ಶನಿ ದೆಸೆ ಶುರುವಾದರೆ ಅದು ಏಳೂವರೆ ವರ್ಷ ಇರುತ್ತದೆ. ಅದಕ್ಕೇ ಸಾಡೇಸಾತಿ ಎನ್ನುತ್ತಾರೆ. ಸಾಡೇಸಾತಿಯ ಆರಂಭದಲ್ಲಿ ಒಳ್ಳೆಯದು ಮಾಡುವ ಶನಿ, ಹೋಗುವಾಗ ಅಶುಭ ಕೊಡುತ್ತಾನೆ. ಅಥವಾ ಆರಂಭದಲ್ಲಿ ದುಃಖ ತರಿಸುವ ಶನಿ, ಹೋಗುವಾಗ ಸಂತೋಷದ ಸುರಿಮಳೆ ಸುರಿಸಿ ಹೋಗುತ್ತಾನೆ ಎನ್ನುವ ನಂಬಿಕೆಯೂ ಇದೆ. ಅದೆಲ್ಲ ಇಲ್ಲ ಕಣ್ರೀ.. ಅದೆಲ್ಲ ನಕ್ಷತ್ರ, ರಾಶಿ, ಕುಂಡಲಿಗಳ ಮೇಲೆ ಬದಲಾಗ್ತಾನೇ ಇರುತ್ತೆ. ಇದು ಹೀಗೆಯೇ ಆಗುತ್ತೆ ಎಂದು ಹೇಳೋಕಾಗಲ್ಲ ಎನ್ನುವುದು ಜ್ಯೋತಿಷ್ಯ ಪಂಡಿತರ ವಾದ.
ಈ ಬಾರಿ ದೀಪಾವಳಿಯಂದು ಶನಿ ಪಥ ಬದಲಾವಣೆ ಆಗಲಿದೆ. ನವಗ್ರಹಗಳಲ್ಲಿ ಅತ್ಯಂತ ನಿಧಾನಗತಿಯಲ್ಲಿ ಚಲಿಸುವಂತಹ ಗ್ರಹ ಅಂದ್ರೆ ಅದು ಶನಿ. ಏಕೆಂದರೆ ಶನಿ, ಯಮಧರ್ಮನ ಮಗ. ನ್ಯಾಯದಾತ. ಅಂತಹ ಶನಿ ಸದಾ ವಕ್ರವಾಗಿ ಚಲಿಸುತ್ತಾನೆ. ಈಗ ನವೆಂಬರ್ 14ಕ್ಕೆ ನೇರ ಚಲನೆಯನ್ನು ಪ್ರಾರಂಭಿಸಲಿದ್ದಾನೆ. ಇದರಿಂದಾಗಿ ನಾಲ್ಕು ರಾಶಿಯವರ ಜೀವನದಲ್ಲಿ ಗೋಲ್ಡನ್ ಟೈಮ್ ಶುರುವಾಗಲಿದೆ.
ಮೇಷ ರಾಶಿಯವರಿಗೆ ಶುಭ ಲಾಭ : ವ್ಯಾಪಾರದ ದೃಷ್ಟಿಯಿಂದ ಈ ಸಮಯ ಮೇಷ ರಾಶಿಯವರಿಗೆ ಸಾಕಷ್ಟು ಲಾಭದಾಯಕ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚು ಗೌರವ ದೊರಕಲಿದೆ. ಉದ್ಯೋಗದಲ್ಲಿ ಉನ್ನತ ಅಧಿಕಾರಿಗಳಿಂದ ಸಹಾಯವೂ ಸಿಗಲಿದೆ. ಮಾಡುವ ಪ್ರತಿ ಕೆಲಸದಲ್ಲಿ ಕೂಡ ಶನಿಯ ಆಶೀರ್ವಾದ ದೊರೆಯುತ್ತದೆ. ಅದೃಷ್ಟದ ಸಹಾಯದಿಂದಾಗಿ ನಿರೀಕ್ಷಿತ ಫಲಿತಾಂಶವೂ ಸಿಗಲಿದೆ. ಮಾಡಿರುವಂತಹ ಹೂಡಿಕೆ ಮೇಲೆ ನೀವು ಲಾಭ ರೂಪದಲ್ಲಿ ರಿಟರ್ನ್ ಪಡೆದುಕೊಳ್ಳುತ್ತೀರಿ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಶನಿಯ ಪ್ರಭಾವ ನಿಮಗೆ ಇನ್ನಷ್ಟು ಲಾಭಕಾರಿಯಾಗಿ ಪ್ರಭಾವ ಬೀರಬೇಕು ಅಂತ ಇದ್ರೆ ಅದಕ್ಕಾಗಿ ನೀವು ನೀಲಮಣಿ ಅಥವಾ ಓಪಲ್ ಅನ್ನು ಧರಿಸಬೇಕಂತೆ.
ಕರ್ಕಾಟಕದವರಿಗೆ ಆಯ್ಕೆಗಳಿವೆ : ಕರ್ಕ ರಾಶಿಯವರಿಗೆ ಲಾಭವೇನೋ ಇದೆ. ಆದರೆ ಆಯ್ದವರಿಗೆ ಮಾತ್ರ ಸಿಗುತ್ತೆ. ಅಂದ್ರೆ ನೀವು ಕಬ್ಬಿಣ ಅಥವಾ ಎಣ್ಣೆಯ ವ್ಯಾಪಾರದಲ್ಲಿ ತೊಡಗಿಸಿಕೊಂಡಿಸಿದ್ದರೆ, ಕೈ ತುಂಬಾ ಲಾಭ ಮಾಡಿಕೊಳ್ಳುವಂತಹ ಅವಕಾಶಗಳಿವೆ. ಲಾಭವನ್ನು ಹೆಚ್ಚಾಗಲಿದೆ. ಶನಿಯ ನೇರ ಚಲನೆಯಿಂದಾಗಿ ನೀವು ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಕೂಡ ಸಕಾರಾತ್ಮಕ ಫಲಿತಾಂಶವನ್ನು ಕಾಣಬಹುದಾಗಿದೆ. ಶನಿಯ ಗೋಚಾರ ಫಲ ಎನ್ನುವುದು ಆರೋಗ್ಯದ ದೃಷ್ಟಿಯಲ್ಲಿ ಕೂಡ ಉತ್ತಮ ಫಲಿತಾಂಶವನ್ನು ಬೀರಲಿದೆ.
