ಮಹಿಂದ್ರಾ ಥಾರ್.. ಇದು ಕಾರ್ ಅಲ್ಲ..ಜೀಪು. ಈ ಮಹಿಂದ್ರಾ ಥಾರ್ ಕಂಡ್ರೆ.. ಕಾರು, ಜೀಪುಗಳ ಮೇಲೆ ಅಷ್ಟೇನೂ ಆಸಕ್ತಿ ಇಲ್ಲದವನೂ ಒಂದ್ಸಲ ನೋಡ್ತಾರೆ. ಆ ಕಾರು.. ಆ ಡಿಸೈನು.. ವ್ಹಾ.. ಸಖತ್ತಾಗಿದೆ ಅಂದ್ಕೋತಾರೆ. ಆದರೆ.. ಮಹಿಂದ್ರಾ ಕಾರ್ ಒಂದು ಬಳ್ಳಾರಿಲಿ ಹೊತ್ತಿ ಉರಿದಿದೆ. ಬಳ್ಳಾರಿಯಿಂದ ಸಂಡೂರು ರೋಡಲ್ಲಿ ಹೋಗೋವಾಗ.. ಥಾರ್.. ಆಫ್ ಆಗಿದೆ. ಎಷ್ಟ್ ಸಲ ಕೀ ಉಲ್ಟಾ ಪಲ್ಟಾ ತಿರುಗಿಸಿದ್ರೂ ಸ್ಟಾರ್ಟ್ ಆಗಿಲ್ಲ. ಅದೇನ್ ಬೈಕ್ ಕೆಟ್ಟೋಯ್ತಾ.. ಸೆಲ್ಫ್ ಆಗ್ಲಿಲ್ಲ ಅಂದ್ರೆ ಎರಡು ಕಿಕ್ ಕೊಟ್ಟು ಸ್ಟಾರ್ಟ್ ಮಾಡೋಣ.. ಅನ್ನೋಕೆ. ಥಾರ್… ಸ್ಸೋ.. ಥಾರ್ ಡ್ರೈವರ್ ಏನ್ ಮಾಡಿದ್ದಾನೆ ಅಂದ್ರೆ.. ಮತ್ತೆ ಮತ್ತೆ ಸ್ಟಾರ್ಟ್ ಮಾಡೋಕೆ ಟ್ರೈ ಮಾಡಿದ್ದಾನೆ. ಸ್ಟಾರ್ಟ್ ಆಗಿಲ್ಲ. ಏನೋ ಸುಟ್ ವಾಸ್ನೆ ಬರ್ತಾ ಇದ್ಯಲ್ಲ ಅಂತಾ ಡೌಟ್ ಬಂದಿದೆ. ಸರಕ್ ಅಂತಾ ಹೊರಗೆ ಬಂದಿದ್ದಾನೆ. ಅಷ್ಟ್ ಹೊತ್ತಿಗೆ ಥಾರ್ ಧಗ ಧಗ ಅಂತಾ ಹೊತ್ತಿಕೊಂಡು ಉರಿದಿದೆ.
ಅದು ಬಳ್ಳಾರಿ. ಮೊದಲೇ ನೀರಿಗ್ ಬರ. ಅದೂ ಅಲ್ದೆ ಬೆಂಕಿ ಹೊತ್ತಿಕೊಂಡಿರೋದು ರಸ್ತೆ ಮಧ್ಯೆ. ಕಾರಿಗೆ ಹೊತ್ಕೊಂಡಿದ್ದ ಬೆಂಕಿಯನ್ನ ಆರಿಸೋಕೆ ಆಗಿಲ್ಲ. ಮಹಿಂದ್ರಾ ಥಾರ್, ಸುಟ್ಟು ಇದ್ಲಾಗಿದೆ.
ಈ ಥಾರ್ ಇದ್ಯಲ್ಲ, ಮೇಡ್ ಇನ್ ಇಂಡಿಯಾ ಕಾರುಗಳಲ್ಲಿ ಸೇಫ್ಟಿ ಲೆಕ್ಕ ನೋಡಿದ್ರೆ ಇದಕ್ಕೆ ನಂಬರ್ ಒನ್ ಪೊಸಿಷನ್ ಕೊಡ್ಬಹುದು. ಅಷ್ಟು ಪರ್ಫೆಕ್ಟ್ ಆಗಿದೆ. ಈ ಥಾರ್ ಎಸ್‌ಯುವಿ ಇದ್ಯಲ್ಲ, ಅದೊಂಥರಾ ಬೇರೆಯದ್ದೇ ಫೀಲು. ಬೇಸಿಕ್ ಶುರುವಾಗೋದೇ 12 ಲಕ್ಷದಿಂದ. ಈ ಕಾರುಗಳು ದಿನಕ್ಕೆ ಮುನ್ನೂರು.. ಮುನ್ನೂರೈವತ್ತು ಬುಕ್ ಆಗ್ತವಂತೆ. ಆದರೆ ಬಡವರಿಗೆ ಅಲ್ಲ. ಮೈಲೇಜು ಕಡಿಮೆ. ಆದರೆ ಸೇಫ್ಟಿ ಜಾಸ್ತಿ.
