ಯಾವಾಗ ಶನಿಗ್ರಹವು ಲಗ್ನ ಅಥವಾ ಚಂದ್ರ ಗ್ರಹದ ಮೊದಲ, ನಾಲ್ಕನೇ, ಏಳನೇ ಅಥವಾ ಹತ್ತನೇ ಮನೆಯಲ್ಲಿ ಮೂರು ರಾಶಿಗಳಾದ ತುಲಾ, ಮಕರ ಮತ್ತು ಕುಂಭ ರಾಶಿಯಲ್ಲಿ ಚಲಿಸುವುದೋ ಆಗ ಶಶ ಮಹಾಪುರುಷ ಯೋಗದ ನಿರ್ಮಾಣವಾಗುತ್ತದೆ. 2025ರ ಹೊಸ ವರ್ಷದಲ್ಲಿ ಪಂಚ ಮಹಾಪುರುಷ ಯೋಗಗಳಲ್ಲಿ ಒಂದಾದ ಶಶ ರಾಜಯೋಗ ನಿರ್ಮಾಣವಾಗುತ್ತದೆ. 2025 ಮಾರ್ಚ್ 28 ರವರೆಗೆ ಶನಿಯು ಕುಂಭ ರಾಶಿಯಲ್ಲಿಯೇ ಚಲಿಸಲಿದ್ದಾನೆ. ಇದರಿಂದ ಶಶ ರಾಜಯೋಗದ ನಿರ್ಮಾಣವಾಗುತ್ತದೆ. ಶಶ ರಾಜಯೋಗ ಎಂದರೆ ಅದು 5 ಮಹಾಪುರುಷ ಯೋಗಗಳಲ್ಲಿ ಒಂದು. ಈ ರಾಜಯೋಗದಿಂದಾಗಿ ಮೂರು ರಾಶಿಗೆ ಸೇರಿದ ಜನರ ಅದೃಷ್ಟವೇ ಬದಲಾಗುತ್ತದೆ. ಇದು ಸುಮಾರು 30 ವರ್ಷಗಳ ನಂತರ ಶಶ ರಾಜಯೋಗದ ನಿರ್ಮಾಣದಿಂದಾಗಿ ಕೆಲವು ರಾಶಿಗೆ ಸೇರಿದ ಜನರಿಗೆ ಸಾಕಷ್ಟು ಲಾಭ ದೊರಕಲಿದೆ. 2025 ರ ಮಾರ್ಚ್ ನಲ್ಲಿ ಕರ್ಮಫಲದಾತನಾದ ಶನಿಯು ತನ್ನದೇ ರಾಶಿಯಾದ ಕುಂಭ ರಾಶಿಯಿಂದ ಹೊರಬಂದು ಬೇರೆ ರಾಶಿಯನ್ನು ಪ್ರವೇಶಿಸಲಿದ್ದಾನೆ.
ಮಕರ ರಾಶಿ :
2025ರಲ್ಲಿ ಮಕರ ರಾಶಿಯವರು ಶನಿ ದೇವನ ವಿಶೇಷ ಕೃಪೆಗೆ ಪಾತ್ರವಾಗಲಿದ್ದಾರೆ. 2025ರ ವರ್ಷ ಮಕರ ರಾಶಿಯವರಿಗೆ ಬಹಳ ವಿಶೇಷ. ಶಶ ರಾಜಯೋಗದ ನಿರ್ಮಾಣದಿಂದಾಗಿ ಈ ರಾಶಿಯವರ ಅಪೂರ್ಣ ಕೆಲಸಗಳೆಲ್ಲವೂ ಪೂರ್ಣಗೊಳ್ಳುತ್ತವೆ. ಸುದೀರ್ಘ ಕಾಲದ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಆತ್ಮವಿಶ್ವಾಸ ವೃದ್ದಿಯಾಗುತ್ತದೆ. ಆದಾಯವು ಸಹ ಈ ಸಮಯದಲ್ಲಿ ಹೆಚ್ಚಾಗುವುದರೊಂದಿಗೆ, ಕೆಲಸದಲ್ಲಿ ಪ್ರಗತಿಯನ್ನು ಗಳಿಸುವ ಸಂಭವವಿದೆ. ಮಕರ ರಾಶಿಗೆ ಸೇರಿದ ವಿದ್ಯಾರ್ಥಿಗಳ ಮನಸ್ಸು ಏಕಾಗ್ರತೆ ಸಾಧಿಸುತ್ತದೆ. ಮಕರ ರಾಶಿಯವರ ಪ್ರೀತಿ-ಪ್ರೇಮ-ಪ್ರಣಯವೂ ಉತ್ತಮವಾಗಿರುತ್ತದೆ.
