ಯುವ ರಾಜ್‌ಕುಮಾರ್ ಅವರ ಎರಡನೇ ಸಿನಿಮಾ ಎಕ್ಕ. ಈ ಚಿತ್ರಕ್ಕೀಗ ಇನ್ನೊಬ್ಬ ಸುಂದರಿ ಎಂಟ್ರಿ ಕೊಟ್ಟಿದ್ದಾರೆ. ಸಲಗ ಸುಂದರಿ. ರೋಹಿತ್ ಪದಕಿ ನಿರ್ದೇಶನದ ಎಕ್ಕ ಚಿತ್ರಕ್ಕೆ ಇನ್ನೊಬ್ಬ ನಾಯಕಿಯಾಗಿ ಸಂಜನಾ ಆನಂದ್ ಎಂಟ್ರಿ ಕೊಟ್ಟಿದ್ದಾರೆ. ಆರಂಭದಲ್ಲಿ ಇಬ್ಬರು ನಾಯಕಿಯರು ನಟಿಸಲಿದ್ದಾರೆ ಎಂದು ಎಕ್ಕ ಚಿತ್ರ ತಂಡವೇ ಹೇಳಿಕೊಂಡಿತ್ತು. ಆ ಇನ್ನೊಬ್ಬ ನಾಯಕಿ ಯಾರು ಅನ್ನೋದನ್ನ ಸೀಕ್ರೆಟ್ ಆಗಿಯೇ ಇಟ್ಟಿದ್ದ ಚಿತ್ರತಂಡ, ಸಂಕ್ರಾಂತಿ ದಿನ ೨ನೇ ಹೀರೋಯಿನ್ ಘೋಷಿಸಿದೆ.
ನಟಿ ಸಂಪದಾ ಈಗಾಗಲೇ ನಾಯಕಿಯಾಗಿ ಆಯ್ಕೆಯಾಗಿದ್ದರೆ, ಚಿತ್ರತಂಡ ಇದೀಗ ಸಂಜನಾ ಆನಂದ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದಲ್ಲಿನ ಪಾತ್ರದಿಂದ ಗಮನ ಸೆಳೆದ ಸಂಜನಾ ನಂತರ ದುನಿಯಾ ವಿಜಯ್ ಅವರೊಂದಿಗೆ ಸಲಗ ಚಿತ್ರದಲ್ಲಿ ನಟಿಸಿದರು. ದಿನಕರ್ ತೂಗುದೀಪ ನಿರ್ದೇಶನದ ಮುಂಬರುವ ರಾಯಲ್ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದು, ನಟ ವಿರಾಟ್ ಅವರಿಗೆ ಜೋಡಿಯಾಗಿದ್ದಾರೆ.
ಸಂಜನಾ ಆನಂದ್ ಇರುವ ಪೋಸ್ಟರ್ ಹಂಚಿಕೊಂಡಿರುವ ಚಿತ್ರತಂಡ ಅಡುಗೆ ಮನೆಯಲ್ಲಿ ಯುವರಾಜ್ ಮತ್ತು ಸಂಜನಾ ರೊಮ್ಯಾನ್ಸ್ ಮಾಡುತ್ತಿರುವ ಫೋಟೋ ಹಾಕಿದ್ದು ತೊದಲು ಪ್ರೀತಿಯ ಮೊದಲ ಪರಿಚಯ ಎಂದು ಶೀರ್ಷಿಕೆ ನೀಡಿದೆ. ಬಹುಶಃ ಚಿತ್ರದಲ್ಲಿ ಸಂಜನಾ, ಯುವರಾಜ್ ಮೊದಲ ಲವ್ ಆಗಿರುತ್ತಾರೆ ಎಂದು ಅರ್ಥ ಮಾಡಿಕೊಳ್ಳಬಹುದು.
ಇನ್ನು ಎಕ್ಕ ಟೈಟಲ್‌ಗೆ ತಕ್ಕಂತೆ ಪಕ್ಕಾ ರಾ ಆಕ್ಷನ್ ಥ್ರಿಲ್ಲರ್ ಸಿನಿಮಾ. ಚಿತ್ರದಲ್ಲಿ ಅತುಲ್ ಕುಲಕರ್ಣಿ, ಶ್ರುತಿ ಕೃಷ್ಣ ಮತ್ತು ರಾಹುಲ್ ದೇವ್ ಶೆಟ್ಟಿ ಕೂಡ ಇದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ವಿಕ್ರಂ ಹತ್ವಾರ್ ಕಥೆ ಆಧರಿಸಿ ಚಿತ್ರಕ್ಕೆ ರೋಹಿತ್ ಪದಕಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸತ್ಯ ಹೆಗಡೆ ಸಿನಿಮಾಟೋಗ್ರಫಿ, ದೀಪು.ಎಸ್. ಕುಮಾರ್ ಸಂಕಲನಕಾರರಾಗಿರುತ್ತಾರೆ ಮತ್ತು ಅಮರ್ ಪ್ರೊಡಕ್ಷನ್ ವಿನ್ಯಾಸದ ಜವಬ್ದಾರಿ ವಹಿಸಿಕೊಂಡಿದ್ದಾರೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ (ಪಿಆರ್‌ಕೆ), ಕಾರ್ತಿಕ್ ಗೌಡ-ಯೋಗಿ ಜಿ ರಾಜ್ ಅವರ ಕೆಆರ್‌ಜಿ ಸ್ಟುಡಿಯೋ ಹಾಗೂ ಜಯಣ್ಣ-ಭೋಗೇಂದ್ರ ಅವರ ಜಯಣ್ಣ ಫಿಲ್ಮ್ಸ್ ಸೇರಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಇನ್ನು ‘ಎಕ್ಕ’ ಸಿನಿಮಾ ಮೂಲಕ ರೋಹಿತ್ ಪದಕಿ ಬೆಂಗಳೂರಿನ ಅಂಡರ್‌ವರ್ಲ್ಡ್ ಕಥೆಯನ್ನು ಹೇಳುತ್ತಿದ್ದಾರೆ. ಈ ಪ್ರಪಂಚಕ್ಕೆ ಯುವ ರಾಜ್‌ಕುಮಾರ್ ಪಾತ್ರ ಹೇಗೆ ಎಂಟ್ರಿ ಕೊಡುತ್ತೆ ಅನ್ನೋದೇ ಈ ಸಿನಿಮಾದ ಹೈಲೈಟ್. ಇನ್ನು ಈಗಾಗಲೇ ‘ಎಕ್ಕ’ ಸಿನಿಮಾದ ಪೋಸ್ಟರ್ ರಿವೀಲ್ ಆಗಿದೆ. ಯುವ ರಾಜ್‌ಕುಮಾರ್ ರಕ್ತಸಿಕ್ತ ಲುಕ್‌ನಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ‘ಎಕ್ಕ’ ಶೂಟಿಂಗ್ ವೇಗವಾಗಿ ನಡೆಯುತ್ತಿದ್ದು, ಈ ವರ್ಷದ ರಗಡ್ ರಕ್ತಸಿಕ್ತ ಸಿನಿಮಾ ಆಗಲಿದೆ ಎನ್ನುವ ನಿರೀಕ್ಷೆ ಇದೆ. ‘ಎಕ್ಕ’ ಸಂಜನಾ ಆನಂದ್ ವೃತ್ತಿ ಬದುಕಿನ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಅನ್ನಬಹುದು.