ರತನ್ ಟಾಟಾ. ದೇಶದ ಹೆಮ್ಮೆಯ ಉದ್ಯಮಿ. ಸಾಧಾರಣವಾಗಿ ಉದ್ಯಮಿಗಳು, ಕೋಟ್ಯಧಿಪತಿಗಳು ಎಂದರೆ ಅವರು ಬಡವರ ವಿರೋಧಿಗಳು ಎಂಬ ಹಣೆಪಟ್ಟಿ ತಂತಾನಾಗಿಯೇ ಫಿಕ್ಸ್ ಆಗುತ್ತದೆ. ಆದರೆ ರತನ್ ಟಾಟಾ, ಲಕ್ಷ ಲಕ್ಷ ಕೋಟಿಯ ಒಡೆಯರಾಗಿದ್ದರೂ, ಬಡವರು ಅವರು ದ್ವೇಷ ಮಾಡುತ್ತಿರಲಿಲ್ಲ. ಪ್ರೀತಿಸುತ್ತಿದ್ದರು. ಹಾಗಂತ ರತನ್ ಟಾಟಾ, ಸಮಾಜ ಸೇವೆ ಮಾಡುತ್ತಿರಲಿಲ್ಲ ಎಂದೂ ಅಲ್ಲ. ಆದರೆ ಇವತ್ತಿಗೂ ಅವು ಹೊರಜಗತ್ತಿಗೆ ಪ್ರಚಾರದ ಸರಕುಗಳಲ್ಲ. ಸಹಾಯ ಪಡೆದವರು ಹೇಳಬೇಕಷ್ಟೇ. ಅಂತಹ ರತನ್ ಟಾಟಾ ಮದುವೆ ಆಗಿರಲಿಲ್ಲ.
ಹೌದು, ಉದ್ಯಮಿ ರತನ್ ಟಾಟಾ ಖಾಸಗಿ ಜೀವನ ವರ್ಣಮಯವಾಗಿತ್ತು. ರೊಮ್ಯಾಂಟಿಕ್ ಕೂಡಾ ಆಗಿತ್ತು. ನಾಲ್ಕು ಲವ್ ಸ್ಟೋರಿಗಳಿದ್ದವು. ಆದರೆ ರತನ್ ಟಾಟಾ ಮದುವೆಗೆ ಹೆದರಿದ್ದರು. ಸಿಎನ್‌ಎನ್‌ಗೆ ನೀಡಿದ ಹಳೆಯ ಸಂದರ್ಶನದಲ್ಲಿ ರತನ್ ಟಾಟಾ, ತಾವು ನಾಲ್ಕು ಬಾರಿ ಪ್ರೀತಿಸಿದ್ದನ್ನು ಹೇಳಿಕೊಂಡಿದ್ದರು. ಪ್ರತಿ ಸಂದರ್ಭದಲ್ಲೂ ಅವರು ಮದುವೆಯ ವರೆಗೂ ಹೋಗಿದ್ದರು. ಅದರೆ ಹೆದರಿ ವಾಪಸ್ ಬಂದಿದ್ದರು.
ಮದುವೆಗೆ ಇಂಡೋ ಚೀನಾ ವಾರ್ ಅಡ್ಡಿಯಾಯ್ತು..!
ಅಮೆರಿಕದಲ್ಲಿ ವಾಸಿಸುತ್ತಿದ್ದಾಗ ಒಬ್ಬರನ್ನು ಪ್ರೀತಿಸುತ್ತಿರಂತೆ. ಆಕೆಯೂ ಅಷ್ಟೆ, ರತನ್ ಟಾಟಾ ಅವರನ್ನು ಲವ್ ಮಾಡ್ತಿದ್ರು. ಆದರೆ.. ಆಕೆಗೆ ಭಾರತಕ್ಕೆ ಬರಲು ಇಷ್ಟ ಇರಲಿಲ್ಲ. ಇಂಡೋ ಚೀನಾ ಯುದ್ಧಕ್ಕೆ ಆಕೆ ಹೆದರಿದ್ದಳು. ಹೀಗಾಗಿ ನಮ್ಮಿಬ್ಬರ ಪ್ರೀತಿ ಬ್ರೇಕಪ್ ಆಯ್ತು ಎಂದು ಹೇಳಿಕೊಂಡಿದ್ದರು ರತನ್ ಟಾಟಾ. ಅವಳು ಭಾರತಕ್ಕೆ ಬರಲಿಲ್ಲ. ಅವಳು ಅಂತಿಮವಾಗಿ ಅಮೆರಿಕದಲ್ಲಿ ಬೇರೊಬ್ಬರನ್ನು ಮದುವೆಯಾದಳು ಎಂದು ತಮ್ಮ ಭಗ್ನಪ್ರೇಮದ ಕಥೆ ಹೇಳಿದ್ದರು ರತನ್ ಟಾಟಾ.
“ನಾನು ನಾಲ್ಕು ಬಾರಿ ಮದುವೆಯಾಗಲು ಗಂಭೀರವಾಗಿ ಸಿದ್ಧನಾಗಿದ್ದೆ. ಮತ್ತು ಪ್ರತಿ ಬಾರಿಯೂ, ಆ ಹಂತಕ್ಕೆ ಹತ್ತಿರವಾದಾಗ, ಭಯದಿಂದಲೇ ಹಿಂದೆ ಸರಿದಿದ್ದೇನೆ ಎನ್ನುವ ರತನ್ ಟಾಟಾ ಮದುವೆ ಆಗಿಲ್ಲ ಎಂಬ ಕಾರಣಕ್ಕೆ ಬೇಸರವೇನೂ ಇಲ್ಲ. ಕಳೆದುಕೊಂಡಿದ್ದೂ ಕೂಡಾ ಏನಿಲ್ಲ ಎಂದೂ ಹೇಳಿದ್ದಾರೆ.
ಸಿಮಿ ಗೆರೆವಾಲ್ ಜೊತೆ ಡೇಟಿಂಗ್ : ರತನ್ ಅವರ ನಾಲ್ಕು ಪ್ರೇಯಸಿಯರಲ್ಲಿ ಒಬ್ಬರು ಸಿಮಿ ಗೆರೆವಾಲ್. , 2011ರಲ್ಲಿ ಒಂದು ಸಂದರ್ಶನದಲ್ಲಿ ತಾವು ರತನ್ ಟಾಟಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದುದನ್ನು ಒಪ್ಪಿಕೊಂಡರು. “ಅವರು ಪರಿಪೂರ್ಣ ವ್ಯಕ್ತಿ. ಹಾಸ್ಯ ಪ್ರಜ್ಞೆಯನ್ನು ಹೊಂದಿದವರು. ಅಸಾಧಾರಣ ಮತ್ತು ಪರಿಪೂರ್ಣ ಸಂಭಾವಿತ ವ್ಯಕ್ತಿ. ಹಣಕ್ಕೆ ಹೆಚ್ಚು ಮಹತ್ವ ಕೊಡುತ್ತಿರಲಿಲ್ಲʼʼ ಎಂದು ಹೇಳಿಕೊಂಡಿದ್ದರು ಸಿಮಿ ಗೆರೆವಾಲ್. ಆದರೆ ರತನ್ ಟಾಟಾ ಮಾತ್ರ ಯಾವತ್ತೂ ಸಿಮಿ ಗೆರೆವಾಲ್ ಹೆಸರು ಹೇಳಿರಲಿಲ್ಲ.