ಎಲ್ಲರು ಹೇಳ್ತಿರೋದು ಜಸ್ಟ್ 100 ಗ್ರಾಂ ತೂಕ ಜಾಸ್ತಿ ಮಾಡ್ಕೊಂಡಿದ್ದಕ್ಕೆ ವಿನೇಶ್ ಪೊಗಟ್ ಅವರಿಗೆ ಒಲಿಂಪಿಕ್ಸ್ ಪದಕ ಮಿಸ್ಸಾಯ್ತು ಅಂತಾ. ಅದ್ಭುತವಾಗಿ ಆಡಿ, ಗೆದ್ದು ಫೈನಲ್ʻಗೆ ಎಂಟ್ರಿ ಕೊಟ್ಟಿದ್ದು ಕಡಿಮೆ ಸಾಧನೆಯೇನಲ್ಲ. ಆದರೆ ಈಗ ತೂಕ ಹೆಚ್ಚಿರುವ ವಿಷಯದಲ್ಲಿ ಕೇವಲ 100 ಗ್ರಾಂ ಮಿಸ್ಟೇಕ್ ಎನ್ನುತ್ತಿರುವುದು ಮಾತ್ರ ಸಂಪೂರ್ಣ ಸತ್ಯ ಅಲ್ಲ. ವಿನೇಶ್ ಪೊಗಟ್ ಅವರ ಈ ನಷ್ಟ ದೊಡ್ಡ ಮಟ್ಟದ ಸುದ್ದಿಯಾಗುತ್ತಿರುವುದಕ್ಕೆ ನರೇಂದ್ರ ಮೋದಿ ವಿರುದ್ಧ ಪ್ರತಿಭಟಿಸಿದ್ದರು ಎನ್ನುವುದೂ ಒಂದು ಕಾರಣ. ಆದರೆ ಇಲ್ಲಿ ಅದ್ಯಾವುದೇ ರಾಜಕೀಯದ ಪ್ರಸ್ತಾಪ ಬೇಡ. ಬೇಡವೇ ಬೇಡ.
ಮೊದಲನೆಯದಾಗಿ ಹೆಚ್ಚಳವಾಗಿದ್ದುದು ಕೇವಲ 100 ಗ್ರಾಂ ಅಲ್ಲ : ಮಂಗಳವಾರ ಬೆಳಗ್ಗೆ 7.30ಕ್ಕೆ ವಿನೇಶ್ ಪೊಗಟ್ ತೂಕ 53 ಕೆಜಿಗೆ ಏರಿಕೆಯಾಗಿತ್ತು. 49.9 ಕೆಜಿ ಇದ್ದ ವಿನೇಶ್ ಏಕಾಏಕಿ 52.7 ಕೆಜಿಗೆ ತೂಕ ಹೆಚ್ಚಿಸಿಕೊಂಡಿದ್ರು. ಅಂದರೆ ಹೆಚ್ಚೂ ಕಡಿಮೆ 2 ಕೆಜಿ.
ರಾತ್ರಿಯೆಲ್ಲ ಸರ್ಕಸ್ ಮಾಡಿದ್ರು. ನೀರು ಕುಡೀಲಿಲ್ಲ. ಏನನ್ನೂ ತಿನ್ನಲಿಲ್ಲ. ಥ್ರೆಡ್ ಮೀಲ್ ಮೇಲೆ ಸತತವಾಗಿ ಓಡಿ ಓಡಿ ತೂಕ ಇಳಿಸ್ಕೊಳ್ಳೋ ಸರ್ಕಸ್ ಮಾಡಿದ್ರು. ತಲೆಕೂದಲು ಕಟ್ ಮಾಡಿಸ್ಕೊಂಡ್ರು. ಆದರೆ.. ತೂಕ 53ರಿಂದ 50.1 ಕೆಜಿ ತೂಕಕ್ಕೆ ಇಳೀತಷ್ಟೇ.
