ದರ್ಶನ್ ಕೇಸಿನಲ್ಲಿ ಸುಳ್ಳು ಸಾಕ್ಷಿ ಸೃಷ್ಟಿಸಿದ್ದಾರೆ. ಈ ರೀತಿ ವಾದ ಮಾಡ್ತಿದ್ದಾರೆ ಹಿರಿಯ ವಕೀಲ ಸಿವಿ ನಾಗೇಶ್. ದರ್ಶನ್ ಪರ ವಾದ ಮಾಡುತ್ತಿರುವ ಹಿರಿಯ ವಕೀಲ ಸಿವಿ ನಾಗೇಶ್ ದರ್ಶನ್ ಕೇಸಿನಲ್ಲಿ ಪೊಲೀಸರ ಚಾರ್ಜ್‌ಶೀಟ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಬೇಕೆಂದೇ ಸಾಕ್ಷಿಗಳನ್ನು ಸೃಷ್ಟಿಸಿದ್ದಾರೆ. ಇಲ್ಲದ ಸಾಕ್ಷಿಗಳನ್ನು ಪತ್ತೆ ಹಚ್ಚಿದ್ದಾರೆ. ಅವುಗಳನ್ನೇ ಸಾಕ್ಷಿಗಳು ಎಂದು ತೋರಿಸುತ್ತಿದ್ದಾರೆ ಎನ್ನುವುದು ಸಿವಿ ನಾಗೇಶ್ ವಾದ.
ಉದ್ದೇಶಪೂರ್ವಕವಾಗಿಯೇ ದರ್ಶನ್ ಅವರನ್ನು ಅಪರಾಧಿ ಮಾಡುವ ಪ್ರಯತ್ನ ನಡೆದಿದೆ. ಸಾಕ್ಷ್ಯಗಳನ್ನು ಸೃಷ್ಟಿಸಲಾಗಿದೆ. ಹೇಳಿಕೆಗಳನ್ನು ತಿರುಚಲಾಗಿದೆ. ತನಿಖೆಯಲ್ಲಿ ಸಹ ಲೋಪಗಳಾಗಿವೆ ಎಂದು ವಾದ ಮಂಡಿಸಿದ ಸಿವಿ ನಾಗೇಶ್ ಒಂದು ಹಂತದಲ್ಲಿ ದರ್ಶನ್, ಕೃತ್ಯ ನಡೆದ ಸ್ಥಳದಲ್ಲಿ ಇರಲೇ ಇಲ್ಲ ಎಂಬ ವಾದ ಮಂಡಿಸಿದ್ದಾರೆ
ಸಿವಿ ನಾಗೇಶ್ ಅವರು ಕೋರ್ಟಿನಲ್ಲಿ ಆರಂಭದಲ್ಲಿಯೇ ಇದೊಂದು ರೀತಿ ಅರೇಬಿಯನ್ ನೈಟ್ಸ್ ಕಥೆ ಇದ್ದಂತಿದೆ ಎಂದು ವಾದಿಸಿದ್ದರು. , ‘ಪೊಲೀಸರು ಪಂಚನಾಮೆ ಮಾಡಿದಾಗ ಅಲ್ಲಿದ್ದ ಯಾವ ವಸ್ತುವಿನ ಮೇಲೂ ರಕ್ತದ ಕಲೆ ಇರುವ ಬಗ್ಗೆ ದಾಖಲೆ ಇಲ್ಲ. ಆದರೆ ಎಫ್ಎಸ್ಎಲ್ ವರದಿಯಲ್ಲಿ ರಕ್ತದ ಕಲೆ ಪತ್ತೆ ಆಗಿದ್ದು ಹೇಗೆ?’ ಪೋಸ್ಟ್ ಮಾರ್ಟಂ ವರದಿಯಲ್ಲಿ ಮಾತ್ರ ವೃಷಣದ ಗಾಯ ಕಾಣಿಸಿದೆ. ಕೊಲೆ ಗೊತ್ತಾದ ೩ ದಿನಗಳ ಬಳಿಕ ಶೆಡ್ಡಿಗೆ ಹೋಗಿದ್ದೇಕೆ? ರಿಕವರಿ ಆಗಿದ್ದ ಎಲ್ಲ ವಸ್ತುಗಳಲ್ಲಿ ರಕ್ತದ ಕಲೆಗಳೇಕೆ ಇಲ್ಲ..? ಒಬ್ಬ ಸಾಕ್ಷಿಯ ವಿಚಾರಣೆಯನ್ನು 13 ದಿನ ತಡವಾಗಿ ಮಾಡಲಾಗಿದೆ. ಅಲ್ಲದೆ, ಆ ಸಾಕ್ಷಿಯನ್ನು ಪೊಲೀಸರೇ ಸೃಷ್ಟಿಸಿದ್ದಾರೆ. ಬೇಕೆಂದೇ ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಆ ವರದಿಗೆ ಹೋಲಿಕೆ ಆಗುವಂತೆ ಸಾಕ್ಷಿಯಿಂದ ಹೇಳಿಕೆ ಪಡೆಯಲಾಗಿದೆ ಎಂದು ವಾದಿಸಿದ್ದಾರೆ. ಎಲ್ಲ ಆರೋಪಿಗಳೂ ಒಂದೇ ಕಡೆ ಇದ್ದ ದಾಖಲೆಯೂ ಪೊಲೀಸರ ಸೃಷ್ಟಿ ಎಂದು ವಾದ ಮಾಡಿದ್ದಾರೆ ಸಿವಿ ನಾಗೇಶ್.
