ಪ್ರಧಾನಿ ನರೇಂದ್ರ ಮೋದಿ ಈ ಬಾರಿ 5 ವರ್ಷ ಆಳ್ವಿಕೆ ಕಂಪ್ಲೀಟ್ ಮಾಡಲ್ಲ. ಅದು ಬಿಜೆಪಿಯಲ್ಲಿಯೇ ಹಲವರಿಗೆ ಇಷ್ಟ ಇಲ್ಲ. ಆರೆಸ್ಸೆಸ್ಸಿನವರಿಗೂ ಅದು ಬೇಕಿಲ್ಲ ಅನ್ನೋ ಕಥೆಗಳು ರಾಜಕೀಯದಲ್ಲಿ ಕೇಳಿ ಬಂದಿವೆ. ಅರವಿಂದ ಕೇಜ್ರಿವಾಲ್, ರಾಹುಲ್ ಗಾಂಧಿ ಮೊದಲಾದವರು ಅದನ್ನು ಬಹಿರಂಗವಾಗಿ ಹೇಳಿಯೂ ಇದ್ಧಾರೆ. ಅಮಿತ್ ಶಾ ಮೊದಲಾದವರು ಅದನ್ನು ಸುಳ್ಳು ಎಂದೂ ಹೇಳಿದ್ದಾರೆ. ಈ ಮಧ್ಯೆ ಹಲವು ಜ್ಯೋತಿಷಿಗಳ ವಾದದಲ್ಲಿ ಪರ ವಿರುದ್ಧ ಅಭಿಪ್ರಾಯಗಳಿವೆ. ಇದೀಗ ಬ್ರಹ್ಮಾಂಡ ಖ್ಯಾತಿಯ ಜ್ಯೋತಿಷಿ ನರೇಂದ್ರ ಬಾಬು ಶರ್ಮಾ ಸ್ಫೋಟಕ ಎನ್ನಿಸುವಂತಹ ಭವಿಷ್ಯ ಹೇಳಿದ್ದಾರೆ.
ಬ್ರಹ್ಮಾಂಡ ಗುರೂಜಿ ಪ್ರಕಾರ ಪ್ರಧಾನಿ ನರೇಂದ್ರ ಮೋದಿ, ಎರಡು ವರ್ಷ ಅವಧಿಯಲ್ಲಿ ಕೇವಲ ಒಂದೂವರೆ ವರ್ಷ ಮಾತ್ರ ಪ್ರಧಾನಿಯಾಗಿ ಉಳಿಯುತ್ತಾರೆ. ಬಳಿಕ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಆಶ್ರಮ ಸೇರಲಿದ್ದಾರೆ. ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಒಬ್ಬ ಸನ್ಯಾಸಿ ಆಳ್ವಿಕೆ ಮಾಡಲಿದ್ದಾರೆ ಎಂದೂ ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ.
ಮೋದಿಯವರೇ ಬೇಸತ್ತು ರಾಜೀನಾಮೆ ಕೊಡಬಹುದು ಅಥವಾ ಬೇರೆಯದೇ ಆಯ್ಕೆ ಮಾಡಿಕೊಳ್ಳಬಹುದು ಎಂದಿರುವ ನರೇಂದ್ರ ಬಾಬು ಶರ್ಮಾ ʻಮೋದಿಯವರು ಈ ರಾಜಕೀಯ ಹೊಲಸು ಸರಿಮಾಡಲು ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ ಏನೂ ಬದಲಾವಣೆ ಆಗದೆ ಬೇಜಾರಾಗಿ ರಾಜೀನಾಮೆ ನೀಡಬಹುದುʼ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಭಾರತವೂ ಇಬ್ಭಾಗ.. ಕರ್ನಾಟಕ ಮೂರು ಭಾಗ :
