ಇತಿಹಾಸದ ಅನೇಕ ಪುಟಗಳನ್ನ ತಿರುವಿ ನೋಡಿದಾಗ ತಿಳಿಯುತ್ತೆ ಹೊರಗಿನವರು ವೈರಿಗಳು ಯಾರು ಇರುವುದಿಲ್ಲ.ಅವರವರಲ್ಲಿ ವೈರಿಗಳು ಹುಟ್ಟಿ ಸರ್ವನಾಶಕ್ಕೆ ಕಾರಣರಾಗಿದ್ದಾರೆ. ವಿನಾಶಕಾಲೇ ವಿಪರೀತ ಬುದ್ಧಿ ಎಂಬ ಮಾತು ಆಗಾಗ ಮರುಕಳಿಸುವ ಸನ್ನಿವೇಶವನ್ನು ಕಾಣುತ್ತೇವೆ ಎಂದಿರುವ ರಂಭಾಪುರಿ ಮಠದ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯ ಪಟ್ಟಿದ್ದಾರೆ. ಅನ್ಯರು ಹಗೆಗಳಾದರೆ ತಾಳಬಹುದು, ತನ್ನವರು ಹಗೆಗಳಾದರೆ ಬಾಳಲಾದೀತೆ ಎಂದಿದ್ದಾರೆ. ಬಾಳೆಹೊನ್ನೂರಿಗೆ ಯುಗಮಾನೋತ್ಸವ ಸಮಾರಂಭಕ್ಕಾಗಿ ವಿಜಯೇಂದ್ರ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಮಾತನಾಡಿರುವ ರಂಭಾಪುರಿ ಶ್ರೀಗಳು ಬಹಿರಂಗವಾಗಿಯೇ ವಿಜಯೇಂದ್ರಗೆ ಬೆಂಬಲ ಘೋಷಿಸಿದ್ದಾರೆ.
ರಂಭಾಪುರಿ ಶ್ರೀಗಳು ಈ ಮಾತು ಹೇಳಿರುವುದು ಯಡಿಯೂರಪ್ಪ, ವಿಜಯೇಂದ್ರ ಮತ್ತು ಯತ್ನಾಳ್ ಬಣದ ಮಧ್ಯೆ ನಡೆಯುತ್ತಿರುವ ವಾಗ್ಯುದ್ಧದ ಬಗ್ಗೆ. ಯಡಿಯೂರಪ್ಪ ರಾಜ್ಯದ ಪ್ರಶ್ನಾತೀತ ನಾಯಕರು, ಅದರಲ್ಲೂ ವೀರಶೈವ ಲಿಂಗಾಯಿತ ಸಮುದಾಯದ ಪ್ರಮುಖ ನಾಯಕರು. ಈ ನಾಡಿನಲ್ಲಿ ವೀರಶೈವ ಲಿಂಗಾಯಿತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಮುಂದಿನ ಚುನಾವಣೆಗಳಲ್ಲಿ ಅನುಕೂಲ ಆಗುವ ದೃಷ್ಟಿಯಿಂದಲೇ ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ವಿಜಯೇಂದ್ರ ಅವರ ನಾಯಕತ್ವಕ್ಕೆ ಕೆಲವರು ಅಪಸ್ವರ ಎತ್ತುತ್ತಿರುವುದು ಸರಿಯಲ್ಲ. ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುವ ಬದಲು ಪಕ್ಷದ ಆಂತರಿಕ ವೇದಿಕೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳುವುದು ಒಳಿತು. ಭವಿಷ್ಯದಲ್ಲಿ ಅಧಿಕಾರ ಹಿಡಿಯಬೇಕೆಂದರೆ ಎಲ್ಲ ಸದಸ್ಯರು ಒಟ್ಟಾಗಿ ಕೆಲಸ ಮಾಡುವುದು ಅಗತ್ಯ ಎಂದು ನೇರವಾಗಿಯೇ ವಿಜಯೇಂದ್ರ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಇದೇ ವೇಳೆ ವಿಜಯೇಂದ್ರ ಅವರು ತಮ್ಮ ಪರ ಬೆಂಬಲಿಗರು ನಡೆಸುತ್ತಿರುವ ಜಾತಿ ಸಮಾವೇಶದಿಂದ ಪಕ್ಷಕ್ಕೆ ಯಾವುದೇ ಲಾಭವಿಲ್ಲ. ಎಲ್ಲವೂ ತಾರ್ಕಿಕ ಅಂತ್ಯಕ್ಕೆ ಬರುತ್ತಿರುವ ಸಂದರ್ಭದಲ್ಲಿ ಈ ರೀತಿಯ ಸಮಾವೇಶಗಳು ಒಳ್ಳೆಯದಲ್ಲ ಎಂದೂ ಕೂಡಾ ಹೇಳಿದ್ದಾರೆ.
ಅಲ್ಲಿಗೆ ವೀರಶೈವ ಪೀಠಗಳಲ್ಲಿ ಒಂದಾದ ರಂಭಾಪುರಿ ಮಠದ ಸ್ವಾಮಿಗಳು ಬಹಿರಂಗವಾಗಿಯೇ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಘೋಷಿಸಿ ಆಗಿದ. ಆದರೆ ಯತ್ನಾಳ್ ಬಣ ಇವರನ್ನೇ ಒಪ್ಪೋದಿಲ್ಲ. ವೀರಶೈವ ಸ್ವಾಮಿಗಳೇ ಬೇರೆ. ನಮ್ಮವರೇ ಬೇರೆ ಎನ್ನುತ್ತಾರೆ. ಹೀಗಿರುವಾ ರಂಭಾಪುರಿ ಶ್ರೀಗಳ ಬಹಿರಂಗ ಬೆಂಬಲ ವಿಜಯೇಂದ್ರಗೆ ಶಕ್ತಿ ತುಂಬುತ್ತಾ.. ಗೊತ್ತಿಲ್ಲ.
ಇನ್ನು ದೆಹಲಿಗೆ ಹೋಗಿರುವ ಯತ್ನಾಳ್ ಬಣದ ಯಾವ ನಾಯಕರಿಗೂ ಅಮಿತ್ ಶಾ ಭೇಟಿಗೆ ಅವಕಾಶ ಸಿಕ್ಕಿಲ್ಲ. ಇಲ್ಲಿಂದ ದೊಡ್ಡ ಸೌಂಡು ಮಾಡಿ ದೆಹಲಿಗೆ ಹೋಗುತ್ತಿರುವ ಯತ್ನಾಳ್ ಬಣದ ಬಹುತೇಕ ನಾಯಕರು, ದೆಹಲಿಯ ಐಷಾರಾಮಿ ಹೋಟೆಲ್ಲಿನಲ್ಲಿದ್ದುಕೊಂಡು ಕಾಲ ಕಳೆಯುತ್ತಿದ್ದಾರೆ. ಇದು ಕೇವಲ ಮೀಡಿಯಾ ಮುಂದಿನ ಆರ್ಭಟವಷ್ಟೇ, ಇತ್ತ ಅವರಿಗೆ ಕ್ಷೇತ್ರದಲ್ಲೂ ಬೆಲೆಯಿಲ್ಲ. ಅತ್ತ ಹೈಕಮಾಂಡ್ ಲೆವೆಲ್ಲಿನ ನಾಯಕರ ಎದುರೂ ಬೆಲೆಯಿಲ್ಲ ಎನ್ನುತ್ತಾರೆ ವಿಜಯೇಂದ್ರ ಬಣದವರು.
ಆದರೆ ಒಂದಂತೂ ಸತ್ಯ.. ಎಲ್ಲರೂ ಹೆದರುವುದು ಯತ್ನಾಳ್ ನಾಲಗೆಗೆ. ಅಲ್ಲಿ ನೋ ಫಿಲ್ಟರ್. ಯತ್ನಾಳ್ ಬಾಯಿಗೆ ಸಿಕ್ಕರೆ, ಎಡವಟ್ಟುಗಳೆಲ್ಲ ಹೊರಬರುತ್ತವೆ ಎಂಬ ಭಯವೇ ವಿಜಯೇಂದ್ರ ಬಣದವರನ್ನು ಸೈಲೆಂಟ್ ಅಗಿರುವಂತೆ ಮಾಡಿದೆ.