ಗೂಗಲ್ ಮ್ಯಾಪ್ ಸಾಕ್ಷಿಯನ್ನೇ ಅನುಮಾನಿಸಿದ ಸಿವಿ ನಾಗೇಶ್ :
ಬುಧವಾರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಕೀಲ ಸಿವಿ ನಾಗೇಶ್ ಕೋರ್ಟಿನಲ್ಲಿಯೇ ಇದ್ದರು. ಎಸಿಪಿ ಚಂದನ್ ಹಾಗೂ ಎಸ್‌ಪಿಪಿ ಪ್ರಸನ್ನ ಕುಮಾರ್ ಕೂಡಾ ಕೋರ್ಟಿನಲ್ಲಿಯೇ ಇದ್ದರು. ಅದೇ ಸಮಯದಲ್ಲಿ ಸಿವಿ ನಾಗೇಶ್, ಎಸ್‌ಪಿಪಿ ಪ್ರಸನ್ನ ಹಾಗೂ ಎಸಿಪಿ ಚಂದನ್ ಬಸವೇಶ್ವರ ನಗರದ ಎಸಿಪಿ ಕಚೇರಿಯಲ್ಲಿ ಇದ್ದ ರೀತಿ ಗೂಗಲ್ ಮ್ಯಾಪ್ ಲೊಕೇಷನ್ ಎಡಿಟ್ ಮಾಡಿ ತೋರಿಸಿದರು. ದರ್ಶನ್ ಕೊಲೆ ಆರೋಪಿಗಳ ಟವರ್ ಲೊಕೇಷನ್ ಸೇರಿದಂತೆ ಟೆಕ್ನಿಕಲ್ ಎವಿಡೆನ್ಸ್ ಆಧರಿಸಿ ಜಾಮೀನು ನೀಡಬಾರದು ಎಂಬ ಪೊಲೀಸರ ವಾದಕ್ಕೆ ಪ್ರತಿಕ್ರಿಯೆಯಾಗಿ ಈ ಡೆಮೋ ಕೊಟ್ಟರು. ಈ ರೀತಿ ಸಾಕ್ಷಿಗಳನ್ನು ತಂತ್ರಜ್ಞಾನ ಆಧರಿಸಿ ಸೃಷ್ಟಿಸಿ ದರ್ಶನ್ ಮತ್ತು ಸಹಚರರ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ ಎಂದು ಸಿವಿ ನಾಗೇಶ್ ವಾದಿಸಿದ್ದಾರೆ. ಟವರ್ ಲೊಕೇಷನ್ ಡಯಾಗ್ರಾಂನ್ನು ಯಾರು ಬೇಕಾದರೂ ಸೃಷ್ಟಿಸಬಹುದು. ಅದು ಎಲ್ಲಿಂದ ಹೊರಟೆವು ಹಾಗೂ ಎಲ್ಲಿಗೆ ತಲುಪಿದೆವು ಎಂಬುದನ್ನಷ್ಟೇ ತೋರಿಸುತ್ತದೆ. ಆದರೆ ಮಧ್ಯದಲ್ಲಿ ಎಲ್ಲೆಲ್ಲಿ ಹೋದರು ಎಂದು ತೋರಿಸೋದಿಲ್ಲ. ಅಲ್ಲದೆ ಒಂದು ಟವರ್ ವ್ಯಾಪ್ತಿ 45 ಕಿ.ಮೀ. ಇರುತ್ತದೆ. ಈ ಪ್ರಕರಣದಲ್ಲಿ ಟವರ್ 5 ಕಿಮೀ ವ್ಯಾಪ್ತಿಯಲ್ಲಿದೆ ಎಂದು ವಾದಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಪ್ರಸನ್ನ ಕುಮಾರ್ ಟೆಕ್ನಿಕಲ್ ಎವಿಡೆನ್ಸ್ ಕೊಟ್ಟಿರುವುದು ಕೇವಲ ಗೂಗಲ್ ಮ್ಯಾಪ್ ನೋಡಿ ಅಲ್ಲ. ಐಪಿ ಅಡ್ರೆಸ್ ನೋಡಿಯೂ ಅಲ್ಲ. ಜಿಪಿಎಸ್, ಅಕ್ಷಾಂಶ, ರೇಖಾಂಶಗಳನ್ನೆಲ್ಲ ಆಧರಿಸಿ ಸಿದ್ಧಪಡಿಸಲಾಗಿದೆ. ಟೈಂ ಲೈನ್ ಬಳಕೆ ಮಾಡಿಕೊಂಡು ಟೆಕ್ನಿಕಲ್ ಎವಿಡೆನ್ಸ್ ತಯಾರಿಸಿಲ್ಲ. ದರ್ಶನ್ ತಮ್ಮ ಟೈಂ ಲೈನ್ ಆಫ್ ಮಾಡಿಕೊಂಡಿದ್ದರು. ಅಲ್ಲದೆ ಪ್ರದೂಷ್ ಮೊಬೈಲ್ ಹಿಸ್ಟರಿಯಲ್ಲಿ ಲೊಕೇಷನ್ ಹಿಸ್ಟರಿ ಡಿಲೀಟ್ ಮಾಡುವ ಬಗ್ಗೆ, ಲೊಕೇಷನ್ ತೆಗೆಯುವುದು ಹೇಗೆ, ಪೊಲೀಸರು ಹೇಗೆ ಲೊಕೇಷನ್ ಪತ್ತೆ ಹಚ್ಚುತ್ತಾರೆ ಎಂಬ ಬಗ್ಗೆಯೂ ಕೂಡಾ ಸರ್ಚ್ ಮಾಡಲಾಗಿದೆ. ಕೃತ್ಯದಲ್ಲಿ ಭಾಗಿಯಾಗದೇ ಇದನ್ನೆಲ್ಲಾ ಏಕೆ ಸರ್ಚ್ ಮಾಡಲು ಸಾಧ್ಯವೇ? ಎಂದು ವಾದಿಸಿದ್ದಾರೆ. ಅಲ್ಲದೆ ದರ್ಶನ್ ಮೊಬೈಲ್ ಹೇಮಂತ್ ಕುಮಾರ್ ಅವರ ಹೆಸರಲ್ಲಿದೆ ಎನ್ನುವುದು ಸಿವಿ ನಾಗೇಶ್ ಅವರ ವಾದ.
ಹೇಮಂತ್ ಹೆಸರಿನ ಮೊಬೈಲಿನಲ್ಲಿ ಮಿಸ್ ಯು ಹೆಂಡ್ತಿ, ಯು ಆರ್ ಮೋಸ್ಟ್ ಇಂಪಾರ್ಟೆಂಟ್ ಆಫ್ ಮೈ ಲೈಫ್ ಸುಬ್ಬಾ, ಆಲ್ವೇಸ್ ವಿತ್ ಯೂ.. ಅಂತೆಲ್ಲ ಮೆಸೇಜ್ ಮಾಡ್ತಾರಾ..? ಎಂದು ವಾದಿಸಿದ್ದಾರೆ.
ಈಗ ಟೆಕ್ನಾಲಜಿ ಕೂಡಾ ತುಂಬಾ ಮುಂದುವರೆದಿದೆ. ಎಲ್ಲವೂ ಆಕ್ಯುರೇಟ್ ಆಗಿದೆ ಎಂದು ವಾದಿಸಿದ್ದಾರೆ.
ಇನ್ನು ದರ್ಶನ್ ಅವರಿಂದ 500ಕ್ಕೂ ಹೆಚ್ಚು ಕುಟುಂಬಗಳು ಬದುಕುತ್ತಿವೆ ಎಂಬ ವಾದಕ್ಕೆ ಪ್ರತಿವಾದಿಸಿರುವ ಪ್ರಸನ್ನ ಕುಮಾರ್ ಸಹಾರಾ ಕಂಪೆನಿಯ ಸುಬ್ರತೋ ರಾಯ್ ಜೈಲಿನಲ್ಲಿದ್ದಾಗ ಆತನಿಂದ 20 ಸಾವಿರಕ್ಕೂ ಹೆಚ್ಚು ಕುಟುಂಬಗಳು ಬದುಕುತ್ತಿವೆ ಎಂಬ ವಾದವನ್ನು ತಳ್ಳಿಹಾಕಿ ಜಾಮೀನು ನಿರಾಕರಿಸಿದ್ದ ಇತಿಹಾಸವನ್ನೂ ನೆನಪಿಸಿದರು.
ಪ್ರಕರಣದ ವಿಚಾರಣೆ ಅಂತ್ಯವಾಗಿದ್ದು ಅಕ್ಟೋಬರ್ 14ಕ್ಕೆ ಜಾಮೀನು ಕುರಿತ ತೀರ್ಪು ನೀಡುವುದಾಗಿ ಕೋರ್ಟ್ ಹೇಳಿದೆ.