ಇನ್ನೂ ಆತಂಕಕಾರಿ ಭವಿಷ್ಯ ಹೇಳಿರುವ ಬ್ರಹ್ಮಾಂಡ ಸ್ವಾಮಿ ಭಾರತ ದೇಶ ಮತ್ತೆ ಎರಡು ಭಾಗ ಆಗಲಿದೆ. ಬಾಂಗ್ಲಾದೇಶ-ಚೈನಾ ಕುತಂತ್ರ ಮಾಡಿ ಭಾರತ ದೇಶದ ಮೇಲೆ ದಾಳಿ ಮಾಡಲಿವೆ. ನಮಗೆ ಅಮೆರಿಕದಿಂದಾಗಲಿ ಬೇರೆ ಯಾವ ದೇಶದಿಂದ ಸಹಾಯ ಸಿಗುವುದಿಲ್ಲ. ರಷ್ಯಾವೊಂದೇ ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಕರ್ನಾಟಕದ ಬಗ್ಗೆಯೂ ಭವಿಷ್ಯ ನುಡಿದಿದ್ದ, ಕರ್ನಾಟಕ ಮೂರು ಭಾಗ ಆಗೋದು ಶತಸಿದ್ಧ, ಶಿವನ ಮೇಲೆ ಆಣೆ ಮಾಡುತ್ತೇ ಸತ್ಯವಾಗಲಿದೆ. ಕರ್ನಾಟಕ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹೀಗೆ ಮೂರು ಭಾಗ ಆಗಲಿದೆ. ಮೂವರು ಮುಖ್ಯಮಂತ್ರಿಗಳಾಗಲಿದ್ದಾರೆ. ಇದು 2025 ರಿಂದ 2032ರವರೆಗೆ ನಡೆಯಲಿದೆ ಎಂದಿದ್ದಾರೆ.
13 ಮುಸ್ಲಿಂ ರಾಷ್ಟ್ರಗಳಿಂದ ಭಾರತದ ಮೇಲೆ ಅಟ್ಯಾಕ್ :
2025 – 2026ಕ್ಕೆ ಮೂರನೇ ಮಹಾಯುದ್ಧ ನಡೆಯಲಿದ್ದು, 13 ಮುಸ್ಲಿಂ ರಾಷ್ಟ್ರಗಳು ಭಾರತದ ಮೇಲೆ ದಾಳಿ ಮಾಡಲಿವೆ. ಮೂರನೇ ಮಹಾಯುದ್ಧ ನಡೆಯುವುದು ಶತಸಿದ್ಧ. ಇಂತಹ ಕೆಟ್ಟ ಘಟನೆಗೆ ಸಾಕ್ಷಿ ಎಂಬಂತೆ 2025ರಲ್ಲಿ ಮೂರು ಗ್ರಹಣಗಳು ಒಂದೇ ವರ್ಷ ಸಂಭವಿಸಲಿವೆ ಎಂದಿದ್ದಾರೆ. ಮೂರು ಗ್ರಹಣಗಳು ಒಂದೇ ವರ್ಷದಲ್ಲಿ ಬರುವುದು ಶುಭ ಸೂಚಕವಲ್ಲ. ಆದರೆ ಮೂರು ಗ್ರಹಣಗಳು ಏಕಕಾಲಕ್ಕೆ ಬರಲಿವೆ ಎಂದು ಹೇಳಿದ್ದಾರೆ.
ಇನ್ನು ಬ್ರಹ್ಮಾಂಡ ಖ್ಯಾತಿಯ ನರೇಂದ್ರ ಬಾಬು ಶರ್ಮಾ ಹೇಳಿದ್ದೆಲ್ಲ ಸತ್ಯವಾಗಿಲ್ಲ. ಕೆಲವು ನಿಜವಾಗಿವೆ ಅನ್ನೋದು ಕೂಡಾ ಅಷ್ಟೇ ಸತ್ಯ. ಆಗಾಗ್ಗೆ ನಂಬುವುದಕ್ಕೆ ಅಸಾಧ್ಯ ಎನ್ನುವಂತ ಭವಿಷ್ಯ ಹೇಳೋ ಬ್ರಹ್ಮಾಂಡ ಗುರೂಜಿಯವರ ಈ ಭವಿಷ್ಯ ʻನಂಬಿಕೆ ಇಟ್ಟುಕೊಂಡವರಲ್ಲಿʼ ಆತಂಕ ಸೃಷ್ಟಿಸಿರುವುದಂತೂ ನಿಜ.