ಸಮಯ ಎನ್ನುವುದು ಕೆಟ್ಟಾಗ ಹಗ್ಗವೂ ಹಾವಾಗುತ್ತದೆ ಎನ್ನುವುದಕ್ಕೆ ಮೋಹನ್ ಲಾಲ್ ಪ್ರಕರಣವೇ ಸಾಕ್ಷಿ. ಎಂಪುರಾನ್ ಚಿತ್ರ ವಿವಾದವಾಗಿರುವ ಬೆನ್ನಲ್ಲೇ ಮೋಹನ್ ಲಾಲ್ ಅವರ ಹಳೆಯ ಕರ್ಮಕಾಂಡಗಳೂ ವೈರಲ್ ಆಗುತ್ತಿವೆ. ಎಂಪುರಾನ್ ಚಿತ್ರ ಪ್ರೊಪಗಾಂಡ ಸಿನಿಮಾ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಚಿತ್ರಕ್ಕೆ 24 ಸೆನ್ಸಾರ್ ಮಾಡಿಸಿ ಸಿನಿಮಾವನ್ನು ರೀ-ರಿಲೀಸ್ ಮಾಡಲಾಗಿದೆ. ಇದರ ಮಧ್ಯೆ ಗೆಳೆಯ ಕಮಲ್ ಹಾಸನ್ ಮಗಳು ಶೃತಿ ಹಾಸನ್‌ಗೆ, ಮೋಹನ್ ಲಾಲ್ ಅಸಭ್ಯ ಸನ್ನೆ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ನಟ ಮೋಹನ್ ಲಾಲ್ 400ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿರುವ ಕಲಾವಿದ. ಮಲಯಾಳಂ ಚಿತ್ರರಂಗದಲ್ಲಿ ಲಾಲೆಟ್ಟ ಎಂದೇ ಪ್ರೀತಿಯಿಂದ ಕರೆಯಲ್ಪಡುವ ನಟ ಇತ್ತೀಚೆಗೆ ಎಂಪುರಾನ್ 2 ಚಿತ್ರದಲ್ಲಿ ನಟಿಸಿದ್ದರು. ಲೂಸಿಫರ್ ಚಿತ್ರದ ಸೀಕ್ವೆಲ್ ಆಗಿದ್ದ ಸಿನಿಮಾ ಎಂಪುರಾನ್ 2, ವಿವಾದಕ್ಕೀಡಾಗಿದೆ. ಇದೊಂದು ಹಿಡನ್ ಪ್ರೊಪಗಾಂಡ ಸಿನಿಮಾ, ಹಿಂದೂಗಳನ್ನು ದುಷ್ಟರಂತೆ ಬಿಂಬಿಸಿರುವ, ಭಾರತದಲ್ಲಿ ಮುಸ್ಲಿಮರನ್ನು ಹಿಂದೂಗಳು ರಾಜಕೀಯಕ್ಕಾಗಿ ಕೊಲ್ಲುತ್ತಿದ್ದಾರೆ ಎಂದು ಬಿಂಬಿಸುವ ಸಿನಿಮಾ ಎಂಬ ಕಾರಣಕ್ಕೆ ವಿರೋಧ ಎದುರಾಗಿತ್ತು. ಈಗ ಸಿನಿಮಾ 24 ಕಟ್ಸ್ ಜೊತೆ ಮತ್ತೆ ರಿಲೀಸ್ ಆಗಿದ್ದರೂ, ಸಿನಿಮಾ ಕ್ಲಿಕ್ ಆಗಿಲ್ಲ. ಜನ ಚಿತ್ರಮಂದಿರದಿಂದ ದೂರ ಹೋಗಿದ್ದಾರೆ.
