ರೋಲ್ಸ್ ರಾಯ್ಸ್. ಈ ಹೆಸರಿಗೆ ಒಂದು ರಾಜ ಗಾಂಭೀರ್ಯ ಇದೆ. ಈ ರೋಲ್ಸ್ ರಾಯ್ಸ್ ಸರಣಿಯಲ್ಲಿ ಬಂದಿರುವುದು ಕೇವಲ 4 ಕಾರುಗಳು. ಪ್ಯಾಂಟಮ್, ಘೋಸ್ಟ್, ರೇಥ್, ಡಾನ್, ಸ್ಪೆಕ್ಟರ್ ಮತ್ತು ಕಲಿನನ್. ಇವುಗಳಲ್ಲಿ ಘೋಸ್ಟ್ ಎರಡು ಡೋರ್ ಉಳ್ಳ ಕಾರು. ಇನ್ನೊಂದು ಡಾನ್ ಬದಲಿಸಿಕೊಳ್ಳಬಹುದಾದ ಡಿಸೈನ್ ಇರುವ ಕಾರು. ಇನ್ನೊಂದು ಸ್ಪೆಕ್ಟರ್, ಎಲೆಕ್ಟ್ರಾನಿಕ್ ಕಾರ್. ಈಗ ಬಂದಿರೋದು ರೋಲ್ಸ್ ರಾಯ್ಸ್ ಕಲಿನನ್ II ಮಾಡೆಲ್ ಕಾರು. ಅದೀಗ ಭಾರತಕ್ಕೆ ಎಂಟ್ರಿ ಕೊಟ್ಟಿದೆ.
ಇನ್ನು ರೋಲ್ಸ್ ರಾಯ್ಸ್ ಕಾರ್ ಬೇಕು ಅನ್ನೋವ್ರಿಗೆ ಕೇವಲ ದುಡ್ಡಿದ್ದರೆ ಸಾಕಾಗಲ್ಲ, ಕಾರು ನಿಲ್ಲಿಸುವುದಕ್ಕೆ ಜಾಗ ಇದೆ ಅಂದ್ರೂ ಸಿಕ್ಕಲ್ಲ. ಅದಕ್ಕೊಂದು ಸ್ಟಾಂಡರ್ಡ್ ಗೈಡ್ ಲೈನ್ಸ್ ಇದೆ. ಎಲ್ಲರಿಗೂ ಕೊಡುವುದಿಲ್ಲ. ಇದೀಗ ರೋಲ್ಸ್ ರಾಯ್ಸ್ ಕಲಿನನ್ II ಮಾರುಕಟ್ಟೆಗೆ ಬಂದಿದೆ.
ವಿಶ್ವದ ಮೊದಲ ಸೂಪರ್ ಲಕ್ಷುರಿ ಎಸ್.ಯು.ವಿ. ಒರಿಜಿನಲ್ ಕಲಿನನ್ 2018ರಲ್ಲಿ ಬಿಡುಗಡೆಯಾಗಿತ್ತು. ರಸ್ತೆ ಹೇಗೆಯೇ ಇರಲಿ, ಆರಾಮ್ ಆಗಿ ಸಂಚರಿಸುವ ಕಾರು ಎಂದೇ ಖ್ಯಾತಿ ಪಡೆದಿತ್ತು. ಬೆಟ್ಟ ಗುಡ್ಡಗಳ ರಸ್ತೆಗಳಲ್ಲಿಯೂ ಸಲೀಸಾಗಿ ಸಂಚರಿಸುತ್ತಿದ್ದ ಕಾರು `ಮ್ಯಾಜಿಕ್ ಕಾರ್ಪೆಟ್ ರೈಡ್’ ನೀಡುತ್ತದೆ ಎಂಬ ಹೆಸರನ್ನೂ ಪಡೆದಿತ್ತು. ಅದು ಸೂಪರ್ ಲಕ್ಷುರಿ ಎಸ್.ಯು.ವಿ.ಗಿಂತ ಏನೂ ಕಡಿಮೆಯಿರಲಿಲ್ಲ.
“ಭಾರತದಲ್ಲಿ ಕಲಿನನ್ II ಸೀರೀಸ್ ಬಿಡುಗಡೆಯಾಗುತ್ತಿರುವುದು ಭಾರತದಲ್ಲಷ್ಟೇ ಅಲ್ಲ, ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿಯೇ ರೋಲ್ಸ್ -ರಾಯ್ಸ್ ಗೆ ಮಹತ್ತರ ಮೈಲಿಗಲ್ಲು. 2018ರಲ್ಲಿ ತನ್ನ ವೊರಿಜಿನಲ್ ಬೇಸ್ ಕಾರು ಬಿಡುಗಡೆಯಾದ ದಿನದಿಂದಲೂ ಈ ಕಾರು ಗ್ರಾಹಕರ ಗಮನ ಸೆಳೆಯುತ್ತಿದೆ. ಇಂದು ಕಲಿನನ್ ಮಾಡೆಲ್ಲಿನ ಅತ್ಯಂತ ಹೆಚ್ಚು ಬೇಡಿಕೆ ಇರುವ ಮಾಡೆಲ್.