ಅಂದರೆ 50 ಕೆಜಿಗಿಂತ 100 ಗ್ರಾಂ ಜಾಸ್ತಿ ಆಯ್ತಷ್ಟೆ. ಎಲ್ಲರೂ ಮಾತನಾಡ್ತಾ ಇರೋದು ಈ 100 ಗ್ರಾಂ ಬಗ್ಗೆ. ಅಫ್‌ಕೋರ್ಸ್, ಇಂಡಿಯನ್ ಆಥ್ಲೆಟ್ ಆಗಿರೋದ್ರಿಂದ ಒಂದಷ್ಟು ಅನುಕಂಪ ಸಹಜ. ಹಾಗಂತ.. ಅನುಕಂಪದಿಂದ ಮೆಡಲ್ ಸಿಕ್ಕಲ್ವಲ್ಲ.
ಅಷ್ಟೇ ಅಲ್ಲ, ವೇಯ್ಟ್ ಜಾಸ್ತಿ ಆಗೋದಿಕ್ಕು ಕೂಡಾ ಕಾರಣ ಇದೆ. ಸೆಮಿಫೈನಲ್ ಮುಗಿದ್ಮೇಲೆ ಜಾಸ್ತಿ ನೀರು, ಜ್ಯೂಸ್ ಕುಡಿದ್ರಂತೆ. ಹೆಚ್ಚೂ ಕಡಿಮೆ ಎರಡು ಲೀಟರ್ ಜ್ಯೂಸ್ ಕುಡಿದ್ರಂತೆ. ಅಷ್ಟೇ ಅಲ್ಲ, 700 ಗ್ರಾಂ ಸ್ನ್ಯಾಕ್ಸ್ ತಿಂದ್ರಂತೆ. ಆ 700 ಗ್ರಾಂ ಸ್ನ್ಯಾಕ್ಸ್ ಅವಾಯ್ಡ್ ಮಾಡಿದ್ದಿದ್ರೆ, ಇವತ್ತು ಇಷ್ಟೊತ್ತಿಗೆ ಇಡೀ ಇಂಡಿಯಾದ ಐಕಾನ್ ಆಗಿರ್ತಾ ಇದ್ರು ವಿನೇಶ್ ಪೊಗಟ್. ಈಗ ಎಲ್ಲವೂ ಮಿಸ್. ಕುಸ್ತಿ ಅಖಾಡವನ್ನೇ ತೊರೆದಿದ್ದಾರೆ ವಿನೇಶ್ ಪೊಗಟ್.
ಇನ್ನು ವಿನೇಶ್ ಪೊಗಟ್ ಅವರ ವಿರುದ್ಧ ಸಂಚು ನಡೀತು ಎನ್ನುವುದೆಲ್ಲ ಪುಕ್ಸಟ್ಟೆ ಟೈಂಪಾಸ್ ಮಾತುಗಳಷ್ಟೇ. ಮೋದಿನೇ ಹೇಳ್ಬಿಟ್ಟು ಪ್ಲಾನ್ ಮಾಡಿದ್ರಂತೆ, ಒಲಿಂಪಿಕ್ ಕಮಿಟಿಯವರೆಲ್ಲ ಸ್ಕೆಚ್ ಹಾಕಿ ಆಚೆ ಹಾಕಿದ್ರಂತೆ ಅನ್ನೋದೆಲ್ಲ ತಲೆಕಟ್ಟ ಬುದ್ದಿಜೀವಿಗಳು, ಅರ್ಧಂಬರ್ಧ ತಲೆತಿರುಕರು ಹೇಳೋ ಮಾತಷ್ಟೇ.
ವಿನೇಶ್ ಪೊಗಟ್ ಎಕ್ಸಿಟ್ ಆಗಿದ್ದನ್ನ ಸೆಲಬ್ರೇಟ್ ಮಾಡ್ತಿರೋ ಅಡ್ಡಕಸುಬಿಗಳಿಗೂ, ಈ ಬುದ್ದಿಜೀವಿ ಗೊಡ್ಡುಕಸುಬಿಗಳಿಗೂ ಯಾವ ವ್ಯತ್ಯಾಸವೂ ಇಲ್ಲ.