ಕುಂಭ ರಾಶಿ :
ಕುಂಭ ರಾಶಿಗೆ ಸೇರಿದವರಿಗೆ ಶನಿ ದೇವನ ಕೃಪೆಯಿಂದಾಗಿ ನಿರ್ಮಾಣವಾಗುವ ಶಶ ರಾಜಯೋಗವು ಉತ್ತಮ ಫಲಗಳನ್ನು ನೀಡಲಿದೆ. ಈ ಅವಧಿಯಲ್ಲಿ ಭವಿಷ್ಯದಲ್ಲಿ ಪ್ರಗತಿಗೆ ನೆರವಾಗುವ ಹೊಸ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಅತ್ಯುತ್ತಮವಾದ ಅವಕಾಶಗಳು ಕೂಡಾ ದೊರಕುತ್ತವೆ. ಮನೆಯವರೊಂದಿಗಿನ ಸಂಬಂಧವು ಅತ್ಯುತ್ತಮವಾಗುತ್ತದೆ. ರಾಜಯೋಗದ ನಿರ್ಮಾಣದಿಂದಾಗಿ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿ ಅಥವಾ ಹೊಸ ಕೆಲಸವನ್ನು ಆರಂಭಿಸುವ ಬಗ್ಗೆ ಯೋಚನೆ ಶುರುವಾಗುತ್ತದೆ. ಶನಿದೇವನ ಆಶೀರ್ವಾದವು ಕುಂಭ ರಾಶಿಯ ಜನರ ಮೇಲಿರುವುದು. ಇದರಿಂದಾಗಿ ಸಮಾಜದಲ್ಲಿ ಗೌರವ, ಯಶಸ್ಸು, ಖ್ಯಾತಿ ಹುಡುಕಿಕೊಂಡು ಬರಲಿದೆ. ಈ ಸಮಯದಲ್ಲಿ ನಿಮಗೆ ಸಂತಾನ ಭಾಗ್ಯದ ಪ್ರಾಪ್ತಿಯಾಗುವ ಯೋಗವೂ ಇದೆ.
ಮಿಥುನ ರಾಶಿ :
ಮಿಥುನ ರಾಶಿವರಿಗೆ 2025 ಶಶ ರಾಜಯೋಗದ ನಿರ್ಮಾಣದಿಂದ ಸಾಕಷ್ಟು ಲಾಭ ತರುವ ವರ್ಷವಾಗಿರಲಿದೆ. ಆರ್ಥಿಕ ಸ್ಥಿತಿ ಮೊದಲಿಗಿಂತಲೂ ಉತ್ತಮವಾಗಿರುವುದು. ಸಮಾಜದಲ್ಲಿ ಮಿಥುನ ರಾಶಿಗೆ ಸೇರಿದ ಜನರ ಗೌರವ ಮತ್ತು ಖ್ಯಾತಿಯಲ್ಲಿ ಸಾಕಷ್ಟು ಹೆಚ್ಚಳವನ್ನು ನೋಡಬಹುದು. 2025ರ ಹೊಸ ವರ್ಷದಲ್ಲಿ ಮಿಥುನ ರಾಶಿಗೆ ಸೇರಿದ ಜನರು ತಮ್ಮ ಕೆಲಸಗಳನ್ನು ಬಹಳ ಜವಾಬ್ದಾರಿಯತವಾಗಿ ಮಾಡಲು ಮನಸ್ಸು ಮಾಡುವರು. ಮಿಥುನ ರಾಶಿಗೆ ಸೇರಿದ ಜನರು ಈ ಸಮಯದಲ್ಲಿ ಸಂತೋಷದಿಂದ ಇರುವರು. 2025 ರಲ್ಲಿ ಈ ರಾಶಿಗೆ ಸೇರಿದ ಜನರಿಗೆ ತಮ್ಮ ಸಂಗಾತಿಯ ಬೆಂಬಲ ಲಭಿಸುವುದರೊಂದಿಗೆ ನೀವು ಯಶಸ್ಸು ಗಳಿಸುವಲ್ಲಿ ಅವರು ಸಾಕಷ್ಟು ಸಹಾಯವನ್ನು ಮಾಡುವರು.
2025 ರಲ್ಲಿ ನಿರ್ಮಾಣಗೊಳ್ಳಲಿರುವ ಶಶ ರಾಜಯೋಗದಿಂದಾಗಿ ಇಲ್ಲಿ ಹೇಳಿರುವ ಮೂರು ರಾಶಿಗಳಾದ ಮಿಥುನ, ಮಕರ ಮತ್ತು ಕುಂಭ ರಾಶಿಗೆ ಸೇರಿದ ಜನರ ಅದೃಷ್ಟವೇ ಬದಲಾಗುವುದು. ಹಾಗಾಗಿ ಈ ಮೂರು ರಾಶಿಗಳಲ್ಲಿ ನಿಮ್ಮ ರಾಶಿಯೂ ಒಂದಾಗಿದ್ದರೆ 2025 ರ ವರ್ಷವು ನಿಮ್ಮ ಅದೃಷ್ಟಶಾಲಿಯಾದ ವರ್ಷವಾಗಿರಲಿದೆ.