ಕಲಿನನ್ ಸೀರೀಸ್ II ಹೊಸ ತಂತ್ರಜ್ಞಾನ, ಡಿಸೈನ್ ಅಪ್ ಡೇಟ್, ಸುರಕ್ಷತೆ ಎಲ್ಲವನ್ನೂ ಒಳಗೊಂಡಿದೆ ಎನ್ನುತ್ತಿದ್ದಾರೆ ರೋಲ್ಸ್-ರಾಯ್ಸ್ ಮೋಟಾರ್ ಕಾರ್ ಜನರಲ್ ಡೈರೆಕ್ಟರ್ ಏಷ್ಯಾ ಪೆಸಿಫಿಕ್ ಇರೇನ್ ನಿಕ್ಕೇನ್.
ಗ್ರಾಹಕರು ಕಲಿನನ್ ಸೀರೀಸ್ II ಮತ್ತು ಬ್ಲಾಕ್ ಬ್ಯಾ ಡ್ಜ್ ಕಲಿನನ್ ಸೀರೀಸ್ II ಅನ್ನು ರೋಲ್ಸ್ -ರಾಯ್ಸ್ ಕಾರ್ಸ್ ಚೆನ್ನೈ ಮತ್ತು ರೋಲ್ಸ್ -ರಾಯ್ಸ್ ನವದೆಹಲಿಯಲ್ಲಿ ಖರೀದಿಸಬಹುದು.
ಭಾರತದಲ್ಲಿ ಕಲಿನನ್ ಸೀರೀಸ್ II ಬೆಲೆ ರೂ. 10,50,00,000 ಗಳಿಂದ ಪ್ರಾರಂಭವಾಗುತ್ತದೆ. ಬ್ಲಾಕ್ ಬ್ಯಾ ಡ್ಜ್ ಕಲಿನನ್ ಸೀರೀಸ್ II ಬೆಲೆ ರೂ. 12,25,00,000 ಗಳಿಂದ ಪ್ರಾರಂಭಗೊಳ್ಳುತ್ತದೆ. ಮೊದಲ ಸ್ಥಳೀಯ ಗ್ರಾಹಕರ ಡೆಲಿವರಿಗಳು 2024ರ ನಾಲ್ಕನೇ ತ್ರೈ ಮಾಸಿಕದಲ್ಲಿ ಪ್ರಾರಂಭವಾಗುತ್ತವೆ. ಅಂದ್ರೆ ಕನಿಷ್ಠ ಬೆಲೆ ಹತ್ತೂವರೆ ಕೋಟಿಯಿಂದ ಗರಿಷ್ಠ ಹನ್ನೆರಡೂವರೆ ಕೋಟಿ ರೂ.ವರೆಗೆ ಇದೆ.
ಅಂದಹಾಗೆ ರೋಲ್ಸ್ ರಾಯ್ಸ್ ಮಾಡೆಲ್ಲಿನ ಕಾರುಗಳು ವರ್ಷಕ್ಕೆ ೬ ಸಾವಿರ ಕಾರ್ ಸೇಲ್ ಆದರೆ ಅದು ಹೆಚ್ಚು. ಏಕೆಂದರೆ ಈ ಕಾರಿನ ಒಂದೊಂದು ಭಾಗವನ್ನೂ ಮತ್ತೆ ಮತ್ತೆ ಪರಿಶೀಲನೆ ಮಾಡಿ, ಪರೀಕ್ಷೆ ಮಾಡಿ ಮಾಡಲಾಗುತ್ತದೆ. ದುಡ್ಡಿನ ಶ್ರೀಮಂತಿಕೆಯೊಂದೇ ಈ ಕಾರು ಖರೀದಿಗೆ ಸಾಕಾಗುವುದಿಲ್ಲ. ಅದನ್ನೇನೂ ಕಾರಿನ ಶೋರೂಂನವರು ಬಂದು ಪರೀಕ್ಷೆ ಮಾಡುವುದಿಲ್ಲ. ಆದರೆ, ತಮ್ಮ ರೋಲ್ಸ್ ರಾಯ್ಸ್ ಕಾರಿನ ಘನತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಕೇಳಿಕೊಳ್ಳುತ್ತಾರೆ, ಅಷ್ಟೆ. ರೋಲ್ಸ್ ರಾಯ್ಸ್ ಕಾರ್ ಎಂದರೆ ರಾಜಮನೆತನವರು ಮಾತ್ರವೇ ಕೊಂಡುಕೊಳ್ಳಬೇಕು ಎಂದೇನೂ ನಿಯಮಗಳಿಲ್ಲ.