ಈ ಮಹಿಂದ್ರಾ ಥಾರ್ ಎಷ್ಟು ಸೇಫ್ ಅಂದ್ರೆ, ಫೈವ್ ಸ್ಟಾರ್ ಸೇಫ್ಟಿ ranking ಇದೆ. 6 ಏರ್ ಬ್ಯಾಗ್ಸ್, ಲೆವೆಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ, ಟಯರ್ ಪ್ರೆಷರ್ ಮಾನಿಟರ್, ಸೀಟ್ ಬೆಲ್ಟ್ ರಿಮೈಂಡರ್.. ಎಲ್ಲ ಪರ್ಫೆಕ್ಟ್ ಆಗಿದೆ. ನೀವು ಆಕ್ಸಿಡೆಂಟ್ ವಿಡಿಯೋಗಳನ್ನ ನೋಡಿರ್ತೀರ. ಥಾರ್ ಕೂಡಾ ಆಕ್ಸಿಡೆಂಟ್ ಆಗುತ್ತೆ. ಆದರೆ. ಆಕ್ಸಿಡೆಂಟ್ ಸ್ಪಾಟುಗಳಲ್ಲಿ ಈ ಥಾರ್ ಎಕ್ಸ್ ಯುವಿ, ಚೂರೇ ಚೂರು ಅಲ್ಲಾಡಿರಲ್ಲ. ಅಮ್ಮಮ್ಮಾ ಅಂದ್ರೆ ಒಂದಷ್ಟು ಸ್ಕ್ರಾಚ್ ಆಗಿರುತ್ತೆ. ಡೆಂಟ್ ಆಗಿರೋದನ್ನ ನೋಡೋದೂ ಕಡಿಮೆನೇ. ಡ್ರೈವರ್ ಸೀಟ್ ಆಗ್ಲಿ, ಮತ್ತೊಂದಾಗ್ಲಿ.. ಕುಳಿತಿದ್ದವರು ಕುಡಿದ ನೀರು ಅಲ್ಲಾಡ್ ದಂಗೆ ಕುಳಿತಿರ್ತಾರೆ.
ಹೀಂಗಿರೋವಾಗ ಥಾರ್ ಕಾರು, ಡ್ರೈವಿಂಗ್ ಮಾಡ್ತಿದ್ದಂಗೇ ಆಫ್ ಆಗಿದೆ. ಸ್ಟಾರ್ಟ್ ಆಗಿಲ್ಲ. ಆಮೇಲೆ ಬೆಂಕಿ ಹೊತ್ಕೊಂಡಿದೆ ಅಂದ್ರೆ ಹೆಂಗೆ.. ಹೆಂಗೆ ಅಂದರೆ ಇದು ಬಿಸಿಲಿನ ಎಫೆಕ್ಟ್. ಕಾರ್ ಯಾವ್ದೇ ಇರಲಿ.. ಎಂಥದ್ದೇ ಟಾಪ್ ಕಾರೇ ಆಗಿರ್ಲಿ.. ಬಿಸಿಲಲ್ಲಿ ಜಾಸ್ತಿ ಹೊತ್ತು ನಿಲ್ಲಿಸಿದ್ರೆ ಟ್ಯಾಂಕಿನೊಳಗಿದ್ದ ಪೆಟ್ರೋಲ್/ಡೀಸೆಲ್ ಕೂಡಾ ಕೊತ ಕೊತ ಕುದಿಯೋಕೆ ಸ್ಟಾರ್ಟ್ ಆಗುತ್ತೆ. ಅಂತಾ ಟೈಮಲ್ಲಿ ಮೊದಲೇ ಫುಲ್ ಮೆಟಲ್ ಗಾಡಿ ಥಾರ್ ಕಾರಿನಲ್ಲಿ ಹೀಗೇ ಆಗಿರಬಹುದು. ಮೊದ್ಲೇ ಬಳ್ಳಾರಿ ರಣರಣ ಬಿಸಿಲು. ಆ ಬಿಸಲಲ್ಲಿ ಗಂಟೆಗಟ್ಲೆ ನಿಲ್ಲಿಸಿದ್ದ ಕಾರನ್ನ ಮತ್ತೆ ಸ್ಟಾರ್ಟ್ ಮಾಡೋವಾಗ.. ಸ್ವಲ್ಪ ಕೂಲ್ ಮಾಡೋದು ಒಳ್ಳೆಯದು.
ಇನ್ನು ಮಹಿಂದ್ರಾ ಥಾರ್, ಸ್ಟಾರ್ಟ್ ಅಗಿಲ್ಲವಲ್ಲ. ಅದೇ ಈ ಥಾರ್ ಸೇಫ್ಟಿಗೆ ಇನ್ನೊಂದು ಪ್ಲಸ್ ಅಂತಾ ಹೇಳ್ಬಹುದು. ಅಂದ್ರೆ ಈ ಥಾರ್, ಹೋಗ್ ಹೋಗ್ತಾನೋ.. ಡ್ರೈವಿಂಗ್ ಮಾಡ್ತಿರೋವಾಗ್ಲೋ ಹೊತ್ಕೊಂಡಿಲ್ಲ. ಫೈರ್ ಆಗುತ್ತೆ ಅನ್ನೋದ್ರ ಸಿಗ್ನಲ್ ಸಿಕ್ಕ ಕೂಡ್ಲೇ ಮಹಿಂದ್ರಾ ಥಾರ್ ಅಲರ್ಟ್ ಆಗಿದೆ. ಸ್ಟಾರ್ಟೇ ಆಗಿಲ್ಲ. ರನ್ನಿಂಗಿನಲ್ಲಿರೋವಾಗ್ಲೇ ಆಫ್ ಆಗಿದೆ. ಅಲ್ಲಿಗೆ ಥಾರಿನಲ್ಲಿದ್ದವರು ಬಚಾವ್ ಆಗಿದ್ದಾರೆ.
ಥಾರ್ ಮತ್ತೊಮ್ಮೆ ಸೇಫ್ಟಿ rankingನಲ್ಲಿ ಬೆಸ್ಟ್. ನಾವ್ಯಾಕೆ ಫೈವ್ ಸ್ಟಾರ್ ತಗೊಂಡಿದ್ದೀವಿ ಅಂತಾ ತೋರಿಸಿಕೊಟ್ಟಿದೆ, ಅಷ್ಟೇ.