ಅಂದಹಾಗೆ ವಿನೇಶ್ ಪೊಗಟ್ ಅವರಿಗೆ ಈ ರೀತಿಯ ಎಡವಟ್ಟು ಆಗ್ತಿರೋದು ಇದೇ ಹೊಸದೂ ಅಲ್ಲ. 2016ರಲ್ಲಿ ರಿಯೋ ಒಲಿಂಪಿಕ್ಸ್ ಆಗಿತ್ತಲ್ಲ, ಅಲ್ಲಿಯೂ ಇದೇ ರೀತಿಯ ತೂಕದ ಮಿಸ್ಟೇಕ್ ಮಾಡ್ಕೊಂಡಿದ್ದರು. ಆಗಲೂ ತೂಕದ ಎಡವಟ್ಟಾಗಿ 48 ಕೆಜಿ ಲಿಮಿಟ್ಸ್‌ನಲ್ಲಿ ಆಡಿದ್ದರು. ಆಮೇಲೆ ಗಾಯಾಳು ಆಗಿ ಎಕ್ಸಿಟ್ ಆಗಿದ್ರು.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ 53 ಕೆಜಿ ರೌಂಡ್ಸ್‌ನಲ್ಲೇ ಬಾಗವಹಿಸಿದ್ರು. ಆದರೆ ಕಂಚಿನ ಪದಕ್ಕಾಗಿ ನಡೆದ ಹೋರಾಟದಲ್ಲಿ ಸೋತಿದ್ರು.
ಅದಾದ್ಮೇಲೆ ವಿನೇಶ್ ಪೊಗಟ್, ರಾಜಕೀಯ ಕಾರಣಕ್ಕೆ ಸುದ್ದಿಯಾದ್ರು. ಟ್ರಯಲ್ಸ್ ರೌಂಡ್ಸ್‌ನಲ್ಲಿ ಭಾಗವಹಿಸದೆ, 53 ಕೆಜಿ ರೌಂಡ್ಸ್ ಮಿಸ್ ಮಾಡ್ಕೊಂಡ್ರು.
ಆಮೇಲೆ 50 ಕೆಜಿ ತೂಕಕ್ಕೆ ಇಳಿಸಿಕೊಳ್ಳೋ ಭರವಸೆ ಕೊಟ್ಟು, ಏನೋ ಮಾಡಿ ಅರ್ಹತಾ ಸುತ್ತು ಗೆದ್ರು. ಆಮೇಲೆ ಒಲಿಂಪಿಕ್ಸ್‌ನಲ್ಲಿ ಅದ್ಭುತವಾಗಿ ಆಡಿದ್ರು. ಆದರೆ.. ತಾವು ಆಡ್ತಿರೋದು 50 ಕೆಜಿ ವಿಭಾಗದಲ್ಲಿ ಅನ್ನೋದನ್ನೇ ಮರೆತುಬಿಟ್ರು.
ಇಲ್ಲಿ ಯಾರನ್ನು ದೂರಬೇಕು. ಏಕಂದ್ರೆ ವಿನೇಶ್ ಪೊಗಟ್ ಅವರಿಗೆ ಇದು 3ನೇ ಒಲಿಂಪಿಕ್ಸ್. ಅನುಭವವೂ ಇದೆ. ಈ ಹಿಂದೆ ತಪ್ಪು ಮಾಡಿದ್ದರ ಪಾಠವೂ ಇದೆ. ಅವರದ್ದೂ ತಪ್ಪಿದೆ. ಸದ್ಯಕ್ಕೆ ವಿನೇಶ್ ಪೊಗಟ್ ಮತ್ತವರ ಕೋಚು, ಫಿಸಿಯೋಗಳನ್ನೇ ಬೈಬೇಕು. ಅಷ್ಟೆ.