ಮಕರ ರಾಶಿ.. ಅಂತ್ಯ ಅದ್ಭುತ : ಸಾಡೇಸಾತಿ ಪರಿಣಾಮ ಕೊನೆಯ ಹಂತದಲ್ಲಿ ಇದೆ. ಈ ಕಾರಣದಿಂದಾಗಿ ಶನಿಯ ಪ್ರಭಾವ ಮಕರ ರಾಶಿಯವರ ಜೀವನದಲ್ಲಿ ಸಕಾರಾತ್ಮಕ ಪರಿಣಾಮ ಬೀರಲಿದೆ. ಈ ಸಂದರ್ಭದಲ್ಲಿ ಮಕರ ರಾಶಿಯವರು ಮಾಡಿರುವ ಹಣದ ಹೂಡಿಕೆಯಿಂದ ಲಾಭ ಸಂಪಾದನೆ ಮಾಡಬಹುದು. ಹೊಸದಾಗಿ ಕೆಲಸವನ್ನು ಹುಡುಕುತ್ತಿರುವಂತಹ ನಿರುದ್ಯೋಗಿಗಳು ಕೂಡ ಕೆಲಸವನ್ನು ಹುಡುಕುವಲ್ಲಿ ಯಶಸ್ವಿಯಾಗಲಿದ್ದಾರೆ. ಹಣಕಾಸಿನ ಸಂಪಾದನೆ ಹಾಗೂ ಲಾಭದಲ್ಲಿ ನೀವು ಅಗತ್ಯಕ್ಕಿಂತ ಹೆಚ್ಚಿನ ಕಷ್ಟಪಟ್ಟರೆ ಮಾತ್ರ ನೀವು ಹೆಚ್ಚಿನ ಹಣವನ್ನು ಸಂಪಾದನೆ ಮಾಡಬಹುದಾಗಿದೆ. ಈ ಸಂದರ್ಭದಲ್ಲಿ ಅದೃಷ್ಟದ ಸಹಾಯ ನಿಮಗಿರುವುದರಿಂದಾಗಿ ಮಾಡುವಂತಹ ಕೆಲಸದಲ್ಲಿ ನೀವು ಯಶಸ್ವಿ ಫಲಿತಾಂಶವನ್ನು ನಿರೀಕ್ಷೆ ಮಾಡಬಹುದಾಗಿದೆ.
ಕನ್ಯಾ ರಾಶಿಯವರಿಗೆ ಕೃಪಾಕಟಾಕ್ಷ : ಕನ್ಯಾ ರಾಶಿಯವರು ಯಾವುದಾದರೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಶನಿಯ ಕೃಪಾಕಟಾಕ್ಷ ದಿಂದಾಗಿ ಲಾಭ ದೊರಕಲಿದೆ. ಆರೋಗ್ಯ ಸಮಸ್ಯೆ ನಿವಾರಣೆಯಾಗಲಿದೆ. ದೀರ್ಘ ಸಮಯದಿಂದ ಒಂದು ವೇಳೆ ನೀವು ಕೋರ್ಟು ಕಚೇರಿಯ ವಿವಾದಗಳಲ್ಲಿ ಸಿಲುಕಿಕೊಂಡಿದ್ದರೆ ಅದರಿಂದಲೂ ಕೂಡ ಹೊರ ಬರಲಿದ್ದೀರಿ. ಅಕೌಂಟ್ ಹಾಗೂ ಫೈನಾನ್ಸ್ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುವಂತಹ ಉದ್ಯೋಗಿಗಳಿಗೆ ಈ ಸಂದರ್ಭದಲ್ಲಿ ಶುಭ ಸಮಯ ಕಾದಿದೆ. ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಲಾಭವನ್ನು ಸಂಪಾದನೆ ಮಾಡಬಹುದಾಗಿದೆ. ಕೌಟುಂಬಿಕ ಜೀವನದಲ್ಲಿ ಕಂಡುಬರುವಂತಹ ಎಂತಹುದೇ ಸಮಸ್ಯೆಗಳು ಇದ್ದರೂ ಕೂಡ ಅವುಗಳನ್ನು ನೀವು ಲೀಲಾಜಾಲವಾಗಿ ಪರಿಹರಿಸಲಿದ್ದೀರಿ.
ಜ್ಯೋತಿಷ್ಯಶಾಸ್ತ್ರ ಹೇಳುವಂತೆ ನವಗ್ರಹಗಳಲ್ಲಿ ಶನಿಯ ಚಲನೆಯು ಹನ್ನೆರಡು ರಾಶಿಗಳ ಮೇಲೆ ಅತ್ಯಂತ ಹೆಚ್ಚಿನ ಪ್ರಭಾವ ಬೀರುತ್ತದೆ. ಅದರಲ್ಲೂ ಶನಿ ಸಾಡೇ ಸಾತಿ ಮತ್ತು ಶನಿದೆಸೆ ವ್ಯಕ್ತಿಯ ಜೀವನದ ಮೇಲೆ ತೀವ್ರತರದ ಪರಿಣಾಮವನ್ನು ಬೀರುತ್ತದೆ.