ಇಷ್ಟು ವರ್ಷ ಸಂಪಾದಿಸಿದ್ದ ಗೌರವವನ್ನು ಒಂದು ಸಿನಿಮಾ ಕೊಂದು ಹಾಕಿದೆ. ಹೀಗಿರುವಾಗಲೇ ನಟ ಮೋಹನ್ ಲಾಲ್ ಅವರು ವೇದಿಕೆಯೊಂದರಲ್ಲಿ ನಟಿ ಶೃತಿ ಹಾಸನ್ ಅವರಿಗೆ ಮಾಡಿದ್ದ ಅಸಭ್ಯ ಸಿಗ್ನಲ್ ವಿಡಿಯೋ ವೈರಲ್ ಅಗುತ್ತಿದೆ. ಯಾವುದೋ ಪ್ರಶಸ್ತಿ ಕಾರ್ಯಕ್ರಮವೊಂದರಲ್ಲಿ ಶೃತಿ ಹಾಸನ್ ಡ್ಯಾನ್ಸ್ ಮಾಡುತ್ತಿರುತ್ತಾರೆ. ಜಾಕೆಟ್ ತೆಗೆದು ಎಸೆಯುತ್ತಾರೆ. ಆಗ ವೇದಿಕೆಯ ಕೆಳಗೆ ಕುಳಿತಿದ್ದ ಮೋಹನ್ ಲಾಲ್ ಬಾಯಿಯನ್ನು ವಿಚಿತ್ರವಾಗಿ ಆಡಿಸುತ್ತ.. ಪ್ಯಾಂಟ್ ಮುಂದೆ ಮುಷ್ಟಿ ಹಿಡಿದು ಹಸ್ತಮೈಥುನದ ಸಿಗ್ನಲ್ ಮಾಡುತ್ತಾರೆ. ಅದನ್ನು ನೋಡಿ ಪಕ್ಕದಲ್ಲೇ ಇದ್ದ ಮಮ್ಮೂಟ್ಟಿ ಬಿದ್ದು ಬಿದ್ದೂ ನಗುತ್ತಾರೆ. ಇದು ಹಳೆಯ ವಿಡಿಯೋ ಆದರೂ, ಈಗ ವೈರಲ್ ಆಗಿದೆ.
ನಟಿ ಶೃತಿ ಹಾಸನ್, ಕಮಲ್ ಹಾಸನ್ ಅವರ ಮಗಳು. ಮೋಹನ್ ಲಾಲ್, ಮಮ್ಮೂಟ್ಟಿಗೂ ಗೆಳೆಯರೇ, ಗೆಳೆಯನ ಮಗಳ ಬಗ್ಗೆಯೇ ಇಷ್ಟೆಲ್ಲ ವಿಕೃತಿ ಇರುವ ಮೋಹನ್ ಲಾಲ್, ಅದ್ಯಾವ ಸೀಮೆ ಸುಸಂಕೃತ ನಟ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಕೇಳುತ್ತಿದ್ದಾರೆ ಜನ. ಎಂಪುರಾನ್ ಚಿತ್ರ ಮಾಡಿದ್ದಕ್ಕೆ ಸಾರಿ ಕೇಳಿದ್ದ ಮೋಹನ್ ಲಾಲ್, ಈ ವಿಷಯದ ಬಗ್ಗೆ ಮಾತನ್ನಾಡಿಲ್ಲ. ಮೋಹನ್ ಲಾಲ್ ಅವರಷ್ಟೇ ಅಲ್ಲ, ಮಮ್ಮೂಟ್ಟಿಯೂ ಮಾತನಾಡಿಲ್ಲ.
ಕಮಲ್ ಹಾಸನ್ ಮತ್ತು ಮೋಹನ್ ಲಾಲ್ ಇಬ್ಬರೂ ಹಲವು ಚಿತ್ರಗಳಲ್ಲಿ ಒಟ್ಟಿಗೇ ನಟಿಸಿದ್ದಾರೆ. ಇಬ್ಬರೂ ಗೆಳೆಯರು. ಶೃತಿ ಹಾಸನ್ ಮಗುವಾಗಿದ್ದಾಗ ಮೋಹನ್ ಲಾಲ್ ಎತ್ತಿ ಆಡಿಸಿರಬಹುದು. ಇಂತಹ ಗೆಳೆಯನ ಮಗಳನ್ನೇ ಕಾಮುಕತೆಯಿಂದ ನೋಡುವವನು ಇನ್ನೆಷ್ಟರ ಮಟ್ಟಿಗೆ ಸಂಭಾವಿತ ಅನ್ನೋ ಪ್ರಶ್ನೆಯನ್ನು ಕೇಳುತ್ತಿರುವುದು ನೆಟ್ಟಿಗರು.