ್ಚ ಸುದೀಪ್ ರಿಯಾಕ್ಟ್ ಮಾಡಿದ್ದರು. ಇದು ನಡೆದದ್ದು ಜನವರಿ 16ರಂದು. ಆದರೆ ಆ ಫೋಟೋ ಸಚಿನ್ ತೆಂಡೂಲ್ಕರ್ ಕಣ್ಣಿಗೆ ಬಿತ್ತು. ಅವರು ಫೆಬ್ರವರಿ ೨ರಂದು ರಿಯಾಕ್ಟ್ ಮಾಡಿದ್ದಾರೆ.
ನಿಮ್ಮನ್ನು ಭೇಟಿಯಾಗಿದ್ದು ತುಂಬಾನೇ ಖುಷಿ ಆಯ್ತು. ಆ ದಿನ ನಮ್ಮ ಫೋಟೊವನ್ನು ಯಾರೋ ಎಷ್ಟು ಚೆನ್ನಾಗಿ ‘ಕಿಚ್ಚ’ನಂತೆಯೇ ತೆಗೆದಿದ್ದಾರೆ (ಔರ್ ಉಸ್ ದಿನ್ ಕಿಸ್ನೆ ಹಮಾರಾ ಯೆ ಫೋಟೋ ಭೀ ಕಿತ್ನಾ ಅಚ್ಚಾ ಕಿಚ್ಚಾ..ಥಾ) ನಿಮ್ಮ ಜೀವನದಲ್ಲಿ ಉತ್ತಮ ಆರೋಗ್ಯ ಹಾಗೂ ಖುಷಿ ಸದಾ ಇರಲಿ.. ಎಂದು ಹಾರೈಸಿದ್ದರು.
ಕಿಚ್ಚ ಸುದೀಪ್ ಥ್ರಿಲ್ಲಾಗದೇ ಏನು.. ತಕ್ಷಣವೇ ರಿಯಾಕ್ಟ್ ಮಾಡಿದ ಕಿಚ್ಚ ಸುದೀಪ್ “ವ್ಹಾವ್.. ಇದನ್ನು ನಿರೀಕ್ಷೆ ಮಾಡಿರಲಿಲ್ಲ.. ನೀವು ಈಗ ತಾನೇ ಎಂದೂ ಮರೆಯದ ಸವಿನೆನಪನ್ನು ಉಡುಗೊರೆಯಾಗಿ ಕೊಟ್ಟಿದ್ದೀರಿ. ಸಚಿನ್ ಸರ್ ನಿಮಗೆ ನನ್ನ ಕಡೆಯಿಂದ ಪ್ರೀತಿಯ ಶುಭ ಹಾರೈಕೆಗಳು.. ಎಂದು ಟ್ವೀಟ್ ಮಾಡಿದ್ರು.
ಕ್ರಿಕೆಟ್ʻನ್ನು ಸುದೀಪ್ ಇಷ್ಟಪಡ್ತಾರೆ. ಸಿನಿಮಾ ಮತ್ತಿತರ ಕೆಲಸಗಳನ್ನೂ ಬಿಟ್ಟು ಕ್ರಿಕೆಟ್ ನೋಡ್ತಾರೆ. ಆಡ್ತಾರೆ. ಕ್ರಿಕೆಟ್ ಹೆಸರಲ್ಲಿ ಚಿತ್ರರಂಗವನ್ನು ಒಗ್ಗಟ್ಟಾಗಿಸುತ್ತಿರುವ ಸುದೀಪ್ ಅವರನ್ನು ಕ್ರಿಕೆಟ್ ದೇವರೇ ಮೆಚ್ಚಿಕೊಂಡಾಗ.. ಆಗಿರುವ ಆ ಥ್ರಿಲ್ ಬೇರೆಯದೇ ರೀತಿಯಲ್ಲಿರುತ್ತೆ ಅನ್ನೋದ್ರಲ್ಲಿ ಅನುಮಾನವಿಲ್ಲ.
ಸುದೀಪ್ ಅವರಿಗೆ ಕ್ರಿಸ್ ಗೇಲ್, ಸುರೇಶ್ ರೈನಾ, ಗಿಲ್ʻಕ್ರಿಸ್ಟ್, ಸೆಹ್ವಾಗ್, ಮಯಾಂಕ್ ಅಗರ್ʻವಾಲ್, ಅಯ್ಯಪ್ಪ, ರಾಹುಲ್.. ಹೀಗೆ ಹಲವು ಕ್ರಿಕೆಟರ್ʻಗಳ ವೈಯಕ್ತಿಕ ಸ್ನೇಹ ಇದೆ. ಆದರೆ.. ಕ್ರಿಕೆಟ್ ದೇವರೂ ಮೆಚ್ಚಿಕೊಳ್ಳುವಂತಹ.. ಅದರಲ್ಲೂ ಕಿಚ್ಚ ಎಂಬ ಹೆಸರನ್ನೂ ನೆನಪಿಟ್ಟುಕೊಳ್ಳುವಂತಹ.. ಅದನ್ನು ಟ್ವೀಟ್ ಮಾಡಿ ಹೊಗಳುವಂತಹ ಫ್ರೆಂಡ್ʻಶಿಪ್ ಇದೆ ಅನ್ನೋದು ಕಿಚ್ಚ ಸುದೀಪ್ ಅವರಿಗಿರಲಿ… ಅಭಿಮಾನಿಗಳಿಗೆ ಕೊಟ್ಟಿರುವ ಥ್ರಿಲ್ಲೇ ಬೇರೆ.